ಸ್ಯಾಮ್‌ಸಂಗ್ ಎಫ್ ಲೀಕ್ ಚಿತ್ರ ಲಭ್ಯ

By Shwetha
|

ದಕ್ಷಿಣ ಕೊರಿಯಾದ ಸ್ಮಾರ್ಟ್‌ಫೋನ್ ದಿಗ್ಗಜ ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್5 ಅನ್ನು ತನ್ನ ಫ್ಲ್ಯಾಗ್‌ಶಿಪ್ ಸಾಲಿನಿಂದ ತೆಗೆದು ಅದರ ಸ್ಥಾನಕ್ಕೆ ಹೊಸ ಅಲ್ಯುಮಿನಿಯಮ್ ಮಾದರಿಯಲ್ಲಿರುವ ಗ್ಯಾಲಕ್ಸಿ ಎಫ್ ಅನ್ನು ಈ ವರ್ಷದ ನಂತರ ಸೇರಿಸುವ ನಿರ್ಧಾರಗಳು ಅಂತಿಮವಾಗಿವೆ. ಮೆಟಲ್ ಕ್ಲೇಡ್‌ನಲ್ಲಿರುವ ಗ್ಯಾಲಕ್ಸಿ ಎಫ್ ಬಗ್ಗೆ ಹೆಚ್ಚಿನ ನಿರೀಕ್ಷೆಯನ್ನು ಹೊಂದಿರುವ ಕಂಪೆನಿ ಮಾರುಕಟ್ಟೆಯಲ್ಲಿ ಧೂಳೆಬ್ಬಿಸುವುದು ನಿಚ್ಚಳವಾಗಿ ಕಂಡುಬರುತ್ತಿದೆ.

ಲಕ್ಶುರಿಯಸ್ ಹ್ಯಾಂಡ್‌ಸೆಟ್ ಆಗಿರುವ ಗ್ಯಾಲಕ್ಸಿ ಎಫ್ ಸ್ಯಾಮ್‌ಸಂಗ್ ಒಡೆತನದಲ್ಲಿ ಬರುತ್ತಿದ್ದು ಪ್ರಬಲ ಕ್ವಾಡ್ ಕೋರ್ ಪ್ರೊಸೆಸರ್‌ನೊಂದಿಗೆ ಆಗಮಿಸಲಿದೆ. ಎವ್ಲೀಕ್ಸ್‌ನಲ್ಲಿ ಈ ಹ್ಯಾಂಡ್‌ಸೆಟ್‌ನ ಲೀಕ್ ಆಗಿರುವ ಫೋಟೋ ದೊರಕಿದ್ದು ನಿರೀಕ್ಷೆಯ ಮಟ್ಟವನ್ನು ಹೆಚ್ಚಿಸುವಂತಿದೆ.

ಸ್ಯಾಮ್‌ಸಂಗ್‌ನಿಂದ ಹೊಸ ಸ್ಮಾರ್ಟ್‌ಫೋನ್

ಮೊದಲ ನೋಟಕ್ಕೆ ಮನಸೆಳೆಯುವಂತಿರುವ ಗ್ಯಾಲಕ್ಸಿ ಎಫ್ ಚಿತ್ರದಲ್ಲಿರುವಂತೆ ಆಕರ್ಷಕವಾಗಿದೆ, ನಮಗೆ ಡಿವೈಸ್‌ನ ಮುಂಭಾಗ ಚಿತ್ರ ಮಾತ್ರ ದೊರಕಿದ್ದು ಇದರ ರಚನೆಯ ಕುರಿತ ಯಾವ ಮಾಹಿತಿ ಕೂಡ ನಮಗೆ ಲಭ್ಯವಾಗಿಲ್ಲ.

ಇದೇ ಸಮಯದಲ್ಲಿ ಆಪಲ್ ಕೂಡ ದೊಡ್ಡ ಪರದೆಯ ಐಫೋನ್ ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುವ ನಿಟ್ಟಿನಲ್ಲಿದೆ. ಗ್ಯಾಲಕ್ಸಿ ಎಫ್ ಅನ್ನು ಹೊರತರುವ ಮೂಲಕ ಆಪಲ್‌ಗೆ ಭರ್ಜರಿ ಸ್ಪರ್ಧೆಯನ್ನು ಒಡ್ಡುವ ನಿರೀಕ್ಷೆಯಲ್ಲಿ ಸ್ಯಾಮ್‌ಸಂಗ್ ಇದ್ದು ಅದಕ್ಕೆಂದೇ ಅತ್ಯಾಧುನಿಕವಾಗಿ ತನ್ನ ಡಿವೈಸ್ ಅನ್ನು ಸ್ಯಾಮ್‌ಸಂಗ್ ಅಭಿವೃದ್ಧಿಪಡಿಸಿದೆ. ಇದನ್ನು ಸಂಪೂರ್ಣ ಮೆಟಲ್‌ನಿಂದ ತಯಾರಿಸಲಾಗಿದ್ದು, ಇದು 5.1 ಇಂಚಿನ ಸೂಪರ್ ಅಮ್ಲೋಡ್ ಡಿಸ್‌ಪ್ಲೇಯೊಂದಿಗೆ ಬಂದಿದೆ ಇದರ ರೆಸಲ್ಯೂಶನ್ 2560 x 1440 ಗಳಾಗಿವೆ.

ಈ ಅತ್ಯದ್ಭುತ ಡಿಸ್‌ಪ್ಲೇಯೊಂದಿಗೆ, ಫೋನ್‌ನಲ್ಲಿ ಕ್ವಾಡ್ ಕೋರ್ ಸ್ನ್ಯಾಪ್‌ಡ್ರಾಗನ್ 805 ಪ್ರೊಸೆಸರ್ ಇದ್ದು, 3ಜಿಬಿ RAM ಫೋನ್‌ನಲ್ಲಿದೆ. ಇದರ ಆಂತರಿಕ ಸಂಗ್ರಹಣಾ ಸಾಮರ್ಥ್ಯ 32ಜಿಬಿಯಾಗಿದ್ದು ಇದನ್ನು ಎಸ್‌ಡಿ ಕಾರ್ಡ್ ಮೂಲಕ 128ಜಿಬಿಗೆ ವಿಸ್ತರಿಸಬಹುದಾಗಿದೆ. ಇದರ ರಿಯರ್ ಕ್ಯಾಮೆರಾ ಸಾಮರ್ಥ್ಯ 16 ಮೆಗಾಪಿಕ್ಸೆಲ್ ಆಗಿದ್ದು ಇದರಲ್ಲಿ ಆಂಡ್ರಾಯ್ಡ್ 4.4 ಕಿಟ್‌ಕ್ಯಾಟ್ ಮೊಬೈಲ್ ಓಎಸ್ ಚಾಲನೆಯಾಗಲಿದೆ.

Best Mobiles in India

Read more about:
English summary
This article tells that Samsung galaxy F spotted in live leaked image got in evleaks

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X