ಸ್ಯಾಮ್‌ಸಂಗ್‌ ತಯಾರಿಸಲಿದೆ 4ಜಿಬಿ ರ್‍ಯಾಮ್‌ ಸ್ಮಾರ್ಟ್‌‌‌‌ಫೋನ್

By Ashwath
|

ಸ್ಮಾರ್ಟ್‌ಫೋನ್‌ ಕಿಂಗ್‌ ಸ್ಯಾಮ್‌ಸಂಗ್‌ ಮುಂದಿನ ದಿನಗಳಲ್ಲಿ 4ಜಿಬಿ ರ್‍ಯಾಮ್‌ ಹೊಂದಿರುವ ಸ್ಮಾರ್ಟ್‌‌ಫೋನ್‌ಗಳನ್ನು ಬಿಡುಗಡೆ ಮಾಡಲಿದೆ. ಈ ಸಂಬಂಧ ತನ್ನ ಅಧಿಕೃತ ಬ್ಲಾಗ್‌ ಸ್ಯಾಮ್‌ಸಂಗ್‌ ಟುಮಾರೋದಲ್ಲಿ ಈ ಸುದ್ದಿಯನ್ನು ಪ್ರಕಟಿಸಿರುವ ಸ್ಯಾಮ್‌ಸಂಗ್‌,ತನ್ನ ಯಾವ ಸ್ಮಾರ್ಟ್‌ಫೋನ್‌ ಈ 4ಜಿಬಿ ರ್‍ಯಾಮ್‌ ವಿಶೇಷತೆಯೊಂದಿಗೆ ಬರಲಿದೆ ಎನ್ನುವುದನ್ನು ತಿಳಿಸಿಲ್ಲ.

ಆದರೆ ಕೆಲವೊಂದು ಮಾಧ್ಯಮಗಳಲ್ಲಿ ಪ್ರಕಟಗೊಂಡಂತೆ ಈ ವರ್ಷ‌ ಬಿಡುಗಡೆಯಾಗಲಿರುವ ಗೆಲಾಕ್ಸಿ ಎಸ್‌5 ಸ್ಮಾರ್ಟ್‌ಫೋನ್‌ 4ಜಿಬಿ ರ್‍ಯಾಮ್‌ನೊಂದಿಗೆ ಬರಲಿದೆ ಎಂದು ಹೇಳಲಾಗುತ್ತಿದೆ.

ತನ್ನ ಸಾಧನಗಳ ಹಾರ್ಡ್‌ವೇರ್‌ ವಿಭಾಗಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡಿಕೊಂಡು ಬಂದಿರುವ ಸ್ಯಾಮ್‌ಸಂಗ್‌ ಕಳೆದ ವರ್ಷ ಬಿಡುಗಡೆ ಮಾಡಿದ್ದ ಗೆಲಾಕ್ಸಿ ಎಸ್‌‌4 ಅಕ್ಟಾ ಕೋರ್‌ ಪ್ರೊಸೆಸರ್‌ನೊಂದಿಗೆ ಬಿಡುಗಡೆಯಾಗಿತ್ತು. ನಂತರ ದೊಡ್ಡ ಸ್ಕ್ರೀನ್‌ ಫ್ಯಾಬ್ಲೆಟ್‌ ಗೆಲಾಕ್ಸಿ ನೋಟ್‌ 3ಗೆ 3ಜಿಬಿ ರ್‍ಯಾಮ್‌ ನೀಡಿತ್ತು. ವಿಶ್ವದ ಮೊದಲ 3ಜಿಬಿ ರ್‍ಯಾಮ್‌ ಫ್ಯಾಬ್ಲೆಟ್‌ ಪಟ್ಟ ಆರಂಭದಲ್ಲಿ ಗೆಲಾಕ್ಸಿ ನೋಟ್‌ 3‌ ಸಿಕ್ಕಿದರೂ ಈಗ ಚೀನಾದ ಕಂಪೆನಿಗಳು ಸಹ 3ಜಿಬಿ ರ್‍ಯಾಮ್‌ ಹೊಂದಿರುವ ಸ್ಮಾರ್ಟ್‌ಫೋನನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.

ವಿಶ್ವದ ಉಳಿದ ಟಾಪ್‌ ಕಂಪೆನಿಗಳು ಈಗ 3ಜಿಬಿ ರ್‍ಯಾಮ್‌ ಸ್ಮಾರ್ಟ್‌ಫೋನ್‌ ತಯಾರಿಸುತ್ತಿದ್ದು ಮಾರುಕಟ್ಟೆಗೆ ಬಿಡುಗಡೆ ಮಾಡಿಲ್ಲ. ಹೀಗಾಗಿ ವಿಶ್ವದ ಮಾರುಕಟ್ಟೆಗೆ ಬಿಡುಗಡೆಯಾಗಿರುವ 3ಜಿಬಿ ರ್‍ಯಾಮ್‌ ಹೊಂದಿರುವ ಸ್ಮಾರ್ಟ್‌ಫೋನ್‌ಗಳ ಮಾಹಿತಿ ಇಲ್ಲಿದೆ.ಇದರಲ್ಲಿ ಸ್ಯಾಮ್‌ಸಂಗ್‌ ಗೆಲಾಕ್ಸಿ ನೋಟ್‌ 3 ಮಾತ್ರ ಭಾರತದ ಮಾರುಕಟ್ಟೆ ಬಿಡುಗಡೆಯಾಗಿದ್ದು ಉಳಿದ ಸ್ಮಾರ್ಟ್‌ಫೋನ್‌ಗಳು ಬಿಡುಗಡೆಯಾಗಿಲ್ಲ.

ಸ್ಮಾರ್ಟ್‌ಫೋನ್‌ಗಳ ಆಕರ್ಷ‌ಕ ಚಿತ್ರಗಳಿಗಾಗಿ ಇಲ್ಲಿ ಕ್ಲಿಕ್‌ ಮಾಡಿ: ಗ್ಯಾಲರಿ

  ಸ್ಯಾಮ್‌ಸಂಗ್‌ ಗೆಲಾಕ್ಸಿ ಜೆ

ಸ್ಯಾಮ್‌ಸಂಗ್‌ ಗೆಲಾಕ್ಸಿ ಜೆ


ವಿಶೇಷತೆ:
ಸಿಂಗಲ್‌ ಸಿಮ್‌
5 ಇಂಚಿನ ಫುಲ್‌ ಎಚ್‌ಡಿ ಸೂಪರ್‌ ಅಮೋಲೆಡ್‌ ಸ್ಕ್ರೀನ್‌(1920x1080)
ಆಂಡ್ರಾಯ್ಡ್‌ 4.3 ಜೆಲ್ಲಿ ಬೀನ್‌ ಓಎಸ್‌
2.3GHz ಕ್ವಾಡ್‌ ಕೋರ್‌ ಸ್ನಾಪ್‌ಡ್ರಾಗನ್‌ MSM8974 ಪ್ರೊಸೆಸರ್‌
3GB ರ್‍ಯಾಮ್‌‌
ಎಲ್‌ಇಡಿ ಫ್ಲ್ಯಾಶ್‌ ಹೊಂದಿರುವ 13.2 ಎಂಪಿ ಹಿಂದುಗಡೆ ಕ್ಯಾಮೆರಾ
2.1 ಎಂಪಿ ಮುಂದುಗಡೆ ಕ್ಯಾಮೆರಾ
32GB ಆಂತರಿಕ ಮೆಮೊರಿ
64GBವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
2600mAh ಬ್ಯಾಟರಿ

 ಸ್ಯಾಮ್‌ಸಂಗ್‌ ಗೆಲಾಕ್ಸಿ ರೌಂಡ್‌

ಸ್ಯಾಮ್‌ಸಂಗ್‌ ಗೆಲಾಕ್ಸಿ ರೌಂಡ್‌


ವಿಶೇಷತೆ:
5.7 ಇಂಚಿನ ಫುಲ್‌ ಎ‌ಚ್‌ಡಿ ಸುಪರ್‌ ಫ್ಲೆಕ್ಸಿಬಲ್‌ AMOLED ಸ್ಕ್ರೀನ್(1080 x 1920ಪಿಕ್ಸೆಲ್‌)
ಆಂಡ್ರಾಯ್ಡ್‌ 4.3 ಜೆಲ್ಲಿ ಬೀನ್‌ ಓಎಸ್‌
2.3 GHz ಕ್ವಾಡ್‌ ಕೋರ್‌ ಪ್ರೊಸೆಸರ್‍
13 ಎಂಪಿ ಹಿಂದುಗಡೆ ಕ್ಯಾಮೆರಾ
2 ಎಂಪಿ ಮುಂದುಗಡೆ ಕ್ಯಾಮೆರಾ
3 GB ರ್‍ಯಾಮ್‌
32 GB ಆಂತರಿಕ ಮೆಮೋರಿ
64 GBವರಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
ಬ್ಲೂಟೂತ್‌,ವೈಫೈ,ಇನ್‌ಫ್ರಾರೆಡ್‌ ಪೋರ್ಟ್‌,ಎನ್‌ಎಫ್‌ಸಿ,ಜಿಪಿಎಸ್‌,ಗ್ಲೋನಾಸ್‌
2,800mAh ಬ್ಯಾಟರಿ

 ವಿವೊ

ವಿವೊ


ವಿಶೇಷತೆ:
6ಇಂಚಿನ ಐಪಿಎಸ್‌ ಎಲ್‌ಸಿಡಿ ಸ್ಕ್ರೀನ್(2560x1440 ಪಿಕ್ಸೆಲ್‌,490 ಪಿಪಿಐ)
ಆಂಡ್ರಾಯ್ಡ್‌ 4.3 ಜೆಲ್ಲಿ ಬೀನ್‌ ಓಎಸ್‌
2.3GHz ಕ್ವಾಡ್‌ ಕೋರ್‌ ಕ್ವಾಲಕಂ ಸ್ನಾಪ್‌ಡ್ರಾಗನ್‌ ಪ್ರೊಸೆಸರ್‌
Adreno 330 ಗ್ರಾಫಿಕ್‌ ಪ್ರೊಸೆಸರ್‌
3ಜಿಬಿ ರ್‍ಯಾಮ್‌
32 ಜಿಬಿ ಆಂತರಿಕ ಮೆಮೊರಿ
13 ಎಂಪಿ ಹಿಂದುಗಡೆ ಕ್ಯಾಮೆರಾ
5ಎಂಪಿ ಮುಂದುಗಡೆ ಕ್ಯಾಮೆರಾ
ಎಲ್‌ಟಿಇ,ವೈಫೈಬ್ಲೂಟೂತ್‌,ಜಿಪಿಎಸ್‌,ಎ-ಜಿಪಿಎಸ್
3200 mAh ಬ್ಯಾಟರಿ

 ಸ್ಯಾಮ್‌ಸಂಗ್‌ ಗೆಲಾಕ್ಸಿ ನೋಟ್‌ 3

ಸ್ಯಾಮ್‌ಸಂಗ್‌ ಗೆಲಾಕ್ಸಿ ನೋಟ್‌ 3

ವಿಶೇಷತೆ:

ಸಿಂಗಲ್‌ ಸಿಮ್
5.7 ಇಂಚಿನ ಫುಲ್‌ ಎಚ್‌ಡಿ ಸುಪರ್‌ AMOLED ಟಚ್‌ಸ್ಕ್ರೀನ್‌(1920 x 1080 ಪಿಕ್ಸೆಲ್) ಆಂಡ್ರಾಯ್ಡ್ 4.3 ಜೆಲ್ಲಿ ಬೀನ್‌ ಓಎಸ್‌
1.9GHz ಅಕ್ಟಾ ಕೋರ್‌ ಪ್ರೊಸೆಸರ್‌
13 ಎಂಪಿ ಹಿಂದುಗಡೆ ಕ್ಯಾಮೆರಾ
2 ಎಂಪಿ ಮುಂದುಗಡೆ ಕ್ಯಾಮೆರಾ
ವೈಫೈ,ಜಿಪಿಎಸ್‌,ಬ್ಲೂಟೂತ್‌,ಎನ್‌ಎಫ್‌ಸಿ
32/64 GB ಆಂತರಿಕ ಮೆಮೋರಿ
3GB RAM
64 GBವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
3,200 mAh ಬ್ಯಾಟರಿ

   ಜಿಯೋನಿ ಇಲೈಫ್‌ ಇ7

ಜಿಯೋನಿ ಇಲೈಫ್‌ ಇ7

ವಿಶೇಷತೆ:

ಸಿಂಗಲ್‌ ಸಿಮ್‌
5.5 ಇಂಚಿನ ಫುಲ್‌ ಎಚ್‌ಡಿ ಸ್ಕ್ರೀನ್‌(1920 x 1080 ಪಿಕ್ಸೆಲ್‌)
ಆಂಡ್ರಾಯ್ಡ್‌ 4.2 ಜೆಲ್ಲಿ ಬೀನ್‌ ಓಎಸ್‌
2.2GHz ಕ್ವಾಡ್‌ ಕೋರ್‌ ಪ್ರೊಸೆಸರ್‌
16 ಎಂಪಿ ಹಿಂದುಗಡೆ ಕ್ಯಾಮೆರಾ
8 ಎಂಪಿ ಮುಂದುಗಡೆ ಕ್ಯಾಮೆರಾ
16 GB ಆಂತರಿಕ ಮೆಮೊರಿ,2GB ರ್‍ಯಾಮ್‌
ಅಥವಾ
32GB ಆಂತರಿಕ ಮೆಮೊರಿ,3GB ರ್‍ಯಾಮ್‌
ವೈಫೈ,ಬ್ಲೂಟೂತ್‌,ಜಿಪಿಎಸ್‌
2500mAh ಬ್ಯಾಟರಿ

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X