ಗ್ಯಾಲಕ್ಸಿ ನೋಟ್ 4 ಕುರಿತ 5 ವದಂತಿಗಳು

By Shwetha
|

ಆಪಲ್‌ನಂತೆ ಸುದ್ದಿಯಲ್ಲಿರುವ ಇನ್ನೊಂದು ಫೋನ್ ಆಗಿದೆ ಸ್ಯಾಮ್‌ಸಂಗ್. ವಿನೂತನ ಮಾದರಿಯ ಡಿವೈಸ್‌ಗಳನ್ನು ಗ್ರಾಹಕರಿಗೆ ತಲುಪಿಸುವಲ್ಲಿ ಸ್ಯಾಮ್‌ಸಂಗ್ ಕೂಡ ಮುಂದಿದ್ದು ಹೊಸ ಹೊಸ ಅನ್ವೇಷಣೆಗಳನ್ನು ನಡೆಸುತ್ತಾ ಗ್ರಾಹಕರಲ್ಲಿ ಕೂತುಹಲವನ್ನುಂಟು ಮಾಡುವ ಸ್ಯಾಮ್‌ಸಂಗ್ ಫೋನ್ ಮಾರುಕಟ್ಟೆಯನ್ನು ಆಳುತ್ತಿರುವ ದೈತ್ಯ ಕಂಪೆನಿ. ಸ್ಯಾಮ್‌ಸಂಗ್‌ನ ಗ್ಯಾಲಕ್ಸಿ ನೋಟ್ 4 ಇನ್ನೇನು ಮಾರುಕಟ್ಟೆಗೆ ಬರಲು ಕೆಲವೇ ತಿಂಗಳುಗಳು ಬಾಕಿ ಇದೆ.

ಗ್ಯಾಲಕ್ಸಿ ನೋಟ್ 4 ಗೆ ಸಂಬಂಧಿಸಿದಂತೆ ಲಿಂಕ್‌ಗಳು ಸುದ್ದಿಗಳು ವೆಬ್‌ನಲ್ಲಿ ಹರಿದಾಡುತ್ತಿವೆ. ಕಂಪೆನಿಯ ಗ್ಯಾಲಕ್ಸಿ 3 ಯ ವಿವರಗಳನ್ನು ಬಹಿರಂಗಪಡಿಸುವ ಸಮಯದಲ್ಲಿ ಇದರ ಬಗ್ಗೆ ಮಾಹಿತಿ ಲಭ್ಯವಾಗಿದೆ.

ಕೆಲವೇ ತಿಂಗಳಲ್ಲಿ ನಮ್ಮ ಕೈ ಸೇರಲಿರುವ ಗ್ಯಾಲಕ್ಸಿ 4 ಕುರಿತ ಫೀಚರ್‌ಗಳನ್ನು ನಾವೀಗಲೇ ನೊಡುತ್ತಿದ್ದೇವೆ. ಗ್ಯಾಲಕ್ಸಿ ನೋಟ್ 3 ಬಿಡುಗಡೆಯಾದ ಎರಡು ತಿಂಗಳಲ್ಲೇ 12 ಮಿಲಿಯನ್‌ಗಿಂತಲೂ ಹೆಚ್ಚು ಮಾರಾಟವಾಗಿದೆ. ಆದ್ದರಿಂದಲೇ ಸ್ಮಾರ್ಟ್‌ಫೋನ್ ಬಳಕೆದಾರರು ಗ್ಯಾಲಕ್ಸಿ ನೋಟ್ 4 ರಿಂದ ತುಸು ಹೆಚ್ಚಿನದನ್ನೇ ಅಪೇಕ್ಷಿಸುತ್ತಿದ್ದಾರೆ.

ಗ್ಯಾಲಕ್ಸಿ ನೋಟ್ 4 ಕುರಿತು ವದಂತಿಗಳು ಏನು ಹೇಳುತ್ತಿದೆ ಮತ್ತು ಅದರಲ್ಲಿರುವ ವಿಶೇಷ ಫೀಚರ್‌ಗಳೇನು ಇದನ್ನು ತಿಳಿಯಲು ನೀವು ಉತ್ಸುಕರಾದಲ್ಲಿ ಈ ಟಾಪ್ 5 ವದಂತಿಗಳತ್ತ ಗಮನಹರಿಸಿ.

#1

#1

ಹೊಸ ಕರ್ವ್ ಫೋನ್ ಅನ್ನು ಬಿಡುಗಡೆ ಮಾಡುವ ನಿಟ್ಟಿನಲ್ಲಿರುವ ಸ್ಯಾಮ್‌ಸಂಗ್ ಮೂರು ವಿಭಿನ್ನ ರೀತಿಯ ವಿನ್ಯಾಸಗಳನ್ನು ಇದು ಒಳಗೊಳ್ಳಲಿದೆ. ಹೈಡೆಫಿನೇಶನ್ ಮತ್ತು ಅಲ್ಡ್ರಾ ಹೈ ಡೆಫಿನೇಶನ್ ಇವೆರಡರ ಬೆಂಬಲ ಗ್ಯಾಲಕ್ಸಿ ನೋಟ್ 4 ಗಿದೆ.

#2

#2

ವದಂತಿಗಳ ಪ್ರಕಾರ ಗ್ಯಾಲಕ್ಸಿ ನೋಟ್ 4 ಕ್ಯಾಮೆರಾ 20 MP ದೀರ್ಘಉಳ್ಳದ್ದಾಗಿದೆ. ಆದರೆ ಈ ಡಿವೈಸ್ ಹೊಸತನ್ನು ತರುತ್ತದೆ ಎಂಬ ಆಕಾಂಕ್ಷೆ ಸ್ಮಾರ್ಟ್‌ಫೋನ್ ಅಭಿಮಾನಿಗಳ ಮನದಲ್ಲಿದೆ.

#3

#3

ಹೊಸ ವೈಶಿಷ್ಟ್ಯಗಳೊಂದಿಗೆ ಬರಲಿದೆ ಎಂಬ ವದಂತಿಯನ್ನು ಹಬ್ಬಿಸಿರುವ ಸ್ಮಾಮ್‌ಸಂಗ್ ಗ್ಯಾಲಕ್ಸಿ ನೋಟ್ 4 ನ ಪ್ರೊಸೆಸರ್ 64 - ಬಿಟ್ ಆಗಿರಬಹುದು ಎಂದೂ ಹೇಳಲಾಗುತ್ತಿದೆ. ಆದರೂ ಒಮ್ಮತದ ನಿರ್ಣಯಕ್ಕೆ ಇದುವರೆಗೂ ಬಂದಿಲ್ಲ. ಇದರ ಪ್ರೊಸೆಸರ್ 64 ಬಿಟ್ ಆಗಿದ್ದರೆ ಇದು ಆಪಲ್‌ನ ಐಫೋನ್ 5 ಎಸ್‌ಗೆ ಸರಿಸಾಟಿಯಾಗುವುದು ಖಂಡಿತ.

#4

#4

ಸ್ಯಾಮ್‌ಸಂಗ್ ರಹಸ್ಯಗಳನ್ನು ಮುಚ್ಚಿಡುವುದರಲ್ಲಿ ನಿಷ್ಣಾತವಾಗಿರುವುದರಿಂದ ಇದರ ವಿನ್ಯಾಸ ಹೀಗೆಯೇ ಇರುತ್ತದೆಂದು ಹೇಳುವುದು ಸ್ವಲ್ಪ ಕಷ್ಟ. ವರದಿಗಳ ಪ್ರಕಾರ IP67 ಪ್ರಮಾಣಿತ ವಿನ್ಯಾಸವನ್ನು ಕಂಪೆನಿ ಗ್ಯಾಲಕ್ಸಿ ನೋಟ್ 4 ಗೆ ಪ್ರಸ್ತುತಪಡಿಸಬಹುದೆಂದು ಹೇಳಲಾಗುತ್ತಿದೆ. ಇದು ಧೂಳು ಮತ್ತು ನೀರು ಪ್ರತಿರೋಧಕತೆಯನ್ನು ಹೊಂದಿರುತ್ತದೆ.

#5

#5

ಸ್ಯಾಮ್್ಸಂಗ್ LTE- ಸುಧಾರಿತ ಬೆಂಲದೊಂದಿಗೆ ಬರುವ ನಿರೀಕ್ಷೆ ಇದೆ. ಈ LTE- ಸುಧಾರಿತ ಬೆಂಬಲವು ಹೊಂದಾಣಿಕೆಯ ಡಿವೈಸ್‌ಗಳಿಗೆ ವೇಗವಾದ ಡೇಟಾ ಸಂಪರ್ಕವನ್ನು ಒದಗಿಸುತ್ತದೆ. ಈ ತಂತ್ರಜ್ಞಾನ ಭಾರತಕ್ಕೆ ಯಾವಾಗ ಬರಲಿದೆ ಎಂಬುದು ಪ್ರಶ್ನೆಯಾಗಿ ಉಳಿದಿದೆ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X