ಮೈಕ್ರೋಮ್ಯಾಕ್ಸ್ ಡ್ಯುಯಲ್ 5 ಫೋನಿನಲ್ಲಿದೆ ಮೂರು 13 MP ಕ್ಯಾಮೆರಾಗಳು..!!

ಮೈಕ್ರೋಮ್ಯಾಕ್ಸ್, ಚೀನಾ ಮೂಲದ ಮೊಬೈಲ್ ಕಂಪನಿಗಳಿಗೆ ಸೆಡ್ಡು ಹೊಡೆಯುವ ಸಲುವಾಗಿ ಡ್ಯುಯಲ್ ಕ್ಯಾಮೆರಾ ಹೊಂದಿರುವ ಡ್ಯುಯಲ್ 5 ಫೋನ್ ಬಿಡುಗಡೆ ಮಾಡಿದೆ.

Written By:

ಭಾರತೀಯ ಮಾರುಕಟ್ಟೆಯಲ್ಲಿ ಸ್ವಲ್ಪದಿನಗಳ ಕಾಲ ಸದ್ದಿಲ್ಲದೇ ಕುಳಿತಿದ್ದ ಮೈಕ್ರೋಮ್ಯಾಕ್ಸ್, ಚೀನಾ ಮೂಲದ ಮೊಬೈಲ್ ಕಂಪನಿಗಳಿಗೆ ಸೆಡ್ಡು ಹೊಡೆಯುವ ಸಲುವಾಗಿ ಡ್ಯುಯಲ್ ಕ್ಯಾಮೆರಾ ಹೊಂದಿರುವ ಡ್ಯುಯಲ್ 5 ಫೋನ್ ಬಿಡುಗಡೆ ಮಾಡಿದೆ.

ಮೈಕ್ರೋಮ್ಯಾಕ್ಸ್ ಡ್ಯುಯಲ್ 5 ಫೋನಿನಲ್ಲಿದೆ ಮೂರು 13 MP ಕ್ಯಾಮೆರಾಗಳು..!!

ಓದಿರಿ: ಏಪ್ರಿಲ್ 4ಕ್ಕೆ ಭಾರತದಲ್ಲಿ ಮೊಟೊ G5 ಲಭ್ಯ..!!

ದೇಶಿಯ ಮೂಲದ ಮೈಕ್ರೋಮ್ಯಾಕ್ಸ್ ಇದೇ ಮೊದಲ ಬಾರಿಗೆ ತನ್ನ ಸ್ಮಾರ್ಟ್‌ಫೋನಿನಲ್ಲಿ ಎರಡು ಕ್ಯಾಮೆರಾ ಅಳವಡಿಸಿದ್ದು, ಸೋನಿ ಕಂಪೆನಿಯ ಎರಡು 13 MP ಕ್ಯಾಮೆರಾಗಳನ್ನು ಹೊಂದಿರುವ ಡ್ಯುಯಲ್ 5 ಫೋನು 24,999 ರೂ.ಗಳಿಗೆ ದೊರೆಯಲಿದೆ. ಏಪ್ರಿಲ್ 10 ರಿಂದ ಫ್ಲಿಪ್‍ಕಾರ್ಟ್‍ನಲ್ಲಿ ಸೇಲ್ ಆರಂಭವಾಗಲಿದೆ.

ಓದಿರಿ: ಜಿಯೋ ಆಯ್ತು, ಈಗ ಏರ್‌ಟೆಲ್ ನಿಂದ 4G VoLTE: ಶುರುವಾಗಲಿದೆ ಉಚಿತ ಸೇವೆಗಳ ಸುರಿಮಳೆ..!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

FHD ಡಿಸ್‌ಪ್ಲೇ

1920x1980p ರೆಸಲ್ಯೂಷನ್ ಹೊಂದಿರುವ 5.5 ಇಂಚಿನ ಅಮೋಲೆಡ್ FHD ಡಿಸ್‌ಪ್ಲೇ, ಇದರ ರಕ್ಷಣೆಗಾಗಿ ಕಾರ್ನಿಂಗ್ ಗೊರಿಲ್ಲ ಗ್ಲಾಸ್ ಅಳವಡಿಸಲಾಗಿದೆ. ಗುಣಮಟ್ಟದ ವಿಡಿಯೋ ಮತ್ತು ಗೇಮಿಂಗ್‌ಗೆ ಹೇಳಿ ಮಾಡಿಸಿದಂತಿದೆ.

ಆಂಡ್ರಾಯ್ಡ್ 6.0:

1.8 GHz ವೇಗದ ಕ್ವಾಲಕಂ ಸ್ನಾಪ್‍ಡ್ರಾಗನ್ 652 ಪ್ರೋಸೆಸರ್ ಹಾಗೂ ಆಂಡ್ರಾಯ್ಡ್ 6.0 ದಲ್ಲಿ ಕಾರ್ಯನಿರ್ವಹಿಸುವ ಈ ಪೋನು 4GB RAM ಹೊಂದಿದ್ದು, 128 GB ಇಂಟರ್ನಲ್ ಮೆಮೊರಿ ಮತ್ತು SD ಕಾರ್ಡ್‌ ಮೂಲಕ 128 GB ವರೆಗೆ ಮೆಮೊರಿ ವಿಸ್ತರಿಸಿಕೊಳ್ಳುವ ಅವಕಾಶವನ್ನು ನೀಡಿದೆ.

ಡ್ಯುಯಲ್ ಕ್ಯಾಮೆರಾ:

ಮೈಕ್ರೋಮ್ಯಾಕ್ಸ್ ತನ್ನ ನೂತನ ಪೋನಿನಲ್ಲಿ ಸೋನಿ ಕಂಪೆನಿಯ ಎರಡು 13 ಕ್ಯಾಮೆರಾ ಅಳವಡಿಸಿದ್ದು, ಇದರೊಂದಿಗೆ ಐಎಂಎಕ್ಸ್ 258 ಸೆನ್ಸರ್ ಸಹ ಇದರಲ್ಲಿದೆ. ಅಲ್ಲದೇ ಈ ಫೋನಿನಲ್ಲಿ 4K UHD ವಿಡಿಯೋ ಮಾಡಬಹುದಾಗಿದೆ. ಈ ಫೋನಿನಲ್ಲಿ ಸೆಲ್ಫಿಗಾಗಿ 13 ಎಂಪಿ ಕ್ಯಾಮೆರಾ ನೀಡಲಾಗಿದೆ.

ಈ ಪೋನನ್ನು ಕಳವು ಮಾಡುವುದು ಕಷ್ಟ:

ಮೈಕ್ರೋಮ್ಯಾಕ್ಸ್ ತನ್ನ ನೂತನ ಫೋನಿನಲ್ಲಿ ‘ಸೇಫ್ ಸ್ವಿಚ್' ಎಂಬ ಹೊಸ ಆಂಟಿ ಥೀಫ್ ಆಯ್ಕೆಯನ್ನು ನೀಡಿದ್ದು, ಒಂದು ವೇಳೆ ಸಿಮ್ ತೆಗೆದು 60 ನಿಮಿಷ ಬಳಿಕ ಸರಿಯಾದ ಪಾಸ್‌ವರ್ಡ್ ಹಾಕದೇ ಇದ್ದರೆ ಫೋನ್ ಲಾಕ್ ಆಗುತ್ತದೆ. ಇದರಿಂದ ಬೇರೆಯವರು ನಿಮ್ಮ ಫೋನ್ ಕಳವು ಮಾಡಿದರು ಯಾವುದೇ ರೀತಿಯಿಂದಲೂ ಅವರಿಗೆ ಲಾಭವಿಲ್ಲ.

3,200 mAh ಬ್ಯಾಟರಿ:

ಮೈಕ್ರೋಮ್ಯಾಕ್ಸ್ ಡ್ಯುಯಲ್ 5 ಫೋನಿನಲ್ಲಿ 3200 mAh ಬ್ಯಾಟರಿ ಅಳವಡಿಸಲಾಗಿದ್ದು, ಫಾಸ್ಟ್ ಚಾರ್ಜಿಂಗ್ ನೀಡಲಾಗಿದೆ. ಈ ಪೋನನ್ನು 10 ನಿಮಿಷ ಚಾರ್ಜ್ ಮಾಡಿದರೆ 4 ಗಂಟೆ ಬಳಕೆ ಮಾಡಬಹುದು ಎಂದು ಕಂಪನಿ ತಿಳಿಸಿದೆ.

ಇತರೆ ವಿಶೇಷತೆಗಳು:

ಡ್ಯುಯಲ್ ಹೈಬ್ರಿಡ್ ಸಿಮ್ ಸ್ಲಾಟ್( 2 ಸಿಮ್ ಅಥವಾ 1 ಸಿಮ್ + ಒಂದು ಮೆಮೊರಿ ಕಾರ್ಡ್), 164 ಗ್ರಾಂ ತೂಕ, 4ಜಿ ವೋಲ್ಟ್, 4G VoLET, ಗ್ರಾವಿಟಿ, ಫಿಂಗರ್ ಪ್ರಿಂಟ್, ಡಿಜಿಟಲ್ ಕಂಪಾಸ್, ಲೈಟ್ ಸೆನ್ಸರ್.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿRead more about:
English summary
The Dual 5 is part of Micromax Dual phone series that will see more devices with dual-camera setup appearing in it in the coming months. to know more visit kannada.gizbot.com
Please Wait while comments are loading...
Opinion Poll

Social Counting