ನೋಕಿಯಾದಿಂದ ಮತ್ತೊಂದು ಸ್ಮಾರ್ಟ್‌ಪೋನ್ ನೋಕಿಯಾ 8: ಬೆಲೆ ಕೇಳಿ ಶಾಕ್ ಆಗಬೇಡಿ..!

ಚೀನಾ ಮಾರುಕಟ್ಟೆಯಲ್ಲಿ ಮೊದಲ ಸ್ಮಾರ್ಟ್‌ಪೋನನ್ನು ಬಿಡುಗಡೆ ಮಾಡಿದ ನೋಕಿಯಾ, ಸದ್ಯ ಎರಡನೇ ಪೋನನ್ನು ಪರಿಚಯಿಸಲು ಮುಂದಾಗಿದ್ದು, ಈ ಕುರಿತ ಸುದ್ದಿ ಇಲ್ಲಿದೆ.

Written By:

ಕೆಲ ದಿನಗಳಿಂದ ಎದುರು ನೋಡುತ್ತಿರುವ ನೋಕಿಯಾ ಸ್ಮಾರ್ಟ್‌ಪೋನುಗಳು ಮಾರುಕಟ್ಟೆಗೆ ಕಾಲಿಡುವ ಮುನ್ನವೇ ಸಾಕಷ್ಟು ಸೌಂಡು ಮಾಡುತ್ತಿವೆ, ಮೊನ್ನೆ ತಾನೆ ಚೀನಾ ಮಾರುಕಟ್ಟೆಯಲ್ಲಿ ಮೊದಲ ಸ್ಮಾರ್ಟ್‌ಪೋನನ್ನು ಬಿಡುಗಡೆ ಮಾಡಿದ ನೋಕಿಯಾ, ಸದ್ಯ ಎರಡನೇ ಪೋನನ್ನು ಪರಿಚಯಿಸಲು ಮುಂದಾಗಿದ್ದು, ಈ ಕುರಿತ ಸುದ್ದಿ ಇಲ್ಲಿದೆ.

ನೋಕಿಯಾದಿಂದ ಮತ್ತೊಂದು ಸ್ಮಾರ್ಟ್‌ಪೋನ್ ನೋಕಿಯಾ 8

ಓದಿರಿ: ಜಿಯೋ 50ರೂ.ಗೆ 1GB 4G ಡೇಟಾ ನೀಡಿದರೆ ಎರ್‌ಟೆಲ್‌ನಿಂದ 100 ರೂ.ಗೆ 10 GB ಡೇಟಾ

ಸದ್ಯ ಮಾರುಕಟ್ಟೆಗೆ ಬರಲು ಸಿದ್ಧವಾಗಿರುವ ನೋಕಿಯಾ 8 ಸ್ಮಾರ್ಟ್‌ಪೋನಿನ ಕುರಿತಂತೆ ಚೀನಾ ಮೂಲದ ಆನ್‌ಲೈನ್ ಶಾಪಿಂಗ್ ಜಾಲತಾಣದಲ್ಲಿ ಜಾಹಿರಾತು ಕಾಣಿಸಿಕೊಂಡಿದೆ. ಆದರೆ ಈ ಪೋನು ಫೆಬ್ರವರಿ 26 ರಂದು ಬಿಡುಗಡೆಯಾಗಲಿದ್ದು, ಇದೊಂದು ಮಧ್ಯಮ ಬೆಲೆಯ ಸ್ಮಾರ್ಟ್‌ಪೋನಾಗಿದ್ದು, ರೂ. 31,000 ಸಾವಿರಕ್ಕೆ ಮಾರಾಟವಾಗಲಿದೆ.

ಈಗಾಗಲೇ ಈ ಪೋನ್ ವಿನ್ಯಾಸ ಮತ್ತು ವಿಷೇಶತೆಗಳ ಕುರಿತು ಮಾಹಿತಿ ಲೀಕ್ ಆಗಿದ್ದು, ಚೀನಾದ JD.com ಈ ಕುರಿತು ಮಾಹಿತಿಯನ್ನು ಹೊರ ಹಾಕಿದೆ, ನೋಕಿಯಾ 8 ಸ್ಮಾರ್ಟ್‌ಪೋನು ಸ್ಯಾಮ್‌ಸಂಗ್, ಆಪಲ್ ಮತ್ತು ಟಾಪ್‌ ಬ್ರಾಂಡ್ ಪೋನ್‌ ತಯಾರಕ ಕಂಪನಿಗೆ ಸ್ಪರ್ಧೆಯೊಡ್ಡಲಿದೆ ಎಂದು ತಿಳಿಸಿದೆ.

ನೋಕಿಯಾದಿಂದ ಮತ್ತೊಂದು ಸ್ಮಾರ್ಟ್‌ಪೋನ್ ನೋಕಿಯಾ 8

ಓದಿರಿ: ಜಿಯೋ ಪ್ರೈಮ್ ಆಫರ್ ಹಿಂದಿನ ರಹಸ್ಯವೇನು..? ಪ್ರತಿ ದಿನಕ್ಕೆ 10 ರೂ. ಲೆಕ್ಕಾಚಾರ ಹೇಗೆ..?

ಸದ್ಯ ಚೀನಾ ಮಾರುಕಟ್ಟೆಯಲ್ಲಿ ಈ ಪೋನ್ CNY 3,188ಗಳಿಗೆ ಮಾರಾಟವಾಗುತ್ತಿದ್ದು, ಇದನ್ನು ಭಾರತೀಯ ರೂಪಾಯಿಗೆ ಪರಿರ್ವತಿಸಿದರೆ 31,000 ರೂಗಳಾಗಲಿದೆ. ಒಮ್ಮೆ ಈ ಪೋನ್‌ ಭಾರತದಲ್ಲಿ ಲಾಂಚ್ ಆದಲ್ಲಿ ಇನ್ನು ಕಡಿಮೆ ಮೊತ್ತಕ್ಕೆ ಮಾರಾಟವಾಗಲಿದೆ ಎನ್ನಲಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ


Read more about:
English summary
The Nokia 3310 reboot is expected to grab the eyeballs on Nokia's MWC 2017 event on February 26. to know more visit kannada.gizbot.com
Please Wait while comments are loading...
Opinion Poll

Social Counting