ರಿಲಾಯನ್ಸ್ ಜಿಯೋದಿಂದ 2017 ರಲ್ಲಿ 4G ಸ್ಮಾರ್ಟ್‌ಫೋನ್‌ ಲಾಂಚ್‌: ಬೆಲೆ ರೂ.1,000

ರಿಲಾಯನ್ಸ್ ಜಿಯೋ ಸ್ಮಾರ್ಟ್‌ಫೋನ್‌ ಮಾರುಕಟ್ಟೆಗೆ ಅತೀ ಕಡಿಮೆ ಬಜೆಟ್‌ ಬೆಲೆಯ 4G ಸ್ಮಾರ್ಟ್‌ಫೋನ್ ಪರಿಚಯಿಸಲಿದೆ. ಜನವರಿ 2017 ಕ್ಕೆ ಬಿಡುಗಡೆ ಮಾಡುವ ಫೋನ್‌ಗಳ ಬೆಲೆ ಕೇವಲ ರೂ.1000

Written By:

ರಿಲಾಯನ್ಸ್ ಜಿಯೋ ಬಗ್ಗೆ ಇದುವರೆಗೂ ಕೇಳಿರುವ ಮಾಹಿತಿಯೇ ಬೇರೆ. ಇನ್ಮುಂದೆ ಕೇಳುವ ಮಾಹಿತಿಯೇ ಬೇರೆ. ಹೌದು, ರಿಲಾಯನ್ಸ್ ಜಿಯೋ ಈ ವರೆಗೆ ಉಚಿತ ಅನ್‌ಲಿಮಿಟೆಡ್ 4G ಇಂಟರ್ನೆಟ್ ಆಕ್ಸೆಸ್ ಮತ್ತು ಉಚಿತ ವಾಯ್ಸ್ ಕರೆ ಸೇವೆಯಿಂದ ಸುದ್ದಿಯಲ್ಲಿತ್ತು. ಇತ್ತೀಚೆಗಷ್ಟೆ ಏರ್‌ಟೆಲ್‌, ಟಾಟಾ ಸ್ಕೈ ಮತ್ತು ಇತರೆ ಡಿಟಿಎಚ್‌ ಸೇವೆಗಳಿಗೆ ವಿರುದ್ಧವಾಗಿ ಅತೀ ಕಡಿಮೆ ಬೆಲೆಯ ಡಿಟಿಎಚ್ ಸೇವೆ ಪರಿಚಯಿಸುವ ಬಗ್ಗೆಯೂ ಹೇಳಿದೆ. ಆದರೆ ಈಗ ರಿಲಾಯನ್ಸ್ ಜಿಯೋ ಭಾರತದಲ್ಲಿಯೇ ಮೊಟ್ಟ ಮೊದಲು 1,000 ಬಜೆಟ್‌ ಬೆಲೆಯಲ್ಲಿ 4G ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡುವ ಸಾಹಸದ ನಿರೀಕ್ಷೆಯಲ್ಲಿದೆ.

ಟೆಲಿಕಾಂ ಕ್ಷೇತ್ರವನ್ನು ಬಹುದೊಡ್ಡ ಮಟ್ಟದಲ್ಲಿ ಈಗಾಗಲೇ ಆವರಿಸಿರುವ ರಿಲಾಯನ್ಸ್ ಜಿಯೋ, ಪ್ರಸ್ತುತದಲ್ಲಿ ಡಿಟಿಎಚ್‌ ಮತ್ತು ಸ್ಮಾರ್ಟ್‌ಫೋನ್‌ ಕ್ಷೇತ್ರಕ್ಕೂ ಕಾಲಿರಿಸುತ್ತಿದೆ. ಭಾರತದ ಸ್ಮಾರ್ಟ್‌ಫೋನ್‌ ಮಾರುಕಟ್ಟೆಗೆ ಅತೀ ಕಡಿಮೆ ಬೆಲೆಯ 4G ಸಪೋರ್ಟ್‌ ಮಾಡುವ ಮೊಬೈಲ್‌ಗಳನ್ನು ಪರಿಚಯಿಸುವ ಗುರಿ ಹೊಂದಿದೆ. 'ನ್ಯೂಸ್ ವರ್ಲ್ಡ್‌ ಇಂಡಿಯಾ' ವರದಿ ಪ್ರಕಾರ ರಿಲಾಯನ್ಸ್ ಜಿಯೋ(Reliance Jio) 2017 ರ ಜನವರಿ ವೇಳೆಗೆ ಅತೀ ಕಡಿಮೆ ಬೆಲೆಯ ಮೊಬೈಲ್‌ಗಳನ್ನು ಪರಿಚಯಿಸಲಿದೆ ಎಂದು ತಿಳಿಯಲಾಗಿದೆ. ರಿಲಾಯನ್ಸ್ ಹೊರತರಲು ಉದ್ದೇಶಿಸಿರುವ ಫೋನ್‌ಗಳ ಬೆಲೆ, ಫೀಚರ್‌ಗಳು ಮತ್ತು ಇತ್ಯಾದಿ ಮಾಹಿತಿಯನ್ನು ಇಂದಿನ ಲೇಖನದಲ್ಲಿ ಓದಿ ತಿಳಿಯಿರಿ.

ಜಿಯೋ ಎಫೆಕ್ಟ್‌: ಗ್ರಾಹಕರನ್ನು ಉಳಿಸಿಕೊಳ್ಳಲು ಇತರೆ ಟೆಲಿಕಾಂಗಳಿಂದ ಆಫರ್‌ಗಳ ಸುರಿಮಳೆ!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

4G ಸ್ಮಾರ್ಟ್‌ಫೋನ್ ಬೆಲೆ ರೂ.1,000

ರಿಲಾಯನ್ಸ್ ಜಿಯೋ ಮಾರುಕಟ್ಟೆಗೆ ಪರಿಚಯಿಸಲಿರುವ 4G ಫೀಚರ್ ಸ್ಮಾರ್ಟ್‌ಫೋನ್‌ ಬಜೆಟ್‌ ಬೆಲೆ ರೂ.1,000 ಎಂದು ಲೇಟೆಸ್ಟ್ ವರದಿ ಮೂಲಕ ತಿಳಿಯಲಾಗಿದೆ. ಆದರೆ ಕಂಪನಿ ಅಧಿಕೃತವಾಗಿ ಈ ಬಗ್ಗೆ ಯಾವುದೇ ಮಾಹಿತಿ ಪ್ರಕಟಣೆ ಮಾಡಿಲ್ಲ.

4G ಫೀಚರ್‌ನ ಅತೀ ಕಡಿಮೆ ಬೆಲೆಯ ಸ್ಮಾರ್ಟ್‌ಫೋನ್‌ ಬಿಡುಗಡೆ ಗುರಿ ಜೊತೆಗೆ, ಜಿಯೋ VoLTE ಸಾಮರ್ಥ್ಯವನ್ನು ಸ್ಥಳೀಯ ಜನತೆಗೂ ಆಫರ್‌ ಮಾಡುವ ಗುರಿ ಹೊಂದಿದೆ. ಈ ಆಫರ್‌ ಸಹ ಅತೀ ಕಡಿಮೆ ಬೆಲೆಯಲ್ಲಿಯೇ ಸಿಗಲಿದೆ. ಈ ಫೋನ್‌ಗಳು VoLTE ಸಪೋರ್ಟ್ ಮಾಡುವ ನಿರೀಕ್ಷೆಯಲ್ಲಿದ್ದು, ಬಳಕೆದಾರರು ಉಚಿತ ವಾಯ್ಸ್ ಕರೆ ಮತ್ತು ಇತರೆ ಜಿಯೋ ಆಫರ್‌ಗಳನ್ನು ಪಡೆಯುತ್ತಾರೆ ಎಂದು ತಿಳಿಯಲಾಗಿದೆ.

 

4G ಸ್ಮಾರ್ಟ್‌ಫೋನ್ ಹೆಸರು 'LYF Easy'

ರಿಲಾಯನ್ಸ್ ಜಿಯೋ ಮಾತ್ರ ಈ ಸ್ಮಾರ್ಟ್‌ಫೋನ್‌ ಬಗ್ಗೆ ಯಾವುದೇ ಅಪ್‌ಡೇಟ್‌ ನೀಡಿಲ್ಲ. ಆದರೆ 'ಟೆಲಿಅನಾಲಿಸಿಸ್' ವರದಿ ಪ್ರಕಾರ ಈ ಸ್ಮಾರ್ಟ್‌ಫೋನ್ ಲೈಫ್‌ ಬ್ರ್ಯಾಂಡ್ ಅಡಿಯಲ್ಲಿ ಲಭ್ಯವಾಗಲಿದ್ದು, ಫೋನ್‌ ಹೆಸರು 'ಲೈಫ್‌ ಈಜಿ'(LYF Easy)

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

2017 ಜನವರಿಯಲ್ಲಿ ಲಾಂಚ್‌

ಈ ರಿಲಾಯನ್ಸ್ ಜಿಯೋ ಲೈಫ್‌ ಈಜಿ 4G ಸ್ಮಾರ್ಟ್‌ಫೋನ್‌ 2017 ಜನವರಿಯಲ್ಲಿ ಲಾಂಚ್ ಆಗಲಿದೆ ಎಂದು ತಿಳಿಯಲಾಗಿದ್ದು, ಡಿಸೆಂಬರ್ 30 ರಂದು ವೆಲ್ಕಮ್‌ ಆಫರ್ ಮುಗಿಯಲಿದೆ.

4G ಸ್ಮಾರ್ಟ್‌ಫೋನ್ ಬಳಕೆದಾರರು ವಾಯ್ಸ್ ಕರೆ ಮಾಡುವ ಜೊತೆಗೆ, ಟೆಕ್ಸ್ಟ್‌ ಮೆಸೇಜ್‌, ಇಂಟರ್ನೆಟ್ ಆಕ್ಸೆಸ್ ಅನ್ನು ಉಚಿತವಾಗಿ ಹೊಂದಲು ಅವಕಾಶ ನೀಡುವ ಬಗ್ಗೆ ತಿಳಿಯಲಾಗಿದೆ. ಆದರೆ ವೆಲ್ಕಮ್‌ ಆಫರ್‌ ನಂತರ ಇತರೆ 4G ಫೋನ್‌ಗಳಲ್ಲಿ ಉಚಿತ ಸೇವೆ ಇರುವುದಿಲ್ಲ.

ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ರಿಲಾಯನ್ಸ್ ಜಿಯೋ ಭಾರತದ ಗ್ರಾಮೀಣ ಪ್ರದೇಶಗಳನ್ನು ಆಳಲಿದೆ

ರಿಲಾಯನ್ಸ್ ಜಿಯೋ ಟೆಲಿಕಾಂ ಆಪರೇಟರ್ ಗ್ರಾಮೀಣ ಪ್ರದೇಶಗಳನ್ನು, ಅಂದರೆ ಹೆಚ್ಚಿನ ಬೆಲೆಯ ಸ್ಮಾರ್ಟ್‌ಫೋನ್ ಖರೀದಿಸಲು ಆಗದ ಪ್ರದೇಶಗಳನ್ನು ಆಳುವ ಗುರಿಹೊಂದಿದೆ.

2,000 ರೂಗಿಂತ ಕಡಿಮೆ ಬೆಲೆಯ ಹಲವು ಸ್ಮಾರ್ಟ್‌ಫೋನ್‌ಗಳು ವಾಯ್ಸ್ ಕರೆ ಮತ್ತು ಟೆಕ್ಸ್ಟ್‌ ಮೆಸೇಜ್‌ ಹೊರತು ಪಡಿಸಿ ಇತರೆ ಏನು ಮಾಡಲು ಸಾಧ್ಯವಾಗುವುದಿಲ್ಲ. ಆದರೆ ಈ ರೀತಿಯ ಸಮಸ್ಯೆ ಲೈಫ್‌ 4G ಸ್ಮಾರ್ಟ್‌ಫೋನ್‌ಗಳಲ್ಲಿ ಆಗುವುದಿಲ್ಲ. ಪ್ರಪಂಚದ ಯಾವುದೇ ಪ್ರದೇಶದಿಂದ ಈ ಸ್ಮಾರ್ಟ್‌ಫೋನ್‌ಗಳನ್ನು ಖರೀದಿಸಿ ಇಂಟರ್ನೆಟ್ ಸಂಪರ್ಕ ಹೊಂದಬಹುದಾಗಿದೆ.

 

4G ಫೋನ್‌ಗಳ ನಿರೀಕ್ಷೆ

ಟೆಲಿಅನಾಲಿಸಿಸ್ ಪ್ರಕಾರ, ಲೈಫ್ ಈಜಿ ಫೋನ್‌ಗಳು ಅತೀ ಕಡಿಮೆ ಬೆಲೆಯ ಪವರ್‌ಫುಲ್ ಮತ್ತು ಸ್ಪ್ರೆಡ್‌ಟ್ರಮ್ 9820 ಪ್ರೊಸೆಸರ್'ನ ಡಿವೈಸ್‌ ಆಗಿವೆ. ಈ ಸ್ಮಾರ್ಟ್‌ಫೋನ್‌ಗಳು ಇತರೆ ಹಲವು ಡಿವೈಸ್‌ ವೇಗಕ್ಕೆ ಬೇಕಾದ ಫೀಚರ್‌ಗಳನ್ನು ಹೊಂದಿವೆ.

ಲೈಫ್ ಈಜಿ ಸ್ಮಾರ್ಟ್‌ಫೋನ್‌ಗಳು ಉತ್ತಮ ಗುಣಮಟ್ಟದ ಕ್ಯಾಮೆರಾ, ವಿಶಾಲ ಡಿಸ್‌ಪ್ಲೇ, ವೈಫೈ, ಬ್ಲೂಟೂತ್, ಫೀಚರ್‌ಗಳನ್ನು ಹೊಂದಿದೆ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿEnglish summary
Reliance Jio To Launch Cheapest 4G Smartphones Priced Around Rs. 1,000 in 2017. To know more visit kannada.gizbot.com
Please Wait while comments are loading...
Opinion Poll

Social Counting