ಸ್ಯಾಮ್‌ಸಂಗ್ ಗ್ಯಾಲಕ್ಸಿ s5ನಿಂದ ನಿಮ್ಮ ಒತ್ತಡ ಪರಿಶೀಲಿಸಿ

By Shwetha
|

ಸ್ಯಾಮ್‌ಸಂಗ್ ಗ್ಯಾಲಕ್ಸಿ s5 ಉತ್ತಮ ಡಿವೈಸ್ ಆಗಿದ್ದು ಫಿಟ್‌ನೆಸ್ ಸಾಫ್ಟ್‌ವೇರ್ ಮತ್ತು ಹಾರ್ಡ್‌ವೇರ್‌ನಿಂದ ಕಣ್ಮನಸೆಳಯಲಿದೆ. ಇನ್ನಷ್ಟು ಆಕರ್ಷಕ ಫೀಚರ್‌ಗಳನ್ನು ಸ್ಯಾಮ್‌ಸಂಗ್ ಈ ಫೋನ್‌ನಲ್ಲಿ ಅಳವಡಿಸಲಿದ್ದು ಅದರಲ್ಲೊಂದು ನಿಮ್ಮ ಒತ್ತಡವನ್ನು ಪರಿಶೀಲಿಸುವ ವಿಧಾನವಾಗಿದೆ.

ಹೌದು ಸ್ಯಾಮ್‌ಸಂಗ್ ಗ್ಯಾಲಕ್ಸಿ s5 ಅನ್ನು ಬಳಸಿಕೊಂಡು ನಿಮ್ಮ ಒತ್ತಡವನ್ನು ನಿಮಗೆ ಪರಿಶೀಲಿಸಿಕೊಳ್ಳಬಹುದಾಗಿದೆ. ಸ್ಯಾಮ್‌ಸಂಗ್‌ನ ಡೆಡಿಕೇಟೆಡ್ ಅಪ್ಲಿಕೇಶನ್ ಹಬ್ ಆದ ಎಸ್-ಹೆಲ್ತ್ ನ ಇತ್ತೀಚಿನ ಆವೃತ್ತಿಯೊಂದಿಗೆ ಈ ಬದಲಾವಣೆಗಳನ್ನು ನಿಮಗೆ ಕಂಡುಕೊಳ್ಳಬಹುದು. ನಿಮಗಿನ್ನೂ ಅಧಿಸೂಚನೆ ಬಂದಿಲ್ಲವೆಂದರೆ ನೀವದನ್ನು ಹಸ್ತಚಾಲಿತವಾಗಿ ನವೀಕರಿಸಿದ್ದೀರಿ ಎಂಬುದನ್ನು ಖಾತ್ರಿಪಡಿಸಸಿಕೊಳ್ಳಿ ಹೀಗೆ ನಿಮಗೆ ಈ ಹೊಸ ಫೀಚರ್ ದೊರೆಯಬಹುದು.

ಸ್ಯಾಮ್‌ಸಂಗ್ ಗ್ಯಾಲಕ್ಸಿ s5ನಿಂದ ನಿಮ್ಮ  ಒತ್ತಡ ಪರಿಶೀಲಿಸಿ

ಸ್ಯಾಮ್‌ಸಂಗ್ ಗ್ಯಾಲಕ್ಸಿ s5 ಎರಡೂ ಬದಿಗಳಲ್ಲಿ 16 ಎಂಪಿ ರಿಯರ್ ಕ್ಯಾಮೆರಾಗಳೊಂದಿಗೆ ಬಂದಿದೆ. ಹಾಗೂ ನಿಮ್ಮ ಒತ್ತಡ ಮಟ್ಟವನ್ನು ಪರಿಶೀಲಿಸಲು ಹ್ಯಾಂಡ್‌ಸೆಟ್ ಒಂದೇ ರೀತಿಯ ಹಾರ್ಡ್‌ವೇರ್ ಅನ್ನು ಬಳಸಿದೆ. ಇಲ್ಲಿ ಈ ಪೋನ್ ಬಳಕೆದಾರರ ಹೃದಯಬಡಿತವನ್ನು ಪರಿಶೀಲಿಸುತ್ತದೆ, ಆದ್ದರಿಂದ ಯಾವುದೇ ತಂತ್ರಜ್ಞಾನ ಇಲ್ಲಿಲ್ಲ. ಫೋನ್‌ನ ಸ್ಟ್ರೆಸ್ ಮಾನಿಟರ್‌ನಲ್ಲಿ ನಿಮ್ಮ ಒತ್ತಡ ಮಟ್ಟ ರೀಡಿಂಗ್ ಆಗುತ್ತಿದ್ದಂತೆ ಮಾನಿಟರ್ ಸ್ವಯಂಚಾಲಿತವಾಗಿ ನಿಮ್ಮ ಒತ್ತಡ ಮಟ್ಟವನ್ನು ಗಂಟೆ, ದಿನ ಅಥವಾ ತಿಂಗಳ ಆಧಾರದಲ್ಲಿ ಚಾಟ್‌ನಂತೆ ರಚಿಸಿ ತೋರಿಸುತ್ತದೆ.

ಸ್ಯಾಮ್‌ಸಂಗ್ ಗ್ಯಾಲಕ್ಸಿ s5ನಿಂದ ನಿಮ್ಮ  ಒತ್ತಡ ಪರಿಶೀಲಿಸಿ

ಸ್ಯಾಮ್‌ಸಂಗ್ ತನ್ನ ಮುಂಬರುವ ಸ್ಮಾರ್ಟ್‌ಫೋನ್‌ಗಳಲ್ಲಿ ಇನ್ನಷ್ಟು ಆರೋಗ್ಯ ಸಂಬಂಧಿತ ಅಪ್ಲಿಕೇಶನ್‌ಗಳನ್ನು ಅಳವಡಿಸುವ ನಿಟ್ಟಿನಲ್ಲಿದ್ದು ಈಗಾಗಲೇ ಹಲವಾರು ಯೋಜನೆಗಳನ್ನು ಕಾರ್ಯರೂಪಕ್ಕೆ ತಂದಿದೆ.

ಗ್ಯಾಲಕ್ಸಿ s5 5.1 ಇಂಚಿನ AMOLED ಡಿಸ್‌ಪ್ಲೇ ಜೊತೆಗೆ ಪೂರ್ಣ ಎಚ್‌ಡಿ ರೆಸಲ್ಯೂಶನ್‌ನೊಂದಿಗೆ ಬಂದಿದೆ, ಓಕ್ಟಾ ಕೋರ್ ಪ್ರೊಸೆಸರ್ ಇದರಲ್ಲಿದ್ದು Adonis Prime2 (Quad 1.9GHz + Quad 1.3GHz) + XMM6360, 2ಜಿಬಿ ರ್‌ಯಾಮ್, 16ಜಿಬಿ (128ಜಿಬಿವರೆಗೆ ವಿಸ್ತರಿಸಬಹುದು), ಆಂಡ್ರಾಯ್ಡ್ ಕಿಟ್‌ಕ್ಯಾಟ್ 4.4.2 ಓಎಸ್, 16ಎಂಪಿ ರಿಯರ್-ಫೇಸಿಂಗ್ ಕ್ಯಾಮೆರಾ, ಮತ್ತು 2ಎಂಪಿ ಫ್ರಂಟ್ ಫೇಸಿಂಗ್ ಶೂಟರ್ ಇದರಲ್ಲಿದೆ. ಗ್ಯಾಲಕ್ಸಿ S5 ಬೆವರು, ಧೂಳು, ಮಳೆ, ದ್ರಾವಣ, ಮಣ್ಣಿಗೆ ನಿರೋಧಕವಾಗಿದೆ. ಇದರ ಬ್ಯಾಟರಿ 2,800mAh ಆಗಿದೆ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X