ಲೆನೊವೊ ವೈಬ್‌ ಝಿ:ಕಡಿಮೆ ಬೆಲೆಯ ಬೆಸ್ಟ್‌ ಫ್ಯಾಬ್ಲೆಟ್‌‌

By Ashwath
|

ವಿಶ್ವದ ಟಾಪ್‌ ಸ್ಮಾರ್ಟ್‌‌ಫೋನ್‌ ತಯಾರಕ ಕಂಪೆನಿಗಳಲ್ಲಿ ಒಂದಾಗಿರುವ ಲೆನೊವೊ ಭಾರತದ ಮಾರುಕಟ್ಟೆಗೆ ಈಗ ತನ್ನ ದುಬಾರಿ ಬೆಲೆಯ,4ಜಿ ಎಲ್‌ಟಿಇ ನೆಟ್‌ವರ್ಕ್‌ಗೆ ಬೆಂಬಲ ನೀಡುವ ವೈಬ್‌ ಝಿ ಫ್ಯಾಬ್ಲೆಟ್‌ನ್ನು ಬಿಡುಗಡೆ ಮಾಡಿದೆ. ಲೆನೊವೊ ಇಲ್ಲಿಯವರೆಗೆ ಮೂವತ್ತು ಸಾವಿರಕ್ಕೂ ಅಧಿಕ ಬೆಲೆಯಿರುವ ಯಾವುದೇ ಸ್ಮಾರ್ಟ್‌‌ಫೋನ್‌ ಭಾರತದ ಮಾರುಕಟ್ಟೆಗೆ ಬಿಡುಗಡೆ ಮಾಡಿರಲಿಲ್ಲ.ಆದರೆ ಈ ಫ್ಯಾಬ್ಲೆಟ್‌ಗೆ 35,999 ರೂಪಾಯಿ ನಿಗದಿ ಮಾಡಿದ್ದು, ಬಲಾಢ್ಯ ಕಂಪೆನಿಗಳ ದುಬಾರಿ ಬೆಲೆಯ ಸ್ಮಾರ್ಟ್‌‌ಫೋನ್‌ಗಳಿಗೆ ಪೈಪೋಟಿ ನೀಡಲು ಲೆನೊವೊ ವೈಬ್‌ ಝಿನ್ನು ದೇಶೀಯ ಮಾರುಕಟ್ಟೆಗೆ ಪರಿಚಯಿಸಿದೆ.

ಲೆನೊವೊ ಆರಂಭದಲ್ಲಿ ಫ್ಯಾಬ್ಲೆಟ್‌ಗೆ 35,999 ರೂಪಾಯಿ ನಿಗದಿ ಮಾಡಿದ್ದರೂ ಈಗ ಲೆನೊವೊ ಆನ್‌ಲೈನ್‌ ಶಾಪಿಂಗ್‌ ತಾಣ thedostore.comನಲ್ಲಿ33,999 ರೂಪಾಯಿ ಬೆಲೆಯಲ್ಲಿ ಲಭ್ಯವಿದೆ.

ಸ್ಮಾರ್ಟ್‌ಫೋನ್‌ ಕ್ಷೇತ್ರದ ಮಾರುಕಟ್ಟೆಯಲ್ಲಿ ಯಶಸ್ವಿಯಾಗುತ್ತಿರುವ ಲೆನೊವೊ ಕಳೆದ ಜನವರಿಯಲ್ಲಿ ಗೂಗಲ್‌ ತೆಕ್ಕೆಯಲ್ಲಿದ್ದ ಮೋಟರೋಲಾ ಕಂಪೆನಿಯನ್ನು ಖರೀದಿಸಿದೆ. ದುಬಾರಿ ಬೆಲೆಯ ಜೊತೆಗೆ ಕಡಿಮೆ ಬೆಲೆಯಲ್ಲೇ ಸ್ಮಾರ್ಟ್‌‌ಫೋನ್‌ ಬಿಡುಗಡೆ ಮಾಡುತ್ತಿರುವ ಲೆನೊವೊ ಗೂಗಲ್‌ನ ನೆಕ್ಸಸ್‌6 ಸ್ಮಾರ್ಟ್‌ಫೋನ್‌‌ ತಯಾರಿಸಲಿದೆ ಎಂದು ಹೇಳಲಾಗುತ್ತಿದೆ. ವಿಶ್ವದ ಪರ್ಸ‌ನಲ್‌ ಕಂಪ್ಯೂಟರ್‌ ತಯಾರಕ ಕಂಪೆನಿಗಳ ಪಟ್ಟಿಯಲ್ಲಿ ಕಳೆದ ವರ್ಷ‌ ಎಚ್‌ಪಿ ಕಂಪೆನಿಯನ್ನು ಹಿಂದಿಕ್ಕಿ ನಂಬರ್‌ ಒನ್‌ ಸ್ಥಾನ ಪಡೆದಿರುವ ಲೆನೊವೊ ದುಬಾರಿ ಬೆಲೆಯ ಫ್ಯಾಬ್ಲೆಟ್‌ ಬಿಡುಗಡೆ ಮಾಡಿರುವ ಹಿನ್ನೆಲೆಯಲ್ಲಿ ಈ ಫ್ಯಾಬ್ಲೆಟ್‌ನ ವಿಶೇಷತೆಯನ್ನು ಮುಂದಿನ ಪುಟದಲ್ಲಿ ನೀಡಲಾಗಿದೆ.

ಕಡಿಮೆ ಬೆಲೆಯ ಬೆಸ್ಟ್‌ ಫ್ಯಾಬ್ಲೆಟ್‌‌

ಕಡಿಮೆ ಬೆಲೆಯ ಬೆಸ್ಟ್‌ ಫ್ಯಾಬ್ಲೆಟ್‌‌


ವಾಲ್ಯೂಮ್‌ ಬಟನ್‌ ಒತ್ತುವ ಮೂಲಕ ಅನ್‌ಲಾಕ್‌ ಮಾಡುವ ವಿಶೇಷತೆಯನ್ನು ಲೆನೊವೊ ಈ ಫ್ಯಾಬ್ಲೆಟ್‌ಗೆ ನೀಡಿದೆ. ಜೊತೆಗೆ ಈ ಪ್ಯಾಬ್ಲೆಟ್‌ನಲ್ಲಿ ಒಂದು ಫೋಲ್ಡರ್‌ ಒಳಗಡೆ ಒಂಭತ್ತು ಆಪ್‌ಗಳನ್ನು ಸೇರಿಸಬಹುದಾಗಿದೆ .

ಕಡಿಮೆ ಬೆಲೆಯ ಬೆಸ್ಟ್‌ ಫ್ಯಾಬ್ಲೆಟ್‌‌

ಕಡಿಮೆ ಬೆಲೆಯ ಬೆಸ್ಟ್‌ ಫ್ಯಾಬ್ಲೆಟ್‌‌


ವೈಬ್‌ ಝಿಗೆ ಲೆನೊವೊ ಹಿಂದುಗಡೆ ಆಟೋ ಫೋಕಸ್‌ ಹೊಂದಿರುವ 13 ಎಂಪಿ ಕ್ಯಾಮೆರಾವನ್ನು ನೀಡಿದೆ. f1.8 ಅಪರ್ಚರ್‌ ಲೆನ್ಸ್‌,ಎಲ್‌‌ಇಡಿ ಫ್ಲ್ಯಾಶ್‌ ಹೊಂದಿದೆ. 4128 x 3096 ಪಿಕ್ಸೆಲ್‌ ರೆಸೂಲೂಶನ್‌‌ವರೆಗಿನ ಚಿತ್ರಗಳನ್ನು ಈ ಕ್ಯಾಮೆರಾದ ಮೂಲಕ ಕ್ಲಿಕ್‌ ಮಾಡಬಹುದಾಗಿದೆ.ಮುಂದುಗಡೆ ವಿಡಿಯೋ ಕರೆಗಾಗಿ 5 ಎಂಪಿ ಕ್ಯಾಮೆರಾವನ್ನು ಹೊಂದಿದೆ.

ಫ್ಯಾಬ್ಲೆಟ್‌‌ನಲ್ಲಿ ಫೋಟೋ ಫಿಲ್ಟರ್‌ಗಳಿದ್ದು, ಫೋಟೋ ತೆಗೆದ ಬಳಿಕ ಬೇಕಾದ ಎಫೆಕ್ಟ್‌‌ನ್ನು ಚಿತ್ರಗಳಿಗೆ ನೀಡಬಹುದು. ಜೊತೆಗೆ ವಿವಿಧ ಸೀನ್‌ ಮೋಡ್‌‌ಗಳಿವೆ. ಒಟ್ಟಿನಲ್ಲಿ ಫೋಟೋ ತೆಗೆಯುವ ಮೊದಲು. ತೆಗೆದ ಬಳಿಕ ಬೇಕಾದ ರೀತಿಯಾಗಿ ಬದಲಾಯಿಸಿ ನಿಮ್ಮಿಷ್ಟದಂತೆ ಫೋಟೋವನ್ನು ರೂಪಿಸಬಹುದು.

ಕಡಿಮೆ ಬೆಲೆಯ ಬೆಸ್ಟ್‌ ಫ್ಯಾಬ್ಲೆಟ್‌‌

ಕಡಿಮೆ ಬೆಲೆಯ ಬೆಸ್ಟ್‌ ಫ್ಯಾಬ್ಲೆಟ್‌‌


ಈ ಫ್ಯಾಬ್ಲೆಟ್‌ ಆಂಡ್ರಾಯ್ಡ್‌ 4.3 ಜೆಲ್ಲಿ ಬೀನ್‌ ಓಎಸ್‌ ಹೊಂದಿದ್ದು, ಸದ್ಯದಲ್ಲೇ ಕಿಟ್‌ಕ್ಯಾಟ್‌ ಓಎಸ್‌ಗೆ ಅಪ್‌ಗ್ರೇಡ್‌ ಅವಕಾಶವನ್ನು ನೀಡಲಿದ್ದೇವೆ ಎಂದು ಲೆನೊವೊ ಹೇಳಿದೆ. ಜೊತೆಗೆ ಬ್ಲೂಟೂತ್‌ ಮೂಲಕ ಕಾರ್ಯ‌ನಿರ್ವ‌ಹಿಸುವ ಫಿಟ್‌‌ನೆಸ್‌ ಸೆನ್ಸರ್‌ ಆಪ್‌‌ಗಳಿಗೂ ಈ ಫ್ಯಾಬ್ಲೆಟ್‌ ಬೆಂಬಲ ನೀಡುತ್ತದೆ.

ಕಡಿಮೆ ಬೆಲೆಯ ಬೆಸ್ಟ್‌ ಫ್ಯಾಬ್ಲೆಟ್‌‌

ಕಡಿಮೆ ಬೆಲೆಯ ಬೆಸ್ಟ್‌ ಫ್ಯಾಬ್ಲೆಟ್‌‌


5.5 ಇಂಚಿನ ಐಪಿಎಸ್‌ ಎಲ್‌ಸಿಡಿ ಸ್ಕ್ರೀನ್‌(1080x1920 ಪಿಕ್ಸೆಲ್‌,401 ಪಿಪಿಐ) ಹೊಂದಿದೆ. ಜೊತೆಗೆ ಸ್ಮಾರ್ಟ್‌ಫೋನ್‌ ಸ್ಕ್ರೀನ್‌ಗೆ ಗೀರು ಆಗದಂತೆ ತಡೆಯಲು ಕಾರ್ನಿಂಗ್‌ ಕಂಪೆನಿ ಅಭಿವೃದ್ಧಿ ಪಡಿಸಿರುವ ಗೊರಿಲ್ಲ ಗ್ಲಾಸ್‌3ಯನ್ನು ಹೊಂದಿದೆ.
ಫುಲ್‌ ಎಚ್‌ಡಿ ಡಿಸ್ಪ್ಲೇಯನ್ನು ಹೊಂದಿರುವುದರಿಂದ ಇದರಲ್ಲಿ ಗುಣಮಟ್ಟದ ಫೋಟೋ,ವಿಡಿಯೋವನ್ನು ವೀಕ್ಷಿಸಬಹುದು. 401 ಪಿಪಿಐ(ಪಿಕ್ಸೆಲ್‌ ಪರ್‌ ಇಂಚ್‌) ಇರುವುದರಿಂದ ಬಳಕೆದಾರರು ವೆಬ್‌ಸೈಟ್‌‌ಟ್‌‌ಗಳನ್ನು ಚೆನ್ನಾಗಿ ಬ್ರೌಸ್‌ ಮಾಡಬಹುದು.

ಕಡಿಮೆ ಬೆಲೆಯ ಬೆಸ್ಟ್‌ ಫ್ಯಾಬ್ಲೆಟ್‌‌

ಕಡಿಮೆ ಬೆಲೆಯ ಬೆಸ್ಟ್‌ ಫ್ಯಾಬ್ಲೆಟ್‌‌


ಈ ಫ್ಯಾಬ್ಲೆಟ್‌ನ್ನು ಬಳೆಕೆದಾರರು ಚೆನ್ನಾಗಿ ಗೇಮ್ಸ್‌,4ಕೆ ರೆಸೂಲೂಶನ್‌‌ನಲ್ಲಿ ಚಿತ್ರಗಳನ್ನು ವೀಕ್ಷಿಸಬಹುದು.ಯಾಕೆಂದರೆ ವಿಶ್ವದ ಬ್ರ್ಯಾಂಡ್‌ ಸ್ಮಾರ್ಟ್‌‌ಫೋನ್‌ ಕಂಪೆನಿಗಳು ತಮ್ಮ ಸ್ಮಾರ್ಟ್‌‌ಫೋನ್‌‌ಗಳಿಗೆ ನೀಡುವ ಕ್ವಾಲಕಂ ಕಂಪೆನಿಯ ಅಭಿವೃದ್ಧಿ ಪಡಿಸುತ್ತಿರುವ ಪ್ರೊಸೆಸರ್‌‌ನ್ನು ಲೆನೊವೊ ಈ ಫ್ಯಾಬ್ಲೆಟ್‌ಗೆ ನೀಡಿದೆ.2.2 GHz ಕ್ವಾಲಕಂ ಸ್ನಾಪ್‌ಡ್ರಾಗನ್‌ ಕ್ವಾಡ್‌ ಕೋರ್‍ ಕ್ರೈಟ್‌‌400 ಪ್ರೊಸೆಸರ್‌,Adreno 330 ಗ್ರಾಫಿಕ್‌ ಪ್ರೊಸೆಸರ್‌ನ್ನು ಫ್ಯಾಬ್ಲೆಟ್‌ ಒಳಗೊಂಡಿದೆ.

ಕಡಿಮೆ ಬೆಲೆಯ ಬೆಸ್ಟ್‌ ಫ್ಯಾಬ್ಲೆಟ್‌‌

ಕಡಿಮೆ ಬೆಲೆಯ ಬೆಸ್ಟ್‌ ಫ್ಯಾಬ್ಲೆಟ್‌‌


ಲೆನೊವೊ ವೈಬ್‌ ಝಿಗಾಗಿ ಹೊಸ DOit ಆಪ್‌ನ್ನು ತಯಾರಿಸಿದೆ.
ಮಾಲ್‌‌ವೇರ್‌‌‌‌,ವೈರಸ್‌ ಸುರಕ್ಷತೆಗಾಗಿ SECUREit ಆಪ್‌‌, ಸಿಂಕ್‌ ಮಾಡಲು SYNCit ಆಪ್‌,ವಿವಿಧ ಕ್ಯಾಮೆರಾ ಶೂಟಿಂಗ್‌ ಮೂಡ್‌ಗಾಗಿ SNAPit ಆಪ್‌‌,ತೆಗೆದ ಫೋಟೋವನ್ನು ಎಡಿಟ್‌ ಮಾಡಲು SEEit Galleryಆಪ್‌ನ್ನು ಲೆನೊವೊ ವೈಬ್‌ ಝಿಗೆ ನೀಡಿದೆ.

ಕಡಿಮೆ ಬೆಲೆಯ ಬೆಸ್ಟ್‌ ಫ್ಯಾಬ್ಲೆಟ್‌‌

ಕಡಿಮೆ ಬೆಲೆಯ ಬೆಸ್ಟ್‌ ಫ್ಯಾಬ್ಲೆಟ್‌‌


ಸಾಧಾರಣವಾಗಿ ದೊಡ್ಡ ಸ್ಕ್ರೀನ್‌ ಫ್ಯಾಬ್ಲೆಟ್‌ಗಳು ಹೆಚ್ಚು ತೂಕವನ್ನು ಹೊಂದಿರುತ್ತದೆ. ಆದರೆ ಈ ಫ್ಯಾಬ್ಲೆಟ್‌ 5.5ಇಂಚಿನ ಸ್ಕ್ರೀನ್‌ ಹೊಂದಿದ್ದರೂ147 ಗ್ರಾಂ ತೂಕವನ್ನು ಹೊಂದಿದೆ.ಜೊತೆಗೆ ಫ್ಯಾಬ್ಲೆಟ್‌ 7.9 ಮಿ.ಮೀ ತೆಳ್ಳಗಿದೆ.

ಕಡಿಮೆ ಬೆಲೆಯ ಬೆಸ್ಟ್‌ ಫ್ಯಾಬ್ಲೆಟ್‌‌

ಕಡಿಮೆ ಬೆಲೆಯ ಬೆಸ್ಟ್‌ ಫ್ಯಾಬ್ಲೆಟ್‌‌


ದೊಡ್ಡ ಗಾತ್ರದ,ಜೊತೆಗೆ ಫುಲ್‌ ಎಚ್‌ಡಿ ಸ್ಕ್ರೀನ್‌ನ್ನು ಹೊಂದಿರುವುದರಿಂದ ಫ್ಯಾಬ್ಲೆಟ್‌‌‌ಗೆ ಲೆನೊವೊ ಶಕ್ತಿಶಾಲಿಯಾದ ಬ್ಯಾಟರಿಯನ್ನು ನೀಡಿದೆ. 3000 mAh ತೆಗೆಯಲು ಅಸಾಧ್ಯವಾದ ಬ್ಯಾಟರಿಯನ್ನು ಫ್ಯಾಬ್ಲೆಟ್‌ ಹೊಂದಿದ್ದು, 648 ಗಂಟೆ ಸ್ಟ್ಯಾಂಡ್‌ ಬೈ ಟೈಂ, 33 ಗಂಟೆ ಟಾಕ್‌ ಟೈಂ ಹೊಂದಿದೆ.

ಕಡಿಮೆ ಬೆಲೆಯ ಬೆಸ್ಟ್‌ ಫ್ಯಾಬ್ಲೆಟ್‌‌

ಕಡಿಮೆ ಬೆಲೆಯ ಬೆಸ್ಟ್‌ ಫ್ಯಾಬ್ಲೆಟ್‌‌

ಲೆನೊವೊ ವೈಬ್‌ ಝಿ 2.2 GHz ಕ್ವಾಲಕಂ ಸ್ನಾಪ್‌ಡ್ರಾಗನ್‌ ಕ್ವಾಡ್‌ ಕೋರ್‍ ಪ್ರೊಸೆಸರ್‌,Adreno 330 ಗ್ರಾಫಿಕ್‌ ಪ್ರೊಸೆಸರ್‌, 2ಜಿಬಿ ರ್‍ಯಾಮ್‌‌ ಒಳಗೊಂಡಿರುವುದರಿಂದ ಮಲ್ಟಿ ಟಾಸ್ಕಿಂಗ್‌ ಕೆಲಸಗಳನ್ನು ಸಮಸ್ಯೆ ಇಲ್ಲದೇ ಮಾಡಬಹುದು ಜೊತೆಗೆ ವಿಡಿಯೋ ಗೇಮ್ಸ್‌ ಚೆನ್ನಾಗಿ ಆಡಬಹುದು.

ಕಡಿಮೆ ಬೆಲೆಯ ಬೆಸ್ಟ್‌ ಫ್ಯಾಬ್ಲೆಟ್‌‌

ಕಡಿಮೆ ಬೆಲೆಯ ಬೆಸ್ಟ್‌ ಫ್ಯಾಬ್ಲೆಟ್‌‌


ಲೆನೊವೊ ಇಲ್ಲಿಯವರೆಗೆ 3ಜಿ ನೆಟ್‌‌ವರ್ಕ್‌‌ಗೆ ಬೆಂಬಲ ನೀಡುವ ಫ್ಯಾಬ್ಲೆಟ್‌ನ್ನು ಬಿಡುಗಡೆ ಮಾಡಿಕೊಂಡು ಬಂದಿದೆ.ಈಗ ಪ್ರಥಮ ಬಾರಿಗೆ 4ಜಿ ನೆಟ್‌‌ವರ್ಕ್‌‌ಗೆ ಬೆಂಬಲ ನೀಡುವ ಈ ಫ್ಯಾಬ್ಲೆಟ್‌ ಬಿಡುಗಡೆ ಮಾಡಿದ್ದು,ಕಡಿಮೆ ಬೆಲೆಯಲ್ಲಿ 4ಜಿ ನೆಟ್‌‌ವರ್ಕ್‌ಗೆ ಬೆಂಬಲ ನೀಡುವ ಸ್ಮಾರ್ಟ್‌‌ಫೋನ್‌‌ ಖರೀದಿಸಬೇಕು ಗ್ರಾಹಕರು ಈ ಫ್ಯಾಬ್ಲೆಟ್‌ನ್ನು ಖರೀದಿಸಬಹುದು.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X