ಮೊಟೊ C ಸ್ಮಾರ್ಟ್‌ಫೋನ್ ಲಾಂಚ್: ರೆಡ್‌ಮಿ 4A ಫೋನಿಗೆ ಪ್ರಬಲ ಪ್ರತಿ ಸ್ಪರ್ಧಿ

ಮೊಟೊರೊಲಾ ಕಂಪನಿಯೂ ಮೊಟೊ ಸರಣಿಗೆ ಹೊಸದೊಂದು ಸೇರ್ಪಡೆಗೊಳಿಸಿದ್ದು, ಮೊಟೊ C ಹೆಸರಿನ ಹೊಸ ಬಜೆಟ್ ಸ್ಮಾರ್ಟ್‌ಫೋನ್‌ವೊಂದನ್ನು ಲಾಂಚ್ ಮಾಡಿದೆ.

|

ಭಾರತೀಯ ಮಾರುಕಟ್ಟೆಯಲ್ಲಿ ಸದ್ಯ ಬಜೆಟ್ ಫೋನ್ ಹಾವಳಿ ಹೆಚ್ಚಾಗಿದ್ದು, ಮೊನ್ನೆ ತಾನೆ ಶಿಯೋಮಿ ರೆಡ್‌ಮಿ 4A ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಿತ್ತು, ಅದರ ಬೆನ್ನಹಿಂದೆಯೇ ರೆಡ್‌ಮಿ 4 ಸ್ಮಾರ್ಟ್‌ಫೋನ್ ಲಾಂಚ್ ಮಾಡಿದೆ. ಇದಕ್ಕೆ ಪ್ರಬಲ ಪ್ರತಿ ಸ್ಪರ್ಧಿಯೇ ಮಾರುಕಟ್ಟೆಯಲ್ಲಿ ಇಲ್ಲ ಎನ್ನುವ ಮಾತು ಕೇಳಿಬಂದಿತ್ತು.

ಮೊಟೊ C ಸ್ಮಾರ್ಟ್‌ಫೋನ್ ಲಾಂಚ್: ರೆಡ್‌ಮಿ 4A ಫೋನಿಗೆ ಪ್ರಬಲ ಪ್ರತಿ ಸ್ಪರ್ಧಿ

ಅದಕ್ಕೆ ಉತ್ತರವಾಗಿ ಮೊಟೊರೊಲಾ ಕಂಪನಿಯೂ ಮೊಟೊ ಸರಣಿಗೆ ಹೊಸದೊಂದು ಸೇರ್ಪಡೆಗೊಳಿಸಿದ್ದು, ಮೊಟೊ C ಹೆಸರಿನ ಹೊಸ ಬಜೆಟ್ ಸ್ಮಾರ್ಟ್‌ಫೋನ್‌ವೊಂದನ್ನು ಲಾಂಚ್ ಮಾಡಿದೆ. ಸದ್ಯ ಈ ಫೋನ್ ಯೂರೋಪ್‌ನಲ್ಲಿ ಲಭ್ಯವಿದ್ದ, ಸುಮಾರು ರೂ. 6,300ಕ್ಕೆ ದೊರೆಯಲಿದೆ. ಭಾರತೀಯ ಮಾರುಕಟ್ಟೆಗೆ ಬಂದರೆ ಬೆಲೆ ಇನ್ನು ಕಡಿಮೆಯಾಗಲಿದೆ.

ಲಾಂಚ್ ಆಗಿದೆ ಮೊಟೊ C ಮತ್ತು ಮೊಟೊ C ಪ್ಲಸ್:

ಲಾಂಚ್ ಆಗಿದೆ ಮೊಟೊ C ಮತ್ತು ಮೊಟೊ C ಪ್ಲಸ್:

ಈ ಮೊದಲೇ ಮೊಟೊರೊಲಾ ಬಜೆಟ್ ಸ್ಮಾರ್ಟ್‌ಫೋನ್‌ ವೊಂದನ್ನು ಬಿಡುಗಡೆ ಮಾಡಲಿದೆ ಎನ್ನುವ ಮಾಹಿತಿಯೂ ಲಭ್ಯವಾಗಿತ್ತು. ಅದರಂತೆ ಮೊಟೊ C ಮತ್ತು ಮೊಟೊ C ಪ್ಲಸ್ ಯೂರೋಪ್, ಅಮೇರಿಕಾ ಮಾರುಕಟ್ಟೆಯಲ್ಲಿ ಲಾಂಚ್ ಆಗಿದೆ.

ಮೊಟೊ C ವಿಶೇಷತೆಗಳು:

ಮೊಟೊ C ವಿಶೇಷತೆಗಳು:

ಸದ್ಯ ಮೊಟೊ C 3G ವರ್ಷನ್‌ನಲ್ಲಿ ಲಭ್ಯವಿದ್ದು, 5 ಇಂಚಿನ ಡಿಸ್‌ಪ್ಲೇ ಹೊಂದಿದ್ದು, 1.1 GHz ಕ್ವಾಡ್ ಕೋರ್ ಮಿಡಿಯಾ ಟೆಕ್ ಚಿಪ್ ಸೆಟ್ ನೊಂದಿಗೆ 1 GB RAM ಇದರಲ್ಲಿದೆ. ಅಲ್ಲದೇ 8GB/16GB ಇಂಟರ್‌ನಲ್ ಮೆಮೊರಿಯೊಂದಿಗೆ ದೊರೆಯಲಿದೆ. ಅಲ್ಲದೇ ಮೆಮೊರಿ ಕಾರ್ಡ್ ಹಾಕಿಕೊಳ್ಳುವ ಮೂಲಕ 32GB ವರೆಗು ಮೆಮೊರಿ ವಿಸ್ತರಿಸಿಕೊಳ್ಳುವ ಅವಕಾಶವನ್ನು ಮಾಡಿಕೊಡಲಾಗಿದೆ.

ಮೊಟೊ C ಪ್ರಮುಖ ಅಂಶಗಳು:

ಮೊಟೊ C ಪ್ರಮುಖ ಅಂಶಗಳು:

ಈ ಫೋನಿನ ಹಿಂಭಾಗದಲ್ಲಿ 5MP ಕ್ಯಾಮೆರಾವನ್ನು ಅಳವಡಿಸಲಾಗಿದೆ ಜೊತೆಗೆ LED ಫ್ಲಾಸ್ ಸಹ ಇದೆ. ಅಲ್ಲದೇ ಮುಂಭಾಗದಲ್ಲಿ 2MP ಕ್ಯಾಮೆರಾ ನೀಡಲಾಗಿದ್ದು, ಜೊತೆಗೆ LED ಫ್ಲಾಸ್ ಇದೇ. 2,350mAh ಬ್ಯಾಟರಿಯೂ ಈ ಫೋನಿನಲ್ಲಿದೆ.

ಮೊಟೊ C ಪ್ಲಸ್ ವಿಶೇಷತೆಗಳು:

ಮೊಟೊ C ಪ್ಲಸ್ ವಿಶೇಷತೆಗಳು:

ಮೊಟೊ C ಪ್ಲಸ್ ಸ್ಮಾರ್ಟ್‌ಫೋನಿನಲ್ಲಿ 5 ಇಂಚಿನ HD ಡಿಸ್‌ಪ್ಲೇ ಅಳವಡಿಸಲಾದ್ದು, 1.4GHz ಮಿಡಿಯಾ ಟೆಕ್ ಚಿಪ್‌ಸೆಟ್ ಹೊಂದಿದೆ. ಅಲ್ಲದೇ 2GB RAM ಮತ್ತು 16 GB ಇಂಟರ್‌ನಲ್ ಮೆಮೊರಿಯನ್ನು ಈ ಫೋನ್ ಹೊಂದಿದೆ.

ಮೊಟೊ C ಪ್ಲಸ್ ಪ್ರಮುಖ ಅಂಶಗಳು:

ಮೊಟೊ C ಪ್ಲಸ್ ಪ್ರಮುಖ ಅಂಶಗಳು:

ಹಿಂಭಾಗದಲ್ಲಿ 8 MP ಕ್ಯಾಮೆರಾವನ್ನ ನೀಡಲಾಗಿದ್ದು, ಮುಂಭಾಗದಲ್ಲಿ 2MP ಕ್ಯಾಮೆರಾ ಇದೆ. ಅಲ್ಲದೇ ಎರಡು ಕಡೆಯಲ್ಲೂ LED ಫ್ಲಾಶ್ ಅಳವಡಿಸಲಾಗಿದೆ. ಅಲ್ಲದೇ 4000mAh ಬ್ಯಾಟರಿಯೂ ಈ ಫೋನಿನಲ್ಲಿದೆ. ಅಲ್ಲದೇ ಈ ಫೋನ್ ಬೆಲೆ ಸುಮಾರು ರೂ.8,300 ಆಗಲಿದೆ.

Best Mobiles in India

Read more about:
English summary
Lenovo-owned Motorola, has finally revealed its affordable range of smartphones with the company’s new C-series. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X