Just In
- 6 hrs ago ಒಪ್ಪೋ ಫೈಂಡ್ X7 ಅಲ್ಟ್ರಾ ಕ್ಯಾಮೆರಾ: ಮೊಬೈಲ್ ಫೋಟೋಗ್ರಫಿಗೆ ಅತ್ಯುತ್ತಮ ಫೋನ್!
- 9 hrs ago Bengaluru: ಆ ಆಪ್ ಇನ್ಸ್ಟಾಲ್ ಮಾಡಿದ್ದೇ ತಡ 5.2 ಕೋಟಿ ರೂ. ಮಾಯ.. ನೀವು ಎಚ್ಚರ
- 11 hrs ago Realme: ರಿಯಲ್ಮಿ ನಾರ್ಜೋ 70 5G, ನಾರ್ಜೋ 70x 5G ಸ್ಮಾರ್ಟ್ಫೋನ್ ಲಾಂಚ್! ಸಖತ್ ಫೀಚರ್ಸ್... ಬೆಲೆ ಎಷ್ಟು?
- 12 hrs ago OnePlus: ಒನ್ಪ್ಲಸ್ 13 ಸ್ಮಾರ್ಟ್ಫೋನ್ ಡಿಸ್ಪ್ಲೇ, ವಿನ್ಯಾಸ ಲೀಕ್!..ಯಾವಾಗ ಲಾಂಚ್?
Don't Miss
- Movies ನೀಲಿ ಪ್ರಪಂಚದ ಕರಾಳ ಸತ್ಯವನ್ನ ಹೇಳಿದ ಲಾನಾ ರೋಡ್ಸ್
- Sports DC vs GT IPL 2024: ಅಕ್ಷರ್, ರಿಷಭ್ ಶೈನಿಂಗ್; ಗುಜರಾತ್ ವಿರುದ್ಧ ಡೆಲ್ಲಿ ಜಯಭೇರಿ
- News ದ್ವೇಷ ಉತ್ತೇಜಿಸುವ ಪೋಸ್ಟ್: ಕರ್ನಾಟಕ ಬಿಜೆಪಿ ವಿರುದ್ಧ ದೂರು ದಾಖಲಿಸಿದ ಚುನಾವಣಾ ಆಯೋಗ
- Lifestyle 613 ದಿನ ಕೊರೊನಾ ವಿರುದ್ಧ ಹೋರಾಡಿ ವೃತಪಟ್ಟ ವ್ಯಕ್ತಿ..!
- Automobiles ಸ್ವಂತ ದುಡಿಮೆಯಲ್ಲಿ ಹೊಸ ಕಾರು ಖರೀದಿಸಿ ಯುವ ನಟಿಯ ಭಾವನಾತ್ಮಕ ಪೋಸ್ಟ್
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಮತ್ತೆ ಬಿಡುಗಡೆ ಆಯ್ತು ನೋಕಿಯಾ 3310: 1 ತಿಂಗಳ ಬ್ಯಾಟರಿ ಬಾಳಿಕೆ, ಕ್ಯಾಮೆರಾ ಇನ್ನು ಹಲವು.!!!
ನೋಕಿಯಾ 3310 ಫೀಚರ್ ಫೋನನ್ನು ಮತ್ತೆ ಹೊಸ ರೂಪದಲ್ಲಿ ಬಿಡುಗಡೆ ಮಾಡಿದೆ.
ನೋಕಿಯಾ ನಿರೀಕ್ಷೆಯಂತೆ ತನ್ನ ಕ್ಲಾಸಿಕ್ ಪೋನುಗಳಲ್ಲಿ ಒಂದಾದ ನೋಕಿಯಾ 3310 ಫೀಚರ್ ಫೋನನ್ನು ಮತ್ತೆ ಹೊಸ ರೂಪದಲ್ಲಿ ಬಿಡುಗಡೆ ಮಾಡಿದ್ದು, ಶೀಘ್ರವೇ ಮಾರುಕಟ್ಟೆಯನ್ನು ಪ್ರವೇಶಿಸಲಿದೆ.
ಓದಿರಿ: 2GB RAM, 13MP ಕ್ಯಾಮೆರಾ ಹೊಂದಿರುವ ನೋಕಿಯಾ 3: ಬೆಲೆ 10,500 ರೂ.ಗಳು ಮಾತ್ರ..!!!
ಬಾರ್ಸಿಲೋನಾದಲ್ಲಿ ನಡೆಯುತ್ತಿರುವ ಮೊಬೈಲ್ ವರ್ಲ್ಡ್ ಕಾಂಗ್ರೆಸ್ ಸಮಾವೇಶದಲ್ಲಿ 17 ವರ್ಷಗಳ ಬಳಿಕ ನೋಕಿಯಾ 3310 ಪರಿಚಯಗೊಳಿಸಲಾಗಿದ್ದು, ಸದ್ಯ ಈ ಪೋನಿನ ಬೆಲೆ EUR 49 ಆಗಿದ್ದು, ಭಾರತೀಯ ಕರೆಸ್ಸಿಯಲ್ಲಿ 3,500 ರೂ ಗಳಾಗಲಿದೆ. ಆದರೆ ಭಾರತದಲ್ಲಿ ಲಾಂಚ್ ಆಗುವ ವೇಳೆಯಲ್ಲಿ ಬೆಲೆ ಮತ್ತಷ್ಟು ಕಡಿಮೆಯಾಗಲಿದ್ದು, ಸುಮಾರು 2,500 ರೂ ಗಳಿಗೆ ಲಭ್ಯವಿರಲಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ನೋಕಿಯಾ 3310ಪೋನ್ ಹೇಗಿದೆ:
ನೋಕಿಯಾ 3310 ಪೋನು 2.4 ಇಂಚಿನ ಟಿಎಫ್ಟಿ (320X240) ಕಲರ್ ಡಿಸ್ಪ್ಲೇ ಹೊಂದಿದ್ದು, 112.8 ಮಿ ಮೀಟರ್ ದಪ್ಪ, 79.6 ಗ್ರಾಂ ತೂಕವನ್ನು ಹೊಂದಿದೆ.
ಕ್ಯಾಮೆರ ಸಹ ನೀಡಲಾಗಿದೆ:
ನೋಕಿಯಾ 3310 ಪೋನಿನಲ್ಲಿ LED ಫ್ಲಾಶ್ ಲೈಟ್ನೊಂಡಿದಿಗೆ 2 MP ಕ್ಯಾಮೆರಾವನ್ನು ನೀಡಲಾಗದೆ, ಮಿನಿ ಸಿಮ್ ಹಾಕಬಹುದು. 2ಜಿ ನೆಟ್ವರ್ಕಿನಲ್ಲಿ ಈ ಪೋನ್ ವರ್ಕ್ ಆಗಲಿದ್ದು, ನೋಕಿಯಾ ಸೀರಿಸ್ 30+ OSನಲ್ಲಿ ಕಾರ್ಯ ನಿರ್ವಹಿಸಲಿದೆ.
ಒಂದು ತಿಂಗಳ ಬ್ಯಾಟರಿ ಸ್ಟ್ಯಾಂಡ್ ಬೈ:
ನೋಕಿಯಾ 3310 ಪೋನಿನಲ್ಲಿ ತೆಗೆಯಬಹುದಾದ 1,200mAh ಬ್ಯಾಟರಿಯನ್ನು ನೀಡಲಾಗಿದ್ದು, 22 ಗಂಟೆಗಳ ಟಾಕ್ ಟೈಂ ಹೊಂದಿರುವ ಈ ಬ್ಯಾಟರಿ 1 ತಿಂಗಳ ಕಾಲ ಸ್ಟ್ಯಾಂಡ್ ಬೈ ಟೈಂ ಹೊಂದಿದೆ ಎನ್ನಲಾಗಿದೆ.
ಎಫ್ಎಂ ರೇಡಿಯೋ ಸಹ ನೀಡಲಾಗಿದೆ:
ನೋಕಿಯಾ 3310 ಪೋನಿನಲ್ಲಿ ಎಫ್ಎಂ ರೇಡಿಯೋ ನೀಡಲಾಗಿದ್ದು, ಪೋನಿನಲ್ಲಿ 16 MB ಆಂತರಿಕ ಮೆಮೊರಿ ಇದ್ದು, ಗ್ರಾಹಕರು ಮೈಕ್ರೊ SD ಕಾರ್ಡ್ ಹಾಕಿಕೊಳ್ಳುವ ಮೂಲಕ 32 ಜಿಬಿವರೆಗೆ ಮಮೊರಿಯನ್ನು ವಿಸ್ತರಿಸಿಕೊಳ್ಳುವ ಅವಕಾಶವನ್ನು ನೀಡಲಾಗಿದೆ.
ಮೈಕ್ರೋ USB ಚಾರ್ಜಿಂಗ್:
ನೋಕಿಯಾ 3310 ಪೋನು ಮೈಕ್ರೋ USB ಚಾರ್ಜಿಂಗ್ ಹೊಂದಿದ್ದು, ಇದನ್ನು ಕಂಪ್ಯೂಟರ್ಗೆ ಸಂಪರ್ಕಿಸ ಬಹುದಾಗಿದ್ದು, 3.5 ಹೆಡ್ಪೋನ್ ಜ್ಯಾಕ್ ನೀಡಲಾಗಿದೆ.
ಮತ್ತೆ ಸ್ನೇಕ್, ಆದರೆ ಹೊಸ ರೂಪ:
ನೋಕಿಯಾ ಪೋನುಗಳಲ್ಲಿ ಬಹಳ ಪ್ರಸಿದ್ಧವಾಗಿರುವ ಸ್ನೇಕ್ ಗೇಮ್ ಮತ್ತೆ ಹೊಸ ರೂಪ ಪಡೆದುಕೊಂಡಿದ್ದು, ನೋಕಿಯಾ 3310ನಲ್ಲಿ ರೀಲಾಂಚ್ ಆಗಿದೆ. ಮತ್ತೆ ಸ್ನೇಕ್ ಗೇಮ್ಗೆ ಜೀವ ಸಿಕ್ಕಿದೆ.
ವಿವಿಧ ಬಣ್ಣದಲ್ಲಿ ಲಭ್ಯ:
ಫಿನ್ಲೆಂಡ್ ಮೂಲದ ಎಚ್ ಎಂಡಿ ಗ್ಲೋಬಲ್ ಕಂಪನಿ ತಯಾರಿಸಿರುವ ನೋಕಿಯಾ 3310 ಪೋನು ನೀಲಿ, ಹಳದಿ, ಕೆಂಪು, ಬೂದು ಬಣ್ಣದಲ್ಲಿ ಬಿಡುಗಡೆಯಾಗಿದೆ.
ಪೋನಿನ ವಿಡಿಯೋ ನೋಡಿ:
ನೋಕಿಯಾ ತನ್ನ ನೂತನ ಪೋನು ನೋಕಿಯಾ 3310ದ ವಿಡಿಯೋ ಬಿಡುಗಡೆ ಮಾಡಿದ್ದು, ಇದರಲ್ಲಿ ಪೋನಿನ ವಿಷೇಶತೆಗಳನ್ನು ವಿವರಿಸಿದ್ದು, ನೀವು ನೋಡಲೇಬೇಕಾದ ವಿಡಿಯೋ ಇದಾಗಿದೆ.
-
1,29,999
-
22,999
-
64,999
-
99,999
-
29,999
-
39,999
-
-
63,999
-
1,56,900
-
96,949
-
1,39,900
-
1,29,900
-
79,900
-
65,900
-
12,999
-
96,949
-
16,499
-
38,999
-
30,700
-
49,999
-
19,999
-
17,970
-
21,999
-
13,474
-
18,999
-
22,999
-
19,999
-
17,999
-
26,999
-
5,999