ಐ.ಒ.ಎಸ್ 10.2 ಬೀಟಾ: ನಿಮ್ಮ ಐಫೋನಿಗೆ ಬರಲಿರುವ 5 ಹೊಸ ವಿಶೇಷತೆಗಳು.

ಐ.ಒ.ಎಸ್ 10.2 ಬೀಟಾದಲ್ಲಿ ಹೊಸ ವಾಲ್ ಪೇಪರ್ಸ್, ಕ್ಯಾಮೆರ ವಿಶೇಷತೆಗಳು, ಇಮೋಜಿ ಮತ್ತು ಇನ್ನೂ ಅನೇಕ ವಿಶೇಷಣಗಳಿವೆ.

|

ಆ್ಯಪಲ್ ಹೊಸ ಐ.ಒ.ಎಸ್ 10.2 ಬೀಟಾ ಸಾಫ್ಟ್ ವೇರ್ ಅನ್ನು ಬಿಡುಗಡೆಗೊಳಿಸಿದೆ. ಇದರಲ್ಲಿ ಅನೇಕ ವಿಶೇಷತೆಗಳಿವೆ, ಉತ್ತಮಗೊಂಡಿದೆ. ಐ.ಒ.ಎಸ್ 10.2 ಪಬ್ಲಿಕ್ ಬೀಟಾ ಆ್ಯಪಲ್ ಡೆವಲಪರ್ ಆವೃತ್ತಿಯಂತೆಯೇ, ಆದರೆ ನಮಗೆ ಗೊತ್ತಿರುವಂತೆ ಸಾರ್ವಜನಿಕರಿಗೆ ಸಾಫ್ಟ್ ವೇರ್ ಬಿಡುಗಡೆಗೊಳಿಸುವ ಮೊದಲು ಆ್ಯಪಲ್ ಎಲ್ಲವನ್ನೂ ಪರೀಕ್ಷಿಸಿರುತ್ತದೆ.

ಐ.ಒ.ಎಸ್ 10.2 ಬೀಟಾ: ನಿಮ್ಮ ಐಫೋನಿಗೆ ಬರಲಿರುವ 5 ಹೊಸ ವಿಶೇಷತೆಗಳು.

ಆ್ಯಪಲ್ಲಿನ ಬೀಟಾ ಟೆಸ್ಟಿಂಗ್ ಯೋಜನೆಗೆ ಸೇರಬೇಕೆಂದರೆ ನೀವು ಬೀಟಾ ಟೆಸ್ಟಿಂಗ್ ವೆಬ್ ಪುಟದಲ್ಲಿ ನೋಂದಣಿ ಮಾಡಿಕೊಳ್ಳಬೇಕು. ನೋಂದಣಿಯಾದ ನಂತರ ಐ.ಒ.ಎಸ್ ಮತ್ತು ಮ್ಯಾಕ್ ಒ.ಎಸ್ ಸಿಯೆರ್ರಾದ ಬೀಟಾ ಆವೃತ್ತಿಗಳು ನಿಮಗೆ ಲಭ್ಯವಾಗುತ್ತದೆ.

ಓದಿರಿ: ಬಿಎಸ್‌ಎನ್‌ಎಲ್‌ನಿಂದ ಉಚಿತ ಕರೆ ಆಫರ್: ತಿಳಿಯಲೇಬೇಕಾದ 5 ಅಂಶಗಳು

ಐ.ಒ.ಎಸ್ 10.2 ಬೀಟಾದಲ್ಲಿ ಬಳಕೆಯನ್ನು ಉತ್ತಮಗೊಳಿಸಲು ಹಲವು ಹೊಸ ವಿಶೇಷತೆಗಳಿವೆ. ನಿಮ್ಮ ಐಫೋನಿಗೆ ಬರುವ ಹೊಸ ವಿಶೇಷತೆಗಳ ಪಟ್ಟಿ ಇಲ್ಲಿದೆ.

ಇಮೋಜಿ - ಎಲ್ಲರಿಗೂ ಒಂದೇ.

ಇಮೋಜಿ - ಎಲ್ಲರಿಗೂ ಒಂದೇ.

ಐ.ಒ.ಎಸ್ ಗೆ ಸೇರಿಸಲಾದ ದೊಡ್ಡ ಬದಲಾವಣೆಯೆಂದರೆ ಯುನಿಕೋಡ್ 9.0 ಬೆಂಬಲ. ಇದರಿಂದಾಗಿ ಐ.ಒ.ಎಸ್ ಗೆ ಹಲವು ಹೊಸ ಇಮೋಜಿಗಳು ಸಿಗುತ್ತವೆ, ಬೇಸರದ ಮುಖ, ಜೊಲ್ಲು ಸುರಿಸುವ ಮುಖ, ಸೆಲ್ಫಿ, ನರಿ ಮುಖ, ಗೂಬೆ, ಶಾರ್ಕ್, ಚಿಟ್ಟೆ, ಪ್ಯಾನ್ ಕೇಕ್ಸ್ ಇತ್ಯಾದೆ.

ಜೊತೆಗೆ ಪುರುಷ ಮತ್ತು ಮಹಿಳೆಯ ವೇಷದ ಮೆಕ್ಯಾನಿಕ್, ವಕೀಲ/ಲೆ, ವೈದ್ಯ, ವಿಜ್ಞಾನಿಗಳು ಇಮೋಜಿಗಳು ಲಭ್ಯವಿದೆ.

ಹೊಸ ವಾಲ್ ಪೇಪರ್ರುಗಳು ಮತ್ತು ಹೊಸ ವೀಡಿಯೋ ವಿಡ್ಜೆಟ್.

ಹೊಸ ವಾಲ್ ಪೇಪರ್ರುಗಳು ಮತ್ತು ಹೊಸ ವೀಡಿಯೋ ವಿಡ್ಜೆಟ್.

ಐ.ಒ.ಎಸ್ 10.2 ಬೀಟಾ ದಲ್ಲಿ ಮೂರು ಹೊಸ ವಾಲ್ ಪೇಪರ್ ಗಳಿವೆ, ಇವು ಈ ಮುಂಚೆ ಲಭ್ಯವಿರಲಿಲ್ಲ. ಇವುಗಳೆಂದರೆ ಡ್ರಾಪ್ ಲೆಟ್ ಬ್ಲೂ, ಡ್ರಾಪ್ ಲೆಟ್ ರೆಡ್ ಮತ್ತು ಡ್ರಾಪ್ ಲೆಟ್ ಯೆಲ್ಲೋ.

ಐ.ಒ.ಎಸ್ 10.2 ಬೀಟಾ ದಲ್ಲಿ ಹೊಸ ವೀಡಿಯೋ ತಂತ್ರಾಂಸ ವಿಡ್ಜೆಟ್ ಕೂಡ ನೋಟಿಫಿಕೇಷನ್ ನಲ್ಲಿದೆ. ಈ ಹೊಸ ವಿಡ್ಜೆಟ್ ಮ್ಯೂಸಿಕ್ ಆ್ಯಪ್ ವಿಡ್ಜೆಟ್ ನಂತೆಯೇ ಕಾರ್ಯನಿರ್ವಹಿಸುತ್ತದೆ, ಬೇಕೆಂದಾಗ ಶೀಘ್ರವಾಗಿ ಪ್ಲೇ ಅಥವಾ ಪಾಸ್ ಮಾಡಬಹುದು.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಸಂದೇಶಗಳಲ್ಲಿ ಸಂಪರ್ಕ ಚಿತ್ರವನ್ನು ಕಾಣದಂತೆ ಮಾಡಿ.

ಸಂದೇಶಗಳಲ್ಲಿ ಸಂಪರ್ಕ ಚಿತ್ರವನ್ನು ಕಾಣದಂತೆ ಮಾಡಿ.

9ಟು5ಮ್ಯಾಕ್ ಪ್ರಕಾರ, ನೀವು ಸಂದೇಶಗಳಲ್ಲಿ ಸಂಪರ್ಕ ಚಿತ್ರವನ್ನು ಕಾಣದಂತೆ ಮಾಡಬಹುದು. ಇದನ್ನು ಮಾಡಲು ಸೆಟ್ಟಿಂಗ್ಸ್ > ಮೆಸೇಜಸ್ ಗೆ ಹೋಗಿ ಸಂಪರ್ಕ ಚಿತ್ರ ಕಾಣಿಸುವುದನ್ನು ಡಿಸೇಬಲ್ ಮಾಡಿ. ಈಗ ಸಂದೇಶಗಳಲ್ಲಿ ಸಂಪರ್ಕ ಚಿತ್ರಗಳು ಕಾಣಿಸುವುದಿಲ್ಲ.

ಐಮೆಸೇಜುಗಳಲ್ಲಿ ಹೊಸ ಸಂಭ್ರಮ ಪರಿಣಾಮ.

ಐಮೆಸೇಜುಗಳಲ್ಲಿ ಹೊಸ ಸಂಭ್ರಮ ಪರಿಣಾಮ.

ಐ.ಒ.ಎಸ್ 10 ಐಮೆಸೇಜುಗಳಲ್ಲಿ ದೊಡ್ಡ ಮಟ್ಟದ ಬದಲಾವಣೆ ತಂದಿತ್ತು, ಐ.ಒ.ಎಸ್ 10.2 ಬೀಟಾ ಇದನ್ನು ಮತ್ತಷ್ಟು ಉತ್ತಮಗೊಳಿಸಿದೆ. ಬೀಟಾ ಆವೃತ್ತಿಯಲ್ಲಿ ಹೊಸ ಪೂರ್ತಿ ಪರದೆಯನ್ನಾವರಿಸುವ ಸಂಭ್ರಮದ ಪರಿಣಾಮವಿದೆ. ಇದು ನಿಮ್ಮ ಫೋನಿನ ಪರದೆಯುದ್ದಕ್ಕೂ ಪಟಾಕಿ ಸಿಡಿಯುವ ಪರಿಣಾಮವನ್ನು ನೀಡುತ್ತದೆ.

ಕ್ಯಾಮೆರಾ ಸೆಟ್ಟಿಂಗ್ಸ್ ಉಳಿಸಿ.

ಕ್ಯಾಮೆರಾ ಸೆಟ್ಟಿಂಗ್ಸ್ ಉಳಿಸಿ.

ಐ.ಒ.ಎಸ್ 10.2 ಬೀಟಾ 1ರಲ್ಲಿ ಕ್ಯಾಮೆರಾ ಆ್ಯಪ್ ನಲ್ಲಿ ನಿಮ್ಮ ಕ್ಯಾಮೆರಾ ಸೆಟ್ಟಿಂಗ್ಸ್ ಅನ್ನು ಉಳಿಸುವ ಅವಕಾಶವಿದೆ. ಕೊನೆಯ ಸಲ ಚಿತ್ರ ತೆಗೆಯುವಾಗ ಉಪಯೋಗಿಸಿದ ಕ್ಯಾಮೆರಾ ಆಯ್ಕೆ, ಫೋಟೋ ಫಿಲ್ಟರ್ ಮತ್ತು ಲೈವ್ ಫೋಟೋ ಸೆಟ್ಟಿಂಗ್ ಅನ್ನು ಉಳಿಸಿಕೊಳ್ಳಬಹುದು.

ಮತ್ತಷ್ಟು.

ಮತ್ತಷ್ಟು.

ಜೊತೆಗೆ, ಐ.ಒ.ಎಸ್ 10.2 ಬೀಟಾ ದಲ್ಲಿ ಸಿರಿ ಸ್ಪ್ಲ್ಯಾಷ್ ಸ್ಕ್ರೀನ್ ಇದೆ, ನೋಟಿಫಿಕೇಷನ್ ವಿಡ್ಜೆಟ್ಟುಗಳು ಮತ್ತಷ್ಟು ಉತ್ತಮಗೊಂಡಿದೆ, ನಿಮ್ಮ ಕೊನೆಯ ಸ್ಥಳದ ಗುರುತು, ಮ್ಯುಸಿಕ್ ತಂತ್ರಾಂಶದಲ್ಲಿ ಕೊಟ್ಟ ಸ್ಟಾರ್ ರೇಟಿಂಗ್ ಗಳು, ಹೊಸ ಹೋಮ್ ಬಟನ್ ಇದರಲ್ಲಿದೆ.

ಆ್ಯಪಲ್ ಬಿಡುಗಡೆಗೊಳಿಸಿರುವ ಬೀಟಾ ಆವೃತ್ತಿ ಅಂತಿಮವಲ್ಲ ಎನ್ನುವುದನ್ನು ನೆನಪಿಡಿ, ಇದರಲ್ಲಿ ಹಲವಾರು ತೊಂದರೆಗಳೂ ಇರುತ್ತವೆ, ನಿಮ್ಮ ಬಳಿ ಎರಡೆರಡು ಫೋನುಗಳಿದ್ದರೆ ಮಾತ್ರ ಇದನ್ನು ನೀವು ಇನ್ಸ್ಟಾಲ್ ಮಾಡಿಕೊಳ್ಳುವುದು ಒಳ್ಳೆಯದು.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Best Mobiles in India

Read more about:
English summary
iOS 10.2 Beta is now available and bring several new changes and features to Apple devices.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X