ಡಬಲ್‌ ಸ್ಕ್ರೀನ್‌ ಹೊಂದಿರುವ ಎಲ್‌ಜಿ 'ಎಕ್ಸ್‌ ಸ್ಕ್ರೀನ್' ಫೋನ್ ಮಾರುಕಟ್ಟೆಗೆ!

By Suneel
|

ಎಲ್‌ಜಿ ಎಲೆಕ್ಟ್ರಾನಿಕ್ಸ್‌ ಅತ್ಯಾಧುನಿಕ ಪರಿಕಲ್ಪನೆಗಳೊಂದಿಗೆ ಸ್ಮಾರ್ಟ್‌ಫೋನ್ ಮಾರುಕಟ್ಟೆಗೆ ಹೊಸ ಹೊಸ ಡಿವೈಸ್‌ಗಳನ್ನು ನೀಡುವ ಪ್ರಧಾನ ಕಂಪನಿ. ಅತ್ಯಾಧುನಿಕ ಸ್ಮಾರ್ಟ್‌ಫೋನ್‌ ಎಂಬ ಹೆಗ್ಗಳಿಕೆಗೆ ಉದಾಹರಣೆ ಎಂದರೆ ಎಲ್‌ಜಿ ಫ್ಲ್ಯಾಗ್‌ಶಿಪ್‌ನ ಬೆಲೆ 52,990 ರ 'ಜಿ5' ಪ್ರಪಂಚದ ಮೊಟ್ಟ ಮೊದಲ ಮಾಡ್ಯುಲರ್ ಸ್ಮಾರ್ಟ್‌ಫೋನ್‌ ಆಗಿದ್ದು, ಇದು 'ಸ್ಲೈಡ್‌ ಔಟ್' ಬ್ಯಾಟರಿ ವಿನ್ಯಾಸ ಮತ್ತು ಡ್ಯುಯಲ್‌ ಹಿಂಭಾಗ ಕ್ಯಾಮೆರಾಗಳನ್ನು ಹೊಂದಿತ್ತು.

ಡಬಲ್‌ ಸ್ಕ್ರೀನ್‌ ಹೊಂದಿರುವ ಎಲ್‌ಜಿ 'ಎಕ್ಸ್‌ ಸ್ಕ್ರೀನ್' ಫೋನ್ ಮಾರುಕಟ್ಟೆಗೆ!

ಪ್ರಸ್ತುತದಲ್ಲಿ ಎಲ್‌ಜಿ ಕಂಪನಿಯು ಫ್ರಂಟ್‌ ಡಿಸ್‌ಪ್ಲೇಯಲ್ಲಿ ಸೆಕೆಂಡರಿ ಸ್ಕ್ರೀನ್‌ ಅನ್ನು ಪರಿಚಯಿಸಿದ್ದು, ಮಧ್ಯಮ ಕ್ರಮಾಂಕದ ಬೆಲೆಯ ಸ್ಮಾರ್ಟ್‌ಫೋನ್‌ ಇದಾಗಿದೆ. ಬಳಕೆದಾರರ ಸಂವಹನಕ್ಕೆ ಸುಲಭವಾಗಲಿ ಎಂಬ ಉದ್ದೇಶದಿಂದ ವಿನ್ಯಾಸಗೊಳಿಸಿರುವ ಸ್ಮಾರ್ಟ್‌ಫೋನ್‌ 'ಎಕ್ಸ್‌ ಸ್ಕ್ರೀನ್' ಬೆಲೆ ರೂ.12,990 ಆಗಿದ್ದು, ಭಾರತ ಸರ್ಕಾರದ ಪ್ಯಾನಿಕ್‌ ಬಟನ್ ಹೊಂದಿದೆ.

ಎಲ್‌ಜಿ ಕಂಪನಿಯ 'ಎಕ್ಸ್‌ ಸ್ಕ್ರೀನ್' ಸ್ಮಾರ್ಟ್‌ಫೋನ್‌ ಮಧ್ಯಮ ಕ್ರಮಾಂಕದ ಸ್ಮಾರ್ಟ್‌ಫೋನ್‌ಗಳಾದ ಮೊಟೊ ಜಿ4 ಮತ್ತು ಲೀಕೊ ಲೀ 2 ಡಿವೈಸ್‌ಗಳಿಗೆ ಪೈಪೋಟಿ ನೀಡಲಿದ್ದು, ಎಕ್ಸ್‌ ಸ್ಕ್ರೀನ್ ಸ್ಫಟಿಕದ ಸ್ಪಷ್ಟ ಗಾಜಿನ ಫೈಬರ್ ವಸ್ತುಗಳಿಂದ ಹಿಂಭಾಗದಲ್ಲಿ ಕವರ್‌ ಆಗಿದೆ. ಸ್ಮಾರ್ಟ್‌ಫೋನ್‌ 4.93 ಇಂಚಿನ ಡಿಸ್‌ಪ್ಲೇ ಮತ್ತು 1.76 ಇಂಚಿನ HD ಸೆಲ್‌ ಟಚ್‌ ಡಿಸ್‌ಪ್ಲೇ ಹೊಂದಿದೆ. ಈ ಡಿಸ್‌ಪ್ಲೇಯನ್ನು 'second screen' ಡಿಸ್‌ಪ್ಲೇ ಎಂದು ಕರೆಯಲಾಗುತ್ತದೆ.

ಡಬಲ್‌ ಸ್ಕ್ರೀನ್‌ ಹೊಂದಿರುವ ಎಲ್‌ಜಿ 'ಎಕ್ಸ್‌ ಸ್ಕ್ರೀನ್' ಫೋನ್ ಮಾರುಕಟ್ಟೆಗೆ!

ಸೆಕೆಂಡ್‌ ಸ್ಕ್ರೀನ್ ಡಿಸ್‌ಪ್ಲೇಯಲ್ಲಿ ಬಳಕೆದಾರರು ಪ್ರಾಥಿಮಿಕ ಮಾಹಿತಿಗಳಾದ ಸಮಯ, ದಿನಾಂಕ, ನೋಟಿಫಿಕೇಶನ್ ಅನ್ನು ಫೋನ್‌ ಎತ್ತಿಕೊಳ್ಳದೇ ನೋಡಬಹುದು. ಆಂತರಿಕ ಮೆಮೊರಿ 16GB ಹೊಂದಿದ್ದು, ಬಳಕೆದಾರರು 10.7GB ಬಳಸಬಹುದು. ಮೆಮೊರಿಯನ್ನು 128GB ವರೆಗೆ ವಿಸ್ತರಿಸಬಹುದು. ಕ್ವಾಲ್ಕಂ ಸ್ನಾಪ್‌ಡ್ರಾಗನ್‌ 410 ಕ್ವಾಡ್‌ ಕೋರ್‌ ಪ್ರೊಸೆಸರ್ 1.2GHz, 2GB RAM, ಆಂಡ್ರಾಯ್ಡ್ 6.0 ಮಾರ್ಷ್‌ಮಲ್ಲೊ ಓಎಸ್‌ ಚಾಲಿತವಾಗಿದೆ. ಎಲ್‌ಜಿ ಸ್ಮಾರ್ಟ್‌ಫೋನ್‌ 'ಎಕ್ಸ್‌ ಸ್ಕ್ರೀನ್‌' ನ ವಿಶೇಷತೆ ಎಂದರೆ ಫ್ರಂಟ್‌ ಡಿಸ್‌ಪ್ಲೇಯಲ್ಲಿ ಎರಡು ಸ್ಕ್ರೀನ್‌ಗಳನ್ನು ಹೊಂದಿರುವುದಾಗಿದೆ.

ರೂ.3,299'ರ ಸೆಲ್ಕಾನ್ 'ಮಿಲೇನಿಯಾ ಯುಫೀಲ್' ಸ್ಮಾರ್ಟ್‌ಫೋನ್‌ ಭಾರತದಲ್ಲಿ ಲಾಂಚ್

Best Mobiles in India

Read more about:
English summary
LG X Screen, More than 'just' two screens. Read more about this in kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X