ಎಲ್‌ಜಿ ಎಲ್90 ಕುರಿತ ಒಂದು ಆಕರ್ಷಣೀಯ ವಿಮರ್ಶೆ

By Shwetha
|

ಕೊರಿಯನ್ ಫರ್ಮ್‌ನ ಮೂರನೇ ತಲೆಮಾರು ಎಲ್ ಸಿರೀಸ್ ಶ್ರೇಣಿಯ ಬಜೆಟ್ ಲಕ್ಷ್ಯ ಡಿವೈಸ್‌ಗಳಾದ ಎಲ್‌ಜಿ ಎಲ್90 ಒಂದು ಫ್ಲ್ಯಾಗ್‌ಶಿಪ್ ಡಿವೈಸ್ ಆಗಿದ್ದು ಆಂಡ್ರಾಯ್ಡ್‌ನ ಇತ್ತೀಚಿನ ಆವೃತ್ತಿಯನ್ನು ಡೀಸೆಂಟ್ ಪರದೆಯಲ್ಲಿ ನಿಮ್ಮ ಮುಂದೆ ಇಡುತ್ತಿದೆ.

ಇದು 4.7 ಇಂಚಿನ ಡಿಸ್‌ಪ್ಲೇಯನ್ನು ಹೊಂದಿದ್ದು ರೆಸಲ್ಯೂಶನ್ 960x540 ಆಗಿದೆ. ಇದು ನಿಮ್ಮ ಕೈಗೆ ಆರಾಮದಾಯಕವಾಗಿದ್ದು ಸರಿಯಾದ ಗ್ರಿಪ್‌ನೊಂದಿಗೆ ನಿಮ್ಮ ಕೈಸೇರಲಿದೆ. ಇದು ದೃಢವಾಗಿದ್ದು ಪ್ಲಾಸ್ಟಿಕ್ ರಚಿತವಾಗಿದೆ. ಆಂಡ್ರಾಯ್ಡ್ ಕಿಟ್‌ಕ್ಯಾಟ್ ಆವೃತ್ತಿ 4.4 ಫೋನ್‌ನಲ್ಲಿದ್ದು ನಿಮ್ಮ ಮನಸೆಳೆಯುವಂತಿದೆ.

ಇಂತಹ ಮನಸೆಳೆಯುವ ಡಿವೈಸ್ ಕುರಿತ ಇನ್ನಷ್ಟು ಮಾಹಿತಿಯನ್ನು ಕೆಳಗಿನ ಸ್ಲೈಡ್‌ಗಳಲ್ಲಿ ನಾವು ಹೊರತಂದಿದ್ದು ನಿಮಗೆ ಪರಿಪೂರ್ಣ ವಿವರವನ್ನು ನೀಡಲಿದೆ.

#1

#1

ಎಲ್‌ಜಿ ಎಲ್90 4.7 ಇಂಚಿನ ಡಿಸ್‌ಪ್ಲೇಯನ್ನು ಹೊಂದಿದ್ದು ರೆಸಲ್ಯೂಶನ್ 960x540 ಆಗಿದೆ. ಆಂಡ್ರಾಯ್ಡ್ ಕಿಟ್‌ಕ್ಯಾಟ್ ಆವೃತ್ತಿ 4.4 ಇದರಲ್ಲಿ ಚಾಲನೆಯಾಗುತ್ತಿದ್ದು ನಿಮ್ಮ ಕೈಗಳಲ್ಲಿಇದು ಫಿಟ್ ಆಗಿರುತ್ತದೆ. ಹೆಚ್ಚಿನ ಭಾಗಗಳು ಪ್ಲಾಸ್ಟಿಕ್‌ನಿಂದ ತಯಾರು ಮಾಡಲ್ಪಟ್ಟಿದೆ. ಫೋನ್ ಬಲಭಾಗದಲ್ಲಿ ಧ್ವನಿ ನಿಯಂತ್ರಕ ಸೆಟ್ಟಿಂಗ್ ಅನ್ನು ನೀವು ಪಡೆದುಕೊಳ್ಳುತ್ತೀರಿ.

#2

#2

ಈ ಡಿವೈಸ್‌ನಲ್ಲಿ IR (infra - red) ಬ್ಲಾಸ್ಟರ್ ಇದ್ದು ನಿಮ್ಮ ಮನರಂಜನೆಯ ಸಾಧನಗಳು ಅಂದರೆ ಟಿವಿ, ಡಿವಿಡಿ ಪ್ಲೇಯರ್ ಮತ್ತು ಸೆಟಪ್ ಬಾಕ್ಸ್ ಅನ್ನು ನೀವು ಎಲ್‌ಜಿ ಎಲ್90ಮೂಲಕ ನಿಯಂತ್ರಿಸಬಹುದಾಗಿದೆ. 1.2GHz ಕ್ವಾಡ್ ಕೋರ್ ಪ್ರೊಸೆಸರ್ ಫೋನ್‌ನಲ್ಲಿದ್ದು 1ಜಿಬಿ RAM ಸಾಮರ್ಥ್ಯ ಇದಕ್ಕಿದೆ.

#3

#3

4.7 ಇಂಚಿನ ಕ್ಯುಎಚ್‌ಡಿ ಡಿಸ್‌ಪ್ಲೇ ನಿಮಗೆ ಉತ್ತಮ ಗುಣಮಟ್ಟದ ಚಿತ್ರಗಳನ್ನು ತೆಗೆಯಲು ಅನುವು ಮಾಡಿಕೊಡುವಂತಿದ್ದು, ಇದರಲ್ಲಿ ನಿಮಗೆ ಎಲ್ಲಾ ರೀತಿಯ ಅಂತರ್ಜಾಲಸಂಬಂಧಿತ ಮನರಂಜನೆಯನ್ನು ಪಡೆಯಬಹುದಾಗಿದೆ. 8 ಎಮ್‌ಪಿ ರಿಯರ್ ಕ್ಯಾಮೆರಾ ಫೋನ್‌ನಲ್ಲಿದ್ದು ಆಕರ್ಷಕವಾಗಿದೆ. ಇದು ಕೀಬೋರ್ಡ್‌ನಲ್ಲಿ ಸಾಕರ್ಷು ಸ್ಥಳಾವಕಾಶವನ್ನೂಕೂಡ ಹೊಂದಿದೆ.

#4

#4

ಹೊಸ ಭದ್ರತಾ ವೈಶಿಷ್ಟ್ಯ ನಾಕ್‌ಕೋಡ್ ಇದರಲ್ಲಿದೆ. ಇದು ನಿಮ್ಮ ಫೋನ್‌ಗೆ ಉತ್ತಮವಾದ ಭದ್ರತೆಯನ್ನು ಒದಗಿಸುತ್ತದೆ.

#5

#5

ಇದು ಸಾಕಷ್ಟು ಪರದೆ ಸ್ಥಳವನ್ನು ಹೊಂದಿದ್ದು ಯಾವುದೇ ದೋಷವಿಲ್ಲದೆ ನಿಮಗೆ ಬೇಕಾದ ಮಾಹಿತಿಯನ್ನು ಪರದೆಯಲ್ಲಿ ಮೂಡಿಸುತ್ತದೆ. ಒಟ್ಟಾರೆ ಇದೊಂದು ಹಗುರ ಮತ್ತು ಕ್ಯಾರಿಮಾಡಲು ಸುಲಭವಾಗಿರುವ ಫೋನ್ ಆಗಿದ್ದು ವಿಶೇಷತೆಯಿಂದ ಕೂಡಿದೆ.

<center><iframe width="100%" height="390" src="//www.youtube.com/embed/dpJtsLTPP-U" frameborder="0" allowfullscreen></iframe></center>

Best Mobiles in India

Read more about:

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X