ಇಂಟೆಕ್ಸ್ ನಿಂದ 5,499ಕ್ಕೆ 4G ಸ್ಮಾರ್ಟ್‌ಪೋನು..!

ಕಳೆದ ವರ್ಷ ಆಕ್ವಾ ಲಯನ್ಸ್ 3G ಸ್ಮಾರ್ಟ್‌ಪೋನನ್ನು ಬಿಡುಗಡೆ ಮಾಡಿದ್ದ ಇಂಟೆಕ್ಸ್ ಈ ಬಾರಿ ಇದೇ ಪೋನನ್ನು ಸ್ವಲ್ಪ ಆಪ್‌ಗ್ರೇಡ್ ಮಾಡಿ ಇಂಟೆಕ್ಸ್ ಆಕ್ವಾ ಲಯನ್ಸ್ 4G ಎಂದು ಬಿಡುಗಡೆ ಮಾಡಿದೆ. ಅದುವೇ ಕೇವಲ 5,499 ರೂ.ಗಳಿಗೆ.

Written By:
ದೇಶಿಯ ಮೊಬೈಲ್ ಮಾರುಕಟ್ಟೆಯಲ್ಲಿ ತನ್ನದೇ ಚಾಪು ಮೂಡಿಸಿರುವ ಇಂಟೆಕ್ಸ್ ಮೊಬೈಲ್ ಕಂಪನಿಯೂ ಈ ಬಾರಿ ಎಂಟ್ರಿ ಲೆವಲ್ ಸ್ಮಾರ್ಟ್‌ಪೋನುಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲು ಮುಂದಾಗಿದೆ. ಈ ಬಾರಿ ಇಂಟೆಕ್ಸ್ ಆಕ್ವಾ ಲಯನ್ಸ್ 4G ಸ್ಮಾರ್ಟ್‌ಪೋನನ್ನು ಪರಿಚಯ ಮಾಡುತ್ತಿದೆ.

ಇಂಟೆಕ್ಸ್ ನಿಂದ 5,499ಕ್ಕೆ 4G ಸ್ಮಾರ್ಟ್‌ಪೋನು..!

ಕಳೆದ ವರ್ಷ ಆಕ್ವಾ ಲಯನ್ಸ್ 3G ಸ್ಮಾರ್ಟ್‌ಪೋನನ್ನು ಬಿಡುಗಡೆ ಮಾಡಿದ್ದ ಇಂಟೆಕ್ಸ್ ಈ ಬಾರಿ ಇದೇ ಪೋನನ್ನು ಸ್ವಲ್ಪ ಆಪ್‌ಗ್ರೇಡ್ ಮಾಡಿ ಇಂಟೆಕ್ಸ್ ಆಕ್ವಾ ಲಯನ್ಸ್ 4G ಎಂದು ಬಿಡುಗಡೆ ಮಾಡಿದೆ. ಅದುವೇ ಕೇವಲ 5,499 ರೂ.ಗಳಿಗೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

5 ಇಂಚಿನ ಪರದೆ:

ಇಂಟೆಕ್ಸ್ ಆಕ್ವಾ ಲಯನ್ಸ್ 4G ಸ್ಮಾರ್ಟ್‌ಪೋನಿನಲ್ಲಿ 5 ಇಂಚಿನ FWVGA ಪರದೆ ಇದ್ದು, 854X480 ರೆಸಲ್ಯೂಷನ್ ಗುಣಮಟ್ಟವನ್ನ ಹೊಂದಿದೆ. ಅಲ್ಲದೇ 2000mAh ಬ್ಯಾಟರಿ ಸಹ ಈ ಪೋನಿನಲ್ಲಿದೆ.

1.3GHz ಪ್ರೋಸೆರ್:

ಇಂಟೆಕ್ಸ್ ಆಕ್ವಾ ಲಯನ್ಸ್ 4G ಪೋನಿನಲ್ಲಿ 1.3GHz ವೇಗದ ಪ್ರೋಸೆರ್ ಅಳವಡಿಸಲಾಗಿದ್ದು, ಕ್ವಾಡ್‌ಕೋರ್ ಚಿಪ್ ಹೊಂದಿದೆ. ಇದರೊಂದಿಗೆ 1 GB RAM ಸಹ ಈ ಪೋನಿನಲ್ಲಿದೆ. ಅಲ್ಲದೇ 8GB ಇಂಟರ್ನಲ್ ಮೊಮೊರಿ ಸಹ ಇದರಲಿದೆ. ಇದಲ್ಲದೇ ಎಸ್‌ಡಿ ಕಾರ್ಡ್ ಹಾಕಿಕೊಳ್ಳುವ ಮೂಲಕ 64GB ವರೆಗೂ ಮೆಮೊರಿ ವಿಸ್ತರಿಸಿಕೊಳ್ಳಬಹುದಾಗಿದೆ.

5MP ಕ್ಯಾಮೆರಾ:

ಇಂಟೆಕ್ಸ್ ಆಕ್ವಾ ಲಯನ್ಸ್ 4G ಪೋನಿನ ಹಿಂಭಾಗದಲ್ಲಿ 5MP ಕ್ಯಾಮೆರಾವನ್ನು ಅಳವಡಿಸಲಾಗಿದ್ದು, ಮುಂಭಾಗದಲ್ಲಿ 2MP ಕ್ಯಾಮೆರಾ ಸಹ ಇದೆ. ಹಿಂಭಾಗದಲ್ಲಿ ಎಲ್‌ಇಡಿ ಫ್ಲಾಸ್ ಸಹ ನೀಡಲಾಗಿದೆ.

ಇತರೆ ವಿಶೇಷತೆಗಳು:

ಆಂಡ್ರಾಯ್ಡ್ 6.0 ದಲ್ಲಿ ಕಾರ್ಯನಿರ್ವಹಿಸುವ ಇಂಟೆಕ್ಸ್ ಆಕ್ವಾ ಲಯನ್ಸ್ 4G ಪೋನ್ 4G ಸಪೋರ್ಟ್ ಮಾಡಲಿದೆ. ಅಲ್ಲದೇ Wi-Fi, Bluetooth, GPS and FM radioಗಳನ್ನು ಈ ಪೋನ್‌ ಒಳಗೊಂಡಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

 Read more about:
English summary
Intex recently added yet another entry-level smartphone in its Aqua line. The smartphone in question is called the Intex Aqua Lions 4G to konw more visit kannada.gizbot.com
Please Wait while comments are loading...
Opinion Poll

Social Counting