2016 ರಲ್ಲಿ ಬಿಡುಗಡೆಗೊಂಡ ರಚನಾತ್ಮಕ ಸ್ಮಾರ್ಟ್‍ಫೋನ್‍ಗಳು

2016 ಸ್ಮಾರ್ಟ್‍ಫೋನ್ ಕ್ಷೇತ್ರಕ್ಕೆ ಉತ್ತಮವಾಗಿತ್ತು. ಅನೇಕ ರಚನಾತ್ಮಕ ಸ್ಮಾರ್ಟ್‍ಫೋನ್‍ಗಳು ಮಾರುಕಟ್ಟೆಗೆ ಬಂದವು. 2016 ನೇ ವರ್ಷ ಎಲ್‍ಜಿ ಯ ಎಲ್‍ಜಿ ಜಿ5 ನಿಂದ ಆರಂಭಗೊಂಡು ಹುವಾಯಿ ಹೊನರ್ ಮ್ಯಾಜಿಕ್.

By Prateeksha
|

ರಚನಾತ್ಮಕ ಸ್ಮಾರ್ಟ್‍ಫೋನ್‍ಗಳಿಗೆ 2016 ತುಂಬಾ ಉತ್ತಮವಾಗಿತ್ತು. ಎಲ್‍ಜಿ ಜಿ5 ನಿಂದ ಹುರುಪಿನಲ್ಲಿ ಆರಂಭವಾದ ವರ್ಷ ಕ್ಸಿಯೊಮೊ ಮತ್ತು ಹುವಾಯಿ ಯ ಪರಿಕಲ್ಪನೆಗಳ ಫೋನಿನಿಂದ ಮುಕ್ತಾಯಗೊಂಡಿತು.

2016 ರಲ್ಲಿ ಬಿಡುಗಡೆಗೊಂಡ ರಚನಾತ್ಮಕ ಸ್ಮಾರ್ಟ್‍ಫೋನ್‍ಗಳು

ಓದಿರಿ: 2016ರಲ್ಲಿ ಬಿಡುಗಡೆಗೊಂಡ ಮಧ್ಯಮ ಬೆಲೆಯ ಟಾಪ್ 10 ಸ್ಮಾರ್ಟ್ ಫೋನುಗಳು.

2017 ನೇ ವರ್ಷಕ್ಕೆ ಕಾಲಟ್ಟಿದ್ದು, ನಾವೀಗ ಕಳೆದ ವರ್ಷದ ಉತ್ತಮ ರಚನಾತ್ಮಕ ಉತ್ಪನ್ನಗಳ ಪಟ್ಟಿಯೊಂದಿಗೆ ಬಂದಿದ್ದೇವೆ.

ಎಲ್‍ಜಿ ಜಿ5

ಎಲ್‍ಜಿ ಜಿ5

ವರ್ಷದ ಮೊದಲ ರಚನಾತ್ಮಕ ಸ್ಮಾರ್ಟ್‍ಫೋನ್. ಎಲ್‍ಜಿ ವರ್ಷದ ಆರಂಭದಲ್ಲಿ ಸುದ್ದಿ ಮಾಡಿತು ತನ್ನ ಎಲ್‍ಜಿ ಜಿ5 ನಿಂದ. ಆದರೆ, ಇದು ವಿಫಲಗೊಂಡಿತು ಜನರನ್ನು ಮೆಚ್ಚಿಸಲು. ಸೆಮಿ ಮೊಡ್ಯುಲರ್ ಸ್ಮಾರ್ಟ್‍ಫೋನ್ ಸುಲಲಿತವಾಗಿರಲಿಲ್ಲಾ. ಅದೆನೇ ಇರಲಿ ಸೌತ್ ಕೋರಿಯನ್ ಸ್ಮಾಟ್ ್ಫೋನಿನ ಈ ಪ್ರಯತ್ನ ಮೆಚ್ಚಲೇ ಬೇಕು.

ಬ್ಲಾಕ್‍ಬೆರ್ರಿ ಪ್ರಿವ್

ಬ್ಲಾಕ್‍ಬೆರ್ರಿ ಪ್ರಿವ್

2016 ರಲ್ಲಿ ಬ್ಲಾಕ್‍ಬೆರ್ರಿ ಹಿಂದಿರುಗಿತು ಸ್ಮಾರ್ಟ್‍ಫೋನ್ ಕ್ಷೇತ್ರದಲ್ಲಿ ಬರುವ ಮೂಲಕ ಅದೂ ಆಂಡ್ರೊಯಿಡ್ ನಲ್ಲಿ. ಆಸಕ್ತಿದಾಯಕ ವಿಷಯವೆಂದರೆ ಬ್ಲಾಕ್‍ಬೆರ್ರಿ ತಮ್ಮ ಗುರುತಾದ ಕ್ವೆರ್ಟಿ ಕೀಬೋರ್ಡ್ ಹಾಗೆಯೇ ಉಳಿಸಿದ್ದಾರೆ. ಫೋನ್ ಬಹಳಷ್ಟು ಜನರ ಮೆಚ್ಚಿಗೆ ಪಡೆದರೂ ಕೂಡ ಅದರ ಬೆಲೆಯಿಂದಾಗಿ ಹಿಂದೆ ಉಳಿಯಿತು.

ಮೊಟೊರೊಲಾ ಮೊಟೊ ಜೆಡ್ ಫೋನ್ಸ್

ಮೊಟೊರೊಲಾ ಮೊಟೊ ಜೆಡ್ ಫೋನ್ಸ್

ಒಬ್ಬರು ಮಾಡಲು ವಿಫಲರಾದರೆ ಇನ್ನೊಬ್ಬರು ಅದನ್ನು ಮಾಡಲು ಸಫಲರಾಗುತ್ತಾರೆ. ಅದೇ ಸ್ಥಿತಿ ಲಿನೊವೊ ಹೊಂದಿದ ಮೊಟೊರೊಲಾ ದ್ದಾಗಿದೆ. ಎಲ್‍ಜಿ ಜಿ5 ಮತ್ತು ಮೊಡ್ಯುಲರ್ ಸಿಸ್ಟಮ್ ನೋಡಿ ಲಿನೊವೊ ಹಿಂದುಳಿಯದೆ ತಮ್ಮ ಮೊಡ್ಯುಲರ್ ಸ್ಮಾರ್ಟ್‍ಫೋನಾದ ಮೊಟೊ ಜೆಡ್ ಸೀರಿಜ್ ಬಿಡುಗಡೆಮಾಡಿತು.

ಎಲ್‍ಜಿ ಜಿ5 ನಂತೆ ತೆಗೆಯುವ ಮತ್ತು ಬದಲಾಯಿಸಲು ಸಾಧ್ಯವಿರುವ ಬ್ಯಾಟರಿ ಹೊಂದಿತ್ತೊ ಅದರ ಜೊತೆಗೆ 16 ಮ್ಯಾಗ್ನೆಟಿಕ್ ಪಿನ್ಸ್ ಅನ್ನು ಫೋನಿನ ಮುಂದುಗಡೆ ಸೇರಿಸಿದರು ಮತ್ತು ಅಲ್ಲಿ ನೀವು ಮೊಟೊ ಮೊಡ್ಸ್ ಬದಲಿಸುವ ಅವಕಾಶ ನೀಡಿತು. ಇದು ತುಂಬಾ ಸಫಲತೆಯನ್ನು ಪಡೆಯಿತು.

ಲಿನೊವೊ ಫ್ಯಾಬ್ 2 ಪ್ರೊ

ಲಿನೊವೊ ಫ್ಯಾಬ್ 2 ಪ್ರೊ

ಲಿನೊವೊ ನಿರಂತರವಾಗಿ ಬೇರೆಯವರಿಗಿಂತ ಭಿನ್ನವಾಗಿರಲು ಪ್ರಯತ್ನಿಸುತ್ತಾ ಬಂದಿದೆ. ಅವರ ಮೊಟೊರೊಲಾ ಅಡಿಯಲ್ಲಿನ ಸೆಮಿ ಮೊಡ್ಯುಲರ್ ಫೋನ್ಸ್ ಅದಕ್ಕೊಂದು ಉದಾಹರಣೆ. ಈ ಬಾರಿ

ಗೂಗಲ್ ನೊಂದಿಗೆ ಸೇರಿಕೊಂಡು ಫ್ಯಾಬ್ 2 ಪ್ರೊ ಅನ್ನುವ ಸ್ಮಾರ್ಟ್‍ಫೋನಿನೊಂದಿಗೆ ಬಂದಿತು. ಈ ಫೋನ್ ಕೆಲ ಅಪರೂಪದ ಆಗ್ಮೆಂಟೆಡ್ ರಿಯಾಲಿಟಿ ಫೀಚರ್ಸ್ ಅನ್ನು ಸಹಕರಿಸುತ್ತಿತ್ತು. ಆದರೆ, ಬಹಳಷ್ಟು ಅಂತರಾಷ್ಟ್ರೀಯ ತಾಂತ್ರಿಕ ಬ್ಲೊಗ್ ಗಳು ಈ ಫೋನನ್ನು ಸಂಪೂರ್ಣಗೊಳ್ಳದ ಕಾರ್ಯವೆಂದು ಕರೆದರು.

ಕ್ಸಿಯೊಮಿ ಮಿ ಮಿಕ್ಸ್

ಕ್ಸಿಯೊಮಿ ಮಿ ಮಿಕ್ಸ್

ಕ್ಸಿಯೊಮಿ ಎಲ್ಲರನ್ನೂ ಆಶ್ಚರ್ಯಗೊಳಿಸಿತು ತನ್ನ ಪರಿಕಲ್ಪನೆಯ ಕ್ಸಿಯೊಮಿ ಮಿ ಮಿಕ್ಸ್ ಫೋನಿನಿಂದ. ಕೆಲ ತಿಂಗಳ ಹಿಂದಷ್ಟೆ ಇದು ಬಂದರೂ ದೊಡ್ಡ ಸಫಲತೆಯನ್ನು ಪಡೆಯಿತು ಈ ಚೈನಾದ ಆಪಲ್.

ಈ ಫೋನ್ ಜಗತ್ತಿನಾದ್ಯಂತ ಜನರನ್ನು ಮೆಚ್ಚಿಸಿತು ಮತ್ತು ಇದರ ಒಂದೇ ನಕರಾತ್ಮಕ ಅಂಶವೆಂದರೆ ಸ್ವಲ್ಪ ಪ್ರಮಾಣದಲ್ಲಿ ಮಾತ್ರ ಈ ಉತ್ಪನ್ನ ಇರುವುದು.

ಹುವಾಯಿ ಹೊನರ್ ಮ್ಯಾಜಿಕ್

ಹುವಾಯಿ ಹೊನರ್ ಮ್ಯಾಜಿಕ್

2016 ರ ಸರಿಯಾದ ಸಮಯದಲ್ಲಿ ಹುವಾಯಿ ಕ್ಸಿಯೊಮಿ ಮಿ ಮಿಕ್ಸ್ ಗೆ ಸ್ಪರ್ಧಿಸಲು ಚೈನಾ ದಲ್ಲಿ ಹುವಾಯಿ ಫೋನ್ ಅನ್ನು ಬಿಡುಗಡೆ ಮಾಡಿತು. ಈ ಫೋನಿನ ಹಲವಾರು ಲಾಭಗಳಿವೆ ಹಿಂದಿನದಕ್ಕಿಂತ ಕಾರಣ ಈ ಬಾರಿ ಕೃತಕ ಬುದ್ದಿವಂತಿಕೆಯನ್ನು (ಆರ್ಟಿಫಿಷಲ್ ಇಂಟಲಿಜೆನ್ಸ್) ಅನ್ನು ಉಪಯೋಗಿಸಿದ್ದಾರೆ. ಉದಾ: ನೀವು ಚಿತ್ರಮಂದಿರ ಮೊದಲೆ ಕಾಯ್ದಿಟ್ಟ ಟಿಕೇಟಿನೊಂದಿಗೆ ಪ್ರವೇಶಿಸಿದರೆ ಫೋನ್ ಸ್ಥಳವನ್ನು ಪತ್ತೆ ಹಚ್ಚಿ ಫೋನ್ ತಾನಾಗಿ ಟಿಕೇಟ್ ತೆರೆಯುತ್ತದೆ. ನೀವು ಎಲ್ಲಾ ಫೀಚರ್ಸ್ ಓದಬಹುದು ಹೊನರ್ ಮ್ಯಾಜಿಕ್ ಎಐ ಬಗ್ಗೆ ಇಲ್ಲಿ ಕ್ಲಿಕ್ ಮಾಡಿ.

Best Mobiles in India

English summary
2016 is all about innovation. We have seen some insane smartphones with innovative technologies. Here are the best innovative smartphones launched in 2016.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X