ಟೆಲಿಕಾಂ ಕ್ಷೇತ್ರಕ್ಕೆ ಮತ್ತೆ ಶಾಕ್‌!.. ಅಂಬಾನಿ ಹೊಸ ಫೋನ್ ವಿಶೇಷತೆ ಗೊತ್ತಾ?

ನೀವು ಇನ್ನು ಜಿಯೋ ಸಿಮ್ ಅಥವಾ LYF ಫೋನ್ ಖರೀದಿ ಮಾಡಿಲ್ವ? ಹಾಗದರೆ ಖುಷಿಪಡಿ!. ಏಕೆಂದರೆ ನೀವು 2017 ಕ್ಕೆ ಜಿಯೋ ಲಾಂಚ್ ಮಾಡಲಿರುವ ನೂತನ ಮೊಬೈಲ್‌ಗಳನ್ನು ಕೊಂಡುಕೊಳ್ಳಲು ತಯಾರಾಗಿ.

Written by: Bhaskar N J

ಹೌದು, ದೇಶದ ಶ್ರೀಮಂತ ವ್ಯಕ್ತಿ ಮುಖೇಶ್ ಅಂಬಾನಿ, ಟೆಲಿಕಾಂ ಪ್ರಪಂಚವನ್ನು ಹೇಗಾದರೂ ತನ್ನ ತೆಕ್ಕೆಗೆ ತೆಗೆದುಕೊಳ್ಳಬೇಕು ಎಂದು ಆಫರ್‌ಗಳ ಮೇಲೆ ಆಫರ್‌ಗಳನ್ನು ನೀಡುತ್ತಿದ್ದಾರೆ. ೨೦೧೬ ರಲ್ಲಿ ಫ್ರೀ ಡಾಟಾ ನೀಡುವ ಮೂಲಕ ಟೆಲಿಕಾಂ ಕ್ಷೇತ್ರಕ್ಕೆ ಕಾಲಿಟ್ಟ ಅಂಬಾನಿ, ಕೇವಲ ಎರಡು ತಿಂಗಳಿನಲ್ಲಿ ಮಿಲಿಯನ್‌ ಗಟ್ಟಲೇ ಗ್ರಾಹಕರನ್ನು ಸೆಳೆದುಕೊಂಡು ಟೆಲಿಕಾಂ ಕ್ಷೇತ್ರದಲ್ಲಿ ಹೊಸ ಸಂಚಲನವನ್ನೇ ಮೂಡಿಸಿದರು.

ಮೊಬೈಲ್‌ಗೆ ಬರುವ ವಂಚನೆ ಮೆಸೇಜ್‌ಗಳನ್ನು ತಡೆಯಿರಿ: ಮತ್ತು ನಿಮ್ಮವರನ್ನು ಕಾಪಾಡಿ!?

ಈಗಾಗಲೇ ಜಿಯೋಮಯವಾಗಿರುವ ಟೆಲಿಕಾಂ ಕ್ಷೇತ್ರಕ್ಕೆ ಅಂಬಾನಿ ಮತ್ತೆ ಶಾಕ್‌ ನೀಡಿದ್ದಾರೆ. ಹೌದು, ಕೇವಲ ೨೦೦೦ ರೂಪಾಯಿಗಳಿಗಿಂತಲೂ ಕಡಿಮೆ ದರದಲ್ಲಿ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡುವುದಾಗಿ ಅವರು ತಿಳಿಸಿದ್ದಾರೆ!. ಇದಿಷ್ಟೆ ಅಲ್ಲದೇ ಅನಿಮಿಯತ ಕರೆಗಳನ್ನು ಮಾಡುವ ಸೌಲಭ್ಯವನ್ನು ಅವರು ನೀಡಲಿದದ್ದಾರಂತೆ.!! ಹಾಗಾದರೆ ನೂತನ ಜಿಯೋ ಫೋನ್ ಏನೆಲ್ಲಾ ಸೌಲಭ್ಯಗಳನ್ನು ಹೊಂದಿದೆ ಎಂದು ಈ ಲೇಖನದಲ್ಲಿ ಓದಿರಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

2016 ಕ್ಕೆ ನೂತನ ಜಿಯೋ ಫೋನ್ ಬಿಡುಗಡೆ

4G volte ಅನ್ನು ಒಳಗೊಂಡಿರುವ ಜಿಯೋದ ನೂತನ ಫೋನ್ ಈ ವರ್ಷದ ಕೊನೆಯಲ್ಲಿ ಅಥವಾ 2017 ರ ಮೊದಲೆರಡು ತಿಂಗಳಿನಲ್ಲಿ ಬಿಡುಗಡೆಯಾಗುವುದಾಗಿ ಮೂಲಗಳಿಂದ ತಿಳಿದುಬಂದಿದೆ.

ಅನಿಮಿಯತ ಕರೆಗಳು ಮತ್ತು ವೀಡಿಯೋಕರೆಗಳನ್ನು ಜೀಯೋ ನೀಡಲಿದೆ.

ಹೊಸ ಜಿಯೋ ಫೋನ್ ಅನಿಮಿಯತ ಕರೆಗಳು ಮತ್ತು ವೀಡಿಯೋಕರೆಗಳನ್ನು ಹೊತ್ತು ನಿಮ್ಮ ಬಳಿಬರಲಿದೆ. ಈ ಫೋನ್ ಮೂಲಕ ಭಾರತದ ಹಳ್ಳಿಗಳಿಗೂ 4g ಕನೆಕ್ಷನ್ ಹೊರಕುತ್ತದೆ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದು ಟಚ್‌ಸ್ಕ್ರೀನ್ ಅಲ್ಲ! ಆದರೆ ಸ್ಮಾರ್ಟ್ ಫೋನ್ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತದೆ.

4G volte ಹೊಂದಿರುವ ಈ ಹೊಸ ಫೋನ್ ಟಚ್‌ಸ್ಕ್ರೀನ್ ಹೊಂದಿಲ್ಲ ಎಂದರೆ ನೀವು ನಂಬಲೇಬೇಕು. ಈ ಫೋನ್ ಕೀ ಪ್ಯಾಡ್ ಅನ್ನು ಹೊಂದಿದೆ. ವಿಶೇಷತೆ ಎಂದರೆ ಈ ಫೊನ್ ಎರಡೂ ಬದಿಯಲ್ಲಿ ಕ್ಯಾಮರಾವನ್ನು ಒಳಗೊಂಡಿದೆ.

ಬಜೆಟ್‌ಗೆ ಹೇಳಿ ಮಾಡಿಸಿದ ಫೋನ್!

ಲಾಂಚ್ ಆಗಲಿರುವ ಹೊಸ ಫೋನ್ 1000 ರಿಂದ 2000 ರೂಪಾಯಿಗಳಲ್ಲಿ ನಿಮ್ಮ ಕೈ ಸೇರಲಿದೆ. ಇನ್ನು ಅನಿಮಿಯತ ಕರೆ ಆಫರ್‌ನಿಂದ ನಿಮಗೆ ಹಣದ ಉಳಿತಾಯವಾಗುತ್ತದೆ.

ಮಾರುಕಟ್ಟೆ ಮೇಲೇ ಪರಿಣಾಮವೇನಾಗಬಹುದು?

ಈಗಾಗಲೇ ಜಿಯೋ ಫೋನ್‌ನಿಂದ ನಡುಗಿರುವ ಟೆಲಿಕಾಂ ಮಾರುಕಟ್ಟೆ ಈ ಫೊನ್‌ನಿಂದ ಮತ್ತೆ ಜಿಯೋಮಯವಾಗಬಹುದು. ಅನಿಮಿಯತ ಕರೆ ಸೌಲಭ್ಯವಿರುವುದರಿಂದ ಟೆಲಿಕಾಂ ಕಂಪೆನಿಗಳು ಮತ್ತಷ್ಟು ಪೈಪೋಟಿಗಿಳಿಯಬಹುದು

ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ



Read more about:
English summary
Reliance Jio Feature Phone with 4G Connectivity: Everything you Need to Know. to know more visit to kannada.gizbot.com
Please Wait while comments are loading...
Opinion Poll

Social Counting