ಮಾರ್ಚ್‌ 19ಕ್ಕೆ ಮೋಟೋ ಎಕ್ಸ್‌ ಭಾರತದ ಮಾರುಕಟ್ಟೆಗೆ ಬಿಡುಗಡೆ!

By Ashwath
|

ಮೋಟೋ ಜಿ ಭಾರತದ ಮಾರುಕಟ್ಟೆಯಲ್ಲಿ ಯಶಸ್ವಿಯಾಗುತ್ತಿದ್ದಂತೆ ಮೋಟರೋಲಾ ಈಗ ಮೋಟೋ ಎಕ್ಸ್‌ ಸ್ಮಾರ್ಟ್‌‌ಫೋನ್‌ನ್ನು ಭಾರತದ ಮಾರುಕಟ್ಟೆಗೆ ಬಿಡುಗಡೆ ಮಾಡಲು ಮುಂದಾಗುತ್ತಿದೆ. ಮೋಟೋ ಎಕ್ಸ್‌ ಸದ್ಯದಲ್ಲೇ ಭಾರತದ ಮಾರುಕಟ್ಟೆಗೆ ಬಿಡುಗಡೆಯಾಗಲಿದೆ ಎಂದು ಫ್ಲಿಪ್‌ಕಾರ್ಟ್‌ ಟ್ವೀಟರ್‌ನಲ್ಲಿ ತಿಳಿಸಿದೆ. ಫ್ಲಿಪ್‌ಕಾರ್ಟ್‌ ಬಿಡುಗಡೆಯಾಗುವ ದಿನವನ್ನು ಸ್ಪಷ್ಟವಾಗಿ ತಿಳಿಸಿಲ್ಲವಾದರೂ,ಮಾಧ್ಯಮಗಳಲ್ಲಿ ಪ್ರಕಟವಾಗಿರುವ ವರದಿಗಳ ಪ್ರಕಾರ ಮಾರ್ಚ್‌ 19ಕ್ಕೆ ಮೋಟೋ ಎಕ್ಸ್‌ ದೇಶೀಯ ಮಾರುಕಟ್ಟೆಗೆ ಬಿಡುಗಡೆಯಾಗುವ ಸಾಧ್ಯತೆಯಿದೆ.

ಫೆಬ್ರವರಿ ಕೊನೆಯ ವಾರದಲ್ಲಿ ಮೋಟರೋಲಾ ಟ್ವೀಟರ್‌ನಲ್ಲಿ ಸದ್ಯದಲ್ಲೇ ಆಸ್ಟ್ರೇಲಿಯಾ ಮತ್ತು ಭಾರತದ ಮಾರುಕಟ್ಟೆಗೆ ಮೋಟೋ ಎಕ್ಸ್‌ ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿತ್ತು.ಗೂಗಲ್‌ ಮೋಟರೋಲಾ ಕಂಪೆನಿಯನ್ನು ಖರೀದಿಸಿದ ಬಳಿಕ ಬಿಡುಗಡೆ ಮಾಡಿದ ಮೊದಲ ಸ್ಮಾರ್ಟ್‌‌ಫೋನ್‌ ಇದಾಗಿದ್ದು ಅಮೆರಿಕದ ಮಾರುಕಟ್ಟೆಗೆ 2013 ಅಗಸ್ಟ್‌‌ನಲ್ಲಿ ಬಿಡುಗಡೆ ಮಾಡಿತ್ತು. ಆಂಡ್ರಾಯ್ಡ್‌ ಜೆಲ್ಲಿ ಬೀನ್‌ ಓಎಸ್‌ನಲ್ಲಿ ಬಿಡುಗಡೆಯಾಗಿದ್ದರೂ ಕಿಟ್‌‌ಕ್ಯಾಟ್‌ ಓಎಸ್‌ಗೆ ಈ ಸ್ಮಾರ್ಟ್‌ಫೋನ್‌ ಅಪ್‌ಡೇಟ್‌ ಮಾಡಬಹುದಾಗಿದೆ..

<blockquote class="twitter-tweet blockquote" lang="en"><p>The Moto X is coming soon... stay tuned for exclusive launch day offers! <a href="https://twitter.com/search?q=%23MotoOnFlipkart&src=hash">#MotoOnFlipkart</a> <a href="http://t.co/EBE5FFWbWb">pic.twitter.com/EBE5FFWbWb</a></p>— Flipkart (@Flipkart) <a href="https://twitter.com/Flipkart/statuses/443997719275655168">March 13, 2014</a></blockquote> <script async src="//platform.twitter.com/widgets.js" charset="utf-8"></script>
ಮೊಟೋ ಎಕ್ಸ್‌
ವಿಶೇಷತೆ:
4.7 ಇಂಚಿನ ಅಮೊಲೆಡ್‌ ಸ್ಕ್ರೀನ್‌‌(720 x 1280 ಪಿಕ್ಸೆಲ್‌)
ಆಂಡ್ರಾಯ್ಡ್‌ 4.2.2 ಜೆಲ್ಲಿ ಬೀನ್‌ ಓಎಸ್‌
1.7GHz ಕ್ವಾಲಕಂ ಸ್ನಾಪ್‌‌ಡ್ರಾಗನ್‌ ಡ್ಯುಯಲ್‌ ಕೋರ್‌ ಪ್ರೊಸೆಸರ್‍
2GB ರ್‍ಯಾಮ್‌
16/32 ಜಿಬಿ ಆಂತರಿಕ ಮೆಮೊರಿ
10 ಎಂಪಿ ಹಿಂದುಗಡೆ ಕ್ಯಾಮೆರಾ
2 ಎಂಪಿ ಹಿಂದುಗಡೆ ಕ್ಯಾಮೆರಾ
ಮೆಮೊರಿ ವಿಸ್ತರಿಸಲು ಕಾರ್ಡ್‌ ಸ್ಲಾಟ್‌ ಇಲ್ಲ
3ಜಿ,ವೈಫೈ,ಬ್ಲೂಟೂತ್‌,ಜಿಪಿಎಸ್
2,200mAh ಬ್ಯಾಟರಿ

ಇದನ್ನೂ ಓದಿ:ಸ್ಮಾರ್ಟ್‌‌ಫೋನ್‌ ಉದ್ಯಮಕ್ಕೆ ಎಂಟ್ರಿ ಕೊಡಲಿರುವ ಫ್ಲಿಪ್‌ಕಾರ್ಟ್‌

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X