ಲೆನೊವೊ ವೈಬ್‌ ಝಿ ವರ್ಸಸ್‌ ಹತ್ತು ಫ್ಲ್ಯಾಬ್ಲೆಟ್‌ಗಳು

By Ashwath
|

ವಿಶ್ವದ ಟಾಪ್‌ ಸ್ಮಾರ್ಟ್‌‌ಫೋನ್‌ ತಯಾರಕ ಕಂಪೆನಿಗಳಲ್ಲಿ ಒಂದಾಗಿರುವ ಲೆನೊವೊ ಭಾರತದ ಮಾರುಕಟ್ಟೆಗೆ ಈಗ ತನ್ನ ದುಬಾರಿ ಬೆಲೆಯ,4ಜಿ ಎಲ್‌ಟಿಇ ನೆಟ್‌ವರ್ಕ್‌ಗೆ ಬೆಂಬಲ ನೀಡುವ ವೈಬ್‌ ಝಿ ಫ್ಯಾಬ್ಲೆಟ್‌ನ್ನು ಬಿಡುಗಡೆ ಮಾಡಿದೆ. ಲೆನೊವೊ ಇಲ್ಲಿಯವರೆಗೆ ಮೂವತ್ತು ಸಾವಿರಕ್ಕೂ ಅಧಿಕ ಬೆಲೆ ಇರುವ ಯಾವುದೇ ಸ್ಮಾರ್ಟ್‌‌ಫೋನ್‌ ಭಾರತದ ಮಾರುಕಟ್ಟೆಗೆ ಬಿಡುಗಡೆ ಮಾಡಿರಲಿಲ್ಲ. ಆದರೆ ಈ ಫ್ಯಾಬ್ಲೆಟ್‌ಗೆ 35,999 ರೂಪಾಯಿ ನಿಗದಿ ಮಾಡಿದ್ದು, ಬಲಾಢ್ಯ ಕಂಪೆನಿಗಳ ದುಬಾರಿ ಬೆಲೆಯ ಸ್ಮಾರ್ಟ್‌‌ಫೋನ್‌ಗಳಿಗೆ ಪೈಪೋಟಿ ನೀಡಲು ಲೆನೊವೊ ವೈಬ್‌ ಝಿನ್ನು ದೇಶೀಯ ಮಾರುಕಟ್ಟೆಗೆ ಪರಿಚಯಿಸಿದೆ.

5.5 ಇಂಚಿನ ಸ್ಕ್ರೀನ್‌ ಹೊಂದಿರುವ ಫ್ಯಾಬ್ಲೆಟ್‌ 149.1x77x7.9 ಮಿ.ಮೀ ಗಾತ್ರವನ್ನು ಹೊಂದಿದ್ದು 145.2 ಗ್ರಾಂ ತೂಕವನ್ನು ಹೊಂದಿದೆ.ಈ ಫ್ಯಾಬ್ಲೆಟ್‌ ಆಂಡ್ರಾಯ್ಡ್ 4.3 ಜೆಲ್ಲಿ ಬೀನ್‌ ಓಎಸ್‌ ಹೊಂದಿದೆ. ಲೆನೊವೊದ ದುಬಾರಿ ಬೆಲೆಯ ಫ್ಯಾಬ್ಲೆಟ್‌ ಇದಾಗಿರುವುದರಿಂದ ಸದ್ಯದಲ್ಲೇ ಕಿಟ್‌ಕ್ಯಾಟ್‌ ಓಎಸ್‌ಗೆ ಅಪ್‌ಗ್ರೆಡ್‌ ಅವಕಾಶವನ್ನು ಕಲ್ಪಿಸಲಾಗುವುದು ಎಂದು ಲೆನೊವೊ ತಿಳಿಸಿದೆ.

ಈ ಫ್ಯಾಬ್ಲೆಟ್‌ನ ವಿಶೇಷತೆ ಏನೆಂದರೆ ವಾಲ್ಯೂಮ್‌ ಬಟನ್‌ ಒತ್ತುವ ಮೂಲಕ ಅನ್‌ಲಾಕ್‌ ಮಾಡಬಹುದು. ಜೊತೆಗೆ ಇನ್‌ಸ್ಟಾಲ್‌ ಆಗಿರುವ ಆಪ್‌ಗಳನ್ನು ನೇರವಾಗಿ ಹೋಮ್ ಸ್ಕ್ರೀನ್‌ನಿಂದಲೇ ಡಿಲೀಟ್‌ ಮಾಡಬಹುದಾಗಿದೆ. ಹೊಸ ವಿಶೇಷತೆಗಳನ್ನು ಲೆನೊವೊ ಈ ಫ್ಯಾಬ್ಲೆಟ್‌ಗೆ ನೀಡಿದ್ದು ಮಾರುಕಟ್ಟೆಯಲ್ಲಿರುವ ಉಳಿದ ಕಂಪೆನಿಗಳ ಸ್ಮಾರ್ಟ್‌‌ಫೋನ್‌ಗಳಿಗೆ ಹೋಲಿಸಿದ್ದರೆ ಬೆಸ್ಟ್‌ ಎನ್ನಬಹುದು.ಮುಂದಿನ ಪುಟದಲ್ಲಿ ಯಾಕೆ ಈ ಫ್ಯಾಬ್ಲೆಟ್‌ ಯಾವೆಲ್ಲಾ ವಿಚಾರದಲ್ಲಿ ಉಳಿದ ಸ್ಮಾರ್ಟ್‌ಫೋನ್‌‌ಗಳಿಗಿಂತ ಬೆಸ್ಟ್‌‌ ಎನ್ನುವುದಕ್ಕೆ ವಿವರಣೆ ನೀಡಲಾಗಿದ್ದು,ಒಂದೊಂದೆ ಪುಟವನ್ನು ತಿರುಗಿಸಿ ಓದಿಕೊಂಡು ಹೋಗಿ.

ಲೆನೊವೊ ವೈಬ್‌ ಝಿ
ವಿಶೇಷತೆ:
ಸಿಂಗಲ್‌ ಸಿಮ್‌(ಮೈಕ್ರೋ ಸಿಮ್‌)
5.5 ಇಂಚಿನ ಐಪಿಎಸ್‌ ಎಲ್‌ಸಿಡಿ ಸ್ಕ್ರೀನ್‌(1080x1920 ಪಿಕ್ಸೆಲ್‌)
2.2 GHz ಕ್ವಾಲಕಂ ಸ್ನಾಪ್‌ಡ್ರಾಗನ್‌ ಕ್ವಾಡ್‌ ಕೋರ್‍ ಪ್ರೊಸೆಸರ್‌
Adreno 330 ಗ್ರಾಫಿಕ್‌ ಪ್ರೊಸೆಸರ್‌
ಆಂಡ್ರಾಯ್ಡ್ 4.3 ಜೆಲ್ಲಿ ಬೀನ್ ಓಎಸ್‌
16 ಜಿಬಿ ಆಂತರಿಕ ಮೆಮೊರಿ
2 GB RAM
13 ಎಂಪಿ ಹಿಂದುಗಡೆ ಕ್ಯಾಮೆರಾ
5 ಎಂಪಿ ಮುಂದುಗಡೆ ಕ್ಯಾಮೆರಾ
ಮೆಮೊರಿ ವಿಸ್ತರಣೆಗೆ ಕಾರ್ಡ್‌‌ ಸ್ಲಾಟ್‌ ಇಲ್ಲ
3ಜಿ,4ಜಿ,ವೈಫೈ,ಬ್ಲೂಟೂತ್‌,ಜಿಪಿಎಸ್‌
3000 mAh ಬ್ಯಾಟರಿ

1

1

ಎಲ್‌‌ಜಿ ಜಿ2ಗೆ ಹೋಲಿಕೆ ಮಾಡಿದ್ದಲ್ಲಿ,ಎಲ್‌‌‌ಜಿ ಸ್ಮಾರ್ಟ್‌‌‌‌‌‌‌ಫೋನ್‌ 5.2 ಇಂಚಿನ ಫುಲ್‌ ಎಚ್‌ಡಿ ಸ್ಕ್ರೀನ್‌(1920×1080 ಪಿಕ್ಸೆಲ್‌,ಕಾರ್ನಿಂಗ್‌ ಗೊರಿಲ್ಲ ಗ್ಲಾಸ್‌2)ನೊಂದಿಗೆ ಬಿಡುಗಡೆಯಾಗಿದ್ದರೆ, ವೈಬ್‌ ಝಿ 5.5 ಇಂಚಿನ ಸ್ಕ್ರೀನ್‌ (1920×1080 ಪಿಕ್ಸೆಲ್‌,ಕಾರ್ನಿಂಗ್‌ ಗೊರಿಲ್ಲ ಗ್ಲಾಸ್‌ 3)ನೊಂದಿಗೆ ಬಿಡುಗಡೆಯಾಗಿದೆ.

ವೈಬ್‌ ಝಿ ಮುಂದುಗಡೆ 5 ಎಂಪಿ ಕ್ಯಾಮೆರಾವನ್ನು ಹೊಂದಿದ್ದರೆ,ಎಲ್‌‌ಜಿ ಜಿ2 ಮುಂದುಗಡೆ 2.1 ಎಂಪಿ ಕ್ಯಾಮೆರಾವನ್ನು ಹೊಂದಿದೆ.

2

2


ಬ್ಲ್ಯಾಕ್‌ಬೆರಿ 5 ಇಂಚಿನ ಕೆಪಾಸಿಟಿವ್‌‌ ಟಚ್‌ಸ್ಕ್ರೀನ್‌(720 x 1280 ಪಿಕ್ಸೆಲ್‌,294 ಪಿಪಿಐ) ಹೊಂದಿದೆ.ವೈಬ್‌ ಝಿ ಈ ಹಿಂದಿನ ಪುಟದಲ್ಲಿ ಹೇಳಿದಂತೆ 5.5 ಇಂಚಿನ ಸ್ಕ್ರೀನ್‌ (1920×1080 ಪಿಕ್ಸೆಲ್‌,ಕಾರ್ನಿಂಗ್‌ ಗೊರಿಲ್ಲ ಗ್ಲಾಸ್‌ 3,401 ಪಿಪಿಐ) ಒಳಗೊಂಡಿದೆ.
ಬ್ಲ್ಯಾಕ್‌ಬೆರಿ 1.7 GHz ಡ್ಯುಯಲ್‌ ಕೋರ್‌ ಕ್ರೈಟ್‌ ಪ್ರೊಸೆಸರ್‌ ಹೊಂದಿದ್ದರೆ,ವೈಬ್‌ ಝಿ 2.2 GHz ಕ್ವಾಡ್‌ ಕೋರ್‌ ಕ್ರೈಟ್‌ ಪ್ರೊಸೆಸರ್‌ನೊಂದಿಗೆ ಬಿಡುಗಡೆಯಾಗಿದೆ.

ವೈಬ್‌ ಝಿ ಎಲ್‌ಇಡಿ ಫ್ಲ್ಯಾಶ್‌ ಇರುವ 13 ಎಂಪಿ ಹಿಂದುಗಡೆ ಕ್ಯಾಮೆರಾವನ್ನು ಹೊಂದಿದ್ದು,4128 x 3096 ಪಿಕ್ಸೆಲ್‌ ರೆಸೂಲೂಶನ್‌ವರೆಗಿನ ಚಿತಗಳನ್ನು ತೆಗಯಬಹುದಾಗಿದೆ. ಬ್ಲ್ಯಾಕ್‌ಬೆರಿ ಸ್ಮಾರ್ಟ್‌ಫೋನ್‌ ಹಿಂದುಗಡೆ ಎಲ್‌‌ಇಡಿ ಫ್ಲ್ಯಾಶ್‌ ಹೊಂದಿರುವ 8 ಎಂಪಿ ಕ್ಯಾಮೆರಾ ಹೊಂದಿದ್ದು 3264 x 2448 ಪಿಕ್ಸೆಲ್‌ ರೆಸೂಲೂಶನ್‌‌ವರೆಗಿನ ಚಿತ್ರಗಳನ್ನು ತೆಗೆಯಬಹುದಾಗಿದೆ.

3

3


ಎಚ್‌ಟಿಸಿ ಒನ್‌ 4.3 ಇಂಚಿನ ಸ್ಕ್ರೀನ್‌(720 x 1280 ಪಿಕ್ಸೆಲ್‌,342 ಪಿಪಿಐ)1.4 GHz ಡ್ಯುಯಲ್‌ ಕೋರ್‌ ಕ್ವಾಲಕಂ ಸ್ನಾಪ್‌ಡ್ರಾಗನ್‌ ಪ್ರೊಸೆಸರ್‌ ಒಳಗೊಂಡಿದೆ.ವೈಬ್‌ ಝಿ 5.5 ಇಂಚಿನ ಸ್ಕ್ರೀನ್‌ (1920×1080 ಪಿಕ್ಸೆಲ್‌,ಕಾರ್ನಿಂಗ್‌ ಗೊರಿಲ್ಲ ಗ್ಲಾಸ್‌ 3,401 ಪಿಪಿಐ)2.2 GHz ಕ್ವಾಡ್‌ ಕೋರ್‌ ಕ್ರೈಟ್‌ ಪ್ರೊಸೆಸರ್‌ನೊಂದಿಗೆ ಬಿಡುಗಡೆಯಾಗಿದೆ.

ಎಚ್‌ಟಿಸಿ ಒನ್‌ ಮಿನಿ 4 ಎಂಪಿ ಆಲ್ಟ್ರಾ ಪಿಕ್ಸೆಲ್‌ ಕ್ಯಾಮೆರಾವನ್ನು ಹೊಂದಿದ್ದು,2688 x 1520 ಪಿಕ್ಸೆಲ್‌ ರೆಸೂಲೂಶನ್‌ವರೆಗಿನ ಚಿತ್ರಗಳನ್ನು ತೆಗೆಯಬಹುದಾಗಿದ್ದರೆ ಲೆನೊವೊದಲ್ಲಿ 4128 x 3096 ಪಿಕ್ಸೆಲ್‌ ರೆಸೂಲೂಶನ್‌ವರೆಗಿನ ಚಿತ್ರಗಳನ್ನು13 ಎಂಪಿ ಕ್ಯಾಮೆರಾದ ಮೂಲಕ ತೆಗೆಯಬಹುದಾಗಿದೆ. ಎಚ್‌ಟಿಸಿ ಒನ್‌ ಮಿನಿ 1.6 ಎಂಪಿ ಮುಂದುಗಡೆ ಕ್ಯಾಮೆರಾವನ್ನು ಹೊಂದಿದ್ದರೆ, ಲೆನೊವೊ 5 ಎಂಪಿ ಕ್ಯಾಮೆರಾವನ್ನು ಹೊಂದಿದೆ.

4

4


ಸೋನಿ ಎಕ್ಸ್‌‌ಪೀರಿಯಾ ಝಿ1 5 ಇಂಚಿನ ಫುಲ್‌ ಎಚ್‌ಡಿ ಸ್ಕ್ರೀನ್‌ (1080 x 1920 ಪಿಕ್ಸೆಲ್‌), ಮುಂದುಗಡೆ 2 ಎಂಪಿ ಕ್ಯಾಮೆರಾವನ್ನು ಹೊಂದಿದ್ದರೆ, ಲೆನೊವೊ 5.5 ಇಂಚಿನ ಫುಲ್‌ ಎಚ್‌ಡಿ ಸ್ಕ್ರೀನ್‌, ಮುಂದುಗಡೆ 5 ಎಂಪಿ ಕ್ಯಾಮೆರಾವನ್ನು ಒಳಗೊಂಡಿದೆ.

5

5


ನೋಕಿಯಾ ಲೂಮಿಯಾ 1520 ವಿಶೇಷತೆ ಮತ್ತು ಗುಣಮಟ್ಟ ಲೆನೊವೊದ ಸ್ಮಾರ್ಟ್‌‌ಫೋನ್‌ ಹತ್ತಿರ ಹತ್ತಿರ ಬಂದರೂ ಆಂಡ್ರಾಯ್ಡ್‌ನಿಂದಾಗಿ ಲೆನೊವೊ ಬೆಸ್ಟ್‌ ಎಂದು ಹೇಳಬಹುದು. ಲೂಮಿಯಾ 1520 ಮುಂದುಗಡೆ 1.2 ಎಂಪಿ ಕ್ಯಾಮೆರಾವನ್ನು ಹೊಂದಿದ್ದರೆ, ವೈಬ್‌ ಝಿ 5 ಎಂಪಿ ಕ್ಯಾಮೆರಾವನ್ನು ಹೊಂದಿದೆ.

6

6


ಐಫೋನ್‌ 5ಸಿ ಆಪಲ್‌ ಐಓಎಸ್‌ ಹೊಂದಿದ್ದರೂ,4 ಇಂಚಿನ ಎಲ್‌‌ಇಡಿ ಬ್ಲ್ಯಾಕ್‌ಲಿಟ್‌ ಡಿಸ್ಪ್ಲೇ(640 x 1136 ಪಿಕ್ಸೆಲ್‌,326 ಪಿಪಿಐ) ಹೊಂದಿದೆ. ಲೆನೊವೊ ಐಫೋನ್‌ 5ಸಿಗಿಂತಲೂ ದೊಡ್ಡ ಸ್ಕ್ರೀನ್‌ ಹೊಂದಿದೆ.ವೈಬ್‌ ಝಿ 2.2 GHz ಕ್ವಾಡ್‌ ಕೋರ್‌ ಪ್ರೊಸೆಸರ್‌ ಹೊಂದಿದ್ದರೆ, ಐಫೋನ್‌ 5ಸಿ 1.3 GHz ಡ್ಯುಯಲ್‌ ಕೋರ್‌ ಪ್ರೊಸೆಸರ್‌ ಹೊಂದಿದೆ.

ಐಫೋನ್‌ 5 ಸಿ ಹಿಂದುಗಡೆ 8 ಎಂಪಿ, ಮುಂದುಗಡೆ 1.2 ಎಂಪಿ ಕ್ಯಾಮೆರಾ, 1510 mAh ಬ್ಯಾಟರಿಯನ್ನು ಹೊಂದಿದ್ದರೆ, ವೈಬ್‌ ಝಿ ಹಿಂದುಗಡೆ 13 ಎಂಪಿ, ಮುಂದುಗಡೆ 5 ಎಂಪಿ ಕ್ಯಾಮೆರಾ, 3000 mAh ಬ್ಯಾಟರಿಯನ್ನು ಹೊಂದಿದೆ.

7

7


ಸ್ಯಾಮ್‌ಸಂಗ್‌ ಬೆಸ್ಟ್‌ ಸ್ಮಾರ್ಟ್‌ಫೋನ್‌ ಗೆಲಾಕ್ಸಿ ಎಸ್‌4 ಮತ್ತು ವೈಬ್‌ ಝಿ ನಡುವೆ ಸ್ಕ್ರೀನ್‌ ವಿಚಾರಕ್ಕೆ ಬಂದರೆ ಲೆನೊವೊ ಬೆಸ್ಟ್‌ ಎನ್ನಬಹುದು.ಎಸ್‌4, 5 ಇಂಚಿನ ಸ್ಕ್ರೀನ್‌ ಹೊಂದಿದ್ದರೆ, ವೈಬ್‌5.5 ಇಂಚಿನ ಸ್ಕ್ರೀನ್‌ ಹೊಂದಿದೆ. ಅಷ್ಟೇ ಅಲ್ಲದೇ ಗೆಲಾಕ್ಸಿ ಎಸ್‌4, 2 ಎಂಪಿ ಮುಂದುಗಡೆ ಕ್ಯಾಮೆರಾ ಹೊಂದಿದ್ದರೆ, ವೈಬ್‌ ಝಿ 5 ಎಂಪಿ ಕ್ಯಾಮೆರಾ ಹೊಂದಿದೆ.

8

8


ಲೂಮಿಯಾ 1320 5 ಎಂಪಿ ಹಿಂದುಗಡೆ ಕ್ಯಾಮೆರಾ, ಮುಂದುಗಡೆ ವಿಜಿಎ ಕ್ಯಾಮೆರಾವನ್ನು ಹೊಂದಿದೆ. ವೈಬ್‌ ಝಿ ಹಿಂದುಗಡೆ 13 ಎಂಪಿ ಕ್ಯಾಮೆರಾ,ಮುಂದುಗಡೆ 5 ಎಂಪಿ ಕ್ಯಾಮೆರಾವನ್ನು ಹೊಂದಿದೆ.

9

9


ಸ್ಯಾಮ್‌ಸಂಗ್‌ ಗೆಲಾಕ್ಸಿ ಗ್ರ್ಯಾಂಡ್ 2 ಟಿಎಫ್‌ಟಿ 5.25 ಇಂಚಿನ ಸ್ಕ್ರೀನ್‌‌,1.2GHz ಕ್ವಾಡ್‌ ಕೋರ್‌ ಪ್ರೊಸೆಸರ್‌ ಹೊಂದಿದ್ದರೆ, ಲೆನೊವೊ 5.5 ಇಂಚಿನ ಫುಲ್‌ ಎಚ್‌ಡಿ ಸ್ಕ್ರೀನ್‌ 2.2 GHz ಕ್ವಾಡ್‌ ಕೋರ್‌ ಪ್ರೊಸೆಸರ್‌ ಒಳಗೊಂಡಿದೆ.


ಗೆಲಾಕ್ಸಿ ಗ್ರ್ಯಾಂಡ್ 2 ಹಿಂದುಗಡೆ 8 ಎಂಪಿ ಕ್ಯಾಮೆರಾವನ್ನು ಮುಂದುಗಡೆ 1.9 ಎಂಪಿ ಕ್ಯಾಮೆರಾ ಹೊಂದಿದ್ದರೆ, ಲೆನೊವೊ ವೈಬ್‌‌ ಝಿ ಹಿಂದೆ 13 ಎಂಪಿ ಕ್ಯಾಮೆರಾ, ಮುಂದುಗಡೆ 5 ಎಂಪಿ ಕ್ಯಾಮೆರಾವನ್ನು ಒಳಗೊಂಡಿದೆ.

10

10


ವೈಬ್‌ ಝಿ ಜೆಲ್ಲಿಬೀನ್‌ ಓಎಸ್‌ ಹೊಂದಿದ್ದರೂ ಕಿಟ್‌ಕ್ಯಾಟ್‌ ಓಎಸ್‌ಗೆ ಸದ್ಯದಲ್ಲೇ ಅಪ್‌ಗ್ರೇಡ್‌ ಮಾಡಬಹುದು ಎಂದು ಲೆನೊವೊ ಹೇಳಿದೆ. ನೆಕ್ಸಸ್‌ 5, 5 ಇಂಚಿನ ಸ್ಕ್ರೀನ್‌ ಹೊಂದಿದ್ದು, ಹಿಂದುಗಡೆ 8 ಎಂಪಿ ಕ್ಯಾಮೆರಾ, ಮುಂದುಗಡೆ 1.3 ಎಂಪಿ ಕ್ಯಾಮೆರಾವನ್ನು ಹೊಂದಿದೆ.
ಆದರೆ ಲೆನೊವೊ ಹಿಂದುಗಡೆ 13 ಎಂಪಿ ಕ್ಯಾಮೆರಾ,ಮುಂದುಗಡೆ 5 ಎಂಪಿ ಕ್ಯಾಮೆರಾದೊಂದಿಗೆ ಬಿಡುಗಡೆಯಾಗಿದೆ.

ಇನ್ನು ಬ್ಯಾಟರಿ ವಿಚಾರಕ್ಕೆ ಬಂದರೆ ವೈಬ್‌ ಝಿ 3000 mAh ಬ್ಯಾಟರಿ ಹೊಂದಿದ್ದರೆ, ನೆಕ್ಸಸ್‌ 5 2300mAh ಬ್ಯಾಟರಿಯನ್ನು ಹೊಂದಿದೆ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X