ಜಿಯೋನಿ ಎಸ್ 5.5 ಅನ್ನು ಮೀರಿಸಲಿರುವ ಫಿಲಿಪ್ಸ್ ಫೋನ್

By Shwetha
|

ಪ್ರಸ್ತುತ ಚೈನೀಸ್ ಸ್ಮಾರ್ಟ್‌ಫೋನ್ ತಯಾರಕ ಕಂಪೆನಿ ಜಿಯೋನಿ ಇಲೈಫ್ ಎಸ್ 5.5 ಜಗತ್ತಿನ ಸ್ಲಿಮ್ ಫೋನ್ ಆಗಿ ಮೆರೆಯುತ್ತಿದೆ. ಇದಕ್ಕೂ ಮುನ್ನ, ಹುವಾಯಿ ಅಸ್ಕೆಂಡ್ P6 ಈ ಹಿರಿಮೆಯನ್ನು ತನ್ನ ಮುಡಿಗೇರಿಸಿಕೊಂಡಿತ್ತು. ಆದರೀಗ ಫಿಲಿಪ್ಸ್ ಕಂಪೆನಿ ಇಲೈಫ್ ಎಸ್ 5.5 ನ ದಪ್ಪವನ್ನು ಮುರಿಯುವ ಪ್ರಯತ್ನದಲ್ಲಿದೆ.

ರೊಬೋಟ್ ತನ್ನ ಕೈಯಲ್ಲಿ ತುಂಬಾ ತೆಳುವಾದ ಫೋನ್ ಅನ್ನು ಹಿಡಿದುಕೊಂಡಿರುವ ಚಿತ್ರವನ್ನು ಕಂಪೆನಿ ಈಗಾಗಲೇ ಪರೀಕ್ಷಿಸುತ್ತಿದ್ದು, ಇದು ಜಿಯೋನಿ ಎಸ್ 5.5 ಗಿಂತಲೂ ತೆಳುವೇ ಎಂಬುದು ಇನ್ನೂ ಖಾತ್ರಿಯಾಗಿಲ್ಲ.

ಫಿಲಿಪ್ಸ್‌ನಿಂದ ಜಿಯೋನಿಗೆ ಪ್ರಬಲ ಪೈಪೋಟಿ

ಫಿಲಿಪ್ಸ್ ಕಂಪೆನಿಯ ಫೋನ್ ಆಗಿರುವ i908 ನಲ್ಲಿ 1.7GHz ಮೀಡಿಯಾ ಟೆಕ್ MT6592 ಓಕ್ಟಾ-ಕೋರ್ ಪ್ರೊಸೆಸರ್ ಇದ್ದು 2ಜಿಬಿ RAM ಇದೆ. ಇದು 5-ಇಂಚಿನ ಪೂರ್ಣ ಎಚ್‌ಡಿ (1080p) ಡಿಸ್‌ಪ್ಲೇ ಮತ್ತು 13-ಮೆಗಾಪಿಕ್ಸೆಲ್ ಕ್ಯಾಮೆರಾವನ್ನು ಹೊಂದಿದೆ. ಇದಲ್ಲದೆ ಇನ್ನೂ ಹೆಚ್ಚಿನ ಮಾಹಿತಿಗಳು ನಮಗೆ ದೊರಕಿಲ್ಲ.

ಈ ಫೋನ್ ಜಿಯೋನಿ ಇಲೈಫ್ ಎಸ್ 5.5 ನ ಗಾತ್ರಕ್ಕೆ ಮಾತ್ರವೇ ಪೈಪೋಟಿಯನ್ನು ನೀಡದೇ, ಫಿಲಿಪ್ಸ್ ಕೂಡ ಅದೇ ಓಕ್ಟಾ ಕೋರ್ ಪ್ರೊಸೆಸರ್ ಅನ್ನು ಚಾಲನೆ ಮಾಡುತ್ತಿದೆ. ಆದರೆ ಇದು ಎಷ್ಟು ಸಪೂರಕ್ಕಿದೆ ಎಂಬುದು ಮಾತ್ರ ತಿಳಿದುಬಂದಿಲ್ಲ.

ಭಾರತದಲ್ಲಿ ಕಳೆದ ಮೇನಲ್ಲೇ ಫಿಲಿಪ್ಸ್ ಕಂಪೆನಿ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳನ್ನು ಲಾಂಚ್ ಮಾಡಿತ್ತು. ಇದೀಗ ಚೀನಾದ ಮಾರುಕಟ್ಟೆಯನ್ನು ಹೆಚ್ಚು ಆಸಕ್ತಿಕರವಾಗಿ ತೆಗೆದುಕೊಳ್ಳುತ್ತಿದೆ. ಈ ಡಿವೈಸ್ ಇದಲ್ಲದೆ ಬೇರೆ ಮಾರುಕಟ್ಟೆಗೆ ಬರುತ್ತದೆಯೇ ಎಂಬುದನ್ನು ಕಾದು ನೋಡಬೇಕಾಗಿದೆ.

Best Mobiles in India

Read more about:
English summary
This article tells that Philips going to bring slim phone which could give tough competition to worlds slim phone gionee 5.5.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X