ಕಾರ್ಬನ್ ಟೈಟಾನಿಯಮ್ ವರ್ಸಸ್ ಮೋಟೋ ಇ

By Shwetha
|

ನಿಮ್ಮ ಕನಸುಗಳನ್ನು ಸಾಕಾರಗೊಳಿಸುವಂತೆ ಇಂದು ಸ್ಮಾರ್ಟ್‌ಫೋನ್ ಜಗತ್ತು ಬೆಳೆಯುತ್ತಿದ್ದು, ಅದಕ್ಕೆ ತಕ್ಕಂತೆ ಭಾರತೀಯ ಮಾರುಕಟ್ಟೆ ಕೂಡ ಹೊಸ ಹೊಸ ತಂತ್ರಜ್ಞಾನಗಳಿಗೆ ಮೈಒಡ್ಡುವ ರೀತಿಯಲ್ಲಿ ಬೆಳವಣಿಗೆಗೆ ಹೆಗಲು ಕೊಡುತ್ತಿದೆ.

ದಿನ ದಿನವೂ ನವೀನವೀನವಾಗಿ ರೂಪುಗೊಳ್ಳುತ್ತಿರುವ ಹೊಸ ಕೊಡುಗೆಗೆಳನ್ನು ಆಹ್ವಾನಿಸುತ್ತಿರುವ ಭಾರತೀಯ ಮಾರುಕಟ್ಟೆ ಏಷ್ಯಾ ಪೆಸಿಫಿಕ್ ಪ್ರದೇಶದಲ್ಲಿ ಮುಂದುವರಿಯುತ್ತಿರುವ ಮಾರುಕಟ್ಟೆಗಳಲ್ಲಿ ತನ್ನ ಹೆಸರನ್ನೂ ಅಸ್ತಿತ್ವಕ್ಕೆ ತಂದುಕೊಳ್ಳುತ್ತಿದೆ.

ನಾವಿಂದು ವಿವಿಧ ನಮೂನೆಯ ವಿನ್ಯಾಸದ ಸ್ಮಾರ್ಟ್‌‌ಫೋನ್ ಜಗತ್ತು ಮತ್ತು ಅದನ್ನು ರೂಪುಗೊಳಿಸುತ್ತಿರುವ ಕಂಪೆನಿಗಳನ್ನು ಹೊಂದಿದ್ದು, ವಿಶ್ವದ ಪ್ರತಿಯೊಂದು ಮೊಬೈಲ್ ಫೋನ್ ತಯಾರಿಕಾ ಕಂಪೆನಿ ತಮ್ಮ ದೃಷ್ಟಿಯನ್ನು ಭಾರತೀಯ ಮಾರುಕಟ್ಟೆಯೆಡೆಗೆ ನೆಟ್ಟಿದೆ.

ಕಿಟ್‌ಕ್ಯಾಟ್ ಮೋಡಿಯ ಅತ್ಯದ್ಭುತ ಫೋನ್

ಅದರಲ್ಲೂ ಪ್ರಸ್ತುತ ಎರಡು ಕಂಪೆನಿಗಳಾದ ಕಾರ್ಬನ್ ಟೈಟಾನಿಯಂ S99 ಮತ್ತು ಈ ಹಿಂದೆ ಬಿಡುಗಡೆಯಾದ ಜನಪ್ರಿಯ ಮೋಟೋರೋಲಾ ಗ್ರಾಹಕರ ಮನಸೆಳೆಯುವ ಪ್ರಯತ್ನದಲ್ಲಿ ದಾಪುಗಾಲನ್ನಿಡುತ್ತಿದೆ.

ಈಗಾಗಲೇ ಮೋಟೋ ಇ ಕಡಿಮೆ ದರದಲ್ಲಿ ಅತ್ಯುನ್ನತ ಫೀಚರ್‌ಗಳನ್ನು ಒದಗಿಸಿ ಮುನ್ನಡೆಯನ್ನಿಡುತ್ತಿದ್ದರೆ ಕಾರ್ಬನ್ ಟೈಟಾನಿಯಮ್ ಮೋಟೋ ಇಗೆ ಭರ್ಜರಿ ಪೈಪೋಟಿಯನ್ನು ನೀಡುವಂತೆ ಈಗಾಗಲೇ ಹೊಚ್ಚ ಹೊಸ ಮಾದರಿಯಲ್ಲಿ ಕಂಡುಬಂದಿದ್ದು ಎರಡೂ ಫೋನ್‌‌ಗಳು ಆಂಡ್ರಾಯ್ಡ್‌ನ ಇತ್ತೀಚಿನ ಕಿಟ್‌ಕ್ಯಾಟ್ ಆವೃತ್ತಿಯಲ್ಲಿ ಚಾಲನೆಯಾಗುತ್ತಿದೆ.

ಇದೆರಡರ ನಡುವಿನ ಹೋಲಿಕೆನ್ನು ನಾವು ಮಾಡಹೊರಟಾಗ ಕಾರ್ಬನ್ ಮತ್ತು ಮೋಟೋ ಇ ಗೂಗಲ್ ಆಧಾರಿತ ಆಂಡ್ರಾಯ್ಡ್ ಆಪರೇಟಿಂಗ್ ಸಿಸ್ಟಮ್ ಅನ್ನು ಹೊಂದಿದೆ. ಕಾರ್ಬನ್ಟೈಟಾನಿಯಮ್ S99 4 ಇಂಚಿನ ಪರದೆಯನ್ನು ಹೊಂದಿದ್ದು ಐಪಿಎಸ್ ಡಿಸ್‌ಪ್ಲೇಯನ್ನು ಹೊಂದಿದೆ. ಮೋಟೋ ಇ, 124.8 x 64.8 x 12.3 ಎಮ್‌ಎಮ್ ಡೈಮೆನ್ಶನ್‌ ಅನ್ನು ಒದಗಿಸಿದ್ದು, 4.3 ಇಂಚಿನ ಕ್ಯಾಪಸಿಟೀವ್ ಸ್ಪರ್ಶಪರದೆಯನ್ನು ಹೊಂದಿದೆ. ಡಿವೈಸ್ 540 x 960 ಪಿಕ್ಸೆಲ್ ರೆಸಲ್ಯೂಶನ್ ಅನ್ನು ಒದಗಿಸುತ್ತದೆ.

ಕಾರ್ಬನ್ ಟೈಟಾನಿಯಂ S99, 512 ಎಮ್‌ಬಿ RAM ನೊಂದಿಗೆ ಬಂದಿದ್ದು 5 ಮೆಗಾಪಿಕ್ಸೆಲ್ ಪ್ರೈಮರಿ ಕ್ಯಾಮೆರಾವನ್ನು ಹೊಂದಿದೆ. ಇದರಲ್ಲಿ ವಿಜಿಎ ಫ್ರಂಟ್ ಫೇಸಿಂಗ್ ಕ್ಯಾಮೆರಾ ಕೂಡ ಇದ್ದು ನಿಮ್ಮ ಸೆಲ್ಫೀ ಅಪೇಕ್ಷೆಯನ್ನು ಈಡೇರಿಸಲಿದೆ. ಮೋಟೋರೋಲಾ ಮೋಟೋ ಇ, 5 ಮೆಗಾಪಿಕ್ಸೆಲ್ ಪ್ರೈಮರಿ ಕ್ಯಾಮೆರಾವನ್ನು ಹೊಂದಿದ್ದು, 2592 х 1944 ಪಿಕ್ಸೆಲ್ ರೆಸಲ್ಯೂಶನ್ ಅನ್ನು ಒದಗಿಸುತ್ತದೆ. ಇದು ಫ್ರಂಟ್ ಕ್ಯಾಮೆರಾವನ್ನು ಹೊಂದಿಲ್ಲ.

ಕಾರ್ಬನ್ ಟೈಟಾನಿಯಮ್ 1.3 GHz ಕ್ವಾಡ್ - ಕೋರ್ ಪ್ರೊಸೆಸರ್ ಅನ್ನು ಹೊಂದಿದ್ದು, ಮೋಟೋರೋಲಾ ಮೋಟೋ ಇ 1.2 GHz ಡ್ಯುಯೆಲ್ ಕೋರ್ ಪ್ರೊಸೆಸರ್ ಅನ್ನು ಹೊಂದಿದೆ. ಮೋಟೋರೋಲಾ ಮೋಟೋ ಇ 1ಜಿಬಿ RAM ಅನ್ನು ಹೊಂದಿದ್ದು 4ಜಿಬಿ ಆಂತರಿಕ ಮೆಮೊರಿ ಇದರಲ್ಲಿದೆ. ಇದನ್ನು ಮೈಕ್ರೋ ಎಸ್‌ಡಿ ಕಾರ್ಡ್ ಸ್ಲಾಟ್ ಬಳಸಿ 32ಜಿಬಿವರೆಗೆ ವಿಸ್ತರಿಸಬಹುದು.

ಕಾರ್ಬನ್ ಟೈಟಾನಿಯಮ್ 1500 mAh ಬ್ಯಾಟರಿಯೊಂದಿಗೆ ಬಂದಿದ್ದು, ಮೋಟೋರೋಲಾ ಮೋಟೋ ಇ 1980 mAh ಬ್ಯಾಟರಿ ಇದರಲ್ಲಿದೆ. ಕಾರ್ಬನ್ ಟೈಟಾನಿಯಮ್ S99 ರೂ. 5,990 ಬಂದಿದ್ದು, ಮೋಟೋರೋಲಾ ಮೋಟೋ ಇ ರೂ 6,999 ಕ್ಕೆ ಲಭ್ಯವಿದೆ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X