21 ಮೆಗಾಪಿಕ್ಸೆಲ್ಲಿನ ಕೊಡಾಕ್ ಎಕ್ಟ್ರಾದಲ್ಲಿ ನಿರೀಕ್ಷಿಸಬಹುದಾದ ಐದು ವಿಶೇಷತೆಗಳು.

|

ಕ್ಯಾಮೆರಾ ದೈತ್ಯ ಕೊಡಾಕ್ ಕಳೆದ ವರ್ಷ ತನ್ನ ಮೊದಲ ಸ್ಮಾರ್ಟ್ ಫೋನ್ ಐ.ಎಂ5 ಅನ್ನು ಬಿಡುಗಡೆಗೊಳಿಸಿತು. ಆದರೆ ಅದು ತನ್ನ ಕಳಪೆ ಕಾರ್ಯನಿರ್ವಹಣೆಯಿಂದಾಗಿ ವಿಫಲವಾಯಿತು. ಈಗ ಕಂಪನಿಯು ಎಕ್ಟ್ರಾ ಹೆಸರಿನ 21 ಮೆಗಾಪಿಕ್ಸೆಲ್ಲಿನ ಹೊಸ ಫೋನನ್ನು ಬಿಡುಗಡೆಗೊಳಿಸುವ ತಯಾರಿಯಲ್ಲಿದೆ.

21 ಮೆಗಾಪಿಕ್ಸೆಲ್ಲಿನ ಕೊಡಾಕ್ ಎಕ್ಟ್ರಾದಲ್ಲಿ ನಿರೀಕ್ಷಿಸಬಹುದಾದ ಐದು ವಿಶೇಷತೆಗಳು.

ಕಂಪನಿಯು 1941ರಲ್ಲಿ ಬಿಡುಗಡೆಗೊಳಿಸಿದ್ದ ವಿಶೇಷ ಕ್ಯಾಮೆರಾದ ಹೆಸರನ್ನು ಈ ಹೊಸ ಮೊಬೈಲಿಗೆ ಇಡಲಾಗಿದೆ. ಪ್ರಸಕ್ತ ಸ್ಮಾರ್ಟ್ ಫೋನ್ ಬಳಕೆದಾರರಿಗೆ ವಿಶೇಷವಾದ ಕ್ಯಾಮೆರಾ ನೀಡುವ ನಿಟ್ಟಿನಲ್ಲಿ ಕಂಪನಿಯು ಈ ಪ್ರಯತ್ನ ನಡೆಸಿದೆ.

ಓದಿರಿ: 'ಗೂಗಲ್‌ ಪಿಕ್ಸೆಲ್‌' ಫೋನ್‌ಗಳ 5 ಸಾಮಾನ್ಯ ಸಮಸ್ಯೆಗಳು ಮತ್ತು ಪರಿಹಾರಗಳು

ಕೊಡಾಕಿನ ಹೊಸ ಎಕ್ಟ್ರಾ ಸ್ಮಾರ್ಟ್ ಫೋನಿನ ಬಗ್ಗೆ ನಿಮಗೆ ತಿಳಿದಿರಬೇಕಾದ ಸಂಗತಿಗಳು ಇಲ್ಲಿವೆ. ಒಮ್ಮೆ ಓದಿ.

21 ಮೆಗಾಪಿಕ್ಸೆಲ್ಲಿನ ಕೊಡಾಕ್ ಎಕ್ಟ್ರಾದಲ್ಲಿ ನಿರೀಕ್ಷಿಸಬಹುದಾದ ಐದು ವಿಶೇಷತೆಗಳು.

21 ಮೆಗಾಪಿಕ್ಸೆಲ್ಲಿನ ಕ್ಯಾಮೆರ.

ಕೊಡಾಕಿನ ಎಕ್ಟ್ರಾ ಬಹುಮುಖ್ಯವಾಗಿ ಛಾಯಾಗ್ರಹಣ ವಿಭಾಗದತ್ತ ಗಮನ ಹರಿಸಿದೆ. ಎಫ್/2.0 ಅಪರ್ಚರ್ ಹೊಂದಿರುವ 21 ಮೆಗಾಪಿಕ್ಸೆಲ್ಲಿನ ಕ್ಯಾಮೆರ ಈ ಫೋನಿನಲ್ಲಿರುವುದೇ ಎಲ್ಲವನ್ನೂ ಹೇಳಿಬಿಡುತ್ತದೆ. ಜೊತೆಗೆ, ಎಕ್ಟ್ರಾದಲ್ಲಿ ಆಪ್ಟಿಕಲ್ ಇಮೇಜ್ ಸ್ಟೆಬಿಲೈಝೇಷನ್, ಫೇಸ್ ಡಿಟೆಕ್ಷನ್ ಆಟೋ ಫೋಕಸ್, ಡುಯಲ್ ಟೋನ್ ಎಲ್.ಇ.ಡಿ ಫ್ಲಾಷ್ ಮತ್ತು 4ಕೆ ರೆಕಾರ್ಡಿಂಗ್ ಸೌಲಭ್ಯವಿದೆ.

ಮುಂಬದಿಯಲ್ಲಿ ಸೆಲ್ಫಿ ತೆಗೆಯಲು 13 ಮೆಗಾಪಿಕ್ಸೆಲ್ಲಿನ ಕ್ಯಾಮೆರಾ ಇದೆ.

21 ಮೆಗಾಪಿಕ್ಸೆಲ್ಲಿನ ಕೊಡಾಕ್ ಎಕ್ಟ್ರಾದಲ್ಲಿ ನಿರೀಕ್ಷಿಸಬಹುದಾದ ಐದು ವಿಶೇಷತೆಗಳು.

ಡಿ.ಎಸ್.ಎಲ್.ಆರ್ ರೀತಿಯ ಆಯ್ಕೆಗಳು.

ಮೇಲೆ ತಿಳಿಸಿದ ಸಾಮಾನ್ಯ ಕ್ಯಾಮೆರ ಗುಣಗಳ ಜೊತೆಗೆ ಎಕ್ಟ್ರಾದ ಕ್ಯಾಮೆರಾ ತಂತ್ರಾಂಶವು ಡಿ.ಎಸ್.ಎಲ್.ಆರ್ ರೀತಿಯ ಆಯ್ಕೆಗಳನ್ನೂ ನೀಡುತ್ತದೆ. ಉದಾಹರಣೆಗೆ ಆಟೋ ಮೋಡ್, ಪೋರ್ಟ್ರೇಟ್, ಮ್ಯಾನ್ಯುಯಲ್, ಸ್ಪೋರ್ಟ್ಸ್, ಬೊಕೆ, ನೈಟ್ ಮೋಡ್, ಹೆಚ್.ಡಿ.ಆರ್, ಪನೋರಮಾ, ಮ್ಯಾಕ್ರೋ ಮತ್ತು ಲ್ಯಾಂಡ್ ಸ್ಕೇಪ್.

21 ಮೆಗಾಪಿಕ್ಸೆಲ್ಲಿನ ಕೊಡಾಕ್ ಎಕ್ಟ್ರಾದಲ್ಲಿ ನಿರೀಕ್ಷಿಸಬಹುದಾದ ಐದು ವಿಶೇಷತೆಗಳು.

ಹಿಂಬದಿಯಲ್ಲಿ ದೊಡ್ಡ ಕ್ಯಾಮೆರ.

ಹೊಸ ಕ್ಯಾಮೆರಾಗಳಲ್ಲಿ ಹಿಂಬದಿಯಲ್ಲಿ ಹೊರಚಾಚಿಕೊಳ್ಳುವ ಕ್ಯಾಮೆರಾದ ಬಗ್ಗೆ ನಾವು ಆಗಾಗ ದೂರುತ್ತಿರುತ್ತೇವೆ. ಎಕ್ಟ್ರಾದಲ್ಲಿರುವ ದೊಡ್ಡ ಕ್ಯಾಮೆರ ಅದರ ಸೌಂದರ್ಯವನ್ನು ಹೆಚ್ಚಿಸಿದೆ. ಈ ಹೊರಚಾಚಿದ ಕ್ಯಾಮೆರಾ ಇಡೀ ಫೋನಿಗೊಂದು ಕ್ಲಾಸಿಕ್ ರೂಪವನ್ನು ನೀಡಿದೆ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

21 ಮೆಗಾಪಿಕ್ಸೆಲ್ಲಿನ ಕೊಡಾಕ್ ಎಕ್ಟ್ರಾದಲ್ಲಿ ನಿರೀಕ್ಷಿಸಬಹುದಾದ ಐದು ವಿಶೇಷತೆಗಳು.

ವಿಶಿಷ್ಟ ವಿನ್ಯಾಸ.

ಕೊಡಾಕ್ ಎಕ್ಟ್ರಾದಲ್ಲಿ ವಿಶಿಷ್ಟ ವಿನ್ಯಾಸವಿದೆ. ಹಿಂಬದಿಯಲ್ಲಿರುವ ಲೆದರ್ ಮತ್ತು ಸುತ್ತಲಿರುವ ಮೆಟಲ್ ರೀತಿ ಕಾಣುವ ಪ್ಲಾಸ್ಟಿಕ್ ಅಂದವನ್ನು ಹೆಚ್ಚಿಸಿದೆ. ಜೊತೆಗೆ ಕೆಳಭಾಗದಲ್ಲಿ ಸ್ವಲ್ಪ ಬಾಗುವಿಕೆಯಿರುವುದು ಸ್ಮಾರ್ಟ್ ಫೋನನ್ನು ಬ್ಯಾಲನ್ಸ್ ಮಾಡಲು ಸಹಾಯ ಮಾಡುತ್ತದೆ.

ಉತ್ತಮ ಹಾರ್ಡ್ ವೇರ್.

ವಿಶೇಷತೆಗಳ ಕಡೆಗೆ ನೋಡಿದರೆ ಎಕ್ಟ್ರಾದಲ್ಲಿ 5 ಇಂಚಿನ ಫುಲ್ ಹೆಚ್.ಡಿ ಪರದೆಯಿದೆ. 2.3 GHz ಹೇಲಿಯೋ ಎಕ್ಸ್20 ಪ್ರೊಸೆಸರ್, 3ಜಿಬಿ ರ್ಯಾಮ್ ಇದೆ. 32 ಜಿಬಿಯಷ್ಟು ಆಂತರಿಕ ಸಂಗ್ರಹ ಸಾಮರ್ಥ್ಯವಿದೆ, ಮೈಕ್ರೋ ಎಸ್.ಡಿ ಕಾರ್ಡ್ ಬಳಸಿ ವಿಸ್ತರಿಸಿಕೊಳ್ಳಬಹುದು. 3,000ಎಂ.ಎ.ಹೆಚ್ ಸಾಮರ್ಥ್ಯದ ಬ್ಯಾಟರಿ ಇದರಲ್ಲಿದೆ.

ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Best Mobiles in India

English summary
Camera giant Kodak launched the IM5 — its first Android smartphone last year. However, it failed to impress users owing to its underwhelming performance. Now, the company is all set to launch another phone named as Ektra with 21MP camera.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X