ಶೀಘ್ರವೇ 4G VoLTE ಸಪೋರ್ಟ್ ಜಿಯೋ ಫೀಚರ್‌ಫೋನ್‌ ಬಿಡುಗಡೆ ..!!! ಬೆಲೆ ಕುರಿತ ಸಂಪೂರ್ಣ ಮಾಹಿತಿ..!!!

ಸದ್ಯ ದೊರೆತಿರುವ ಮಾಹಿತಿಯ ಪ್ರಕಾರ ರಿಲಯನ್ಸ್ ಎರಡು ಫಿಚರ್ ಫೋನ್‌ಗಳನ್ನು ಲಾಂಚ್ ಮಾಡಲು ಸಿದ್ಧತೆಯನ್ನು ನಡೆಸಿದೆ.

|

ರಿಲಯನ್ಸ್ ಮಾಲೀಕತ್ವದ ಜಿಯೋ ದೇಶದಲ್ಲಿ ಸೇವೆಯನ್ನು ಆರಂಭಿಸಿದ ನಂತರದಲ್ಲಿ 4G VoLTE ಸಫೋರ್ಟ್ ಮಾಡುವ ಫೋನ್ ಗಳ ಬೇಡಿಕೆಯೂ ಹೆಚ್ಚಾಯಿತು. ಆದರೆ ಮಾರುಕಟ್ಟೆಯಲ್ಲಿ ಕೇವಲ ಸ್ಮಾರ್ಟ್‌ಫೋನ್‌ಗಳು ಮಾತ್ರವೇ 4G VoLTE ಸಫೋರ್ಟ್ ಮಾಡುತ್ತಿದ್ದವು, ಅಲ್ಲದೇ ಅವುಗಳ ಬೆಲೆಗಳು ಹೆಚ್ಚಾಗಿತ್ತು.

ಶೀಘ್ರವೇ 4G VoLTE ಸಪೋರ್ಟ್ ಜಿಯೋ ಫೀಚರ್‌ಫೋನ್‌ ಬಿಡುಗಡೆ ..!!!

ಈ ಹಿನ್ನಲೆಯಲ್ಲಿ ರಿಲಯನ್ಸ್ ಜಿಯೋ ತನ್ನ ಬಳಕೆದಾರರಿಗೆ ಕಡಿಮೆ ಬೆಲೆಗೆ 4G VoLTE ಸಫೋರ್ಟ್ ಮಾಡುವ ಫಿಚರ್ ಫೋನ್‌ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುವುದಾಗಿ ಹೇಳಿಕೆಯನ್ನು ನೀಡಿತ್ತು. ಇದೇ ಮಾದರಿಯಲ್ಲಿ ಕಳೆದ ಕೆಲವು ತಿಂಗಳೇ ಹಿಂದಯೇ ಜಿಯೋ ಫಿಚರ್ ಫೋನ್‌ಗಳನ್ನು ಲಾಂಚ್ ಆಗಲಿದೆ ಎನ್ನುವ ಮಾಹಿತಿ ಲಭ್ಯವಾಗಿತ್ತು,

ಸದ್ಯ ದೊರೆತಿರುವ ಮಾಹಿತಿಯ ಪ್ರಕಾರ ರಿಲಯನ್ಸ್ ಎರಡು ಫಿಚರ್ ಫೋನ್‌ಗಳನ್ನು ಲಾಂಚ್ ಮಾಡಲು ಸಿದ್ಧತೆಯನ್ನು ನಡೆಸಿದ್ದು, ಒಂದು ಮಾದರಿಯ ಫೋನ್ ಕ್ವಾಲ್ಕಮ್ ಚಿಪ್ ಸೆಟ್ ಹೊಂದಿದ್ದು ಸರಿ ಸುಮಾರು ರೂ.1798ಕ್ಕೆ ಲಭ್ಯವಿದೆ. ಇನ್ನೊಂದು ಮಾದರಿ ಸೆರ್ಡಮ್ ಚಿಪ್ ಸೆಟ್ ಹೊಂದಿದ್ದು, ರೂ. 1734 ರೂಗಳಿಗೆ ದೊರೆಯಲಿದೆ ಎನ್ನಲಾಗಿದ್ದು, ಇವುಗಳ ಬೆಲೆಯಲ್ಲಿ ಕೊಂಚ ಕಡಿಮೆಯಾಗುವ ಸಾಧ್ಯತೆ ಸಹ ಇದೆ.

ಶೀಘ್ರವೇ 4G VoLTE ಸಪೋರ್ಟ್ ಜಿಯೋ ಫೀಚರ್‌ಫೋನ್‌ ಬಿಡುಗಡೆ ..!!!

ಈ ಫಿಚರ್ ಫೋನ್‌ಗಳಲ್ಲಿ 2.4 ಇಂಚಿನ ಡಿಸ್‌ಪ್ಲೇ, 512 MB RAM, 4GB ಇಂಟರ್ನಲ್ ಮೆಮೊರಿ, ಮೈಕ್ರೋ ಎಸ್‌ಡಿ ಕಾರ್ಡ್ ಸಪೋರ್ಟ್, 2 MP ಹಿಂಭಾಗದ ಕ್ಯಾಮೆರಾ ಮತ್ತು ಮುಂಭಾಗದಲ್ಲಿ VGA ಕ್ಯಾಮೆರಾ ಇದರಲಿದೆ. 4G VoLTE ಸಪೋರ್ಟ್ ಮಾಡಲಿದ್ದು, ವೈ-ಫೈ, ಎನ್ ಎಫ್ ಸಿ ಮತ್ತು ಜಿಪಿಎಸ್ ಆಯ್ಕೆಗಳು ಈ ಫೋನಿನಲ್ಲಿರಲಿದೆ.

ಮೂಲಗಳ ಪ್ರಕಾರ ಜಿಯೋ ತನ್ನ ಈ ಎರಡು ಸ್ಮಾರ್ಟ್‌ಫೋನ್‌ಗಳಲ್ಲಿ ಒಂದನ್ನು ರೂ.1200ಕ್ಕೆ ಮತ್ತೊಂದನ್ನು ರೂ.1500ಕ್ಕೆ ನೀಡಲಿದೆ ಎಂದು ತಿಳಿದು ಬಂದಿದೆ. ಅಲ್ಲದೇ ಈ ಪೋನ್‌ಗಳನ್ನು ಶೀಘ್ರವೇ ಮಾರುಕಟ್ಟೆಗೆ ಬಿಡುಗಡೆ ಮಾಡಲಿದೆ.

Best Mobiles in India

Read more about:
English summary
Reliance Jio will soon launch new 4G VoLTE features phones in the market. A report from 91 Mobiles reveals that the phones will come in two processor variants. Apparently the 4G VoLTE feature phones are already in production and will be launched soon to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X