ಸ್ಯಾಮ್‌ಸಂಗ್‌ ಗೆಲಾಕ್ಸಿ ಎಸ್‌4 ಬೆಲೆ ದಿಢೀರ್‌ ಇಳಿಕೆ

By Ashwath
|

ಸ್ಯಾಮ್‌ಸಂಗ್‌ ಗೆಲಾಕ್ಸಿ ಎಸ್‌5 ಬಿಡುಗಡೆಯಾಗಿದ್ದೆ ತಡ ಗೆಲಾಕ್ಸಿ ಎಸ್‌4 ಬೆಲೆ ದಿಢೀರ್‌ ಇಳಿಕೆಯಾಗಿದೆ. ಈ ಹಿಂದೆ ಏಪ್ರಿಲ್‌‌ನಲ್ಲಿ 41,500 ಬೆಲೆಯಲ್ಲಿ ಬಿಡುಗಡೆಯಾಗಿದ್ದ ಗೆಲಾಕ್ಸಿ ಎಸ್‌4 ಈಗ ಆನ್‌‌ಲೈನ್‌ ಶಾಪಿಂಗ್‌‌ ತಾಣಗಳಲ್ಲಿ 29,599 ಬೆಲೆಯಲ್ಲಿ ಲಭ್ಯವಿದೆ.

ಈ ತಿಂಗಳ ಆರಂಭದಲ್ಲಿ ಈ ಸ್ಮಾರ್ಟ್‌‌ಫೋನಿಗೆ 37,690 ರೂಪಾಯಿ ನಿಗದಿಯಾಗಿತ್ತು.ಈಗ ಗೆಲಾಕ್ಸಿ ಎಸ್‌5 ಬಿಡುಗಡೆಯಾದ ಕೂಡಲೇ ಈ ಸ್ಮಾರ್ಟ್‌‌ಫೋ‌‌ನ್‌ ಬೆಲೆ ಏಳುಸಾವಿರ ರೂಪಾಯಿ ಕಡಿಮೆಯಾಗಿದೆ.

ಕಳೆದ ವರ್ಷ‌ ಸ್ಯಾಮ್‌ಸಂಗ್‌ಗೆ ವಿಶ್ವದಲ್ಲಿ ಮತ್ತು ಭಾರತದಲ್ಲಿ ಜನಪ್ರಿಯತೆ ತಂದುಕೊಟ್ಟ ಫೋನ್‌ ಇದಾಗಿದ್ದು ನಿನ್ನೆಯಿಂದ ಗೆಲಾಕ್ಸಿ ಎಸ್‌4ನ್ನು‌ ಕಿಟ್‌ಕ್ಯಾಟ್‌ ಓಎಸ್‌ಗೆ ಅಪ್‌ಡೇಟ್‌ ಮಾಡಬಹುದು ಎಂದು ಸ್ಯಾಮ್‌ಸಂಗ್‌ ಹೇಳಿದೆ. ಆನ್‌ಲೈನ್‌ ಶಾಪಿಂಗ್‌ ತಾಣದಲ್ಲಿ ಈ ಸ್ಮಾರ್ಟ್‌ಫೋನ್‌ ಬೆಲೆ ಕಡಿಮೆಯಾಗಿದ್ದರೂ ಸ್ಯಾಮ್‌ಸಂಗ್‌ ಇಸ್ಟೋರ್‌ನಲ್ಲಿ ಸ್ಮಾರ್ಟ್‌ಫೋನ್‌ ಬೆಲೆ ಕಡಿಮೆಯಾಗಿಲ್ಲ. ಅಲ್ಲಿ ಈ ಫೋನಿಗೆ 40,690 ರೂಪಾಯಿ ಬೆಲೆಯನ್ನು ನಿಗದಿ ಪಡಿಸಿದೆ.ಹೀಗಾಗಿ ಈ ಸ್ಮಾರ್ಟ್‌ಫೋನ್‌‌ನ್ನು ಆನ್‌ಲೈನ್‌ಲ್ಲಿ ಖರೀದಿಸಬೇಕು ಎಂದು ಯೋಚಿಸುತ್ತಿದ್ದವರಿಗೆ ಇಲ್ಲಿ ಕೆಲವು ಆನ್‌‌ಲೈನ್‌ ತಾಣಗಳ ಮಾಹಿತಿಯನ್ನು ನೀಡಲಾಗಿದೆ.

ಸ್ಯಾಮ್‌ಸಂಗ್‌ ಗೆಲಾಕ್ಸಿ ಎಸ್‌4

ವಿಶೇಷತೆ:
ಸಿಂಗಲ್‌ ಸಿಮ್‌
5 ಇಂಚಿನ ಎಚ್‌ಡಿ ಸುಪರ್‌ ಅಮೊಲೆಡ್‌‌ ಸ್ಕ್ರೀನ್‌(1920 x 1080 ಪಿಕ್ಸೆಲ್‌)
ಆಂಡ್ರಾಯ್ಡ್‌ 4.2.2 ಜೆಲ್ಲಿಬೀನ್‌ ಓಎಸ್‌
ಅಕ್ಟಾ ಕೋರ್‌ ಪ್ರೋಸೆಸರ್
2GB ರ್‍ಯಾಮ್‌
16GB ಆಂತರಿಕ ಮೆಮೊರಿ
13 ಎಂಪಿ ಹಿಂದುಗಡೆ ಕ್ಯಾಮೆರಾ
2 ಎಂಪಿ ಮುಂದುಗಡೆ ಕ್ಯಾಮೆರಾ
64 GB ವರಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
3ಜಿ,ವೈಫೈ,ಎನ್‌ಎಫ್‌ಸಿ,ಬ್ಲೂಟೂತ್‌
2,600mAh ಬ್ಯಾಟರಿ

ಇದನ್ನೂ ಓದಿ: ಫಿಂಗರ್‌ ಪ್ರಿಂಟ್‌ ಸ್ಕ್ಯಾನರ್‌ ಹೊಂದಿರುವ ಗೆಲಾಕ್ಸಿ ಎಸ್‌5 ಬಿಡುಗಡೆ: ಈ ಸ್ಮಾರ್ಟ್‌‌ಫೋನಿನ ವಿಶೇಷತೆ ಏನು?

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X