IFA 2014 ಎಲ್‌ಜಿ ಸ್ಮಾರ್ಟ್‌ಫೋನ್ ಕಮಾಲ್ ಹೇಗಿದೆ

By Shwetha
|

ದಕ್ಷಿಣ ಕೊರಿಯಾವು ಎರಡು ಅತಿ ಪ್ರಬಲ ಫೋನ್ ಕಂಪೆನಿಗಳಾದ ಎಲ್‌ಜಿ ಮತ್ತು ಸ್ಯಾಮ್‌ಸಂಗ್ ಅನ್ನು ಭಾರತೀಯ ಮಾರುಕಟ್ಟೆಗೆ ನೀಡಿದ್ದು ಇದರಲ್ಲಿ ಸ್ಯಾಮ್‌ಸಂಗ್ ತನ್ನ ಅದ್ಭುತ ಕಮಾಲನ್ನು ಮಾರುಕಟ್ಟೆಯಲ್ಲಿ ಪ್ರದರ್ಶಿಸಿ ಮುನ್ನಡೆಯುತ್ತಿದ್ದರೆ ಎಲ್‌ಜಿ ಇನ್ನು ತನ್ನ ಛಾಪನ್ನು ಮೂಡಿಸುವ ಪ್ರಯತ್ನದಲ್ಲಿ ಅವಿರತ ಶ್ರಮವನ್ನು ಪಡುತ್ತಿದೆ.

ಕೊನೆಗೂ ಎಲ್‌ಜಿ ಮಾರುಕಟ್ಟೆಯಲ್ಲಿ ಅತ್ಯುತ್ತಮ ಫೋನ್‌ಗಳ ಲಾಂಚ್ ಮೂಲಕ ತನ್ನ ಹೆಸರನ್ನು ಅಜರಮಾರಗೊಳಿಸುತ್ತಿದೆ. ಎಲ್‌ಜಿ ಜಿ3 ಮತ್ತು ಜಿ ಪ್ರೊ 2 ಹ್ಯಾಂಡ್‌ಸೆಟ್‌ಗಳು ಇದೀಗ ಹೆಚ್ಚಿನ ಆಕರ್ಷಣೆಯನ್ನು ಉಂಟುಮಾಡುತ್ತಿರುವ ಡಿವೈಸ್‌ಗಳಾಗಿವೆ.

ಇನ್ನು IFA ದಲ್ಲಿ ಈ ಹ್ಯಾಂಡ್‌ಸಟೆಟ್‌ಗಳು ತಮ್ಮ ಅದ್ಭುತ ಚಮತ್ಕಾರಗಳನ್ನು ಪ್ರದರ್ಶಿಸಲಿದ್ದು ಮೊಬೈಲ್ ಭವಿಷ್ಯಗಳಿಗೆ ಈ ಕಾರ್ಯಕ್ರಮ ಉತ್ತಮ ಬುನಾದಿಯನ್ನು ನೀಡಲಿದೆ. ಇನ್ನು IFA 2013 ರಲ್ಲಿ ನೂರಾರು ಕಂಪೆನಿಗಳು ಹೆಚ್ಚಿನ ಡಿವೈಸ್‌ಗಳನ್ನು ಪ್ರದರ್ಶಿಸಿದ್ದು ನಿಮಗೆಲ್ಲಾ ತಿಳಿದೇ ಇದೆ ಇದೇ ರೀತಿ ಈ ಬಾರಿಯ IFA 2014 ರಲ್ಲೂ ಹೆಚ್ಚಿನ ಮೊಬೈಲ್ ಕಂಪೆನಿಗಳು ತಮ್ಮ ಉತ್ತಮ ಭವಿಷ್ಯವನ್ನು ತರೆದುಕೊಳ್ಳಲಿದೆ.

ಈ ಬಾರಿಯ IFA ದಲ್ಲಿ ಎಲ್‌ಜಿ ಕೂಡ ಭಾಗವಹಿಸಲಿದ್ದು ತನ್ನ ಛಾಪನ್ನು ಉತ್ತಮವಾಗಿ ಪ್ರದರ್ಶಿಸುವ ನಿಟ್ಟಿನಲ್ಲಿ ಇದು ಮುಂದುವರಿಯುತ್ತಿದೆ. ಹಾಗಿದ್ದರೆ ಈ IFA ದಲ್ಲಿ ಎಲ್‌ಜಿ ಯ ಯೋಜನೆಗಳ ಸುತ್ತ ಒಂದು ನೋಟ ಹರಿಸೋಣ.

#1

#1

ಜಿ 3 Stylus ಅನ್ನು ಕಂಪೆನಿ ಈವೆಂಟ್‌ಗಾಗಿ ಪ್ರಾಯೋಜಿಸಲಿದ್ದು ಇದೊಂದು ಅತ್ಯುತ್ತಮ ಫ್ಯಾಬ್ಲೆಟ್ ಆಗಿ ಗಮನ ಸೆಳೆಯದಲಿದೆ. G3 ಹ್ಯಾಂಡ್‌ಸೆಟ್‌ನ ಕಡಿಮೆ ದರದ ಮತ್ತು ದೊಡ್ಡದಾದ ಆವೃತ್ತಿಯಾಗಿರುವ ಎಲ್‌ಜಿ ಜಿ 3 Stylus 5.5 ಇಂಚಿನ IPS ಡಿಸ್‌ಪ್ಲೇ ಯೊಂದಿಗೆ ಬರಲಿದೆ. 1.3GHz ಕ್ವಾಡ್ ಕೋರ್ ಪ್ರೊಸೆಸರ್, 1GB RAM, 8GB ಸಂಗ್ರಹಣೆಯನ್ನು ಈ ಡಿವೈಸ್ ನೀಡುತ್ತಿದ್ದು 13 ಹಾಗೂ 1.3MP ಕ್ಯಾಮೆರಾಗಳು ಇದರಲ್ಲಿವೆ. ಮತ್ತು ಫೋನ್ ಬ್ಯಾಟರಿ 3000mAh ಆಗಿದೆ.

#2

#2

IFA ದಲ್ಲಿ ಎಲ್‌ಜಿ ಜಿ 3 ಪ್ರೈಮ್ ಅನ್ನು ಪ್ರಸ್ತುತಪಡಿಸಲಿದೆಯೇ ಎಂಬುದು ಇನ್ನೂ ಖಾತ್ರಿಯಾಗಿಲ್ಲ ಆದರೂ ಈ ಹ್ಯಾಂಡ್‌ಸೆಟ್ G3 ನಂತೆಯೇ ಅದೇ ಪರದೆ ಮತ್ತು ಕ್ಯಾಮೆರಾದೊಂದಿಗೆ ಬಿಡುಗಡೆಗೊಳ್ಳಲಿದೆ ಎಂಬುದು ವದಂತಿಗಳಿಂದ ತಿಳಿದು ಬಂದಿರುವ ಮಾಹಿತಿಯಾಗಿದೆ.

#3

#3

ಈ ಎರಡೂ ಹ್ಯಾಂಡ್‌ಸೆಟ್‌ಗಳನ್ನು ಕಂಪೆನಿ IFA ದಲ್ಲಿ ಪ್ರಸ್ತುತಪಡಿಸಲಿದೆ. ಎಲ್‌ Fino 4.5 ಇಂಚಿನ (800x480) ಡಿಸ್‌ಪ್ಲೇಯೊಂದಿಗೆ ಬಂದಿದ್ದು, 1.2GHz ಕ್ವಾಡ್ ಕೋರ್ ಚಿಪ್, 1GB RAM, 4GB ಸಂಗ್ರಹಣೆ ಮತ್ತು 8MP ರಿಯರ್ ಕ್ಯಾಮೆರಾದೊಂದಿಗೆ ಬಂದಿದೆ. ಎಲ್ Bello 5 ಇಂಚಿನ (854x480) ಪರದೆಯನ್ನು ಹೊಂದಿದ್ದು, 1.3GHz ಕ್ವಾಡ್ ಕೋರ್ ಪ್ರೊಸೆಸರ್ 1 ಜಿಬಿ RAM, 8 ಜಿಬಿ ಸಂಗ್ರಹಣೆ ಮತ್ತು 8MP ಕ್ಯಾಮೆರಾವನ್ನು ಹೊಂದಿದೆ.

#4

#4

ಯಶಸ್ವಿ ಜಿ ಫ್ಲೆಕ್ಸ್‌ನ ನಂತರದ ಉತ್ತರಾಧಿಕಾರಿಯಾಗಿರುವ ಎಲ್‌ಜಿ ಜಿ ಫ್ಲೆಕ್ಸ್ 2 ಈ ವರ್ಷದ IFA ದಲ್ಲಿ ತನ್ನ ತಾರಾ ಮೆರುಗನ್ನು ಪ್ರದರ್ಶಿಸಲಿದೆ. ಇದೊಂದು ಪ್ರಥಮ ಆಂಡ್ರಾಯ್ಡ್ ಸಿಲ್ವರ್ ಡಿವೈಸ್ ಆಗಿದೆ ಎಂಬುದು ವದಂತಿಗಳಿಂದ ತಿಳಿದು ಬಂದಿರುವ ಮಾಹಿತಿಯಾಗಿದೆ.

#5

#5

ಸ್ಮಾರ್ಟ್‌ಫೋನ್ ಮೇಳವನ್ನು ನಾವು ಇದುವರೆಗೂ ಕಂಡಿದ್ದು, ಈ ಬಾರಿಯ IFA ದಲ್ಲಿ ವಾಚ್‌ಗಳ ಮೇಳವೂ ನಮ್ಮ ಕಣ್ಣಿಗೆ ಹಬ್ಬವನ್ನು ಉಣಬಡಿಸಲಿದೆ. ಎಲ್‌ಜಿ ಜಿ ವಾಚ್ ಆರ್ ಸ್ಮಾರ್ಟ್‌ವಾಚ್ ಅನ್ನು ಎಲ್‌ಜಿ ಪ್ರಾಯೋಜಿಸುವ ಅಂದಾಜು ಕಂಡುಬರುತ್ತಿದೆ. ಇದು ಪ್ಲಾಸ್ಟಿಕ್ OLED ಡಿಸ್‌ಪ್ಲೇಯನ್ನು ಹೊಂದಿರುವ ಪ್ರಥಮ ವಾಚ್ ಎಲ್‌ಜಿ ಜಿ ವಾಚ್ ಆರ್ ಆಗಿದೆ.

#6

#6

ಸ್ಮಾರ್ಟ್‌ಫೋನ್ ಮತ್ತು ಸ್ಮಾರ್ಟ್‌ವಾಚ್ ಅಲ್ಲದೆಯೇ, ಎಲ್‌ಜಿ ತನ್ನ ಹೊಸದಾದ ಬ್ರ್ಯಾಂಡ್ ಉಳ್ಳ 34UC97 ಕರ್ವ್ IPS ಮಾನಿಟರ್ ಅನ್ನು IFA ದಲ್ಲಿ ಪ್ರದರ್ಶಿಸಲಿದೆ. ಈ 34 ಇಂಚಿನ ಮಾನಿಟರ್ ಇದು ಹೆಚ್ಚುವರಿ ಅಗಲದೊಂದಿಗೆ ಬಂದಿದ್ದು 3440x1440 ರೆಸಲ್ಯೂಶನ್ ಅನ್ನು ಒಳಗೊಂಡಿದೆ. ಪಿಸಿ ಮತ್ತು ಮ್ಯಾಕ್‌ಗಳನ್ನು ಬೆಂಬಲಿಸಲು ಇದು ಥಂಡರ್‌ಬೋಲ್ಟ್ ಅನ್ನು ಕೂಡ ಹೊಂದಿದೆ.

Best Mobiles in India

Read more about:
English summary
This article tells about LG At IFA 2014 Berlin: Here's What To Expect from the South Korean Kingpin.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X