ನೋಕಿಯಾ ಲ್ಯೂಮಿಯಾ 530 ಬಾರತದಲ್ಲೂ ಲಭ್ಯ

By Shwetha
|

ಆಂಡ್ರಾಯ್ಡ್ ಮತ್ತು ಐಓಎಸ್‌ಗಳು ದೇಶದಲ್ಲಿ ಜನಪ್ರಿಯತೆಯ ತುತ್ತ ತುದಿಯನ್ನು ತಲುಪುತ್ತಿರುವಂತೆಯೇ, ವಿಂಡೋಸ್ ಫೋನ್ ಈ ಓಎಸ್‌ ಗುರಿಯನ್ನು ತಲುಪುವ ಆಲೋಚನೆಯಲ್ಲಿದೆ.

ಆದರೆ ವಿಂಡೋಸ್ ಈ ಗರಿಮೆಯನ್ನು ತನ್ನದಾಗಿಸಿಕೊಳ್ಳಬೇಕೆಂದಿದ್ದಲ್ಲಿ, ಸರಿಯಾದ ಮಾರ್ಗವನ್ನು ವಿಧಾನವನ್ನು ಅನುಸರಿಸುವುದು ಅತೀ ಅಗತ್ಯವಾಗಿದೆ. ಅದಕ್ಕಾಗಿಯೇ ಈಗ ಹೊಸ ಲಾಂಚಿಂಗ್ ಎಂಬಂತೆ ನೋಕಿಯಾ ಲ್ಯೂಮಿಯಾ 530 ಡ್ಯುಯಲ್ ಅನ್ನು ಉದಾಹರಣೆಯಾಗಿ ಮುಂದಿಟ್ಟುಕೊಂಡಿದೆ.

ಇನ್ನು ಫೋನ್‌ನ ವಿಶೇಷತೆಯನ್ನು ನೋಡಹೊರಟಾಗ ಇದು 4 ಇಂಚಿನ ಡಿಸ್‌ಪ್ಲೇಯನ್ನು ಒದಗಿಸುತ್ತಿದ್ದು ಇದರ ರೆಸಲ್ಯೂಶನ್ 854 x 480 ಪಿಕ್ಸೆಲ್‌ಗಳಾಗಿವೆ. ಇದರಲ್ಲಿರುವ ಪ್ರೊಸೆಸರ್ 1.2 GHz ಕ್ವಾಡ್ ಕೋರ್ ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರಾಗನ್ 200 ಆಗಿದ್ದು Adreno 302 GPU ಜೊತೆಗೆ 512MB RAM ಸಾಮರ್ಥ್ಯವನ್ನು ಫೋನ್‌ನಲ್ಲಿ ನಿಮಗೆ ಗಮನಿಸಬಹುದಾಗಿದೆ.

ವಿಂಡೋಸ್ ಫೋನ್ 8.1 ಓಎಸ್ ಇದರಲ್ಲಿದ್ದು, 5MP ರಿಯರ್ ಕ್ಯಾಮೆರಾವನ್ನು ಫೋನ್ ಹೊಂದಿದೆ. ಆದರೆ ದುರಾದೃಷ್ಟವಶಾತ್ ಇದು ಮುಂಭಾಗ ಕ್ಯಾಮೆರಾವನ್ನು ಹೊಂದಿಲ್ಲ. ಇದರ ಆಂತರಿಕ ಮೆಮೊರಿ ಸಾಮರ್ಥ್ಯ 4 ಜಿಬಿಯಾಗಿದ್ದು ಮೈಕ್ರೋಎಸ್‌ಡಿ ಕಾರ್ಡ್ ಮೂಲಕ ಇದನ್ನು 128 ಜಿಬಿಗೆ ವಿಸ್ತರಿಸಬಹುದಾಗಿದೆ.

ಇನ್ನು ಸಂಪರ್ಕ ಅಂಶಗಳೆಂದರೆ 3 ಜಿ, ವೈಫೈ 802.11 b/g/n, ಬ್ಲ್ಯೂಟೂತ್ 4.0, GPS / aGPS ಮತ್ತು ಇದು ಡ್ಯುಯಲ್ ಸಿಮ್ ಅನ್ನು ಒಳಗೊಂಡಿದೆ ಎಂಬುದೇ ಇದರ ಪ್ರಮುಖ ಆಕರ್ಷಣೆಯಾಗಿದೆ. ಇದರ ದಪ್ಪ 11.7 mm ಆಗಿದ್ದು ತೂಕ 129 ಗ್ರಾಮ್‌ಗಳಾಗಿವೆ. ಲ್ಯೂಮಿಯಾ 530 ಯ ಬ್ಯಾಟರಿ ಶಕ್ತಿ 1430 mAh ಆಗಿದೆ. ಈ ಫೋನ್ ದೊರೆಯುವ ಪ್ರಮುಖ ರೀಟೈಲ್ ತಾಣಗಳ ಮಾಹಿತಿಯನ್ನು ಕೆಳಗಿನ ಸ್ಲೈಡ್‌ಗಳಲ್ಲಿ ನಾವು ನೀಡುತ್ತಿದ್ದೇವೆ.

Best Mobiles in India

Read more about:
English summary
This article tells about Nokia Lumia 530 Dual Now Officially Available in India Top 5 Best Online Deals To Buy Smartphone.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X