ಕ್ಯಾನ್‌ವಾಸ್ ಅಂಶಗಳನ್ನೇ ಹೊಂದಿರುವ ಇತರೆ ಫೋನ್ಸ್

By Shwetha
|

ಬಜೆಟ್ ಅಂಶವನ್ನು ಮೂಲವಾಗಿಟ್ಟುಕೊಂಡು ಮಾರುಕಟ್ಟೆಯಲ್ಲಿ ಇಂದು ಹೆಚ್ಚಿನ ಸ್ಮಾರ್ಟ್‌ಫೋನ್‌ಗಳು ಕಾಲಿಟ್ಟಿವೆ. ಹೊಸದಾಗಿ ಮಾರುಕಟ್ಟೆಗೆ ಆಗಮಿಸುತ್ತಿರುವ ಹೊಸ ಹೊಸ ಸ್ಮಾರ್ಟ್‌ಫೋನ್‌ಗಳಿಗೂ ಈ ಅಂಶ ಭರ್ಜರಿ ಪೈಪೋಟಿಯನ್ನು ನೀಡಿದೆ ಎಂದೇ ಹೇಳಬಹುದು.

ನಾವು ಮಾರುಕಟ್ಟೆಯಲ್ಲಿ ಈಗಾಗಲೇ ದೊಡ್ಡ ಕಂಪೆನಿಯ ಫೋನ್‌ಗಳಾದ ಸೋನಿ, ಸ್ಯಾಮ್‌ಸಂಗ್ ಕೂಡ ಭಾರತೀಯ ಮಾರುಕಟ್ಟೆಯನ್ನು ಹಗುರವಾಗಿ ತೆಗೆದುಕೊಂಡಿಲ್ಲ. ಈ ನಿಟ್ಟಿನಲ್ಲಿ ಕಡಿಮೆ ದರದ ಫೋನ್‌ಗಳ ಮೂಲಕ ಕೆಲವೊಂದು ಹೆಸರಾಂತ ಕಂಪೆನಿಗಳೂ ಕೂಡ ತಮ್ಮ ಅದೃಷ್ಟ ಪರೀಕ್ಷೆಯನ್ನು ಮಾಡುವ ನಿಟ್ಟಿನಲ್ಲಿ ಮುಂದೆ ಸಾಗಿವೆ. ಹೌದು ಹೆಸರಾಂತ ಕಂಪೆನಿಗಳು ಒಡ್ಡುತ್ತಿರುವ ಭಾರೀ ಪೈಪೋಟಿಯ ನಡುವೆ ಕೂಡ ಸಣ್ಣ ಸಣ್ಣ ಕಂಪೆನಿಗಳು ಯಶಸ್ಸಿನ ಕುದುರೆಯನ್ನೇರುವ ಅದೃಷ್ಟ ಪರೀಕ್ಷೆಯನ್ನು ಮಾಡಿಕೊಳ್ಳುತ್ತಿವೆ.

ಇದಕ್ಕೆ ಉತ್ತಮ ಉದಾಹರಣೆ ಭಾರತೀಯ ಮೂಲದ ಸ್ಮಾರ್ಟ್‌ಫೋನ್ ಕಂಪೆನಿ ಮೈಕ್ರೋಮ್ಯಾಕ್ಸ್‌ನದ್ದಾಗಿದೆ ತನ್ನ ಅದೃಷ್ಟವನ್ನು ಕಿಟ್‌ಕ್ಯಾಟ್ ಸುಗಂಧಿತ ಫೋನ್‌ಗಳ ಮೂಲಕ ಮಾರುಕಟ್ಟೆಗೆ ಪರೀಕ್ಷಿಸಿಕೊಂಡ ಈ ದಿಗ್ಗಜ ಪ್ರಥಮ ಪ್ರಯತ್ನದಲ್ಲೇ ಹೆಚ್ಚಿನ ಜಯವನ್ನು ಗಳಿಸಿಕೊಂಡಿತು. ಈ ಜಯವನ್ನೇ ತನ್ನ ಕೊರಳ ಹಾರವನ್ನಾಗಿ ಶಾಶ್ವತವನ್ನಾಗಿ ಮಾಡಿಕೊಳ್ಳಬೇಕೆಂಬ ಇರಾದೆಯಿಂದ ಇನ್ನೊಂದು ಸ್ಮಾರ್ಟ್‌ಫೋನ್ ಅನ್ನು ಮಾರುಕಟ್ಟೆಗೆ ಪ್ರಸ್ತುತಪಡಿಸಿದೆ. ಕ್ಯಾನ್‌ವಾಸ್ ಫೈರ್ A093 ಹೆಸರಿನ ಈ ಡಿವೈಸ್ ಕಡಿಮೆ ದರದಲ್ಲಿ ಬೋನಸ್ ವೈಶಿಷ್ಟ್ಯಗಳನ್ನು ಬಳಕೆದಾರರಿಗೆ ನೀಡುತ್ತಿದೆ.

ಇದು ಆಸಕ್ತಿಕರ ವೈಶಿಷ್ಟ್ಯಗಳನ್ನು ಹೊಂದಿದ್ದರೂ ಕೂಡ ಪೈಪೋಟಿ ಎನ್ನುವುದು ಇದ್ದೇ ಇದೆ ಅಲ್ಲವೇ ಹಾಗಿದ್ದರೆ ಇದಕ್ಕೆ ಸಮನಾಗಿ ಪೈಪೋಟಿಯನ್ನು ನೀಡುವ ಐದು ಡಿವೈಸ್‌ಗಳೊಂದಿಗೆ ನಾವು ಬಂದಿದ್ದು ಕ್ಯಾನ್‌ವಾಸ್ ಫೈರ್‌ A093ಗೆ ಇವುಗಳು ಒಂದು ರೀತಿಯ ತೊಡಕಾಗಿವೆ ಎಂದೇ ಹೇಳಬಹುದು.

#1

#1

ಇದು 4.3 ಇಂಚಿನ ಡಿಸ್‌ಪ್ಲೇಯೊಂದಿಗೆ ಬಂದಿದ್ದು ಇದರ ರೆಸಲ್ಯೂಶನ್ 960x540 ಪಿಕ್ಸೆಲ್‌ಗಳಾಗಿದೆ. ಇದರಲ್ಲಿ 1.2GHz ಡ್ಯುಯೆಲ್ ಕೋರ್ ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರಾಗನ್ 200 ಪ್ರೊಸೆಸರ್ ಜೊತೆಗೆ ಅಡ್ರೆನೋ 302 GPU ಇದೆ. 1ಜಿಬಿ RAM ಡಿವೈಸ್‌ನಲ್ಲಿದ್ದು 4ಜಿಬಿ ಆಂತರಿಕ ಸಂಗ್ರಹಣಾ ಸಾಮರ್ಥ್ಯವಿದೆ ಇದನ್ನು ಎಸ್‌ಡಿ ಕಾರ್ಡ್‌ ಮೂಲಕ 32ಜಿಬಿಗೆ ವಿಸ್ತರಿಬಹುದಾಗಿದೆ. ಇದು ಆಂಡ್ರಾಯ್ಡ್ ಕಿಟ್‌ಕ್ಯಾಟ್ ಆವೃತ್ತಿಯೊಂದಿಗೆ ಬಂದಿದೆ ಮತ್ತು ಎಲ್‌ಇಡಿ ಫ್ಲ್ಯಾಶ್ ಹಾಗೂ ಫ್ರಂಟ್ ಫೇಸಿಂಗ್ ಶೂಟರ್‌ನೊಂದಿಗೆ 5 ಮೆಗಾಪಿಕ್ಸೆಲ್ ರಿಯರ್ ಫೇಸಿಂಗ್ ಕ್ಯಾಮೆರಾವನ್ನು ಡಿವೈಸ್ ಹೊಂದಿದೆ.

#2

#2

ಇದು 4.7 ಇಂಚಿನ ಡಿಸ್‌ಪ್ಲೇಯೊಂದಿಗೆ ಬಂದಿದ್ದು ಇದರ ರೆಸಲ್ಯೂಶನ್ 800 x 480 ಪಿಕ್ಸೆಲ್‌ಗಳಾಗಿದೆ. ಇದರಲ್ಲಿ 1.3 GHz ಡ್ಯುಯೆಲ್ ಕ್ವಾಡ್ ಕೋರ್ ಮೀಡಿಯಾ ಟೆಕ್ MT6582 ಪ್ರೊಸೆಸರ್ ಇದೆ. 1ಜಿಬಿ RAM ಡಿವೈಸ್‌ನಲ್ಲಿದ್ದು 4ಜಿಬಿ ಆಂತರಿಕ ಸಂಗ್ರಹಣಾ ಸಾಮರ್ಥ್ಯವಿದೆ ಇದನ್ನು ಎಸ್‌ಡಿ ಕಾರ್ಡ್‌ ಮೂಲಕ 32ಜಿಬಿಗೆ ವಿಸ್ತರಿಬಹುದಾಗಿದೆ. ಇದು ಆಂಡ್ರಾಯ್ಡ್ ಕಿಟ್‌ಕ್ಯಾಟ್ ಆವೃತ್ತಿ 4.4 ನೊಂದಿಗೆ ಬಂದಿದೆ ಮತ್ತು ಇದನ್ನು ಕಿಟ್‌ಕ್ಯಾಟ್‌ನ ನಂತರದ ಆವೃತ್ತಿಗೆ ಅಪ್‌ಗ್ರೇಡ್ ಮಾಡಬಹುದಾಗಿದೆ.

#3

#3

ಇದು 4 ಇಂಚಿನ ಐಪಿಎಸ್ ಡಿಸ್‌ಪ್ಲೇಯೊಂದಿಗೆ ಬಂದಿದ್ದು ಇದರ FWVGA ರೆಸಲ್ಯೂಶನ್ 480x854 ಪಿಕ್ಸೆಲ್‌ಗಳಾಗಿದೆ. ಇದರಲ್ಲಿ 1.3 GHz ಕ್ವಾಡ್ ಕೋರ್ ಪ್ರೊಸೆಸರ್ ಇದರಲ್ಲಿದೆ. 1ಜಿಬಿ RAM ಡಿವೈಸ್‌ನಲ್ಲಿದ್ದು 8 ಮೆಗಾಪಿಕ್ಸೆಲ್ ರಿಯರ್ ಕ್ಯಾಮೆರಾ ಎಲ್‌ಇಡಿ ಫ್ಲ್ಯಾಶ್ ಅನ್ನು ಫೋನ್ ಹೊಂದಿದೆ. ಮುಂಭಾಗ ಕ್ಯಾಮೆರಾ ಸಾಮರ್ಥ್ಯ 2 ಮೆಗಾಪಿಕ್ಸೆಲ್ ಆಗಿದೆ. 4ಜಿಬಿ ಆಂತರಿಕ ಸಂಗ್ರಹಣಾ ಸಾಮರ್ಥ್ಯವಿದೆ ಇದನ್ನು ಎಸ್‌ಡಿ ಕಾರ್ಡ್‌ ಮೂಲಕ 32ಜಿಬಿಗೆ ವಿಸ್ತರಿಬಹುದಾಗಿದೆ. ಇದು ಆಂಡ್ರಾಯ್ಡ್ ಕಿಟ್‌ಕ್ಯಾಟ್ ಆವೃತ್ತಿ 4.4 ನೊಂದಿಗೆ ಬಂದಿದೆ.

#4

#4

ಇದು 4 ಇಂಚಿನ ಐಪಿಎಸ್ ಡಿಸ್‌ಪ್ಲೇಯೊಂದಿಗೆ ಬಂದಿದ್ದು ಇದರಲ್ಲಿ 1.3 GHz ಕ್ವಾಡ್ ಕೋರ್ ಪ್ರೊಸೆಸರ್ ಇದರಲ್ಲಿದೆ. 512ಎಮ್‌ಬಿ RAM ಡಿವೈಸ್‌ನಲ್ಲಿದ್ದು 5 ಮೆಗಾಪಿಕ್ಸೆಲ್ ರಿಯರ್ ಕ್ಯಾಮೆರಾ ಎಲ್‌ಇಡಿ ಫ್ಲ್ಯಾಶ್ ಇದು ವಿಜಿಎ ಗುಣಮಟ್ಟದ ಫ್ರಂಟ್ ಫೇಸಿಂಗ್ ಕ್ಯಾಮೆರಾವನ್ನು ಫೋನ್ ಹೊಂದಿದೆ. 4ಜಿಬಿ ಆಂತರಿಕ ಸಂಗ್ರಹಣಾ ಸಾಮರ್ಥ್ಯವಿದೆ ಇದನ್ನು ಎಸ್‌ಡಿ ಕಾರ್ಡ್‌ ಮೂಲಕ 32ಜಿಬಿಗೆ ವಿಸ್ತರಿಬಹುದಾಗಿದೆ. ಇದು ಆಂಡ್ರಾಯ್ಡ್ ಕಿಟ್‌ಕ್ಯಾಟ್ ಆವೃತ್ತಿ 4.4.2 ನೊಂದಿಗೆ ಬಂದಿದೆ.

#5

#5

ಸೆಲ್ಕೋನ್ A35K ಕ್ಯಾಂಪಸ್ 3.5 ಇಂಚಿನ ಡಿಸ್‌ಪ್ಲೇಯೊಂದಿಗೆ ಬಂದಿದ್ದು ಇದರ ರೆಸಲ್ಯೂಶನ್ 320 x 480 ಪಿಕ್ಸೆಲ್‌ಗಳಾಗಿವೆ. ಇದರಲ್ಲಿ 1GHz ಪ್ರೊಸೆಸರ್ ಇದ್ದು RAM ಸಾಮರ್ಥ್ಯ 256 ಎಮ್‌ಬಿಯಾಗಿದೆ. ಈ ಡಿವೈಸ್ 512 ಎಮ್‌ಬಿ ಆಂತರಿಕ ಮೆಮೊರಿಯನ್ನು ಹೊಂದಿದ್ದು, ಇದನ್ನು ಮೈಕ್ರೋ ಎಸ್‌ಡಿ ಕಾರ್ಡ್ ಸ್ಲಾಟ್ ಮೂಲಕ 32 ಜಿಬಿಗೆ ವಿಸ್ತರಿಸಬಹುದಾಗಿದೆ. 3.2 ಮೆಗಾಪಿಕ್ಸೆಲ್ ರಿಯರ್ ಫೇಸಿಂಗ್ ಕ್ಯಾಮೆರಾ ಡಿವೈಸ್‌ನಲ್ಲಿದ್ದು, VGA ಗುಣಮಟ್ಟದ ಮುಂಭಾಗ ಶೂಟರ್ ಅನ್ನು ಫೋನ್ ಹೊಂದಿದೆ.

Best Mobiles in India

Read more about:
English summary
This article tells that Micromax Canvas Fire A093 simple features and its competitors where came with same functions.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X