11,999 ರೂ.ಗಳಿಗೆ ಮೋಟೋ G5 ಭಾರತದಲ್ಲಿ ಲಭ್ಯ: ವಿಶೇಷತೆಗಳೇನು..?

ಮೊಟೊ G5 ಸ್ಮಾರ್ಟ್‌ಪೋನು ಇಂದು ಭಾರತದಲ್ಲಿ ಲಾಂಚ್ ಆಗಿದೆ. ಅಮೆಜಾನ್ ನಲ್ಲಿ ಲಭ್ಯವಿರುವ ಈ ಫೋನಿನ ಬೆಲೆ ರೂ.11,999.

|

ಫೆಬ್ರವರಿ 26 ರಂದು ಲಾಂಚ್ ಆಗಿದ್ದ ಮೋಟೋರೋಲಾ ಕಂಪನಿಯ ಬಹುನಿರೀಕ್ಷಿತ ಮೊಟೊ G5 ಸ್ಮಾರ್ಟ್‌ಪೋನು ಇಂದು ಭಾರತದಲ್ಲಿ ಲಾಂಚ್ ಆಗಿದೆ. ಅಮೆಜಾನ್ ನಲ್ಲಿ ಲಭ್ಯವಿರುವ ಈ ಫೋನಿನ ಬೆಲೆ ರೂ.11,999 ಗಳಗಲಿದೆ.

11,999 ರೂ.ಗಳಿಗೆ ಮೋಟೋ G5 ಭಾರತದಲ್ಲಿ ಲಭ್ಯ: ವಿಶೇಷತೆಗಳೇನು..?

ಓದಿರಿ: ಲೀಕ್ ಆಗಿದೆ ಜಿಯೋ ಡಿಟಿಹೆಚ್ ಸೆಟಪ್‌ ಬಾಕ್ಸ್: ಬೆಲೆ ಎಷ್ಟು..? ಇಲ್ಲಿದೇ ಸಂಪೂರ್ಣ ವಿವರ.!!!

ಆನ್‌ಲೈನ್ ಮಾರುಕಟ್ಟೆಯಲ್ಲಿ ಮಾತ್ರ ದೊರೆಯಲಿರುವ ಈ ಫೋನು ಮೋಟೋ G ಪ್ಲಸ್ ಫೋನಿಗಿಂತ ಕಡಿಮೆ ಬೆಲೆಗೆ ಲಭ್ಯವಿರಲಿದ್ದು, ಅಲ್ಲದೇ ಮಾರುಕಟ್ಟೆಯಲ್ಲಿ ರೆಡ್‌ಮಿ ನೋಟ್ 4 ಸ್ಮಾರ್ಟ್‌ಫೋನಿಗೆ ಸ್ಪರ್ಧೆ ನೀಡಲಿದೆ.

ಓದಿರಿ: ಕೇವಲ 1 ರೂ.ಗೆ ರೆಡ್‌ಮಿ ನೋಟ್ 4 ಸ್ಮಾರ್ಟ್‌ಫೋನ್‌: ಇದು ಸುಳ್ಳಲ್ಲ, 100% ನಿಜ

ಅಮೆಜಾನ್ ನಲ್ಲಿ ಲಭ್ಯ ಮೊಟೊ G5 :

ಅಮೆಜಾನ್ ನಲ್ಲಿ ಲಭ್ಯ ಮೊಟೊ G5 :

ಭಾರತದಲ್ಲಿ ಈ ಮೊಟೊ G5 ಸ್ಮಾರ್ಟ್‌ಫೋನ್ ಅಮೆಜಾನ್ ನಲ್ಲಿ ಮಾತ್ರ ಲಭ್ಯವಿರಲಿದ್ದು, ಏಪ್ರಿಲ್ 4 ರ ಮಧ್ಯರಾತ್ರಿ 12ರ ನಂತರ ಸೇಲ್ ಆರಂಭವಾಗಲಿದೆ. ಸೇಲ್ ಆರಂಭದ ಅಂಗವಾಗಿ ಸ್ಪೆಷಲ್ ಆಫರ್ ನೀಡಲಾಗುತ್ತಿದೆ.

ಮೊಟೊ G5  ಕ್ಯಾಷ್ ಬ್ಯಾಕ್ :

ಮೊಟೊ G5 ಕ್ಯಾಷ್ ಬ್ಯಾಕ್ :

ಅಮೆಜಾನ್ ಪ್ರೈಮ್ ಸದಸ್ಯರಿಗೆ ಮೊಟೊ G5 ಖರೀದಿಯ ಮೇಲೆ 1000 ರೂ. ಕ್ಯಾಷ್‌ಬ್ಯಾಕ್ ಹಾಗೂ HDFC ಕಾರ್ಡ್ ಬಳಕೆದಾರಿಗೂ 1000 ರೂ. ಕ್ಯಾಷ್ ಬ್ಕಾಕ್ ದೊರೆಯಲಿದೆ. ಅಲ್ಲದೇ ಉಚಿತ ಮೆಮೊರಿ ಕಾರ್ಡ್ ದೊರೆಯಲಿದೆ. ಅಲ್ಲದೇ ಹಳೇ ಸ್ಮಾರ್ಟ್‌ಫೋನ್‌ಗಳ ಮೇಲೆ ಏಕ್ಸ್‌ಚೆಂಜ್ ಆಫರ್ ದೊರೆಯಲಿದೆ.

5 ಇಂಚಿನ full-HD ಡಿಸ್‌ಪ್ಲೇ:

5 ಇಂಚಿನ full-HD ಡಿಸ್‌ಪ್ಲೇ:

ಮೊಟೊ G5 ಸ್ಮಾರ್ಟ್‌ಫೋನಿನಲ್ಲಿ 5 ಇಂಚಿನ full-HD 1080p ರೆಸಲ್ಯೂಷನ್ ಡಿಸ್‌ಪ್ಲೇ ಹೊಂದಿದ್ದು, ಕಾರ್ನಿಂಗ್ ಗೋರಿಲ್ಲಾ ಗ್ಲಾಸ್ ರಕ್ಷಣೆಯನ್ನು ಇದು ಹೊಂದಿದೆ ಎನ್ನಲಾಗಿದೆ. ಕ್ವಾಲ್‌ಕಮ್ ಸ್ನಾಪ್‌ಡ್ರಾಗನ್ 430 ಆಕ್ಟಾ ಕೋರ್ ಚಿಪ್‌ ಸೆಟ್ ಹೊಂದಿದೆ.

3GB RAM:

3GB RAM:

ಮೊಟೊ G5 ಸ್ಮಾರ್ಟ್‌ಫೋನಿನಲ್ಲಿ 3GB RAM ಅಳವಡಿಸಲಾಗಿದೆ. ಅಲ್ಲದೇ 16GB ಇಂಟರನಲ್ ಮೆಮೊರಿಯೊಂದಿಗೆ ಲಭ್ಯವಿರಲಿದೆ. ಅಲ್ಲದೇ ಈ ಸ್ಮಾರ್ಟ್‌ಪೋನ್ ಆಂಡ್ರಾಯ್ಡ್ ನ್ಯಾಗಾದಲ್ಲಿ ಕಾರ್ಯನಿರ್ವಹಿಸಲಿದೆ.

 13 MP ಕ್ಯಾಮೆರಾ:

13 MP ಕ್ಯಾಮೆರಾ:

13 MP ಹಿಂಬದಿ ಕ್ಯಾಮೆರಾವನ್ನು ನೀಡಲಾಗಿದ್ದು, ಇದು f/2.0 ಆಪರ್ಚರ್ ಹೊಂದಿದೆ ಹಾಗೂ LED ಫ್ಲಾಶ್ ಸಹ ಇದೆ. ಇದರೊಂದಿಗೆ ಮುಂಭಾದಗದಲ್ಲಿ 5MP ಕ್ಯಾಮೆರಾ ಈ ಪೋನಿನಲ್ಲಿದೆ. ಅಲ್ಲದೇ ಸೆಲ್ಫಿ ತೆಗೆಯುವವರಿಗಾಗಿ ವೈಡ್ ಆಂಗಲ್ ಲೈನ್ಸ್ ಅಳವಡಿಸಲಾಗಿದೆ.

2800mAh ಬ್ಯಾಟರಿ ಇದೆ:

2800mAh ಬ್ಯಾಟರಿ ಇದೆ:

ಮೊಟೊ G5 ಸ್ಮಾರ್ಟ್‌ಫೋನಿನಲ್ಲಿ 2800mAh ಬ್ಯಾಟರಿ ಅಳವಡಿಸಲಾಗಿದೆ. ಅಲ್ಲದೇ ರಾಪಿಡ್ ಚಾರ್ಜಿಂಗ್ ಮಾಡುವ ಅವಕಾಶವನ್ನು ನೀಡಲಾಗಿದೆ. ಈ ಫೋನು ವಾಟರ್‌ ಪ್ರೂಫ್ ಆಗಿದೆ. ಇದಕ್ಕಾಗಿ ನ್ಯಾನೋ ಕೋಟಿಂಗ್ ಮಾಡಲಾಗಿದೆ.

ಡುಯಲ್ ಸಿಮ್, 4G ನೆಟ್‌ವರ್ಕ್‌:

ಡುಯಲ್ ಸಿಮ್, 4G ನೆಟ್‌ವರ್ಕ್‌:

ಮೊಟೊ G5 ಸ್ಮಾರ್ಟ್‌ಫೋನಿನಲ್ಲಿ ಡುಯಲ್ ಸಿಮ್ ಹಾಕಬಹುದಾಗಿದೆ. 4G VoLET, Wi-Fi, Bluetooth ಮತ್ತು GPS ಆಯ್ಕೆಗಳು ಇದೆ. ಅಲ್ಲದೇ ಪ್ರೀಲೋಡ್ ಅಮೆಜಾನ್ ಇಂಡಿಯಾ ಆಪ್, ಅಮೆಜಾನ್ ವಿಡಿಯೋ ಆಪ್ ಮತ್ತು ಅಮೆಜಾನ್ ಕಿನ್‌ಡ್ಲೇ ಆಪ್ ನೀಡಲಾಗುತ್ತಿದೆ.

Best Mobiles in India

Read more about:
English summary
The Moto G5 is the lower variant of the Moto G5 Plus, and will be going on sale exclusively via Amazon India. to know more visit kananda.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X