ಆಪಲ್ ಎಲ್‌ಜಿ ಯೊಂದಿಗೆ ಸ್ಯಾಮ್‌ಸಂಗ್ ಮುಖಾಮುಖಿ

By Shwetha
|

ಸ್ಯಾಮ್‌ಸಂಗ್‌ನ ಗ್ಯಾಲಕ್ಸಿ S5 ಸ್ಮಾರ್ಟ್‌ಫೋನ್ ತನ್ನ ಬದ್ಧ ಸ್ಪರ್ಧಿ ಆಪಲ್‌ಗೆ ಹೆಚ್ಚಿನ ಪೈಪೋಟಿಯನ್ನು ಕೊಟ್ಟಿದ್ದು ಆಪಲ್‌ನ ಐಫೋನ್ 5s ಗೆ ತಡೆಯನ್ನು ಒಡ್ಡಿದೆ. ಇಷ್ಟಗಿಯೂ ಆಪಲ್‌ನ ಯಶಸ್ಸನ್ನು ತನ್ನ ಮುಡಿಗೇರಿಸುವ ಹಂಬಲದಲ್ಲಿರುವ ಈ ದಕ್ಷಿಣ ಕೊರಿಯಾದ ಸ್ಮಾರ್ಟ್‌ ದಿಗ್ಗಜ ಏನಾದರೂ ಅದ್ಭುತ ಮತ್ತು ವೈಶಿಷ್ಟ್ಯ ಪೂರ್ಣವಾದುದನ್ನು ಮಾರುಕಟ್ಟೆಗೆ ತರುವ ಪ್ರಯತ್ನದಲ್ಲಿದೆ.

ತನ್ನ ಫೋನ್‌ಗಳಲ್ಲಿ ಹೆಚ್ಚಾಗಿ ರೂಢಿಯಲ್ಲಿರುವ ಪ್ಲಾಸ್ಟಿಕ್ ಅಥವಾ ಪೋಲಿ - ಕಾರ್ಬೋನೇಟ್ ಸಾಮಾಗ್ರಿಯನ್ನು ಬಲಸುವ ಕಂಪೆನಿ ತನ್ನ ಮುಂಬರಲಿರುವ ಫೋನ್‌ಗೆ ಹೊಸದಾದ ಪರಿಕರವನ್ನು ತಯಾರಿಸುವ ನಿಟ್ಟಿನಲ್ಲಿದೆ. ಹೌದು ಇದು ಮೆಟಲ್ ಅನ್ನು ಆಧರಿಸಿ ತಯಾರಿಸಲಾಗುವ ಫೋನ್‌ ಅನ್ನು ಪ್ರಸ್ತುತಪಡಿಸುವ ನಿಟ್ಟಿನಲ್ಲಿದೆ.

ಸ್ಯಾಮ್‌ಸಂಗ್ ಗ್ಯಾಲಕ್ಸಿ ನೋಟ್ 4  ವಿಶೇಷತೆ ಏನು

ಕೊರಿಯನ್ ಪಬ್ಲಿಕೇಶನ್ ಸುದ್ದಿ ಸೈಟ್ ಇಟಿ ನ್ಯೂಸ್ ಪ್ರಕಾರ, ಗ್ಯಾಲಕ್ಸಿ ನೋಟ್ 4 ಪ್ರೀಮಿಯಮ್ ವಿನ್ಯಾಸವನ್ನು ಬಳಸಿಕೊಂಡು, ಮೆಟಲ್‌ನಿಂದ ತಯಾರಿತ, ಸುಂದರ ಸ್ಕ್ರೀನ್‌ನೊಂದಿಗೆ 16 ಮೆಗಾಪಿಕ್ಸೆಲ್‌ ಕ್ಯಾಮೆರಾ ಮೂಲಕ ಬರಲಿದೆ.

ಇನ್ನು ಗ್ಯಾಲಕ್ಸಿ ಎಫ್ ಅಥವಾ ಗ್ಯಾಲಕ್ಸಿ S5 ಪ್ರೈಮ್‌ನಲ್ಲಿ ಮೆಟಲ್ ಸಾಮಾಗ್ರಿಯನ್ನು ಬಳಸಿ ತಯಾರಿಸಿದ ಫೋನ್‌ಗಳಾಗಿದ್ದು, ಇನ್ನು ಮುಂಬರಲಿರುವ ನೋಟ್ 4 ಮೆಟಲ್ ಕವಚದೊಂದಿಗೆ ಬರಲಿದೆ ಎಂಬುದು ಖಾತ್ರಿಯಾಗುತ್ತದೆ.

ಇನ್ನೂ ಕೆಲವೊಂದು ಸುದ್ದಿಯ ಪ್ರಕಾರ ಸ್ಯಾಮ್‌ಸಂಗ್ ಈ ಫೋನ್ ಅನ್ನು ಪ್ಲಾಸ್ಟಿಕ್‌ನಲ್ಲೂ ತಯಾರಿಸುತ್ತಿದ್ದು ಇದಕ್ಕೆ ಗ್ಯಾಲಕ್ಸಿ ನೋಟ್ 4 ನಿಯೋ ಅಥವಾ ಬೇರೆ ಹೆಸರನ್ನು ನೀಡಲಿದೆಯೇ ಎಂಬುದು ತಿಳಿದು ಬಂದಿಲ್ಲ. ಕಂಪೆನಿ ಎಲ್‌ಜಿ ಮತ್ತು ಆಪಲ್‌ಗೆ ಭರ್ಜರಿ ಪೈಪೋಟಿಯನ್ನು ನೀಡುವ ಉದ್ದೇಶವನ್ನು ಹೊಂದಿದೆ. ಇನ್ನು ಸ್ಯಾಮ್‌ಸಂಗ್ ಗ್ಯಾಲಕ್ಸಿ ನೋಟ್ 4 ನಲ್ಲಿ ಬಳಸಿರುವ ಡಿಸ್‌ಪ್ಲೇ ಮತ್ತು ಹಾರ್ಡ್‌ವೇರ್ ಬಗ್ಗೆ ಇನ್ನೂ ತಿಳಿದು ಬಂದಿಲ್ಲ.

ಇನ್ನು ವದಂತಿಗಳು ತಿಳಿಸಿದ್ದೇ ನಿಜವಾಗಿದ್ದಲ್ಲಿ, ಎಲ್‌ಜಿ ತನ್ನ G3 ಮತ್ತು ಒಪ್ಪೋ ಫೈಂಡ್ 7 ನಲ್ಲಿ ಬಳಸಿದಂತಹ ಕ್ಯುಎಚ್‌ಡಿ ಪ್ಯಾನೆಲ್ ಅನ್ನು ಗ್ಯಾಲಕ್ಸಿ ನೋಟ್ 4 ನಲ್ಲಿ ಸ್ಯಾಮ್‌ಸಂಗ್ ಬಳಸಲಿದೆ.

ಇನ್ನು ಈ ಸ್ಮಾರ್ಟ್‌ಫೋನ್ ಲಭ್ಯತೆಯು ಪರಿಗಣನೆಯಾದ ನಿಟ್ಟಿನಲ್ಲಿ, ಗ್ಯಾಲಕ್ಸಿ ನೋಟ್ 4 ಸಪ್ಟೆಂಬರ್‌ನಲ್ಲಿ ಬರ್ಲಿನ್‌ನಲ್ಲಿ ನಡೆಯುವ IFA 2014 ನಲ್ಲಿ ಕಂಡುಬರುವ ನಿರೀಕ್ಷೆ ಇದೆ.

Best Mobiles in India

Read more about:
English summary
This article tells about Samsung Galaxy Note 4 To Come With Flexible Display, Metal Build and 16MP OIS Camera and Galaxy Note 4 will feature a premium design using metal, flexible screen, and sport a 16-megapixel camera with optical image stabilization (OIS).

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X