ವಿಂಡೋಸ್ ಫೋನ್‌ ಓಎಸ್‌ ಲೈಸೆನ್ಸ್‌:ದೇಶಿಯ ಕಂಪೆನಿಗಳಿಗೆ ಉಚಿತ

By Ashwath
|

ಸಾರ್ಟ್‌‌ಫೋನ್‌ ಮಾರುಕಟ್ಟೆಯಲ್ಲಿ ಆಂಡ್ರಾಯ್ಡ್ ಪ್ರಾಬಲ್ಯವನ್ನು ಕಡಿಮೆ ಮಾಡಲು ಮೈಕ್ರೋಸಾಫ್ಟ್‌ ಮುಂದಾಗುತ್ತಿದ್ದು ದೇಶೀಯ ಸ್ಮಾರ್ಟ್‌‌ಫೋನ್‌ ತಯಾರಕ ಕಂಪೆನಿಗಳಿಗೆ ಶುಲ್ಕ ರಹಿತವಾಗಿ ವಿಂಡೋಸ್ ಫೋನ್‌ ಓಎಸ್‌ ಪರವಾನಗಿ ನೀಡಲು ಚಿಂತನೆ ನಡೆಸಿದೆ.

ಮೈಕ್ರೋಸಾಫ್ಟ್ ಆಂಡ್ರಾಯ್ಡ್‌ನಂತೆ ಕಡಿಮೆ ಬೆಲೆಯಲ್ಲಿ ವಿಂಡೋಸ್‌ ಸ್ಮಾರ್ಟ್‌‌ಫೋನ್‌ ನಿರ್ಮಾಣಕ್ಕಾಗಿ ಈಗಾಗಲೇ ದೇಶದ ಮುಂಚೂಣಿಯಲ್ಲಿರುವ ಮೈಕ್ರೋಮಾಕ್ಸ್‌,ಕಾರ್ಬ‌ನ್‌ ಲಾವಾ ಕಂಪೆನಿಗಳ ಜೊತೆಗೆ ಮಾತುಕತೆ ನಡೆಸಿದೆ ಎಂದು ಆಂಗ್ಲ ಮಾಧ್ಯಮಗಳು ವರದಿ ಮಾಡಿವೆ.

ಭಾರತೀಯ ಮೂಲದ ಸತ್ಯ ನಾದೆಳ್ಲಾ ಸಿಇಒ ಆಗಿ ನೇಮಕವಾದ ಬಳಿಕ ಮೈಕ್ರೋಸಾಫ್ಟ್‌ ದೇಶೀಯ ಕಂಪೆನಿಗಳ ಜೊತೆ ಈ ರೀತಿಯ ಒಪ್ಪಂದ ನಡೆಸಲು ಮುಂದಾಗುತ್ತಿದೆ ಎಂದು ಹೇಳಲಾಗುತ್ತಿದೆ.

ಯಾವುದೇ ಕಂಪೆನಿ ವಿಂಡೋಸ್‌ ಸ್ಮಾರ್ಟ್‌ಫೋನ್‌‌ ನಿರ್ಮಿ‌ಸಿದರೆ ,ಆ ಕಂಪೆನಿ ಫೋನಿನ ವಿಶೇಷತೆಗಳನ್ನು ಆಧಾರಿಸಿ 20,35 ಡಾಲರ್‌ ಒಳಗಡೆ ನಿಗದಿಪಡಿಸಿರುವ ಪರವಾನಗಿ ಶುಲ್ಕವನ್ನು ಮೈಕ್ರೋಸಾಫ್ಟ್‌‌‌ಗೆ ನೀಡಬೇಕೆಂಬ ಒಪ್ಪಂದವಿದೆ.ಪರವಾನಗಿ ಶುಲ್ಕವೇ ದುಬಾರಿಯಾಗಿರುವುದರಿಂದ ಈ ಒಪ್ಪಂದದ ಪ್ರಕಾರ ಕಡಿಮೆ ಬೆಲೆಯಲ್ಲಿ ಸ್ಮಾರ್ಟ್‌ಫೋನ್‌ ನಿರ್ಮಿಸಲು ಸಾಧ್ಯವಿಲ್ಲ.

ಈ ಪರವಾನಗಿ ಶುಲ್ಕ ಮೈಕ್ರೋಸಾಫ್ಟ್‌ ತೆಗೆದುಹಾಕಿದರೆ ಮಾತ್ರ ವಿಂಡೋಸ್ ಓಎಸ್‌ ಸ್ಮಾರ್ಟ್‌ಫೋನ್‌ ನಿರ್ಮಿಸುವುದಾಗಿ ಭಾರತೀಯ ಕಂಪೆನಿಗಳು ಸ್ಪಷ್ಟಪಡಿಸಿದ ಹಿನ್ನೆಲೆಯಲ್ಲಿ ಮೈಕ್ರೋಸಾಫ್ಟ್‌‌ ಭಾರತೀಯ ಕಂಪೆನಿಗಳಿಗೆ ಶುಲ್ಕ ರಹಿತವಾಗಿ ವಿಂಡೋಸ್ ಫೋನ್‌ ಓಎಸ್‌ ಪರವಾನಗಿಯನ್ನು ನೀಡಲು ಮುಂದಾಗುತ್ತಿದೆ ಎಂದು ಹೇಳಲಾಗುತ್ತಿದೆ.

ವಿಂಡೋಸ್ ಫೋನ್‌ ಓಎಸ್‌ ಲೈಸೆನ್ಸ್‌:ದೇಶಿಯ ಕಂಪೆನಿಗಳಿಗೆ ಉಚಿತ

ಗೂಗಲ್‌ನ ಆಂಡ್ರಾಯ್ಡ್‌ ಓಎಸ್‌ ಮುಕ್ತವಾಗಿದ್ದರೂ, ಗೂಗಲ್‌ ಪ್ಲೇ ಸ್ಟೋರ್‌ ಮತ್ತು ಗೂಗಲ್‌ ಕೆಲವು ಸೇವೆಗಳಿಗೆ ಸ್ಮಾರ್ಟ್‌‌ಫೋನ್‌ ತಯಾರಕ ಕಂಪೆನಿಗಳು ಶುಲ್ಕವನ್ನು ಪಾವತಿಸುತ್ತವೆ.ಭಾರತೀಯ ಕಂಪೆನಿಗಳು ನೇರವಾಗಿ ಈ ಶುಲ್ಕವನ್ನು ಗೂಗಲ್‌ಗೆ ಪಾವತಿಸುವುದಿಲ್ಲ. ಬದಲಾಗಿ ಚೀನಾದಲ್ಲಿ ತಯಾರಾಗುವ ಭಾರತೀಯ ಕಂಪೆನಿಗಳ ಸ್ಮಾರ್ಟ್‌‌ಫೋನ್‌ ಮೂಲ ವಿನ್ಯಾಸ ತಯಾರಕ ಫ್ಯಾಕ್ಟರಿ(Original design manufacturer) ಈ ಶುಲ್ಕವನ್ನು ಗೂಗಲ್‌ಗೆ ಪಾವತಿಸುತ್ತದೆ.ಸ್ಮಾರ್ಟ್‌ಫೋನ್‌ ಮಾರುಕಟ್ಟೆಯಲ್ಲಿ ಹೆಚ್ಚಿನ ಸ್ಥಾನವನ್ನು ಆಂಡ್ರಾಯ್ಡ್‌ ಕಬಳಿಸಿರುವುದರಿಂದ ಗೂಗಲ್‌ನ ಶುಲ್ಕ ಭಾರತೀಯ ಕಂಪೆನಿಗಳಿಗೆ ಅಷ್ಟೇನು ದೊಡ್ಡ ಮೊತ್ತವಾಗಿಲ್ಲ.

ಐಡಿಸಿ ವರದಿಯಂತೆ ಕಳೆದ ವರ್ಷದ ವಿಶ್ವದ ಸ್ಮಾರ್ಟ್‌ಫೋನ್‌ ಓಎಸ್‌ ಮಾರುಕಟ್ಟೆಯಲ್ಲಿ ಆಂಡ್ರಾಯ್ಡ್‌‌ ಶೇ.78 ಪಾಲುಗಳಿಸಿದ್ದರೆ, ವಿಂಡೋಸ್‌ ಶೇ. 3.3 ಪಾಲನ್ನುಗಳಿಸಿಕೊಂಡಿದೆ. ಮಾರುಕಟ್ಟೆಯಲ್ಲಿ ವಿಂಡೋಸ್‌ ಫೋನ್‌ ಪ್ರಭಾವ ಹೆಚ್ಚಿಸಲು ಮೈಕ್ರೋಸಾಫ್ಟ್‌ ಈ ತಂತ್ರವನ್ನು ಅನುಸರಿಸಲು ಮುಂದಾಗಿದೆ. ಈ ಹಿಂದೆ ಮೈಕ್ರೋಸಾಫ್ಟ್‌ ವಿಶ್ವದ ಟಾಪ್‌ ಸ್ಮಾರ್ಟ್‌ಫೋನ್‌ ತಯಾರಕಾ ಕಂಪೆನಿಗಳಿಗೆ ಧನಸಹಾಯ ನೀಡುತ್ತಿರುವ ಸುದ್ದಿ ಪ್ರಕಟಗೊಂಡಿತ್ತು. ಈ ಸುದ್ದಿಗೆ ಮೈಕ್ರೋಸಾಫ್ಟ್‌ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ.ಈಗ ಭಾರತೀಯ ಕಂಪೆನಿಗಳಿಗೆ ಶುಲ್ಕ ರಹಿತ ವಿಂಡೋಸ್‌ ಓಎಸ್‌ ನೀಡುವು ಬಗ್ಗೆ ಮೈಕ್ರೋಸಾಫ್ಟ್‌ ಇನ್ನು ಎಲ್ಲಿಯೂ ಅಧಿಕೃತವಾಗಿ ಪ್ರಕಟಿಸಿಲ್ಲ. ದೇಶಿಯ ಕಂಪೆನಿಗಳು ಕಡಿಮೆ ಬೆಲೆಯಲ್ಲಿ ಸ್ಮಾರ್ಟ್‌‌ಫೋನ್‌ ನಿರ್ಮಿಸಿದ ಬಳಿಕವಷ್ಟೇ ಈ ವಿಚಾರ ಸ್ಪಷ್ಟವಾಗಲಿದೆ.

ವಿಂಡೋಸ್ ಫೋನ್‌ ಓಎಸ್‌ ಲೈಸೆನ್ಸ್‌:ದೇಶಿಯ ಕಂಪೆನಿಗಳಿಗೆ ಉಚಿತ

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X