ಭಾರತ ಸ್ಮಾರ್ಟ್‌ಪೋನ್‌ ತಯಾರಿಸಲಿರುವ ನೋಕಿಯಾ: ಜೂನ್ ವೇಳೆಗೆ ಮಾರುಕಟ್ಟೆಯಲ್ಲಿ ನೋಕಿಯಾ ಲಭ್ಯ..!!

ಈ ಹಿಂದೆ ಭಾರತದಲ್ಲೇ ಸ್ಮಾರ್ಟ್‌ಪೋನು ಉತ್ಪಾದಿಸುತ್ತಿದ್ದ ನೋಕಿಯಾ ಮತ್ತೇ ಭಾರತದಲ್ಲಿಯೇ ಮೊಬೈಲ್ ಉತ್ಪಾದನೆಯನ್ನು ಆರಂಭಿಸಲಿದೆಯಂತೆ.

Written By:

ಬಾರ್ಸಿಲೊನ ದಲ್ಲಿ ನಡೆಯುತ್ತಿರುವ ಮೊಬೈಲ್ ವರ್ಲ್ಡ್ ಕಾಂಗ್ರೆಸ್ ಸಮವೇಶದಲ್ಲಿ ಮೂರು ಸ್ಮಾರ್ಟ್‌ಪೋನುಗಳು ಸೇರಿದಂತೆ ಒಂದು ಫಿಚರ್ ಪೋನನ್ನು ಬಿಡುಗಡೆ ಮಾಡಿದ ನೋಕಿಯಾ, ಸದ್ಯ ಮತ್ತೊಂದು ಪ್ರಕಟಣೆಯನ್ನು ಮಾಡಿದ್ದು, ಈ ಹಿಂದೆ ಭಾರತದಲ್ಲೇ ಸ್ಮಾರ್ಟ್‌ಪೋನು ಉತ್ಪಾದಿಸುತ್ತಿದ್ದ ನೋಕಿಯಾ ಮತ್ತೇ ಭಾರತದಲ್ಲಿಯೇ ಮೊಬೈಲ್ ಉತ್ಪಾದನೆಯನ್ನು ಆರಂಭಿಸಲಿದೆಯಂತೆ.

ಭಾರತ ಸ್ಮಾರ್ಟ್‌ಪೋನ್‌ ತಯಾರಿಸಲಿರುವ ನೋಕಿಯಾ: ಜೂನ್ ವೇಳೆಗೆ ಮಾರುಕಟ್ಟೆಗೆ

ಓದಿರಿ: ಲಾಂಚ್ ಆಯ್ತು ಮೊಟೊ G5, ಮೊಟೊ G5 ಪ್ಲಸ್: ಮಾರ್ಚ್‌ನಲ್ಲಿ ಮಾರುಕಟ್ಟೆಗೆ..!!

ಈ ಹಿಂದೆ ಭಾರತೀಯ ಮಾರುಕಟ್ಟೆಯಲ್ಲಿ ಅಧಿಪತ್ಯವನ್ನು ಸ್ಥಾಪಿಸಿದ್ದ ನೋಕಿಯಾ ಮತ್ತೆ ಅದೇ ಹಿಡಿತವನ್ನು ಮತ್ತೆ ಪಡೆಯಲು ಸಿದ್ಧತೆ ನಡೆಸಿದ್ದು, ಈ ಹಿನ್ನಲೆಯಲ್ಲಿ ಭಾರತದಲ್ಲೇ ಮೊಬೈಲ್ ತಯಾರಿಸಿ, ಇಲ್ಲದೇ ಮಾರಾಟ ಮಾಡಲಿದೆಯಂತೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

ಭಾರತದಲ್ಲಿಯೇ ನೋಕಿಯಾ ಉತ್ಪಾದನೆ

ಈ ಕುರಿತು ಮಾತನಾಡಿರುವ ಹೆಎಂಡಿ ಗ್ಲೋಬಲ್ ಸಂಸ್ಥೆ ಭಾರತೀಯ ವಿಭಾಗದ ಉಪ ನಿರ್ದೇಶಕ ಅಜೈ ಮೆಹೆತಾ, ಹೆಎಂಡಿ ಗ್ಲೋಬಲ್ ಸಂಸ್ಥೆಯೂ ಭಾರತದಲ್ಲಿಯೇ ನೋಕಿಯಾ ಸ್ಮಾರ್ಟ್‌ಪೊನುಗಳ ತಯಾರಿಕೆಯನ್ನು ಆರಂಭಿಸಲು ಮುಂದಾಗಿದ್ದು, ಇದಕ್ಕಾಗಿ ಫಾಕ್ಸ್ ಕಾನ್ ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಳ್ಳಲು ಮುಂದಾಗಿದೆ ಎಂದು ಅವರು ತಿಳಿಸಿದ್ದಾರೆ.

ಜೂನ್ ವೇಳೆಗೆ ನೋಕಿಯಾ ಮಾರುಕಟ್ಟೆಗೆ

ಇದಲ್ಲದೇ ನೋಕಿಯಾ ಸ್ಮಾರ್ಟ್‌ಪೊನುಗಲು ಜೂನ್ ವೇಳೆಗೆ ಭಾರತೀಯ ಮಾರುಕಟ್ಟೆಯಲ್ಲಿ ಲಭ್ಯವಿರಲಿದೆ ಎನ್ನುವ ಮಾಹಿತಿಯನ್ನು ನೀಡಿದ್ದಾರೆ. ಅಲ್ಲದೇ ನೋಕಿಯಾ ಸ್ಮಾರ್ಟ್‌ಪೋನುಗಳು ಮೊದಲಿಗೆ ಆನ್‌ಲೈನಿನಲ್ಲಿ ಮಾರಾಟವಾಗಲಿದ್ದು, ನಂತರ ನೆಟ್‌ವರ್ಕ್ ಹೊಂದಿರುವ ಮೊಬೈಲ್ ಶಾಪ್‌ಗಳಲ್ಲಿ ಯೂ ನೋಕಿಯಾ ಲಭ್ಯವಾಗಲಿದೆ ಎಂದು ಮಾಹಿತಿ ನೀಡಿದ್ದಾರೆ.

ನೋಕಿಯಾ ಮೇಡ್ ಇನ್ ಇಂಡಿಯಾ

ಇದಲ್ಲದೇ ಭಾರತದಲ್ಲಿ ಲಭ್ಯವಿರುವ ಪೋನುಗಳು ಮೈಡ್‌ ಇನ್ ಇಂಡಿಯಾ ಆಗಿರಲಿದ್ದು, ಬೆಲೆಗಳು ಈಗಾಗಲೇ ಘೋಷಣೆ ಮಾಡಿದಂತೆ ಯೂರೋಪಿಯನ್ ಮಾರುಕಟ್ಟೆಗೆ ಸಮವಾಗಿರಲಿದೆ ಎಂದು ಹೇಳಿದ್ದಾರೆ.

ನೋಕಿಯಾ ಪೋನುಗಳ ಬೆಲೆ:

ನೋಕಿಯಾ 3 ಸ್ಮಾರ್ಟ್‌ಪೋನು 9,800 ರೂ.ಗಳಿಗೆ ಲಭ್ಯವಿರಲಿದ್ದು, ನೋಕಿಯಾ 5 ಸ್ಮಾರ್ಟ್‌ 14,000 ರೂ.ಗಳಿಗೆ ಮಾರಾಟವಾಗಲಿದೆ. ಇದರೊಂದಿಗೆ ಬಿಡುಗಡೆಯಾದ ಮತ್ತೊಂದು ಪೋನು ನೋಕಿಯಾ 6 ನ ಬೆಲೆ 16,000 ರೂಗಳಾಗಲಿದೆ, ಇನ್ನು ನೋಕಿಯಾ 3310 ಪೋನಿನ ಬೆಲೆ 3,500 ರೂಗಳಾಗಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

 

 

 Read more about:
English summary
HMD is planning to manufacture the new handsets in India right from the beginning in collaboration with Foxconn. to know more visit kannada.gizbot.com
Please Wait while comments are loading...
Opinion Poll

Social Counting