ನೋಕಿಯಾದಿಂದ ಬಿಡುಗಡೆಯಾಗುತ್ತಿದೆ ಹೊಸ ಸ್ಮಾರ್ಟ್‌ಪೋನ್‌ಗಳು... !

ನೋಕಿಯಾದಿಂದ ಮಧ್ಯಮ ಬೆಲೆಯ ಸ್ಮಾರ್ಟ್‌ಪೋನ್‌ಗಳನ್ನು ಬಿಡುಗಡೆ ಮಾಡಲಾಗುತ್ತಿದ್ದು, ಇವುಗಳಲ್ಲಿ Nokia P ಮತ್ತು Nokia Z2 PLus ಎಂಬ ಎರಡು ಪೋನ್ ಗಳ ಕುರಿತ ಮಾಹಿತಿ ಲಭ್ಯವಾಗಿದೆ.

|

ಹೊಸ ವರ್ಷದಂದು ಬಿಡುಗಡೆಗೆ ಸಿದ್ಧವಾಗಿರುವ ನೋಕಿಯಾ ಸ್ಮಾರ್ಟ್‌ಪೋನ್‌ಗಳ ಮೇಲೆ ಎಲ್ಲರ ದೃಷ್ಟಿ ನೆಟ್ಟಿದ್ದು, ಈ ಹಿನ್ನಲೆಯಲ್ಲಿ ತನ್ನ ನೂತನ ಪೋನ್ ಗಳ ಕುರಿತ ಮಾಹಿತಿಯನ್ನು ನೋಕಿಯ ಗೌಪ್ಯವಾಗಿರಿಸಿದೆ. ಆದರೆ ಕೆಲವು ಪೋನ್‌ಗಳ ಮಾಹಿತಿಗಳು ಆನ್‌ಲೈನಲ್ಲಿ ಲೀಕ್ ಆಗಿದ್ದು, ಅವುಗಳ ಕುರಿತಾದ ವರದಿ ಮುಂದಿದೆ.

ನೋಕಿಯಾದಿಂದ ಬಿಡುಗಡೆಯಾಗುತ್ತಿದೆ ಹೊಸ ಸ್ಮಾರ್ಟ್‌ಪೋನ್‌ಗಳು... !

2016ರ ಬೆಸ್ಟ್ ಸ್ಮಾರ್ಟ್‌ಪೋನ್‌ಗಳು ಯಾವುದು ಅಂತೀರಾ..? ಇಲ್ಲಿದೇ ನೋಡಿ ಡಿಟ್ಲೈಲ್ಸ್

ನೋಕಿಯಾದಿಂದ ಮಧ್ಯಮ ಬೆಲೆಯ ಸ್ಮಾರ್ಟ್‌ಪೋನ್‌ಗಳನ್ನು ಬಿಡುಗಡೆ ಮಾಡಲಾಗುತ್ತಿದ್ದು, ಇವುಗಳಲ್ಲಿ Nokia P ಮತ್ತು Nokia Z2 PLus ಎಂಬ ಎರಡು ಪೋನ್ ಗಳ ಕುರಿತ ಮಾಹಿತಿ ಲಭ್ಯವಾಗಿದೆ. ಈ ಪೋನ್ ಗಳ ಜನವರಿಯಲ್ಲಿ ನಡೆಯುವ MWC 2017 ಕಾರ್ಯಕ್ರಮದಲ್ಲಿ ಪ್ರದರ್ಶನಕ್ಕೆ ಇರಿಸಲಾಗುವುದು ಎನ್ನಲಾಗಿದೆ.

ನೋಕಿಯಾ ಯೋಜನೆಗಳೇನು:

ನೋಕಿಯಾ ಯೋಜನೆಗಳೇನು:

ನೋಕಿಯಾ ಮತ್ತೆ ಭಾರತೀಯ ಮಾರುಕಟ್ಟೆಯಲ್ಲಿ ತನ್ನ ಅಧಿಪತ್ಯವನ್ನು ಮತ್ತೆ ಸ್ಥಾಪಿಸಲು ಭರ್ಜರಿ ಸಿದ್ಧತೆ ನಡೆಸಿದ್ದು, ಈ ಹಿನ್ನಲೆಯಲ್ಲಿ ಕಡಿಮೆ ಬೆಲೆಯ ಆರಂಭಿಕ ವರ್ಗದ ಸ್ಮಾರ್ಟ್‌ಪೋನ್ ಗಳು, ಮಧ್ಯಮ ಬೆಲೆಯ ಸ್ಮಾರ್ಟ್‌ಪೋನ್ ಗಳು ಹಾಗೂ ಟಾಪ್ ಎಂಡ್ ಸ್ಮಾರ್ಟ್‌ಪೋನ್ ಗಳನ್ನು ಏಕಕಾಲಕ್ಕೆ ಬಿಡುಗಡೆ ಮಾಡಲು ತಯಾರಾಗಿದೆ. ಸದ್ಯ ಮಾಹಿತಿ ದೊರೆತಿರುವ ಈ ಎರಡು ಸ್ಮಾರ್ಟ್‌ಪೋನ್ ಗಳು ಮಧ್ಯಮ ಬೆಲೆಗೆ ಲಭ್ಯವಿದೆ ಎನ್ನಲಾಗಿದೆ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Nokia P ಸ್ಮಾರ್ಟ್‌ಪೋನ್ ವಿಶೇಷತೆಗಳು:

Nokia P ಸ್ಮಾರ್ಟ್‌ಪೋನ್ ವಿಶೇಷತೆಗಳು:

HD ರೆಸಲ್ಯೂಶನ್ ನ 5.5 ಇಂಚಿನ 2K ಡಿಸ್‌ಪ್ಲೇ ಹೊಂದಿರುವ Nokia P, ಆಂಡ್ರಾಯ್ಡ್ 6.1 ಕಾರ್ಯಚರಣೆ ವ್ಯವಸ್ಥೆಯೊಂದಿಗೆ 6GB RAM ಮತ್ತು ಸ್ನಾಪ್ ಡ್ರ್ಯಾಗನ್ 820 ಪ್ರೊಸೆಸರ್ ಹೊಂದಿದ್ದು, 23 MP ಪ್ರೈಮರಿ ಕ್ಯಾಮೆರಾ ಇದೆ. ವೇಗವಾಗಿ ಕಾರ್ಯ ನಿರ್ವಹಿಸುವ ಜೊತೆಗೆ ಉತ್ತಮ ಗುಣಮಟ್ಟದ ಕ್ಯಾಮೆರಾ ಸಹ ಹೊಂದಿದೆ.

Nokia Z2 PLus ವಿಶೇಷತೆಗಳು:

Nokia Z2 PLus ವಿಶೇಷತೆಗಳು:

ನೋಕಿಯಾದ ಈ ಪೋನ್ ನಲ್ಲಿ 1.77GHz ವೇಗದ ಕ್ವಾಲ್ಕಾಮ್ ಕ್ವಾಡ್ ಕೋರ್ ಪ್ರೊಸೆಸರ್ ಅಳವಡಿಸಲಾಗಿದ್ದು, ವೇಗದ ಕಾರ್ಯ ನಿರ್ವಹಣೆಗೆ ಇದು ಸಹಾಯಕಾರಿಯಾಗಿದೆ. ಇದರೊಂದಿಗೆ ಸ್ನ್ಯಾಪ್ ಡ್ರ್ಯಾಗನ್ 820 ಚಿಪ್‌ಸೆಟ್ ಸಹ ಇದೆ. ಆಂಡ್ರಾಯ್ಡ್ 6.1 ಕಾರ್ಯಚರಣೆ ವ್ಯವಸ್ಥೆಯೊಂದಿಗೆ 4GB RAM ಸಹ ಇದೆ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Best Mobiles in India

English summary
Nokia Z2 Plus and Nokia P smartphones were leaked, Nokia smartphones that are to be launched at MWC 2017. to konw more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X