ನೋಕಿಯಾ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳು: ಮೂರರಲ್ಲಿ ಯಾವುದು ಬೆಸ್ಟ್...!!!!

ನೋಕಿಯಾ ಆರಂಭಿಕ ಬೆಲೆಯ, ಮಧ್ಯಮ ಬೆಲೆ ಹಾಗೂ ಹೈಎಂಡ್ ನಲ್ಲಿ ಒಂದೊಂದು ಸ್ಮಾರ್ಟ್‌ಫೋನ್‌ಗಳನ್ನು ಲಾಂಚ್ ಮಾಡಲಿದೆ.

|

ನೋಕಿಯಾದ ಮೂರು ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳು ಇಂದು ಮಾರಕಟ್ಟೆಗೆ ಲಗ್ಗೆ ಇಡಲಿದೆ. ನೋಕಿಯಾ ಆರಂಭಿಕ ಬೆಲೆಯ, ಮಧ್ಯಮ ಬೆಲೆ ಹಾಗೂ ಹೈಎಂಡ್ ನಲ್ಲಿ ಒಂದೊಂದು ಸ್ಮಾರ್ಟ್‌ಫೋನ್‌ಗಳನ್ನು ಲಾಂಚ್ ಮಾಡಲಿದೆ. ಈ ಹಿನ್ನಲೆಯಲ್ಲಿ ಈ ಮೂರು ಫೋನ್‌ಗಳಲ್ಲಿ ಯಾವುದು ಬೆಸ್ಟ್ ಎನ್ನುವುದನ್ನು ನಾವಿಂದು ತಿಳಿಸಲಿದ್ದೇವೆ.

ನೋಕಿಯಾ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳು: ಮೂರರಲ್ಲಿ ಯಾವುದು ಬೆಸ್ಟ್...!!!!

ಓದಿರಿ: ನೋಕಿಯಾ ಸ್ಮಾರ್ಟ್ಫೋನ್ಗಳು ದೊರೆಯುವುದು ಎಲ್ಲಿ..? ಇಲ್ಲಿದೇ ಸಂಫೂರ್ಣ ಮಾಹಿತಿ...!!

ಬಜೆಟೆ ಬೆಲಯಲ್ಲಿ ಸ್ಮಾರ್ಟ್‌ಫೋನ್‌ಕೊಳ್ಳಬೇಕು ಎನ್ನುತ್ತಿರುವವರಿಗೆ ನೋಕಿಯಾ 3, ಸ್ವಲ್ಪ ಬೆಲೆ ಜಾಸ್ತಿಯಾರೂ ಪರವಾಗಿಲ್ಲ ಎಂದವರಿಗೆ ನೋಕಿಯಾ 5 ಹಾಗೂ ಬೆಲೆ ಮುಖ್ಯವಲ್ಲ, ಉತ್ತಮ ಫೋನ್ ಬೇಕು ಎಂದವರಿಗಾಗಿ ನೋಕಿಯಾ 6 ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡುತ್ತಿದೆ. ಈ ಮೂಲಕ ಒಂದೇ ಕಲ್ಲಿನಲ್ಲಿ ಮೂರು ಹಕ್ಕಿಯನ್ನು ಹೊಡೆಯಲು ಹೊರಟಿದೆ.

ನೋಕಿಯಾ 6 ಸ್ಮಾರ್ಟ್‌ಫೋನ್ ಬೆಲೆ: ರೂ.14,500-15,000

ನೋಕಿಯಾ 6 ಸ್ಮಾರ್ಟ್‌ಫೋನ್ ಬೆಲೆ: ರೂ.14,500-15,000

ಹೈಎಂಡ್ ಸರಣಿಯ ನೋಕಿಯಾ 6 ಸ್ಮಾರ್ಟ್‌ಪೋನ್ 3GB RAM ಮತ್ತು 32GB ಇಂಟರ್ನಲ್ ಮೆಮೊರಿಯನ್ನು ಹೊಂದಿರುವ ಒಂದು ಮಾದರಿ ಮತ್ತು 4GB RAM ಮತ್ತು 64GB ಇಂಟರ್ನಲ್ ಮೆಮೊರಿ ಇರುವ ಮತ್ತೊಂದು ಮಾದರಿಯೂ ಲಭ್ಯವಿದೆ. ಇದರೊಂದಿಗೆ 5.5 ಇಂಚಿನ Full HD ಡಿಸ್‌ಪ್ಲೇ 2.5D ವಿನ್ಯಾಸ, ಗೋರಿಲ್ಲ ಗ್ಲಾಸ್ ರಕ್ಷಣೆ ಇದೆ. ಸ್ನಾಪ್ ಡ್ರಾಗನ್ 430 ಪ್ರೋಸೆಸರ್ ಜೊತೆಗೆ ಆಂಡ್ರಾಯ್ಡ್ ನ್ಯಾಗಾ, ಹಿಂಭಾಗದಲ್ಲಿ ಡುಯಲ್ ಟೋನ್ LED ಫ್ಲಾಶ್ ನೊಂದಿಗೆ 16 MP ಕ್ಯಾಮೆರಾ, ಮುಂಭಾಗದಲ್ಲಿ 8 MP ಕ್ಯಾಮೆರಾ ಮತ್ತು 3000mAh ಬ್ಯಾಟರಿ ಅಳವಡಿಸಲಾಗಿದೆ.

ನೋಕಿಯಾ 5 ಸ್ಮಾರ್ಟ್‌ಫೋನ್ ಬೆಲೆ: ರೂ.13,500-14,000

ನೋಕಿಯಾ 5 ಸ್ಮಾರ್ಟ್‌ಫೋನ್ ಬೆಲೆ: ರೂ.13,500-14,000

ನೂತನ ಆಂಡ್ರಾಯ್ಡ್ ನ್ಯಾಗಾ, ಸ್ನಾಪ್ ಡ್ರಾಗನ್ 430 ಪ್ರೋಸೆಸರ್ ಹೊಂದಿರುವ ನೋಕಿಯಾ 5 ಸ್ಮಾರ್ಟ್‌ಪೋನಿನಲ್ಲಿ 5.2 ಇಂಚಿನ HD ಡಿಸ್‌ಪ್ಲೇ, , 2 GB RAM ಹಾಗೂ 16 GB ಆಂತರಿಕ ಮೆಮೊರಿ ಇದ್ದು, ಮೈಕ್ರೋ SD ಕಾರ್ಡ್ ಮೂಲಕ 128 GB ವರೆಗೂ ಮೆಮೊರಿ ವಿಸ್ತರಿಸಿಕೊಳ್ಳಬಹುದಾಗಿದೆ. ಹಿಂಭಾಗದಲ್ಲಿ 13 MP ಕ್ಯಾಮೆರಾ, ಮುಂಭಾಗದಲ್ಲಿ 5 MP ಕ್ಯಾಮೆರಾ ಇದೆ. 3000 mAh ಬ್ಯಾಟರಿ ಇದ್ದು, 4G ಸಪೋರ್ಟ್ ಮಾಡಲಿದೆ.

ನೋಕಿಯಾ 3 ಸ್ಮಾರ್ಟ್‌ಫೋನ್ ಬೆಲೆ: ರೂ.9000-9500

ನೋಕಿಯಾ 3 ಸ್ಮಾರ್ಟ್‌ಫೋನ್ ಬೆಲೆ: ರೂ.9000-9500

ಆಂಭಿಕ ಬೆಲೆಯ ನೋಕಿಯಾ 3 ನಲ್ಲಿ ಹಿಂಭಾಗದಲ್ಲಿ ಮತ್ತು ಮುಂಭಾಗದಲ್ಲಿ 8 MP ಕ್ಯಾಮೆರಾವನ್ನು ಅಳವಡಿಸಲಾಗಿದೆ. ನೂತನ ಆಂಡ್ರಾಯ್ಡ್ ನ್ಯಾಗಾದಲ್ಲಿ ಕಾರ್ಯನಿರ್ವಹಿಸಲಿದ್ದು, 2 GB RAM ಹಾಗೂ 16 GB ಆಂತರಿಕ ಮೆಮೊರಿ ಇದರಲ್ಲಿದೆ. 128 GB ವರೆಗೂ ಮೆಮೊರಿ ವಿಸ್ತರಿಸಿಕೊಳ್ಳುವ ಅವಕಾಶ ಇದೆ. ಈ ಫೋನಿನಲ್ಲಿ 5 ಇಂಚಿನ HD ಡಿಸ್‌ಪ್ಲೇ ಜೊತೆಗೆ ರಕ್ಷಣೆಗಾಗಿ ಗೋರಿಲ್ಲ ಗ್ಲಾಸ್ ಅವಳಡಿಸಲಾಗಿದೆ. ವೇಗದ ಕಾರ್ಯಚರಣೆಗೆ ಮೀಡಿಯಾ ಟೆಕ್ ಕ್ವಾಡ್ ಕೋರ್ 1.3GHz ಪ್ರೋಸೆಸರ್, 2650mAh ಬ್ಯಾಟರಿ ಇದೆ, 4G ಸಪೋರ್ಟ್ ಮಾಡಲಿದೆ.

Best Mobiles in India

Read more about:
English summary
Organised by HMD Global, an event in Delhi could see the official launch of Nokia 6, Nokia 5 and Nokia 3, to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X