ವಿಂಡೋಸ್‌ 8 ಚಾಲಿತ ಹೊಸ ಲೂಮಿಯಾ 920

By Super
|
ವಿಂಡೋಸ್‌ 8 ಚಾಲಿತ ಹೊಸ ಲೂಮಿಯಾ 920

ಸ್ಮಾರ್ಟ್ಫೋನ್ ಮಾರುಕಟ್ಟೆಯಲ್ಲಿ ತನ್ನಯ ಹಿಡಿತ ಬಿಗಿ ಪಡಿಸಿಕೊಳ್ಳುವ ಸಲುವಾಗಿ ಟೆಲಿಕಾಮ್ ದಿಗ್ಗಜ ನೊಕಿಯಾ ತನ್ನಯ ನೂತನ ನೋಕಿಯಾ ಲೂಮಿಯಾ 920 ವಿಂಡೋಸ್‌ 8 ಆಪರೇಟಿಂಗ್ ಸಿಸ್ಟಂ ಚಾಲಿತ ಸ್ಮಾರ್ಟ್ಫೋನ್ ಬಿಡುಗಡೆ ಮಾಡಿದೆ.

ಸ್ಮಾರ್ಟ್ಫೋನ್ ಮಾರುಕಟ್ಟೆಯಲ್ಲಿ ಪ್ರಬಲ ಪೈಪೋಟಿ ಎದುರಿಸ ಬೇಕಾಗಿರುವ ನೋಕಿಯಾ ಲೂಮಿಯಾ 920 ಯಲ್ಲಿನ ವಿಶೇಷತೆ ಗಳೇನೆಂಬುದನ್ನು ತಿಳಿದುಕೊಳ್ಳೊಣ.

ಕಾರ್ಯಕ್ಷಮತೆ: ಸ್ನಾಪ್ ಡ್ರಾಗನ್‌ S4 ಪ್ರೊಸೆಸರ್‌ ಹೊಂದಿದ್ದು 1GB RAM ಸೇರಿದಂತೆ 32GB ವರೆಗಿನ ಡಿಸ್ಕ್ ಸ್ಪೇಸ್ ನೊಂದಿಗೆ 7GB ಮೆಮೊರಿ ಒಳಗೊಂಡಿರುವ ಸ್ಮಾರ್ಟ್ಫೋನ್ ಬಳಕೆದಾರರಿಗೆ ಮುದ ನೀಡಲಿದೆ. ಉತ್ತಮ ಬ್ಯಾಟರಿಗೆ ಹೆಸರುವಾಸಿ ಯಾಗಿರುವ ನೋಕಿಯಾ ಗ್ರಾಹಕರಿಗೆ ಎಂದೂ ಬೇಸರ ಮಾಡಿಲ್ಲ. ಅದರಂತೆ 2,000mAh ಸಾಮರ್ತ್ಯದ ದೊಡ್ಡ ಬ್ಯಾಟರಿ ಹೊಂದಿದ್ದು 3G ಜೊತೆಗೆ 10 ಗಂಟೆಗಳ ಟಾಕ್‌ಟೈಮ್ ನೀಡುತ್ತದೆ.

ದರ್ಶಕ: WXGA ಮಾದರಿಯ 4.5-ಇಂಚಿನ ಸ್ಕ್ರೀನ್‌ ಹೊಂದಿದ್ದು 720p HD ರೆಸೆಲ್ಯೂಷನ್‌ ಗಿಂತಲೂ ಉತ್ತಮವಾಗಿದೆ ಹಾಗೂ ಸಂಸ್ಥೆಯ ಪ್ರಕಾರ ಮಾರುಕಟ್ಟೆಯಲ್ಲಿನ ಅತ್ಯಂತ ಬ್ರೈಟೆಸ್ಟ್ ಹಾಗೂ ಫಾಸ್ಟೆಸ್ಟ್ ಸ್ಮಾರ್ಟ್ಫೋನ್ ಸ್ಕ್ರೀನ್ ಒಳಗೊಂಡಿದೆ. ಇದಲ್ಲದೆ ಉತ್ತಮ ವೀಕ್ಷಣೆಗಾಗಿ 1280x768 ಪಿಕ್ಸೆಲ್ ರೆಸೆಲ್ಯೂಷನ್‌ ನಿಂದ ಕೂಡಿದೆ.

ಅಂದ ಚೆಂದ: ಈ ಹಿಂದಿನ ಲೂಮಿಯಾ 900 ಗಿಂತಲೂ ಗಾತ್ರದಲ್ಲಿ ದೊಡ್ಡದಾಗಿರುವ ಲೂಮಿಯಾ 920 ಹಳದಿ, ಕಂದು ಹಾಗೂ ಕೆಂಪು ಸೇರಿದಂತೆ ವಿವಿಧ ಬಣ್ಣಗಳಲ್ಲಿ ಲಭ್ಯವಿದೆ. ಅತ್ಯಾಕರ್ಷಕ ಬಣ್ಣಗಳಿಂದ ಕೂಡಿರುವ ನೋಕಿಯಾ ಲೂಮಿಯಾ 920 "ಕೂಲ್" ಎನಿಸುವ ಅನುಭವ ನೀಡಿತ್ತದೆ. ಅಲ್ಲದೆ ವಿಶೇಷ ಹೊರ ವಿನ್ಯಾಸವು ಉತ್ತಮ ಗ್ರಿಪ್‌ ಸಹಾ ನೀಡುತ್ತದೆ.

ಕ್ಯಾಮೆರಾ: ಫೋಟೊ ಪ್ರಿಯರಿಗೆ ಈ ಫೊನ್‌ ಹೆಚ್ಚು ಮುದ ನೀಡಬಲ್ಲದು. ನೋಕಿಯಾ ಲೂಮಿಯಾ 920 ಯಲ್ಲಿ "PureView" 8 MP ಕ್ಯಾಮೆರಾ ಹೊಂದಿದ್ದು ಮಾರುಕಟ್ಟೆಯಲ್ಲಿನ ಇತರೇ ಸ್ಮಾರ್ಟ್ಫೋನ್ ಗಳಿಗಿಂತಲು ಉತ್ತಮವಾದ ಸ್ಟಿಲ್ ಹಾಗೂ ವಿಡಿಯೋ ನೀಡಬಲ್ಲದು. ಫ್ಲೋಟಿಂಗ್ ಲೆನ್ಸ್ ತಂತ್ರಜ್ಞಾನ ಹೊಂದಿರುವುದರಿಂದ ಇತರೇ ಹ್ಯಾಂಡ್‌ಸೆಟ್ ಗಳಿಗಿಂತಲೂ 10 ಪ್ರಮಾಣದಷ್ಟು ಉತ್ತಮ ಬೆಳಕು ಒದಗಿಸ ಬಲ್ಲದು. ಫೋಟೊಗ್ರಫಿಯಲ್ಲಿ ಆಸಕ್ತಿ ಉಳ್ಳವರಿಗಂತೂ ಈ ಫೋನ್‌ ನಿರಾಸೆ ಮೂಡಿಸುವುದಿಲ್ಲ.

ಅಂದಹಾಗೆ ನೋಕಿಯಾ ಲೂಮಿಯಾ 920 ನವೆಂಬರ್‌ ಗೆ ಮಾರುಕಟ್ಟೆಗೆ ಬರಲಿದೆ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X