ಭಾರತದಲ್ಲಿ ಬಿಡುಗಡೆಯಾಗುವ ಮೊದಲ ನೋಕಿಯಾ ಆಂಡ್ರಾಯ್ಡ್ ಯಾವುದು? ಬೆಲೆ ಎಷ್ಟು?

ನೋಕಿಯಾ ಬಿಡುಗಡೆ ಮಾಡಿದ ಮೊದಲ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್ ನೋಕಿಯಾ 6" ಆದರೂ, ಭಾರತೀಯರಿಗೆ ಈ ಸ್ಮಾರ್ಟ್‌ಫೋನ್ ಮೊದಲು ದೊರೆಯುವುದಿಲ್ಲ.!

|

ನೋಕಿಯಾ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳು ಭಾರತದ ಮಾರುಕಟ್ಟೆಯಲ್ಲಿ ಬಿಡುಗಡೆಯಾಗುವ ದಿನಾಂಕ ಈಗಾಗಲೇ ಬಹುತೇಕ ನಿರ್ಧಾರವಾಗಿದ್ದು, ಮೇ ಕೊನೆಯ ಅಥವಾ ಜೂನ್ ಮೊದಲ ವಾರದಲ್ಲಿ ನೋಕಿಯಾ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳು ಭಾರತೀಯರ ಕೈಗೆ ಸಿಗಲಿದೆ.!!

ವಿಚಿತ್ರವೆಂದರೆ ನೋಕಿಯಾ ಬಿಡುಗಡೆ ಮಾಡಿದ ಮೊದಲ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್ ನೋಕಿಯಾ 6" ಆದರೂ, ಭಾರತೀಯರಿಗೆ ಈ ಸ್ಮಾರ್ಟ್‌ಫೋನ್ ಮೊದಲು ದೊರೆಯುವುದಿಲ್ಲ.! ಹೌದು, ಭಾರತದಲ್ಲಿ ನೋಕಿಯಾ ಕಂಪೆನಿ ಮೊದಲು ಬಿಡುಗಡೆ ಮಾಡುತ್ತಿರುವ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್ ನೋಕಿಯಾ 3!!

ಆನ್‌ಲೈನ್‌ನಲ್ಲಿ ಆಧಾರ್ ಜೊತೆ ಪಾನ್‌ಕಾರ್ಡ್ ಲಿಂಕ್ ಹೇಗೆ?

ನೋಕಿಯಾ 3 ನೋಕಿಯಾ ಆಂಡ್ರಾಯ್ಡ್‌ನ ಅತ್ಯುತ್ತಮ ಬಜೆಟ್ ಪೋನಾಗಿದ್ದು, ಕೇವಲ 9,800 ರೂ. ಬೆಲೆಯನ್ನು ಹೊಂದಿದೆ. ಬಹುತೇಕ ಎಲ್ಲಾ ಫಿಚರ್‌ಗಳನ್ನು ಹೊಂದಿರುವ ನೋಕಿಯಾ 3 ಪ್ರಸ್ತುತ ದರದಲ್ಲಿಯೇ ಅತ್ಯುತ್ತಮ ಸ್ಮಾರ್ಟ್‌ಫೋನ್ ಆಗಲಿದೆ.!! ಹಾಗಾದರೆ, ನೋಕಿಯಾ 3 ಹೊಂದಿರುವ ಫೀಚರ್‌ಗಳು ಯಾವುವು? ವಿಶೇಷತೆ ಏಜನು ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲಗಲಿ ತಿಳಿಯಿರಿ.

5 ಇಂಚಿನ HD ಡಿಸ್‌ಪ್ಲೇ:

5 ಇಂಚಿನ HD ಡಿಸ್‌ಪ್ಲೇ:

ನೋಕಿಯಾ 3 ಸ್ಮಾರ್ಟ್‌ಪೋನು 5 ಇಂಚಿನ HD ಡಿಸ್‌ಪ್ಲೇ ಹೊಂದಿದ್ದು, 720x1280p ರೆಸಲ್ಯೂಷನ್ ಗುಣಮಟ್ಟದ IPS ಡಿಸ್‌ಪ್ಲೇ ಇದಾಗಿದೆ. ದೀರ್ಘಕಾಲದ ವಿಡಿಯೋ ವೀಕ್ಷಣೆಗೆ ಉತ್ತಮವಾಗಿದೆ ಎನ್ನಲಾಗಿದೆ. ಪರದೆಯ ರಕ್ಷಣೆಗಾಗಿ ಗೋರಿಲ್ಲ ಗ್ಲಾಸ್ ಅಳವಡಿಸಲಾಗಿದೆ.

ವೇಗದ ಕಾರ್ಯಚರಣೆಗೆ 1.3GHz ಪ್ರೋಸೆಸರ್:

ವೇಗದ ಕಾರ್ಯಚರಣೆಗೆ 1.3GHz ಪ್ರೋಸೆಸರ್:

ಭಾರತೀಯ ಮಾರುಕಟ್ಟೆಯಲ್ಲಿ ಸದ್ದು ಮಾಡಲಿರುವ ನೋಕಿಯಾ 3 ವೇಗದ ಕಾರ್ಯಚರಣೆಗೆ ಮೀಡಿಯಾ ಟೆಕ್ ಕ್ವಾಡ್‌ಕೋರ್ 1.3GHz ಪ್ರೋಸೆಸರ್ ಹೊಂದಿದ್ದು, ನೂತನ ಆಂಡ್ರಾಯ್ಡ್ ನ್ಯಾಗಾದಲ್ಲಿ ಕಾರ್ಯನಿರ್ವಹಸಲಿದೆ.

2GB RAM, 16 GB ROM:

2GB RAM, 16 GB ROM:

ವೇಗದ ಕಾರ್ಯನಿರ್ವಹಣೆಗಾಗಿ ನೋಕಿಯಾ 3 ಸ್ಮಾರ್ಟ್‌ಪೋನಿನಲ್ಲಿ 2 GB RAM ಅಳವಡಿಸಲಾಗಿದ್ದು, 16 GB ಆಂತರಿಕ ಮೆಮೊರಿಯನ್ನು ಇದರಲ್ಲಿದೆ. 128 GB ವರೆಗೂ ಮೆಮೊರಿ ವಿಸ್ತರಿಸಿಕೊಳ್ಳಬಹುದಾಗಿದೆ.

 8 MP ಕ್ಯಾಮೆರಾ

8 MP ಕ್ಯಾಮೆರಾ

ನೋಕಿಯಾ 3 ಸ್ಮಾರ್ಟ್‌ಪೋನಿನ ಹಿಂಭಾಗದಲ್ಲಿ ಮತ್ತು ಮುಂಭಾಗದಲ್ಲಿ 8 MP ಕ್ಯಾಮೆರಾವನ್ನು ಅಳವಡಿಸಲಾಗಿದ್ದು, ಉತ್ತಮ ಗುಣಮಟ್ಟದ ಪೋಟೋ, ಸೆಲ್ಫಿ ಮತ್ತು ವಿಡಿಯೋ ಸೆರೆಹಿಡಿಯಲು ಉತ್ತಮವಾಗಿದೆ. 2650 mAh ಬ್ಯಾಟರಿ: ನೋಕಿಯಾ 3 ಸ್ಮಾರ್ಟ್‌ಪೋನಿನಲ್ಲಿ 2650mAh ಬ್ಯಾಟರಿ ಅಳವಡಿಸಲಾಗಿದ್ದು, 4G ಸಪೋರ್ಟ್ ಮಾಡಲಿದೆ. 143.4x71.4x8.4mm ಸುತ್ತಳತೆ ಹೊಂದಿರುವ ಈ ಪೋನು ಹಲವು ಹೊಸತನಗಳು ಈ ಪೋನಿನಲ್ಲಿದೆ.

Best Mobiles in India

English summary
They will launch in 120 markets at the same time. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X