'ಪೆನಾಸೋನಿಕ್ ಪಿ77' ಫೋನ್‌ ಫ್ಲಿಪ್‌ಕಾರ್ಟ್‌ನಲ್ಲಿ ರೂ.5,299 ಕ್ಕೆ ಲಭ್ಯ: 4500 ವರೆಗೆ ಎಕ್ಸ್‌ಚೇಂಜ್‌ ಆಫರ್

ಬಜೆಟ್‌ ಬೆಲೆಯಲ್ಲಿ ಖರೀದಿಸಬಹುದಾದ ಈ ಸ್ಮಾರ್ಟ್‌ಫೋನ್‌ನ ವಿಶೇಷ ಫೀಚರ್‌ಗಳೇನು ಎಂಬುದನ್ನು ತಿಳಿಯಿರಿ.

Written By:

ಪೆನಾಸೋನಿಕ್ ಇಂಡಿಯಾ ತನ್ನ ಪಿ77(P77) ಸ್ಮಾರ್ಟ್‌ಫೋನ್‌ ಅನ್ನು ಫ್ಲಿಪ್‌ಕಾರ್ಟ್‌ನಲ್ಲಿ ಕೇವಲ ರೂ.5,299 ಕ್ಕೆ ಮಾರಾಟ ಮಾಡುತ್ತಿದೆ. ಸ್ಮಾರ್ಟ್‌ಫೋನ್ ಹೆಚ್ಚುವರಿಯಾಗಿ ಶೇ.10 ಇನ್‌ಸ್ಟಾಂಟ್ ಡಿಸ್ಕೌಂಟ್‌ ಅನ್ನು ಆಕ್ಸಿಸ್ ಬ್ಯಾಂಕ್‌ ಡೆಬಿಟ್ ಕಾರ್ಡ್‌ ಮತ್ತು ಕ್ರೆಡಿಟ್ ಬಳಕೆದಾರರಿಗೆ ಇಂದು (ಡಿಸೆಂಬರ್ 8) ನೀಡುತ್ತಿದೆ. ಬಜೆಟ್‌ ಬೆಲೆಯಲ್ಲಿ ಖರೀದಿಸಬಹುದಾದ ಪಿ77(P77) ಸ್ಮಾರ್ಟ್‌ಫೋನ್‌ ಬೂದು ಬಣ್ಣ ಮತ್ತು ಬಿಳಿ ಬಣ್ಣಗಳ ವೈವಿಧ್ಯತೆಯಲ್ಲಿ ಫ್ಲಿಪ್‌ಕಾರ್ಡ್‌ನಲ್ಲಿ ಲಭ್ಯ.

ಬಜೆಟ್‌ ಬೆಲೆಯಲ್ಲಿ ಖರೀದಿಸಬಹುದಾದ ಈ ಸ್ಮಾರ್ಟ್‌ಫೋನ್‌ನ ವಿಶೇಷ ಫೀಚರ್‌ಗಳೇನು ಎಂಬುದನ್ನು ತಿಳಿಯಿರಿ.

'ರಿಲಾಯನ್ಸ್ ಜಿಯೋ' ಸಿಮ್ ಪ್ರಿವೀವ್ ಆಫರ್ ಯಾವ ಫೋನ್‌ಗಳಿಗೆ? ಇಲ್ಲಿದೆ ಲೀಸ್ಟ್

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

ಡಿಸ್‌ಪ್ಲೇ

ನಯವಾದ ವಿನ್ಯಾಸ ಹೊಂದಿರುವ ಪಿ77 ಡ್ಯುಯಲ್‌ ಸಿಮ್‌ ಸ್ಮಾರ್ಟ್‌ಫೋನ್ 5 ಇಂಚಿನ ಎಚ್‌ಡಿ ಡಿಸ್‌ಪ್ಲೇ ಹೊಂದಿದ್ದು 720 x 1280 ಪಿಕ್ಸೆಲ್‌ ರೆಶಲ್ಯೂಶನ್‌ ಹೊಂದಿದೆ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರೊಸೆಸರ್ ಮತ್ತು ಇತರೆ

1 GHz ಕ್ವಾಡ್ ಕೋರ್ ಪ್ರೊಸೆಸರ್ ಜೊತೆಗೆ 1GB RAM ಹೊಂದಿದೆ. 8GB ಆಂತರಿಕ ಮೆಮೊರಿ ಹೊಂದಿದ್ದು, 32GB ವರೆಗೆ ಮೈಕ್ರೋ ಎಸ್‌ಡಿ ಕಾರ್ಡ್‌ ಮೂಲಕ ಮೆಮೊರಿ ಸಾಮರ್ಥ್ಯ ವಿಸ್ತರಣೆ ಮಾಡಬಹುದು.

ಸಾಫ್ಟ್‌ವೇರ್ ಮತ್ತು ಕ್ಯಾಮೆರಾ

ಪಿ77(P77) ಸ್ಮಾರ್ಟ್‌ಫೋನ್‌ ಬೆಲೆ ಕಡಿಮೆ ಆದರೂ ಫೀಚರ್‌ಗಳಿಗೆ ಕೊರತೆ ಇಲ್ಲ. ಯಾಕಂದ್ರೆ ಆಂಡ್ರಾಯ್ಡ್ 5.0 ಲಾಲಿಪಪ್ ಓಎಸ್‌ ಚಾಲಿತವಾಗಿದೆ. 8MP ಹಿಂಭಾಗ ಕ್ಯಾಮೆರಾ ಜೊತೆಗೆ ಎಲ್‌ಇಡಿ ಫ್ಲ್ಯಾಶ್ ಮತ್ತು 2MP ಸೆಲ್ಫಿ ಫೇಸಿಂಗ್ ಕ್ಯಾಮೆರಾ ಹೊಂದಿದೆ.

ಫೋನ್‌ ಸಂಪರ್ಕಗಳು ಮತ್ತು ಬ್ಯಾಟರಿ

4G, 4G VoLTE, 3G, ವೈಫೈ, ಬ್ಲೂಟೂತ್ ಮತ್ತು ಜಿಪಿಎಸ್ ಸಂಪರ್ಕಗಳನ್ನು ಹೊಂದಿದೆ. 2000mAh ಲಿಥಿಯಂ ಪಾಲಿಮರ್ ಬ್ಯಾಟರಿ ಬೆಂಬಲವಿದೆ. ಎಫ್‌ಎಂ ಸಪೋರ್ಟ್ ಹೊಂದಿದೆ.

ಹೆಚ್ಚುವರಿ ಆಫರ್

4G VoLTE ಸಪೋರ್ಟ್ ಆಧಾರಿತ ಪಿ77 ಸ್ಮಾರ್ಟ್‌ಫೋನ್‌ ಅನ್ನು ಹಳೆಯ ಪೋನ್‌ಗಳ ಎಕ್ಸ್‌ಚೇಂಜ್‌ ಆಫರ್‌ನೊಂದಿಗೆ ರೂ.4500 ವರೆಗೆ ಡಸ್ಕೌಂಟ್‌ ಪಡೆಯಬಹುದು. ಆದರೆ ಎಕ್ಸ್‌ಚೇಂಜ್ ಆಫರ್ ಮತ್ತು ಶೇ.10 ಡಿಸ್ಕೌಂಟ್‌ ಆಫರ್‌ಗಳು ಇಂದು ಡಿಸೆಂಬರ್ 8 ರಂದು ಮಾತ್ರ ಲಭ್ಯ. ಡಿವೈಸ್ ಮಧ್ಯಮ ವರ್ಗದ ಎಲ್ಲರಿಗೂ ಕೈಗೆಟಕುವ ಬೆಲೆಯದ್ದಾಗಿದೆ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿRead more about:
English summary
Panasonic P77 now available at Rs. 5299/- exclusively on Flipkart. To know more visit kannada.gizbot.com
Please Wait while comments are loading...
Opinion Poll

Social Counting