ಸಪ್ಟೆಂಬರ್ 4 ರಂದು ಮೋಟೋರೋಲಾ ಈವೆಂಟ್

By Shwetha
|

ಟೆಕ್ ಕ್ಷೇತ್ರಕ್ಕೆ ಸಪ್ಟೆಂಬರ್ ಎನ್ನುವುದು ವಿರಾಮವಲ್ಲದ ತಿಂಗಳಾಗಿದೆ. ಸ್ಯಾಮ್‌ಸಂಗ್ ಹಾಗೂ ಆಪಲ್‌ನಂತಹ ದೊಡ್ಡ ಕಂಪೆನಿಗಳು, ತಮ್ಮ ಮುಂಬರಲಿರುವ ಆಕರ್ಷಕ ಡಿವೈಸ್‌ಗಳನ್ನು ಈ ತಿಂಗಳಲ್ಲೇ ಲಾಂಚ್ ಮಾಡುತ್ತಿದ್ದು ಈಗ ಇದೇ ಸಾಲಿಗೆ ಇನ್ನೊಂದು ದೊಡ್ಡ ತಲೆಯನ್ನು ಸೇರಿಸಲಾಗುತ್ತಿದೆ.

ಮೋಟೋರೋಲಾ ತನ್ನ ಈವೆಂಟ್ ಅನ್ನು ಸಪ್ಟೆಂಬರ್ 4 ರಂದು ಚಿಕಾಗೋದಲ್ಲಿ ನಡೆಸುವ ಯೋಜನೆಯನ್ನು ಹಾಕಿಕೊಂಡಿದೆ. ತನ್ನ ಹೆಚ್ಚು ನಿರೀಕ್ಷಿತ ಮೋಟೋ 360 ಯನ್ನು ಇಲ್ಲಿ ಕಂಪೆನಿ ಘೋಷಿಸಲಿದ್ದು ಇದು ಆಂಡ್ರಾಯ್ಡ್ ಪವರ್ ಉಳ್ಳ ಸ್ಮಾರ್ಟ್‌ಫೋನ್‌ನ ಮುಂದಿನ ತಲೆಮಾರಿಗೆ ಒಂದು ಉತ್ತಮ ಕೊಡುಗೆ ಎಂದೆನಿಸಲಿದೆ.

ಮೋಟೋ ಜಿ ಆಹ್ವಾನಿಸಿರುವ ಪ್ರೆಸ್ ಸಮಾರಂಭದಲ್ಲಿ ಈ ವಾಚ್‌ನ ಶಕ್ತಿಯು ನಿಜಕ್ಕೂ ಈಗಾಗಲೇ ಲಾಂಚ್ ಆಗಿರುವ ಮೋಟೋ ಜಿ ಮತ್ತು ಮೋಟೋ ಎಕ್ಸ್ ಖ್ಯಾತಿಯನ್ನು ತನ್ನ ತಲೆಗೇರಿಸಿಕೊಳ್ಳುವುದು ನಿಶ್ಚಿತವಾಗಿದೆ ಎಂಬುದು ತಿಳಿದುಬಂದಿದೆ. ಇದೇ ಸಮಯದಲ್ಲಿ ಬ್ಲ್ಯೂಟೂತ್ ಹೆಡ್‌ಸೆಟ್ ಅನ್ನು ಕೂಡ ಕಂಪೆನಿ ಲಾಂಚ್ ಮಾಡುವ ನಿರೀಕ್ಷೆಯಲ್ಲಿದೆ.

ಸದ್ಯದಲ್ಲೇ ಲೆನೊವೊ ಗುಂಪಿನ ಭಾಗವಾಗಲಿರುವ ಮೋಟೋರೋಲಾ ತನ್ನ ಗ್ರಾಹರಲ್ಲಿ ತಾನು ಲಾಂಚಿಂಗ್ ಮಾಡುತ್ತಿರುವ ಡಿವೈಸ್ ಕುರಿತು ಸಾಕಷ್ಟು ಆಕರ್ಷಕ ಅಂಶಗಳನ್ನು ತಿಳಿಸಬೇಕಾಗಿದೆ.

ಹಾಗಿದ್ದರೆ ಮೋಟೋರೋಲಾ ಪ್ರಸ್ತುತಪಡಿಸಲಿರುವ 5 ಆಕರ್ಷಕ ಡಿವೈಸ್‌ಗಳನ್ನು ಇಂದಿನ ಲೇಖನದಲ್ಲಿ ನೋಡೋಣ.

#1

#1

Moto 360 ಯ ರೀಟೈಲ್ ಲಭ್ಯತೆಯ ಕುರಿತು ಮೋಟೋರೋಲಾ ತನ್ನ ಲಾಂಚಿಂಗ್‌ನಲ್ಲಿ ತಿಳಿಸಲಿದೆ. ಇದು ವೃತ್ತಾಕಾರದಲ್ಲಿದ್ದು, ಇದು ಎಲ್‌ಜಿ ಜಿ ವಾಚ್ ಮತ್ತು ಸ್ಯಾಮ್‌ಸಂಗ್‌ ಗೇರ್‌ ಲೈವ್‌ಗೆ ಹೋಲಿಸಿದಾಗ ಮನಸೆಳೆಯುವ ರೀತಿಯಲ್ಲಿದೆ. ಇದು ಎಲ್ಲಾ ಆಂಡ್ರಾಯ್ಡ್ 4.3, ಆಂಡ್ರಾಯ್ಡ್ 4.4 ಮತ್ತು ಎಲ್ ಹ್ಯಾಂಡ್‌ಸೆಟ್ಸ್ ಹಾಗೂ ಟ್ಯಾಬ್ಲೆಟ್‌ಗಳಲ್ಲಿ ಹೊಂದಿಕೆಯಾಗಲಿದೆ.

#2

#2

ಮೋಟೋ X+1 ಅನ್ನು ಮುಂದಿನ ತಿಂಗಳಲ್ಲಿ ಕಂಪೆನಿ ಲಾಂಚ್ ಮಾಡಲಿದೆ. ಇದು 5.2 ಇಂಚಿನ FHD ಡಿಸ್‌ಪ್ಲೇಯನ್ನು ಹೊಂದಿದ್ದು, 2.5GHz ಸ್ನ್ಯಾಪ್‌ಡ್ರಾಗನ್ 801 ಪ್ರೊಸೆಸರ್, 2 ಜಿಬಿ RAM ಮತ್ತು 12MP ರಿಯರ್ ಕ್ಯಾಮೆರಾ, 2MP ಫ್ರಂಟ್ ಫೇಸಿಂಗ್ ಕ್ಯಾಮೆರಾವನ್ನು ಹೊಂದಿದೆ. ಇದರಲ್ಲಿ ಅತ್ಯಾಧುನಿಕ 4.4 ಕಿಟ್‌ಕ್ಯಾಟ್ ಚಾಲನೆಯಾಗಲಿದ್ದು ಇದನ್ನು ಅಲ್ಯುಮಿನಿಯಮ್‌ನಿಂದ ತಯಾರಿಸಲಾಗಿದೆ.

#3

#3

ಮೋಟೋ ಜಿ 2 ಗೆ ಮೋಟೋರೋಲಾ ಹೆಚ್ಚುವರಿ ಪ್ರಚಾರವನ್ನು ನೀಡಲಿದೆ. ಇದು 5 ಇಂಚಿನ 720 HD ಡಿಸ್‌ಪ್ಲೇಯೊಂದಿಗೆ ಬಂದಿದ್ದು, 1.2GHz ಕ್ವಾಡ್ ಕೋರ್ ಪ್ರೊಸೆಸರ್ ಇದರಲ್ಲಿದೆ. ಇದರ RAM ಶಕ್ತಿ 1 ಜಿಬಿಯಾಗಿದ್ದು, 8MP ರಿಯರ್ ಕ್ಯಾಮೆರಾ ಮೈಕ್ರೋ ಎಸ್‌ಡಿ ಕಾರ್ಡ್ ಸ್ಲಾಟ್ ಅನ್ನು ಡಿವೈಸ್ ಹೊಂದಿದೆ. ಇದರ ಬೆಲೆ ರೂ 19,000 ವೆಂದು ಅಂದಾಜಿಸಲಾಗಿದೆ. ಇದು ಮೋಟೋ ಜಿಗಿಂತ ಕೊಂಚ ದುಬಾರಿ ಎಂದೆನಿಸಿದೆ.

#4

#4

ಗೂಗಲ್ ನೆಕ್ಸಸ್ 6 ಅನ್ನು ಮೋಟೋರೋಲಾ ಶಾಮು ಎಂದು ಕೂಡ ಕರೆಯಲಾಗಿದ್ದು, ನೆಕ್ಸಸ್ 6 ಯೋಜನೆಯನ್ನು ಮೋಟೋರೋಲಾ ಕೈಗೆತ್ತಿಕೊಳ್ಳಲಿದೆ ಎಂಬುದು ತಿಳಿದು ಬಂದಿರುವ ಮಾಹಿತಿಯಾಗಿದೆ. ನೆಕ್ಸಸ್ 6, 5.2 ಇಂಚಿನ QHD ಡಿಸ್‌ಪ್ಲೇಯೊಂದಿಗೆ ಬಂದಿದ್ದು, ಸ್ನ್ಯಾಪ್‌ಡ್ರಾಗನ್ 805 ಪ್ರೊಸೆಸರ್ ಮತ್ತು 3 ಜಿಬಿ RAM ಅನ್ನು ಡಿವೈಸ್ ಹೊಂದಿದೆ. ಆಂಡ್ರಾಯ್ಡ್ ಎಲ್ ಮೊಬೈಲ್ ಓಎಸ್ ಇದರಲ್ಲಿ ಚಾಲನೆಯಾಗಲಿದೆ.

#5

#5

ಈ ವರ್ಷದ ಮಧ್ಯಭಾಗದಲ್ಲಿ ದೊಡ್ಡ ಪರದೆಯ ಫ್ಯಾಬ್ಲೆಟ್ ಅನ್ನು ಮೋಟೋರೋಲಾ ಲಾಂಚ್ ಮಾಡಲಿದ್ದು ಇದರ ವಿವರಗಳು ಇನ್ನೂ ಲಭ್ಯವಾಗಿಲ್ಲ, ಆದರೆ ಮೋಟೋರೋಲಾ ಎಕ್ಸ್ ಪ್ಲೇ 6.3 ಇಂಚಿನ ಡಿಸ್‌ಪ್ಲೇಯನ್ನು ಹೊಂದಿದೆ. ಇದರೊಂದಿಗೆ ಆಪಲ್ ಕೂಡ ಈ ವರ್ಷದ ನಂತರ ದೊಡ್ಡ ಪರದೆಯ ಫ್ಯಾಬ್ಲೆಟ್‌ನ ತಯಾರಿಯಲ್ಲಿದೆ.

Best Mobiles in India

English summary
This article tells about Motorola Event Confirmed for September 4 All That You Can Expect.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X