ನೋಕಿಯಾ ಲ್ಯೂಮಿಯಾ 630 ಬಜೆಟ್ ಸ್ನೇಹಿ ಫೋನ್

By Shwetha
|

ಹೊಸ ನೋಕಿಯಾ ಲ್ಯೂಮಿಯಾ 630 ಒಂದು ಅತ್ಯಾಕರ್ಷಕ ಹಾರ್ಡ್‌ವೇರ್ ಡಿವೈಸ್ ಆಗಿದ್ದು ನಿಮಗೆ ನೋಕಿಯಾದ ವಿಭಿನ್ನ ಅನುಭೂತಿಯನ್ನು ಈ ಹ್ಯಾಂಡ್‌ಸೆಟ್ ಮಾಡಿಸಲಿದೆ. ನೋಕಿಯಾ ಎಂದೊಡನೆ ವಿಂಡೋಸ್ ಫೋನ್ ಓಎಸ್‌ನ ಸಮಸ್ಯೆಗಳು ಮನಸ್ಸಿಗೆ ಬರುವುದು ಸಹಜವೇ ಆದರೆ ನೋಕಿಯಾ ಲ್ಯೂಮಿಯಾ 630 ನಿಮಗಿಂತಹ ಕೆಟ್ಟ ಅನುಭವವನ್ನು ನೀಡುವುದಿಲ್ಲ.

ಇತ್ತೀಚಿನ ಸ್ಮಾರ್ಟ್‌ಫೋನ್‌ಗಳು ಆಂಡ್ರಾಯ್ಡ್ ಓಎಸ್ ವಿಚಾರವನ್ನು ಮನದಲ್ಲಿಟ್ಟುಕೊಂಡು ರೂಪುತಳೆಯುತ್ತಿವೆ ಮತ್ತು ಬಳಕೆದಾರರ ಮನದಲ್ಲೂ ಆಂಡ್ರಾಯ್ಡ್ ಗಂಭೀರ ಪರಿಣಾಮವನ್ನು ಉಂಟುಮಾಡಿದೇ ಎಂದೇ ಹೇಳಬಹುದು. ಆದರೆ ನೋಕಿಯಾ ಲ್ಯೂಮಿಯಾ 630 ವಿಂಡೋಸ್ ಆವೃತ್ತಿಯಲ್ಲಿ ಕೂಡ ಉತ್ತಮ ಫೋನ್ ವೈಶಿಷ್ಟ್ಯವನ್ನು ಬಳಕೆದಾರರಿಗೆ ನೀಡಲಿದೆ. ವಿಂಡೋಸ್ ಫೋನ್ ಕೂಡ ಹಿಂದಿಲ್ಲ ಎಂಬ ಅಂಶವನ್ನು ಇಲ್ಲಿ ನೆನಪಿಸುವಂತಹ ಕೆಲಸವನ್ನು ನೋಕಿಯಾ ಮಾಡಿದೆ ಎಂದೇ ಹೇಳಬಹುದು.

ನೋಕಿಯಾ ಲ್ಯೂಮಿಯಾ 630 ವೀಡಿಯೋ ವಿಮರ್ಶೆ

ಡ್ಯುಯೆಲ್ ಸಿಮ್ ಆವೃತ್ತಿಯ ಲ್ಯೂಮಿಯಾ 630 ಅನ್ನು ಭಾರತದಲ್ಲಿ ಈಗಷ್ಟೇ ಲಾಂಚ್ ಮಾಡಲಾಗಿದೆ, ಇದು ವಿಂಡೋಸ್ ಫೋನ್ 8.1 ಆವೃತ್ತಿಯನ್ನು ಚಾಲನೆ ಮಾಡುವ ಪ್ರಥಮ ಫೋನ್ ಆಗಿದೆ. ಲ್ಯೂಮಿಯಾ 620 ಯ ಸ್ಥಾನಾಂತರ ಎಂದು ಕೂಡ ಲ್ಯೂಮಿಯಾ 630 ಅನ್ನು ಕರೆಯಬಹುದಾಗಿದೆ. ಲ್ಯೂಮಿಯಾ ಬ್ರ್ಯಾಂಡ್ ಉಳ್ಳ ಇತರ ಡಿವೈಸ್‌ಗಳು ಮಾರುಕಟ್ಟೆಗೆ ಬಂದಂತೆ ಈ ಡಿವೈಸ್ ಕೂಡ ಅಡಿಇಟ್ಟಿದ್ದು ದರ ವಿನ್ಯಾಸ ಅತ್ಯಪೂರ್ಣವಾಗಿದೆ. ಫೋನ್‌ನ ಹಿಂಭಾಗ ಕೂಡ ಅತ್ಯದ್ಭುತ ಫಿನಿಶಿಂಗ್ ಅನ್ನು ಒಳಗೊಂಡಿದ್ದು ಡಿವೈಸ್‌ಗೆ ಮಹತ್ವ ಇದರಿಂದಲೇ ಬಂದಿದೆ ಎಂದೂ ಕೂಡ ಹೇಳಬಹುದು.

ಇದು ಮುಂಭಾಗದಲ್ಲಿ ನೋಕಿಯಾದ ಲೋಗೋವನ್ನು ಒಳಗೊಂಡಿದ್ದು, ಡಿವೈಸ್ ಮುಂಭಾಗ ಕ್ಯಾಮೆರಾವನ್ನು ಹೊಂದಿಲ್ಲ ಎಂಬುದು ದುರಾದೃಷ್ಟಕರ ಅಂಶವಾಗಿದೆ. ಪವರ್ ಬಟನ್ ಮತ್ತು ವಾಲ್ಯೂಮ್ ರಾಕರ್ ಅನ್ನು ಫೋನ್‌ನ ಬಲಭಾಗದಲ್ಲಿ ನಿಯೋಜಿಸಲಾಗಿದ್ದು ಮೇಲ್ಬಾಗ ಮತ್ತು ಕೆಳಭಾಗದಲ್ಲಿ ಹೆಡ್‌ಸೆಟ್ ಜಾಕ್ ಹಾಗೂ ಮೈಕ್ರೋ ಯುಎಸ್‌ಬಿ ಪೋರ್ಟ್ ಅನ್ನು ಅಳವಡಿಸಬಹುದಾಗಿದೆ.

ಡಿವೈಸ್ ಕ್ಯಾಮೆರಾ, ಬ್ಲ್ಯೂಟೂತ್, ವೈಫೈ ಮತ್ತು ಬ್ರೈಟ್‌ನೆಸ್ ಹಂತಗಳನ್ನು ಒಳಗೊಂಡಿದ್ದು ಫೋನ್‌ನಲ್ಲಿ ನಿಮ್ಮ ಆಯ್ಕೆಯಂತೆ ಕೆಲವೊಂದು ಬದಲಾವಣೆಗಳನ್ನು ಮಾಡಬಹುದಾಗಿದೆ. ಇದು ಅತ್ಯಂತ ಶಕ್ತಿಯುತ ಪ್ರೊಸೆಸರ್ ಜೊತೆಗೆ ಬಂದಿದ್ದು ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರಾಗನ್ 400 ಅನ್ನು ಡಿವೈಸ್ ಒಳಗೊಂಡಿದೆ. ಇದು 1.2GHz ಕ್ವಾಡ್ ಕೋರ್ ಸಿಸ್ಟಮ್ ಅನ್ನು ಒಳಗೊಂಡಿದ್ದು ಅಡ್ರೆನೋ 305 ಗ್ರಾಫಿಕ್ಸ್ ಅನ್ನು ಫೋನ್ ಹೊಂದಿದೆ.

ಡಿವೈಸ್‌ನ RAM ಸಾಮರ್ಥ್ಯ 512 ಎಮ್‌ಬಿಯಾಗಿದ್ದು ಒಂದು ಉತ್ತಮ ಹ್ಯಾಂಡ್‌ಸೆಟ್ ಆಗಿ ಮೂಡಿ ಬಂದಿದೆ.

<center><iframe width="100%" height="360" src="//www.youtube.com/embed/igYcIMgHgV8?feature=player_detailpage" frameborder="0" allowfullscreen></iframe></center>

Best Mobiles in India

Read more about:
English summary
Nokia lumia 630 dual smartphone review and specifications

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X