ಮೋಟರೋಲಾದ ಗುಣಮಟ್ಟದ ಕಡಿಮೆ ಬೆಲೆಯ ಸ್ಮಾರ್ಟ್‌ಫೋನ್‌ ದೇಶೀಯ ಮಾರುಕಟ್ಟೆಗೆ ಬಿಡುಗಡೆ

By Ashwath
|

ಮೋಟರೋಲಾ ಕಂಪೆನಿಯ ಎಚ್‌ಡಿ ಸ್ಕ್ರೀನ್‌ ಹೊಂದಿರುವ ಕಡಿಮೆ ಬೆಲೆಯ ಮೋಟೋ ಜಿ ಸ್ಮಾರ್ಟ್‌ಫೋನ್‌ ಭಾರತದ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿದೆ.8GB ಆಂತರಿಕ ಮೆಮೊರಿಯ ಸ್ಮಾರ್ಟ್‌ಫೋನ್‌ಗೆ 12,999 ರೂಪಾಯಿ,16GB ಆಂತರಿಕ ಮೆಮೊರಿಯ ಸ್ಮಾರ್ಟ್‌ಫೋನ್‌ಗೆ 14,499 ರೂಪಾಯಿನಿಗದಿ ಮಾಡಿದೆ.

ಗೂಗಲ್‌ ಯಾವಾಗಲೂ ಕಡಿಮೆ ಬೆಲೆಯ ಸ್ಮಾರ್ಟ್‌ಫೋನ್‌ಗೆ ಉತ್ತೇಜನ ನೀಡುತ್ತಿದ್ದು,ಕಡಿಮೆ ಬೆಲೆಯಲ್ಲಿ ಗುಣಮಟ್ಟದ ಸ್ಮಾರ್ಟ್‌ಫೋನ್‌ ತಯಾರಿಸಬಹುದು ಎಂದು ಮಾರ್ಚ್‌ನಲ್ಲಿ ಭಾರತದ ಪ್ರವಾಸದ ಸಂದರ್ಭದಲ್ಲಿ ಗೂಗಲ್‌ ಕಾರ್ಯನಿರ್ವಾಹಕ ಮುಖ್ಯಸ್ಥ ಎರಿಕ್ ಸ್ಕಿಮಿಟ್‌ ಹೇಳಿದ್ದರು.ಅದರಂತೆ ಗೂಗಲ್‌ ತನ್ನ ತೆಕ್ಕೆಯಲ್ಲಿದ್ದ ಸಂದರ್ಭ‌ದಲ್ಲಿ ಮೋಟರೋಲಾ ಕಂಪೆನಿಯಿಂದ ಕಡಿಮೆ ಬೆಲೆಯ ಎರಡು ಸ್ಮಾರ್ಟ್‌ಫೋನ್‌ಗಳನ್ನು ವಿಶ್ವದ ಮಾರುಕಟ್ಟೆಗೆ ಬಿಡುಗಡೆ ಮಾಡಿತ್ತು.

ಮೋಟೋ ಜಿ ಸಿಂಗಲ್‌ ಸಿಮ್‌ನಲ್ಲಿ ವಿಶ್ವದ ಬೇರೆ ದೇಶಗಳಲ್ಲಿ ಬಿಡುಡಗೆಯಾಗಿದ್ದರೂ ಭಾರತ ಮತ್ತು ಬ್ರಝಿಲ್‌ನಲ್ಲಿ ಡ್ಯುಯಲ್‌ ಸಿಮ್‌ನಲ್ಲೂ ಮೋಟೋ ಜಿ ಬಿಡುಗಡೆ ಮಾಡಲಿದ್ದೇವೆ ಎಂದು ಕಳೆದ ನವೆಂಬರ್‌ನಲ್ಲಿ ಮೋಟರೋಲಾ ಕಂಪೆನಿಗೆ ಸಲಹೆ ನೀಡುವ Guy Kawasaki ಟ್ವೀಟರ್‌ನಲ್ಲಿ ಟ್ವೀಟ್‌ ಮಾಡುವ ಮೂಲಕ ಈ ವಿಷಯ ತಿಳಿಸಿದ್ದರು.ಅದೇ ರೀತಿಯಾಗಿ ಭಾರತದಲ್ಲಿ ಡ್ಯುಯಲ್‌ ಸಿಮ್ ಎರಡು ಆಂತರಿಕ ಮೆಮೊರಿಯಲ್ಲಿ ಬಿಡುಗಡೆಯಾಗಿದೆ.

ಮೋಟೋ ಜಿ
ವಿಶೇಷತೆ:
ಡ್ಯುಯಲ್ ಸಿಮ್‌
4.5 ಇಂಚಿನ ಕೆಪಾಸಿಟಿವ್‌ ಟಚ್‌ಸ್ಕ್ರೀನ್‌(1280 x 720 ಪಿಕ್ಸೆಲ್‌, 329ಪಿಪಿಐ)
ಆಂಡ್ರಾಯ್ಡ್‌ 4.3 ಜೆಲ್ಲಿ ಬೀನ್‌ ಓಎಸ್‌
1.2 GHz ಕ್ವಾಡ್‌ ಕೋರ್‌ ಪ್ರೊಸೆಸರ್‌
Adreno 305 ಗ್ರಾಫಿಕ್ ಪ್ರೊಸೆಸರ್‌
1GB RAM
8/16 GB ಆಂತರಿಕ ಮೆಮೊರಿ
5 ಎಂಪಿ ಹಿಂದುಗಡೆ ಕ್ಯಾಮೆರಾ
1.3 ಎಂಪಿ ಮುಂದುಗಡೆ ಕ್ಯಾಮೆರಾ
3ಜಿ,ವೈಫೈ,ಬ್ಲೂಟೂತ್‌,ಜಿಪಿಎಸ್‌,ಗ್ಲೋನಾಸ್‌,ಮೈಕ್ರೋ ಯುಎಸ್‌ಬಿ
2070 mAh ಬ್ಯಾಟರಿ

ಮೋಟರೋಲಾಕಡಿಮೆ ಬೆಲೆಯಲ್ಲಿ ಸ್ಮಾರ್ಟ್‌ಫೋನ್‌ ಬಿಡುಗಡೆ ಮಾಡಿದ್ದು,ಕಡಿಮೆ ಬೆಲೆಯಲ್ಲಿ ಸ್ಮಾರ್ಟ್‌ಫೋನ್‌ ತಯಾರಿಸುವ ಭಾರತ ಮತ್ತು ಚೀನಾದ ಕಂಪೆನಿಗಳಿಗೆ ಮಾರುಕಟ್ಟೆಯಲ್ಲಿ ಹೊಡೆತ ಬೀಳುವ ಸಾಧ್ಯತೆ ಇದೆ.ಮುಂದಿನ ಪುಟದಲ್ಲಿ ಯಾವೆಲ್ಲಾ ಕಾರಣಕ್ಕೆ ಭಾರತದ ಮಾರುಕಟ್ಟೆಯಲ್ಲಿ ಸ್ಮಾರ್ಟ್‌ಫೋನ್‌‌ ಕ್ಲಿಕ್‌ ಆಗಬಹುದು ಎನ್ನುವುದಕ್ಕೆ ಕೆಲವು ಕಾರಣಗಳನ್ನು ನೀಡಲಾಗಿದೆ.

ಮೋಟೋ ಜಿ ಸ್ಮಾರ್ಟ್‌ಫೋನಿನ ಆಕರ್ಷ‌ಕ ಚಿತ್ರಗಳಿಗಾಗಿ ಇಲ್ಲಿ ಕ್ಲಿಕ್‌ ಮಾಡಿ: ಗ್ಯಾಲರಿ

ಇದನನ್ನು ಓದಿ: ಮೋಟರೋಲಾ ಮಾರಾಟ:ಗೂಗಲ್‌,ಲೆನೊವೊ,ಮೋಟರೋಲಾ ಕಂಪೆನಿಗಳಿಗೆ ಏನು ಲಾಭ?

1

1


ಮೋಟೋ ಜಿ ಆಂಡ್ರಾಯ್ಡ್‌ ಜೆಲ್ಲಿ ಬೀನ್ 4.3 ಓಎಸ್‌ನಲ್ಲಿ ಬಿಡುಗಡೆಯಾಗಿದ್ದರೂ ಕಿಟ್‌ಕ್ಯಾಟ್‌ ಓಎಸ್‌ಗೆ ಅಪ್‌ಗ್ರೇಡ್‌ ಮಾಡಬಹುದಾಗಿದೆ.ಗೂಗಲ್‌ ನೆಕ್ಸಸ್‌ ಸ್ಮಾರ್ಟ್‌ಫೋನ್‌ ಬಿಟ್ಟರೆ ಮಾರುಕಟ್ಟೆಯಲ್ಲಿ ಕಡಿಮೆ ಬೆಲೆಯಲ್ಲಿ ಬಿಡುಗಡೆಯಾಗಿ ಕಿಟ್‌ಕ್ಯಾಟ್‌ ಓಎಸ್‌ಗೆ ಅಪ್‌ಗ್ರೇಡ್‌ ಆಗುವ ಮೊದಲ ಫೋನ್‌ ಇದಾಗಿದೆ.

2

2


ಮೊಟರೋಲಾ ಮಳೆ ಮತ್ತು ನೀರಿನಿಂದ ಈ ಸ್ಮಾರ್ಟ್‌‌‌‌‌‌‌ಫೋನ್‌ ಹಾಳಾಗದಂತೆ ವಿಶೇಷ ನ್ಯಾನೋ ಲೇಪನ ಬಳಸಿ ಈ ಸ್ಮಾರ್ಟ್‌ಫೋನ್‌ನ್ನು ತಯಾರಿಸಿದೆ.ದುಬಾರಿ ಬೆಲೆಯ ಬಹುತೇಕ ಸ್ಮಾರ್ಟ್‌ಫೋನ್‌ಗಳು ಈ ವಿಶೇಷತೆಗಳನ್ನು ಹೊಂದಿದ್ದರೂ ಕಡಿಮೆ ಬೆಲೆಯ ಸ್ಮಾರ್ಟ್‌ಫೋನ್‌ಗಳಿಗೆ ಈ ವಿಶೇಷತೆ ಇರುವುದಿಲ್ಲ.

3

3


ಬ್ಯಾಕ್‌ ಪ್ಯಾನೆಲ್‌‌ನ್ನು ತೆಗೆಯಬಹುದು. ಬ್ಯಾಟರಿ ಕವರ್‌ ಮತ್ತು ಫ್ಲಿಪ್‌ ಕವರ್‌ಗಳು ಏಳು ಬಣ್ಣದಲ್ಲಿ ಲಭ್ಯವಿದ್ದು ಬೇಕಾದ ಬಣ್ಣದಲ್ಲಿ ಜೋಡಿಸಬಹುದು. ಇನ್ನು ಗ್ರಿಪ್‌ ಶೆಲ್‌ ಐದು ಬಣ್ಣದಲ್ಲಿದ್ದು ಬೇಕಾದ ಬಣ್ಣದ ಗ್ರಿಪ್‌ ಶೆಲ್‌ನ್ನು ಹಾಕಬಹುದಾಗಿದೆ.

4

4


ಈ ಸ್ಮಾರ್ಟ್‌ಫೋನ್‌ ಕೊರತೆ ಏನೆಂದರೆ ಹೆಚ್ಚುವರಿ ಮೆಮೊರಿಗೆ ಎಸ್‌ಡಿ ಕಾರ್ಡ್‌ ಸೌಲಭ್ಯ ನೀಡಿಲ್ಲ. ಆದರೂ ಬಳಕೆದಾರರಿಗೆ 8 ಮತ್ತು16 GBಯ ಎರಡು ಆಂತರಿಕ ಮೆಮೊರಿಯಲ್ಲಿ ಖರೀದಿಸುವ ಸ್ವಾತಂತ್ಯ್ರ ನೀಡಿದೆ. ಹೆಚ್ಚುವರಿ ಮೆಮೊರಿಗೆ ಗೂಗಲ್ ಡ್ರೈವ್‌ ಮೆಮೊರಿ ಸಂಗ್ರಹಿಸಲು ಅವಕಾಶ ನೀಡಿದ್ದು,ಡ್ರೈವ್‌ನಲ್ಲಿ ಎರಡು ವರ್ಷಗಳ ಕಾಲ 50GB ಡೇಟಾವನ್ನು ಉಚಿತವಾಗಿ ಸಂಗ್ರಹಿಸಬಹುದು ಎಂದು ಹೇಳಿದೆ.ಈಗಾಗಲೇ ಗೂಗಲ್‌ ತನ್ನ ಬಳಕೆದಾರರಿಗೆ ಉಚಿತವಾಗಿ 15GB ಡೇಟಾವನ್ನು ಗೂಗಲ್ ಡ್ರೈವ್‌ನಲ್ಲಿ ಸಂಗ್ರಹಿಸಲು ಅನುಮತಿ ನೀಡಿದೆ. ಹೀಗಾಗಿ ಈ ಸ್ಮಾರ್ಟ್‌ಫೋನ್‌ ಖರೀದಿಸಿದ ಬಳಕೆದಾರರು 65GB ಡೇಟಾವನ್ನು ಗೂಗಲ್‌ ಡ್ರೈವ್‌ನಲ್ಲಿ ಸಂಗ್ರಹಿಸಬಹುದಾಗಿದೆ.

5

5


ಬಹುತೇಕ ದೇಶೀಯ ಮತ್ತು ಚೈನಾದ ಕಂಪೆನಿಗಳು ಮೀಡಿಯಾ ಟೆಕ್‌ ಕಂಪೆನಿಯ ಪ್ರೊಸೆಸರ್‌‌ಗಳನ್ನು ಹೊಂದಿರುವ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡುತ್ತವೆ. ಆದರೆ ಮೊಟರೋಲಾ ಕಡಿಮೆ ಬೆಲೆಯಲ್ಲಿ 1GB RAM, 1.2 GHz Qualcomm Snapdragon 400 ಕ್ವಾಡ್‌ ಕೋರ್‌ ಪ್ರೊಸೆಸರ್‌,Adreno 305 ಗ್ರಾಫಿಕ್ ಪ್ರೊಸೆಸರ್‌ನ್ನು ತನ್ನ ಮೊಟೋ ಜಿಗೆ ನೀಡಿದೆ.

6

6


ದೇಶದಲ್ಲಿ ಅತಿ ಹೆಚ್ಚು ಖರೀದಿಯಾಗುತ್ತಿರುವುದು ಹತ್ತು,ಇಪ್ಪತ್ತು ಸಾವಿರದೊಳಗಿನ ಫೋನ್‌ಗಳು.ಈ ಕಾರಣಕ್ಕಾಗಿ ದೇಶದ ನಂಬರ್‍. 2 ಮೈಕ್ರೋಮ್ಯಾಕ್ಸ್‌ ಕಂಪೆನಿ ಇದುವರೆಗೂ ಇಪ್ಪತ್ತು ಸಾವಿರಕ್ಕಿಂತ ಹೆಚ್ಚಿನ ಬೆಲೆಯಿರುವ ಒಂದೇ ಒಂದು ಸ್ಮಾರ್ಟ್‌ಫೋನ್‌ ಬಿಡುಗಡೆ ಮಾಡಿಲ್ಲ.ಹೀಗಾಗಿ ಕಿಟ್‌ಕ್ಯಾಟ್‌ ಓಎಸ್‌,ಉತ್ತಮ ಪ್ರೊಸೆಸರ್‌,ಕಡಿಮೆ ಬೆಲೆಯಲ್ಲಿ ಹೊಸ ಸ್ಮಾರ್ಟ್‌ಫೋನ್‌ ಖರೀದಿಸಬೇಕು ಎಂದು ಯೋಚಿಸುತ್ತಿದ್ದವರನ್ನು ಈ ಸ್ಮಾರ್ಟ್‌‌ಫೋನ್‌ ತನ್ನತ್ತ ಸೆಳೆಯುವುದರಲ್ಲಿ ಆಶ್ಚರ್ಯ‌ವಿಲ್ಲ.

7

7


ಕಾರ್ನಿಂಗ್‌ ಗೊರಿಲ್ಲಾ ಗ್ಲಾಸ್‌ 4.5 ಇಂಚಿನ ಕೆಪಾಸಿಟಿವ್‌ ಟಚ್‌ಸ್ಕ್ರೀನ್‌(1280 x 720 ಪಿಕ್ಸೆಲ್‌, 329ಪಿಪಿಐ) ಮೋಟೋ ಜಿ ಹೊಂದಿದೆ.

8

8


ಎಲ್‌‌ಇಡಿ ಫ್ಲ್ಯಾಶ್‌ ಹೊಂದಿರುವ ಹಿಂದುಗಡೆ 5 ಎಂಪಿ ಕ್ಯಾಮೆರಾವನ್ನು ಸ್ಮಾರ್ಟ್‌ಫೋನ್‌ ಹೊಂದಿದೆ. 4X ಡಿಜಿಟಲ್‌ ಝೂಮ್‌ ಮಾಡಬಹದಾದ ಕ್ಯಾಮೆರಾದಲ್ಲಿ ಸ್ಲೋ ಮೋಷನ್‌ ವಿಡಿಯೋ,ಬರ್ಸ್ಟ್ ಮೂಡ್‌,ಆಟೋ ಎಚ್‌ಡಿಆರ್‌,ಪನೋರಮಾ,ಟ್ಯಾಪ್‌ ಟು ಫೋಕಸ್‌ ವಿಶೆಷತೆ ಇದೆ.1.3 ಎಂಪಿ ಮುಂದುಗಡೆ ಕ್ಯಾಮೆರಾವಿದ್ದು, ಹಿಂದೆ ಮತ್ತು ಮುಂದೆ 720p ಎಚ್‌ಡಿ ವಿಡಿಯೋ ರೆಕಾರ್ಡ್‌ ಮಾಡಬಹುದಾಗಿದೆ.

9

9


ಸ್ಮಾರ್ಟ್‌ಫೋನ್‌ 2070 mAh ಬ್ಯಾಟರಿ ಹೊಂದಿದ್ದು,ಎಕ್ಸಲರೋ ಮೀಟರ್‌,ಪ್ರಾಕ್ಸಿಮಿಟಿ,ಕಂಪಾಸ್‌ ಸೆನ್ಸರ್‌ಗಳನ್ನು ಈ ಸ್ಮಾರ್ಟ್‌ಫೋನ್‌ ಹೊಂದಿದೆ.

10

10


129.9ಮಿ.ಮೀ*65.9*ಮಿ.ಮೀ*11.6ಮಿ.ಮೀ ಗಾತ್ರವನ್ನು ಸ್ಮಾರ್ಟ್‌ಫೋನ್‌ ಹೊಂದಿದ್ದು, 143 ಗ್ರಾಂ ತೂಕ ಹೊಂದಿದೆ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X