'ಮೊಟೊರೊಲಾ ಮೊಟೊ ಎಂ' ಭಾರತದಲ್ಲಿ ಲಾಂಚ್‌: ತಿಳಿಯಲೇಬೇಕಾದ 5 ಅಂಶಗಳು!

ಮೊಟೊರೊಲಾ ಮೊಟೊ ಎಂ ಕಂಪನಿಯ ಮೊಟ್ಟ ಮೊದಲ ಮೆಟಲ್‌ ಬಾಡಿ ಡಿವೈಸ್.

By Suneel
|

ಲೆನೊವೊ ಮಾಲೀಕತ್ವದ ಮೊಟೊರೊಲಾ ಇದೇ ತಿಂಗಳಲ್ಲಿ(ನವೆಂಬರ್ 2016) ತನ್ನ 'ಮೊಟೊರೊಲಾ ಮೊಟೊ ಎಂ(Motorola Moto M)' ಸ್ಮಾರ್ಟ್‌ಫೋನ್‌ ಅನ್ನು ಚೀನಾದಲ್ಲಿ ಅನಾವರಣ ಮಾಡಿತು. ಈ ಸ್ಮಾರ್ಟ್‌ಫೋನ್‌ನ ವಿಶೇಷತೆ ಎಂದರೆ ಮೊಟೊ ಸ್ಮಾರ್ಟ್‌ಫೋನ್‌ನ ಇದೇ ಮೊದಲ ಡಿವೈಸ್ ಮೆಟಲ್‌ ಬಾಡಿಯೊಂದಿಗೆ, ಹಿಂಭಾಗ ಫಿಂಗರ್‌ಪ್ರಿಂಟ್ ಸೆನ್ಸಾರ್ ಹೊಂದಿದೆ.

'ಮೊಟೊರೊಲಾ ಮೊಟೊ ಎಂ' ಭಾರತದಲ್ಲಿ ಲಾಂಚ್‌: ತಿಳಿಯಲೇಬೇಕಾದ 5 ಅಂಶಗಳು!

ಕಳೆದ ಕೆಲವು ದಿನಗಳ ಹಿಂದಷ್ಟೇ ಮೊಟೊರೊಲಾ ಇಂಡಿಯಾ ತನ್ನ ಅಧಿಕೃತ ಟ್ವಿಟರ್ ಖಾತೆಯಿಂದ 'ಮೊಟೊ ಎಂ' ಬ್ಯಾಗ್ರೌಂಡ್ ಇಮೇಜ್‌ ಅನ್ನು ತೋರಿಸಿ ಶೀಘ್ರದಲ್ಲಿ ಭಾರತಕ್ಕೆ ಬರಲಿದೆ ಎಂದು ಟ್ವೀಟ್ ಮಾಡಿತ್ತು. ಆದರೆ ಕಂಪನಿಯು ಮೊಟೊ ಎಂ ಡಿವೈಸ್ ಭಾರತಕ್ಕೆ ಬರುವ ಅಧಿಕೃತ ದಿನಾಂಕವನ್ನು ಮಾತ್ರ ಕಂಪನಿ ಬಹಿರಂಗಪಡಿಸಿಲ್ಲ. ಭಾಗಶಃ ಡಿಸೆಂಬರ್ ಎರಡನೇ ವಾರದಲ್ಲಿ ಲಾಂಚ್ ಮಾಡುವ ನಿರೀಕ್ಷೆ ಇದೆ. 'ಮೊಟೊರೊಲಾ ಮೊಟೊ ಎಂ' ಆಫರ್‌ ಮಾಡುವ ಫೀಚರ್‌ಗಳು ಏನು ಎಂಬುದನ್ನು ಮಿಸ್‌ ಮಾಡದೇ ಓದಿರಿ.

15,800 ರೂಗೆ, 16MP ಸೆಲ್ಫಿ ಕ್ಯಾಮೆರಾ/3GB RAM 'ಓಪ್ಪೋ ಎ57' ಲಾಂಚ್

 5.5 ಇಂಚಿನ ಅಮೋಲ್ಡ್ ಡಿಸ್‌ಪ್ಲೇ

5.5 ಇಂಚಿನ ಅಮೋಲ್ಡ್ ಡಿಸ್‌ಪ್ಲೇ

'ಮೊಟೊರೊಲಾ ಮೊಟೊ ಎಂ' 5.5 ಇಂಚಿನ ಸೂಪರ್ ಅಮೋಲ್ಡ್ ಡಿಸ್‌ಪ್ಲೇ ಜೊತೆಗೆ ಕರ್ವ್‌ಡ್‌ 2.5D ಗ್ಲಾಸ್ ಸ್ಕ್ರೀನ್‌ ಹೊಂದಿದೆ. ಡಿವೈಸ್‌ ಹಿಂಭಾಗದಲ್ಲಿ ಇಂಡೆಕ್ಸ್ ಫಿಂಗರ್‌ಗೆ ಎಟಕುವ ಫಿಂಗರ್‌ಪ್ರಿಂಟ್ ಸೆನ್ಸಾರ್ ಹೊಂದಿದೆ.

 ಹೀಲಿಯೊ ಪಿ15 ಚಿಪ್‌ಸೆಟ್ ಚಾಲಿತವಾಗಿದೆ

ಹೀಲಿಯೊ ಪಿ15 ಚಿಪ್‌ಸೆಟ್ ಚಾಲಿತವಾಗಿದೆ

ಮೊಟೊ ಎಂ, ಮಿಡಿಯಾಟೆಕ್ ಹೀಲಿಯೊ ಪಿ15 ಚಿಪ್‌ಸೆಟ್, ಆಕ್ಟಾ-ಕೋರ್ 2.2GHz ಚಿಪ್‌ ಹೊಂದಿದೆ. ಮಾಲಿ T860 MP2 ಜಿಪಿಯು, 4GB RAM ಹೊಂದಿದೆ.

ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

16MP ಹಿಂಭಾಗ ಕ್ಯಾಮೆರಾ

16MP ಹಿಂಭಾಗ ಕ್ಯಾಮೆರಾ

ಮೊಟೊರೊಲಾ ಮೊಟೊ ಎಂ 16GB ಹಿಂಭಾಗ ಕ್ಯಾಮೆರಾ ಹೊಂದಿದ್ದು, PDAF ಮತ್ತು ಡ್ಯುಯಲ್ ಎಲ್‌ಇಡಿ ಫ್ಲ್ಯಾಶ್ ಸಪೋರ್ಟ್ ಹೊಂದಿದೆ. 8MP ಮುಂಭಾಗ ಕ್ಯಾಮೆರಾ ಜೊತೆಗೆ 85 ಡಿಗ್ರಿ ವೈಡ್ ಆಂಗಲ್ ಲೆನ್ಸ್ ಹೊಂದಿದೆ.

 ಲೆನೊವೋ ವೈಬ್ UI

ಲೆನೊವೋ ವೈಬ್ UI

ಇದೇ ಮೊದಲ ಬಾರಿಗೆ ಮೊಟೊರೊಲಾ ಸ್ಮಾರ್ಟ್‌ಫೋನ್ ನಾನ್‌-ಸ್ಟಾಕ್‌ UI(User Interface) ಶಿಪ್ಪಿಂಗ್ ಪಡೆಯುತ್ತಿದೆ. ಮೊಟೊರೊಲಾ ಮೊಟೊ ಎಂ, ಆಂಡ್ರಾಯ್ಡ್ 6.0.1 ಮಾರ್ಷ್‌ಮಲ್ಲೊ ಚಾಲಿತವಾಗಿದ್ದು, ಲೆನೊವೊ ವೈಬ್ UI ಹೊಂದಿದೆ.

3050mAh  ಬ್ಯಾಟರಿ ಮತ್ತು ಡೋಲ್‌ಬೈ ಸ್ಟೀರಿಯೋ ಸ್ಪೀಕರ್‌ಗಳು

3050mAh ಬ್ಯಾಟರಿ ಮತ್ತು ಡೋಲ್‌ಬೈ ಸ್ಟೀರಿಯೋ ಸ್ಪೀಕರ್‌ಗಳು

'ಮೊಟೊರೊಲಾ ಮೊಟೊ ಎಂ' 3050mAh ಬ್ಯಾಟರಿ ಸಾಮರ್ಥ್ಯದೊಂದಿಗೆ ಬಂದಿದ್ದು, ಸಂಪೂರ್ಣ ಒಂದು ದಿನ ಕಾರ್ಯಕ್ಷಮತೆ ಪೂರೈಸಬಲ್ಲದು. ಲೆನೊವೋ ಎರಡು ಡೋಲ್‌ಬೈ ಅಟ್ಮೋಸ್ ಸ್ಟೀರಿಯೊ ಸ್ಪೀಕರ್‌ಗಳನ್ನು ಆಡ್‌ ಮಾಡಿದೆ.

ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Best Mobiles in India

English summary
Motorola Moto M Teased Ahead of Launch in India: 5 Things You Should Know. To know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X