'ರೊಬೊಹೊನ್' ರೊಬೋಟ್ ಮೊಬೈಲ್‌ ಬಂತೂ: ಮಾತನಾಡುವ ಸ್ಮಾರ್ಟ್‌ಫೋನ್‌

By Suneel
|

"ಸ್ಮಾರ್ಟ್‌ಫೋನ್‌ಗಳ ಬಳಕೆಗೂ ಅಂತ್ಯ ಬಂತು" ಕೇಳಲು ಸ್ವಲ್ಪ ಕುತೂಹಲವಾಗಿದೆ ಅಲ್ವಾ!! ಯಾಕಂದ್ರೆ ಮುಂದಿನ ದಿನಗಳಲ್ಲಿ ಹೀಗೂ ಎನ್ನಬಹುದು. ಅಂತಹ ಕಾಲ ತುಂಬಾ ದೂರವೇನಿಲ್ಲ. ಯಾಕಂದ್ರೆ ಈಗಾಗಲೇ ಜಪಾನ್‌ನಲ್ಲಿ "ರೊಬೊಹೊನ್' ಎಂಬ ರೋಬೋಟ್‌ ಸ್ಮಾರ್ಟ್‌ಫೋನ್‌ ಮಾರಾಟವಾಗುತ್ತಿದೆ. ನೋಡಲು ಪುಟಾಣಿ ರೋಬೋಟ್‌ನಂತೆ ಇದೆ ಅಷ್ಟೆ. ಆದ್ರೆ ಅದು ರೊಬೋಟ್‌ ಸ್ಮಾರ್ಟ್‌ಫೋನ್‌. ಸ್ಮಾರ್ಟ್‌ಫೋನ್‌, ಐಫೋನ್‌ಗಳ ಲವರ್‌ಗಳು ಇನ್ನುಮುಂದೆ ಶೀಘ್ರವಾಗಿ 'ರೊಬೊಹೊನ್‌' ರೊಬೋಟ್‌ ಲವರ್‌ ಆಗುವುದರಲ್ಲಿ ಸಂಶಯವಿಲ್ಲ.

ಸದ್ಯದಲ್ಲಿ ಸ್ಮಾರ್ಟ್‌ಫೋನ್‌ ಪ್ರಸ್ತುತ ಜಪಾನ್‌ನಲ್ಲಿ ಮಾರಾಟವಾಗುತ್ತಿದೆಯಾದರೂ ಇತರೆ ದೇಶಗಳಲ್ಲಿ ಖರೀದಿಸಲು ಸಿಗುವ ಕಾಲ ಬಹಳ ದೂರವೇನಿಲ್ಲ ಎನ್ನಬಹುದು. 'ರೊಬೊಹೊನ್" ರೊಬೋಟ್‌ ಸ್ಮಾರ್ಟ್‌ಫೋನ್‌ ಅನ್ನು ಜಪಾನ್‌ನ ಅಂತರರಾಷ್ಟ್ರೀಯ ಕಂಪನಿ 'ಶಾರ್ಪ್' ತಯಾರಿಸಿದ್ದು, 'ರೊಬೊಹೊನ್' ಸ್ಮಾರ್ಟ್‌ಫೋನ್‌ನ ವಿಶೇಷತೆ ಏನು? ಫೀಚರ್‌ಗಳು ಏನು? ಎಂಬಿತ್ಯಾದಿ ಮಾಹಿತಿಯನ್ನು ಲೇಖನದ ಸ್ಲೈಡರ್‌ನಲ್ಲಿ ತಿಳಿಯಿರಿ.

ಅಂತೂ ಬಿಡುಗಡೆಗೊಂಡ ವಿಶ್ವದ ಅತ್ಯಂತ ದುಬಾರಿ ಫೋನ್ ಸೊಲರಿನ್

1

1

'ರೊಬೊಹೊನ್‌' ಸ್ಮಾರ್ಟ್‌ಫೋನ್‌ ನೋಡಲು ಮಾನವನ ಆಕಾರದಲ್ಲಿದೆ. ಇದನ್ನು "ಟೊಮೊಟಕ ಟಕಹಶಿ' ಎಂಬ ಇಂಜಿನಿಯರ್‌ ಅಭಿವೃದ್ದಿಪಡಿಸಿದ್ದಾರೆ. ಇದರ ಪ್ರಾರಂಭಿಕ ಬೆಲೆ 198,000 yen plus tax*3 ( 1.21 ಲಕ್ಷ ರೂಪಾಯಿಗಳು).

2

2

'ರೊಬೊಹೊನ್' ಸ್ಮಾರ್ಟ್‌ಫೋನ್‌ ಮಾಡೆಲ್‌ ಹೆಸರು "SR-01M-W". ಜಪಾನ್‌ನಲ್ಲಿ ಪ್ರಸ್ತುತ ತಿಂಗಳಲ್ಲಿ 5,000 ರೊಬೊಹೊನ್‌ ರೊಬೋಟ್‌ ಸ್ಮಾರ್ಟ್‌ಫೋನ್‌ ಮಾರಾಟ ಉದ್ದೇಶ ಹೊಂದಲಾಗಿದೆ.

3

3

* ರೊಬೊಹೊನ್‌ ಸ್ಮಾರ್ಟ್‌ಫೋನ್‌ 2 ಕಾಲುಗಳಿಂದ ಓಡಾಡುತ್ತದೆ. ವಿಶೇಷ ಅಂದ್ರೆ ಈ ಸ್ಮಾರ್ಟ್‌ಫೋನ್‌ ಅನ್ನು ಧ್ವನಿಯ ಮೂಲಕ ಆಫರೇಟ್‌ ಮಾಡಲಾಗುತ್ತದೆ.
* ಎಲ್ಲಿ ಬೇಕಾದರೂ ಬಳಸಬಹುದು ಮತ್ತು ಕೊಂಡೊಯ್ಯುಬಹುದಾಗಿದೆ.

4

4

*ರೊಬೊಹೊನ್ ಇತರೆ ಸ್ಮಾರ್ಟ್‌ಫೋನ್‌ಗಳು ಹೊಂದಿರುವ ಎಲ್ಲಾ ರೀತಿಯ ಕಾರ್ಯಗಳನ್ನು ಹೊಂದಿದೆ.
* ಇಮೇಲ್‌, ಕ್ಯಾಮೆರಾ, ಪ್ರೊಜೆಕ್ಟರ್‌ ಹೊಂದಿದೆ.
* ಪ್ರೊಜೆಕ್ಟರ್‌ ಆನ್‌ ಮಾಡಿ ಫೋಟೋಗಳನ್ನು, ವೀಡಿಯೋಗಳನ್ನು ಪರದೆ ಮೇಲೆ ನೋಡಬಹುದು.

5

5

* ರೊಬೊಹೊನ್‌ಗಾಗಿ ಇರುವ ಅಪ್ಲಿಕೇಶನ್‌ಗಳನ್ನು ಡೌನ್‌ಲೋಡ್‌ ಮಾಡಿ ರೊಬೊಹೊನ್‌ ಸೇವೆಗಳನ್ನು ಹೆಚ್ಚಿಸಿಕೊಳ್ಳಬಹುದು
* ಕ್ಯಾಮೆರಾ, ಮೌತ್‌ಪೀಸ್‌, ಸ್ಪೀಕರ್‌, ಪ್ರೊಜೆಕ್ಟರ್ ಅನ್ನು ರೊಬೊಹೊನ್‌ ತಲೆ ಭಾಗದಲ್ಲಿ ಹೊಂದಿದೆ.

6

6

* 1.2GHz ಕ್ವಾಡ್ ಕೋರ್‌ ಕ್ವಾಲ್ಕಂ ಸ್ನಾಪ್‌ಡ್ರಾಗನ್‌tm 400 ಪ್ರೊಸೆಸರ್‌ ಹೊಂದಿದೆ.
* ROM 16GB, RAM 2GB ಆಂತರಿಕ ಶೇಖರಣಾ ಸಾಮರ್ಥ್ಯ ಹೊಂದಿದೆ.
* 2.0 QVGA ಡಿಸ್‌ಪ್ಲೇ
* 8 mp CMOS ಕ್ಯಾಮೆರಾ, HD ಪ್ರೊಜೆಕ್ಟರ್‌ ಹೊಂದಿದೆ.
* LTE, 3G ನೆಟ್‌ವರ್ಕ್‌, ವೈಫೈ, 4.0 ಬ್ಲೂಟೂತ್‌, ಜಿಪಿಎಸ್ ಹೊಂದಿದೆ.
* ಬ್ಯಾಟರಿ 1,700 mAh

7

7

* ಮೊಬೈಲ್ ಕರೆ ಬಂದಾಗ ಧ್ವನಿಯ ಮೂಲಕವೇ ಹೇಳುತ್ತದೆ.
* 20 cm ಎತ್ತರವಾಗಿದ್ದು, 390 ಗ್ರಾಂ ತೂಕವಿದೆ.
* ಡ್ಯಾನ್ಸ್‌ ಮಾಡುತ್ತೆ, ಬೆಡ್‌ರೂಮ್‌, ಕಛೇರಿ, ಅಡಿಮೆ ಮನೆಯಲ್ಲಿ ಸಹಾಯಕನಂತೆ ಕೆಲಸ ನಿರ್ವಹಿಸುತ್ತದೆ.
* ಮಾತಿನಲ್ಲೇ ಅಲರಾಂ ಇದೆ.
* ಮಾತಿನ ಅಪ್ಲಿಕೇಶನ್‌ಗೆ ತಿಂಗಳಿಗೆ ಬೆಲೆ $6 ( 370 ರೂಪಾಯಿ)

rn

8

ವೀಡಿಯೊ ಕೃಪೆ :RoBoHoN


ಚಿತ್ರ ಕೃಪೆ: ಶಾರ್ಪ್‌

Best Mobiles in India

English summary
RoBoHon Robot Mobile Goes on Sale in Japan. Read more about this in kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X