ಎಲ್‌ಜಿ ಜಿ ವಕ್ರ ಸ್ಕ್ರೀನ್‌ ಸ್ಮಾರ್ಟ್‌‌ಫೋನ್‌ ದೇಶೀಯ ಮಾರುಕಟ್ಟೆಯಲ್ಲಿ ಲಭ್ಯ

By Ashwath
|

ಎಲ್‌ಜಿ ಕಂಪೆನಿ ವಕ್ರಸ್ಕ್ರೀನ್‌ ಫ್ಯಾಬ್ಲೆಟ್‌ ಜಿ ಫ್ಲೆಕ್ಸ್‌ಭಾರತದ ಆನ್‌ಲೈನ್‌ ಶಾಪಿಂಗ್‌ ಮತ್ತು ರಿಟೇಲ್‌ ಅಂಗಡಿಯಲ್ಲಿ ಇಂದಿನಿಂದ ಲಭ್ಯವಿದೆ. ಎಲ್‌ಜಿ ಕಳೆದ ಡಿಸೆಂಬರ್‌ನಲ್ಲಿ ಈ ಫ್ಯಾಬ್ಲೆಟ್‌‌ನ್ನು ಬೆಲೆಯನ್ನು ಪ್ರಕಟಿಸದೆ ಬಿಡುಗಡೆ ಮಾಡಿದ್ದು,ಈಗ ಈ ಸ್ಮಾರ್ಟ್‌‌ಫೋನಿಗೆ ಎಲ್‌ಜಿ 69,999 ರೂಪಾಯಿ ಬೆಲೆಯನ್ನು ಪ್ರಕಟಿಸಿದೆ.

ದೇಶಿಯ ಮಾರುಕಟ್ಟೆಯಲ್ಲಿ 32 ಜಿಬಿ ಆಂತರಿಕ ಮೆಮೊರಿ ಸ್ಮಾರ್ಟ್‌‌ಫೋನ್‌ಲ್ಲಿ ಅತಿ ದುಬಾರಿ ಬೆಲೆಯ ಸ್ಮಾರ್ಟ್‌‌ಫೋನ್‌ ಇದಾಗಿದೆ. ಇಲ್ಲಿಯವರಗೆ 32 ಜಿಬಿ ಆಂತರಿಕ ಮೆಮೊರಿಯ ಸ್ಮಾರ್ಟ್‌‌ಫೋನ್‌ಲ್ಲಿ ಐಫೋನ್‌ 5 ಎಸ್‌ ದುಬಾರಿ ಬೆಲೆಯಲ್ಲಿ ಮಾರಾಟವಾಗುತ್ತಿದ್ದು, ಆಪಲ್‌ ಈ ಫೋನನ್ನು 62,500 ರೂಪಾಯಿ ಬೆಲೆಯಲ್ಲಿ ಬಿಡುಗಡೆ ಮಾಡಿತ್ತು.

ಸ್ಮಾರ್ಟ್‌ಫೋನ್‌ ಇತಿಹಾಸದಲ್ಲಿ ಎರಡನೇ ವಕ್ರ ಸ್ಕ್ರೀನ್ ಸ್ಮಾರ್ಟ್‌ಫೋನ್‌ ಇದಾಗಿದ್ದು ಈ ಹಿಂದೆ ಸ್ಯಾಮ್‌ಸಂಗ್‌ ವಿಶ್ವದ ಪ್ರಥಮ ವಕ್ರ ಸ್ಕ್ರೀನ್‌ ಸ್ಮಾರ್ಟ್‌ಫೋನ್‌ ಬಿಡುಗಡೆಮಾಡಿತ್ತು.ಸ್ಯಾಮ್‌ಸಂಗ್‌ ಸ್ಮಾರ್ಟ್‌ಫೋನ್‌ ಇನ್ನು ದೇಶೀಯ ಮಾರುಕಟ್ಟೆಗೆ ಬಿಡುಗಡೆಯಾಗಿಲ್ಲ.160.5x81.6x8.7 ಮಿ.ಮೀ ಗಾತ್ರದ ಜಿ ಫ್ಲೆಕ್ಸ್‌ಫ್ಯಾಬ್ಲೆಟ್‌ 177 ಗ್ರಾಂ ತೂಕವನ್ನು ಹೊಂದಿದೆ. ಎಲ್‌ಜಿ ಜಿ 2ನಂತೆ ಈ ಫ್ಯಾಬ್ಲೆಟ್‌ನಲ್ಲಿ ಹಿಂದುಗಡೆ ವಾಲ್ಯೂಬ್‌ ಮತ್ತು ಹೋಮ್‌ ಬಟನ್‌ ನೀಡಲಾಗಿದೆ. ಬಳಕೆದಾರರು ಸ್ಕ್ರೀನ್‌ ಮೇಲೆ ಮೆಲ್ಲನೇ ಎರಡು ಬಾರಿ ಬೆರಳಿನಿಂದ ಹೊಡೆಯುವ ಮೂಲಕ ಸ್ಮಾರ್ಟ್‌ಫೋನ್‌ ಆನ್‌ ಆಫ್‌ ಮಾಡಬಹುದಾಗಿದೆ.

ಎಲ್‌‌ಜಿ ತನ್ನ ಈ ವಕ್ರ ಸ್ಮಾರ್ಟ್‌‌ಫೋನ್‌ ವಿಶೇಷ ತಂತ್ರಜ್ಞಾನವನ್ನು ಬಳಸಿ ಅಭಿವೃದ್ಧಿ ಪಡಿಸಿದೆ. ಬಹುತೇಕ ಸ್ಮಾರ್ಟ್‌ಫೋನ್‌ ಕವರ್‌ ಹಿಂದೆ ಗೀರುಗಳಾಗುತ್ತದೆ. ಈ ಸ್ಮಾರ್ಟ್‌‌ಫೋನಲ್ಲಿ ಹಿಂದೆ ಗೀರುಗಳಾದ್ರೂ ಎರಡೇ ನಿಮಿಷದಲ್ಲಿ ಮರೆಯಾಗುತ್ತದೆ. Self Healing & Durability ತಂತ್ರಜ್ಞಾನದಿಂದ ತಯಾರಾದ ಹೊಸ ದೇಹದ ಕವರ್‌ನ್ನು ಎಲ್‌ಜಿ ಈ ಸ್ಮಾರ್ಟ್‌ಫೋನಿಗಾಗಿ ಅಭಿವೃದ್ಧಿ ಪಡಿಸಿದೆ.

ಸಿಂಗಲ್‌ಸಿಮ್‌(ಮೈಕ್ರೋ ಸಿಮ್‌) ಫ್ಯಾಬ್ಲೆಟ್‌ ಇದಾಗಿದ್ದು, ಎಕ್ಸಲರೋ ಮೀಟರ್‌, ಗೈರೋಸ್ಕೋಪ್‌,ಪ್ರಾಕ್ಸಿಮಿಟಿ,ಕಂಪಾಸ್‌ ಸೆನ್ಸರ್‌‌ಗಳನ್ನು ಹೊಂದಿದೆ. ಎಲ್‌ಜಿ ಜಿ ಫ್ಲೆಕ್ಸ್‌ ಫ್ಯಾಬ್ಲೆಟ್‌ ಕಳೆದ ಅಕ್ಟೋಬರ್‌ನಲ್ಲಿ ಕೋರಿಯಾದಲ್ಲಿ ಬಿಡುಗಡೆಯಾಗಿತ್ತು.ಮುಂದಿನ ಪುಟದಲ್ಲಿ ಫ್ಯಾಬ್ಲೆಟ್‌ ವಿಶೇಷತೆ ಮತ್ತು ಫ್ಯಾಬ್ಲೆಟ್‌ನ ಸ್ಕ್ರೀನ್‌ ಎಷ್ಟು ಶಕ್ತಿಶಾಲಿಯಾಗಿದೆ,ಗೀರು ಹೇಗೆ ಎರಡೇ ನಿಮಿಷದಲ್ಲಿ ಮರೆಯಾಗುತ್ತದೆ ಎಂದು ತೋರಿಸುವ ವಿಡಿಯೋವಿದೆ.ಒಂದೊಂದೆ ಪುಟವನ್ನು ತಿರುಗಿಸಿ ಓದಿಕೊಂಡು ಹೋಗಿ

ಎಲ್‌ಜಿ ಜಿ ಫ್ಲೆಕ್ಸ್‌ ಸ್ಮಾರ್ಟ್‌ಫೋನಿನ ಆಕರ್ಷಕ ಚಿತ್ರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ: ಗ್ಯಾಲರಿ

1

1


6 ಇಂಚಿನ ಪಿ ಒಎಲ್‌ಇಡಿ ಸ್ಕ್ರೀನ್‌(720 x 1280 ಪಿಕ್ಸೆಲ್,245 ಪಿಪಿಐ) ಫ್ಯಾಬ್ಲೆಟ್‌ ಹೊಂದಿದೆ.ಈ ಫ್ಯಾಬ್ಲೆಟ್‌ನ ಮೇಲೆ 32 ಕೆಜಿ ಭಾರವಿರುವ ವಸ್ತುವನ್ನುಇರಿಸಿದರೂ ಫ್ಯಾಬ್ಲೆಟ್‌ ಭಾರವನ್ನು ತಡೆಯುವ ಸಾಮರ್ಥ್ಯವನ್ನು ಹೊಂದಿದೆ.

2

2


32 GB ಆಂತರಿಕ ಮೆಮೊರಿಯನ್ನು ಹೊಂದಿರುವ ಫ್ಯಾಬ್ಲೆಟ್‌ 2 GB RAMನೊಂದಿಗೆ ಬಿಡುಗಡೆಯಾಗಿದೆ.ಮೆಮೊರಿ ವಿಸ್ತರಿಸಲು ಕಾರ್ಡ್ ಸ್ಲಾಟ್‌ ಇಲ್ಲ.

3

3


2.26 GHZ ಕ್ವಾಡ್‌ಕೋರ್‌ ಪ್ರೊಸೆಸರ್‌(QUALCOMM® SNAPDRAGONTM 800) ಮತ್ತುAdreno 330 ಗ್ರಾಫಿಕ್‌ ಪ್ರೊಸೆಸರ್‌ನ್ನು ಸ್ಮಾರ್ಟ್‌ಫೋನ್‌ ಒಳಗೊಂಡಿದೆ.

4

4


ಎಲ್‌ಇಡಿ ಫ್ಲ್ಯಾಶ್‌ ಹೊಂದಿರುವ 13 ಎಂಪಿ ಹಿಂದುಗಡೆ ಕ್ಯಾಮೆರಾ,ಮುಂದುಗಡೆ 2.1 ಎಂಪಿ ಕ್ಯಾಮೆರಾವನ್ನು ಫ್ಯಾಬ್ಲೆಟ್‌ ಹೊಂದಿದೆ.

5

5


ಫ್ಯಾಬ್ಲೆಟ್‌ ಆಂಡ್ರಾಯ್ಡ್‌ 4.2.2 ಜೆಲ್ಲಿ ಬೀನ್‌ ಓಎಸ್‌, 3500 mAh ಬ್ಯಾಟರಿಯನ್ನು ಹೊಂದಿದೆ.

6

ವಿಡಿಯೋ ವೀಕ್ಷಿಸಿ

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X