ಒಂದೇ ದಿನದಲ್ಲಿ 120 ದೇಶಗಳಲ್ಲಿ ನೋಕಿಯಾ ಸ್ಮಾರ್ಟ್‌ಫೋನ್ ಬಿಡುಗಡೆ: ಬೆಲೆ ಎಷ್ಟು..? ಯಾವಾಗ ಬಿಡುಗಡೆ..?

HMD ಗ್ಲೋಬಲ್ ಸಂಸ್ಥೆಯೂ ಒಂದೇ ದಿನದಲ್ಲಿ 120 ದೇಶಗಳಲ್ಲಿ ನೋಕಿಯಾ ಸ್ಮಾರ್ಟ್‌ಫೋನ್ ಮಾರಾಟ ಮಾಡಲು ತಯಾರಿ ನಡೆಸಿದೆ.

|

ವಿಶ್ವಾದ್ಯಂತ ನೋಕಿಯಾ ಫೋನ್‌ಗಳನ್ನುನು ಮಾರಾಟ ಮಾಡುವ ಪರವಾನಗಿ ಪಡೆದುಕೊಂಡಿರುವ HMD ಗ್ಲೋಬಲ್ ಸಂಸ್ಥೆಯೂ ಒಂದೇ ದಿನದಲ್ಲಿ 120 ದೇಶಗಳಲ್ಲಿ ನೋಕಿಯಾ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಲು ತಯಾರಿ ನಡೆಸಿದೆ. ಮೊನ್ನೆ ನಡೆದ ಮೊಬೈಲ್ ಕಾಂಗ್ರೆಸ್‌ ಸಮಾವೇಶದಲ್ಲಿ ಬಿಡುಗಡೆಯಾದ ಎಲ್ಲಾ ಫೋನ್‌ಗಳು ಒಮ್ಮೆಗೆ ಮಾರುಕಟ್ಟೆಗೆ ಬರಲಿವೆ.

ಒಂದೇ ದಿನದಲ್ಲಿ 120 ದೇಶಗಳಲ್ಲಿ ನೋಕಿಯಾ ಸ್ಮಾರ್ಟ್‌ಫೋನ್ ಬಿಡುಗಡೆ

ಓದಿರಿ: ಡ್ರೈವಿಂಗ್ ಲೈಸೆನ್ಸ್ ಮಾಡಿಸಲು ಲಂಚ ನೀಡಬೇಕಾಗಿಲ್ಲ: ಅದಕ್ಕಾಗಿ ಇಲ್ಲಿದೇ ಸುಲಭ ಉಪಾಯ..!!

ನೋಕಿಯಾ 6, ನೋಕಿಯಾ 5, ನೋಕಿಯಾ 3 ಮತ್ತು ನೋಕಿಯಾ 3310 ಫೋನ್‌ಗಳು 120 ದೇಶಗಳಲ್ಲಿ ಏಕಕಾಲಕ್ಕೆ ಮಾರುಕಟ್ಟೆಗೆ ಲಗ್ಗೆ ಇಡುತ್ತಿದ್ದು, ಗ್ರಾಹಕರು ತಮ್ಮ ನೆಚ್ಚಿನ ಪೋನುಗಳನ್ನು ಖರೀದಿಸಬಹುದಾಗಿದೆ. ಏಪ್ರೀಲ್ ತಿಂಗಳ ಮೊದಲ ವಾರದಲ್ಲಿ ಈ ಫೋನ್‌ಗಳು ಮಾರುಕಟ್ಟೆಗೆ ಬರಲಿದೆ ಎಂದು HMD ಗ್ಲೋಬಲ್ ಸಂಸ್ಥೆ ತಿಳಿಸಿದೆ.

ಓದಿರಿ: ಜಿಯೋ ಪ್ರೈಮ್ ಸದಸ್ಯರಾಗಲಿಲ್ಲವೆಂದರೆ ಆಗುವುದೇನು..? ನಿಮ್ಮ ಹಲವು ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ...!

ನೋಕಿಯಾ 3 ಸ್ಮಾರ್ಟ್‌ಫೋನ್:

ನೋಕಿಯಾ 3 ಸ್ಮಾರ್ಟ್‌ಫೋನ್:

1280×720 p ರೆಸಲ್ಯೂಷನ್ ಗುಣಮಟ್ಟದ 5 ಇಂಚಿನ IPS ಪರದೆಯನ್ನು ಹೊಂದಿರುವ ನೋಕಿಯಾ 3ಸ್ಮಾರ್ಟ್‌ಫೋನ್ , ಕ್ವಾಡ್ ಕೋರ್ ಮೀಡಿಯಾ ಟೆಕ್ MT6737 ಪ್ರೋಸೆಸರ್, 2GB RAM ಹಾಗೂ 16 GB ಇಂಟರ್ನಲ್ ಮೆಮೊರಿಯನ್ನು ಹೊಂದಿದೆ. ಹಿಂಭಾಗ ಮತ್ತು ಮುಂಭಾಗದಲ್ಲಿ 8 MP ಕ್ಯಾಮೆರಾ ಇದ್ದು, 2650 mAh ಬ್ಯಾಟರಿ ಮತ್ತು ಆಂಡ್ರಾಯ್ಡ್ ನ್ಯಾಗಾದಲ್ಲಿ ಕಾರ್ಯನಿರ್ವಹಿಸಲಿದೆ. ಬೆಲೆ: 9,800 ರೂ.

ನೋಕಿಯಾ 5 ಸ್ಮಾರ್ಟ್‌ಫೋನ್:

ನೋಕಿಯಾ 5 ಸ್ಮಾರ್ಟ್‌ಫೋನ್:

ಸ್ನಾಪ್‌ಡ್ರ್ಯಾಗನ್ 430 ಪ್ರೋಸೆಸರ್, 2GB RAM, 16GB ಇಂಟರ್ನಲ್ ಮೆಮೊರಿ, 1280×720 p ಗುಣಮಟ್ಟದ 5.2 ಇಂಚಿನ IPS LCD ಡಿಸ್‌ಪ್ಲೇ, ಹಿಂಭಾಗದಲ್ಲಿ 13 MP ಮುಂಭಾಗದಲ್ಲಿ 8 MP ಕ್ಯಾಮೆರಾ, ಜೊತೆಗೆ ಫಿಂಗರ್ ಪ್ರಿಂಟ್ ಸ್ಕ್ಯಾನರ್ ಹಾಗೂ 3000 mAh ಬ್ಯಾಟರಿ ಇದೆ. ಬೆಲೆ 13,500 ರೂ.

ನೋಕಿಯಾ 6 ಸ್ಮಾರ್ಟ್‌ಫೋನ್:

ನೋಕಿಯಾ 6 ಸ್ಮಾರ್ಟ್‌ಫೋನ್:

5.5 ಇಂಚಿನ full-HD ಡಿಸ್‌ಪ್ಲೇ, ಸ್ನಾಪ್‌ಡ್ರ್ಯಾಗನ್ 430 ಪ್ರೋಸೆಸರ್, 4 GB RAM, 64 GB ಇಂಟರ್ನಲ್ ಮೆಮೊರಿ, 3000 mAh ಬ್ಯಾಟರಿ, 16 MP ಹಿಂಭಾಗದ ಕ್ಯಾಮೆರಾ, 8 MP ಮುಂಭಾಗದಲ್ಲಿ ಕ್ಯಾಮೆರಾವನ್ನು ಹೊಂದಿದ್ದು, ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಇದೆ. ಬೆಲೆ: 16,000 ರೂ.

ನೋಕಿಯಾ 3310 ಫೀಚರ್ ಫೋನ್‌:

ನೋಕಿಯಾ 3310 ಫೀಚರ್ ಫೋನ್‌:

ಈ ಮೂರು ಸ್ಮಾರ್ಟ್‌ಫೋನ್ಗಳೊಂದಿಗೆ ನೋಕಿಯಾದ ಕ್ಲಾಸಿಕ್ ಪೋನುಗಳಲ್ಲಿ ಒಂದಾದ ನೋಕಿಯಾ 3310 ಫೀಚರ್ ಫೋನ್‌ ಸಹ ಮತ್ತೊಮ್ಮೆ ಹೊಸ ರೂಪದಲ್ಲಿ ಕಾಣಿಸಿಕೊಳ್ಳಿದೆ. ಬೆಲೆ: 3.500

Best Mobiles in India

Read more about:
English summary
Now however, the company has revealed that it will launch the entire lineup of smartphones this year in the second quarter in about 120 markets at the same time. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X