ಫ್ಲಾಶ್‌ ಸೇಲ್‌ನಲ್ಲಿ ಒಂದು ನಿಮಿಷಕ್ಕೆ "ನೋಕಿಯಾ 6" ಸೋಲ್ಡ್ ಔಟ್‌!!

ಫ್ಲಾಶ್‌ ಸೇಲ್‌ನಲ್ಲಿ ನೋಕಿಯಾಗೆ ಅದ್ಬುತ ರೆಸ್ಪಾನ್ಸ್ ಸಿಕ್ಕಿದ್ದು, ಕೇವಲ ಒಂದು ನಿಮಿಷಕ್ಕೆ ಬಿಡುಗಡೆಯಾದ ಎಲ್ಲಾ ಸ್ಮಾರ್ಟ್‌ಫೋನ್‌ಗಳು ಸೋಲ್ಡ್‌ ಔಟ್‌ ಆಗಿವೆ.

|

ನೋಕಿಯಾದ ಮೊದಲ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್ "ನೋಕಿಯಾ 6" ಬಿಡುಗಡೆಯಾದ ಕೇವಲ ಒಂದು ನಿಮಿಷಕ್ಕೆ ಸೋಲ್ಡ್‌ ಔಟ್‌ ಆಗಿ ದಾಖಲೆ ನಿರ್ಮಿಸಿದೆ. ಹೌದು, ಕೆಲವೇ ದಿನಗಳ ಹಿಂದೆ ಚೀನಾದಲ್ಲಿ ಬಿಡುಗಡೆಯಾಗಿದ್ದ ನೋಕಿಯಾ ಆಂಡ್ರಾಯ್ಡ್ ಸ್ಮಾರ್ಟ್‌ಫೊನ್ ಬಿಡುಗಡೆಯಾದ ಸಮಯದಿಂದಲೂ ಒಂದಿಲ್ಲೊಂದು ದಾಖಲೆ ನಿರ್ಮಿಸುತ್ತಿದೆ.

ಜನವರಿ 19 ರಂದು ಚೀನಾದಲ್ಲಿ ನೋಕಿಯಾ ಸ್ಮಾರ್ಟ್‌ಫೊನ್‌ ಫ್ಲಾಶ್‌ ಸೇಲ್‌ಗೆ ಇಡಲಾಗಿತ್ತು, ಫ್ಲಾಶ್‌ ಸೇಲ್‌ನಲ್ಲಿ ನೋಕಿಯಾಗೆ ಅದ್ಬುತ ರೆಸ್ಪಾನ್ಸ್ ಸಿಕ್ಕಿದ್ದು, ಕೇವಲ ಒಂದು ನಿಮಿಷಕ್ಕೆ ಬಿಡುಗಡೆಯಾದ ಎಲ್ಲಾ ಸ್ಮಾರ್ಟ್‌ಫೋನ್‌ಗಳು ಸೋಲ್ಡ್‌ ಔಟ್‌ ಆಗಿವೆ.

ನೋಕಿಯಾದ ಹೈ-ಎಂಡ್ ಆಂಡ್ರಾಯ್ಡ್ ಸ್ಮಾರ್ಟ್‌ಪೋನ್‌ "ನೋಕಿಯಾ ಪಿ1" ಫೀಚರ್ಸ್ ಗೊತ್ತಾ?

ಬಿಡುಗಡೆಯಾದ 24 ಗಂಟೆಗಳಲ್ಲಿಯೇ 2,50,000 ರಿಜಿಸ್ಟರ್ ಆಗಿತ್ತು, ಇನ್ನು ಪ್ಲಾಶ್‌ ಸೇಲ್‌ಗೂ ಮುನ್ನವೇ 1 ಮಿಲಿಯನ್ ಸ್ಮಾರ್ಟ್‌ಫೋನ್‌ ಬುಕ್ ಆಗಿ ಸ್ಮಾರ್ಟ್‌ಫೋನ್‌ ಮಾರುಕಟ್ಟೆಯೇ ಹುಬ್ಬೇರುವಂತೆ ಮಾಡಿದ್ದ ನೋಕಿಯಾ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್ ಇದೀಗ ಮತ್ತೊಂದು ಮೈಲಿಗಲ್ಲು ಸ್ಥಾಪಿಸಿದೆ.

16,000 ರೂಪಾಯಿ ಬೆಲೆಯಲ್ಲಿ ಬಿಡುಗಡೆಯಾಗಿರುವ ನೋಕಿಯಾ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್ 4GB RAM ಮತ್ತು ಅತ್ಯಾಧುನಿಕ ಕ್ವಾಲ್ಕಮ್ ಪ್ರೊಸೆಸರ್ ಹೊಂದಿದ್ದು, ಸ್ಮಾರ್ಟ್‌ಫೋನ್ ಪ್ರಿಯರ ನಿದ್ದೆಗೆಡಿಸಿದೆ. 5.5 ಇಂಚ್‌ ಸ್ಕ್ರೀನ್ ಹೊಂದಿರುವ ನೋಕಿಯಾ 6 ಸ್ಮಾರ್ಟ್‌ಫೊನ್‌ ಮತ್ತಿನಾವ ಫೀಚರ್‌ಗಳನ್ನು ಹೊಂದಿದೆ ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.

5.5 ಇಂಚ್ ಹೆಚ್‌ಡಿ ಡಿಸ್‌ಪ್ಲೇ!

5.5 ಇಂಚ್ ಹೆಚ್‌ಡಿ ಡಿಸ್‌ಪ್ಲೇ!

ಬಿಡುಗಡೆಯಾಗಿರುವ "ನೋಕಿಯಾ 6" ಆಂಡ್ರಾಯ್ಡ್ ಸ್ಮಾರ್ಟ್‌ಫೋನ್, ಇಂದಿನ ಸ್ಮಾರ್ಟ್‌ಫೋನ್‌ ಪ್ರಿಯರ ಇಚ್ಚೆಯಂತೆ 5.5 ಇಂಚ್ ಹೆಚ್‌ಡಿ (ಗೋರಿಲ್ಲಾ2.5) ಡಿಸ್‌ಪ್ಲೇಯನ್ನು ಹೊಂದಿದೆ.

ಆಂಡ್ರಾಯ್ಡ್ ನ್ಯೂಗಾ 7.0!!

ಆಂಡ್ರಾಯ್ಡ್ ನ್ಯೂಗಾ 7.0!!

ಮಾರುಕಟ್ಟೆಗೆ ಇತ್ತೀಚಿಗಷ್ಟೆ ಬಿಡುಗಡೆಯಾಗಿರುವ ನೂತನ ಆಂಡ್ರಾಯ್ಡ್ ವರ್ಷನ್ "ಆಂಡ್ರಾಯ್ಡ್ ನ್ಯೂಗಾ 7.0" ಸಿಸ್ಟಮ್ ಮೂಲಕ "ನೋಕಿಯಾ 6" ಸ್ಮಾರ್ಟ್‌ಫೋನ್ ರನ್‌ ಆಗಲಿದೆ. ಪ್ರಮುಖ ಕಂಪೆನಿಗಳ ಕೆಲವೇ ಕೆಲವು ಸ್ಮಾರ್ಟ್‌ಫೊನ್‌ಗಳು ಮಾತ್ರ ಈ ರೀತಿಯ ಅಪ್‌ಡೇಟ್‌ ಹೊಂದಿದೆ.

4GB RAm ಮತ್ತು 64GB ROM!!

4GB RAm ಮತ್ತು 64GB ROM!!

ಸ್ಮಾರ್ಟ್‌ಫೋನ್‌ ಪ್ರಪಂಚವೇ ಊಹಿಸಲು ಸಾಧ್ಯವಾಗದ ರಿತಿಯಲ್ಲಿ "ನೋಕಿಯಾ 6" ಸ್ಮಾರ್ಟ್‌ಫೋನ್ 4GB RAm ಮತ್ತು 64GB ಆಂತರಿ ಮೆಮೊರಿಯನ್ನು ಹೊಂದಿದೆ. ಇನ್ನಾವ ಕಂಪೆನಿ ಸ್ಮಾರ್ಟ್‌ಪೊನ್‌ಗಳು ಸಹ ಇಷ್ಟು ಫೀಚರ್‌ ಹೊಂದಿಲ್ಲ ಎನ್ನಬಹುದು.

16 ಮೆಗಾಪಿಕ್ಸೆಲ್ ಕ್ಯಾಮೆರಾ!!

16 ಮೆಗಾಪಿಕ್ಸೆಲ್ ಕ್ಯಾಮೆರಾ!!

"ನೋಕಿಯಾ 6" ಸ್ಮಾರ್ಟ್‌ಫೋನ್‌ 16 ಮೆಗಾಪಿಕ್ಸೆಲ್ ಇರುವ ಫೆಸ್‌ ಡಿಟೆಕ್ಷನ್, ಆಟೊ ಫೋಕಸ್ ಮತ್ತು ಡ್ಯುಯಲ್ ಟೋನ್ ಫೀಚರ್‌ ಹೊಂದಿರುವ ಅತ್ಯದ್ಬುತ ಹಿಂದಿನ ಕ್ಯಾಮೆರಾ ಕ್ಯಾಮೆರಾ ಹೊಂದಿದೆ. ಇನ್ನು 8 ಮೆಗಾಪಿಕ್ಸೆಲ್‌ ಸೆಲ್ಫಿ ಕ್ಯಾಮೆರಾ ಹೊಂದಿದ್ದು, ಉತ್ತಮ ಸೆಲ್ಫಿ ಚಿತ್ರಗಳನ್ನು ತೆಗೆಯಬಹುದಾಗಿದೆ.

ಬೆಲೆ ಎಷ್ಟು?

ಬೆಲೆ ಎಷ್ಟು?

"ನೋಕಿಯಾ 6" ಸ್ಮಾರ್ಟ್‌ಫೋನ್‌ ಚೀನಾದಲ್ಲಿ ಮಾತ್ರ ಬಿಡುಗಡೆಯಾಗಿದ್ದು, ಭಾರತೀಯ ಸ್ಮಾರ್ಟ್‌ಫೋನ್‌ ಪ್ರಿಯರು ಇನ್ನು ಕಲವು ದಿನಗಳು ಕಾಯಬೇಕಿದೆ. ಚೀನಾದಲ್ಲಿ ನೂತನ "ನೋಕಿಯಾ 6" ಸ್ಮಾರ್ಟ್‌ಪೋನ್ 16,750 ರೂಪಾಯಿಗೆ ಬಿಡುಗಡೆಗೊಂಡಿದೆ. ಇನ್ನು . ಭಾರತದಲ್ಲಿ "ನೋಕಿಯಾ 6" ಸ್ಮಾರ್ಟ್‌ಫೋನ್‌ ಬೆಲೆ ಕಡಿಮೆಯಾಗಲಿದೆ ಎಂದು ರೂಮರ್‌ ಆಗಲೇ ಹರಿದಾಡಿ ಹುಟ್ಟಿದೆ.!!

Best Mobiles in India

English summary
Nokia 6's first flash sale in China sees the smartphone going out of stock within the first minute of availability. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X