ಗೆಲಾಕ್ಸಿ ಎಸ್‌5ಯಲ್ಲಿರುವ ಐಫೋನ್‌ 5ಎಸ್‌ನಲ್ಲಿರದ ವಿಶೇಷತೆಗಳು

By Ashwath
|

ವಿಶ್ವದ ಸ್ಮಾರ್ಟ್‌‌ಫೋನ್‌ ಮಾರುಕಟ್ಟೆಯಲ್ಲಿ ಮುಂಚೂಣಿಯಲ್ಲಿರುವ ಸ್ಯಾಮ್‌ಸಂಗ್‌ ಮತ್ತು ಆಪಲ್‌‌ ಕಂಪೆನಿಗಳು ದುಬಾರಿ ಬೆಲೆಯ ಸ್ಮಾರ್ಟ್‌‌ಫೋನ್‌‌ಗಳನ್ನು ಬಿಡುಗಡೆ ಮಾಡಿದೆ. ಸ್ಯಾಮ್‌ಸಂಗ್‌ ಗೆಲಾಕ್ಸಿ ಎಸ್‌‌5ಯನ್ನು ಬಿಡುಗಡೆ ಮಾಡಿದ್ದರೂ ವಿಶ್ವದ ಮಾರುಕಟ್ಟೆಗೆ ಏಪ್ರಿಲ್‌ನಲ್ಲಿ ಬಿಡುಗಡೆ ಮಾಡಲಿದೆ. ಐಫೋನ್‌ 5 ಎಸ್‌ ಈಗಾಗಲೇ ವಿಶ್ವದ ಮಾರುಕಟ್ಟೆಗೆ ಬಿಡುಗಡೆಯಾಗಿದೆ.

ಈ ಎರಡು ಸ್ಮಾರ್ಟ್‌‌ಫೋನ್‌ಗಳು ಫಿಂಗರ್‌ಪ್ರಿಂಟ್‌ ಸ್ಕ್ಯಾನರ್‌ಗಳನ್ನು ಒಳಗೊಂಡಿರುವುದು ವಿಶೇಷ.ಐಫೋನ್‌ಲ್ಲಿ ಹೋಮ್‌ ಬಟನ್‌ನಲ್ಲಿ ಫಿಂಗರ್‌ ಪ್ರಿಂಟ್‌ ಸ್ಕ್ಯಾನರ್‌ ಇದ್ದರೆ ಗೆಲಾಕ್ಸಿ ಎಸ್‌ 5ಯಲ್ಲಿ ಹೋಮ್‌ ಸ್ಕ್ರೀನ್‌ ಕೆಳಗಡೆ ಫಿಂಗರ್‌ ಪ್ರಿಂಟ್‌ ಸ್ಕ್ಯಾನರ್‌‌ ಇದೆ. ಕಳೆದ ವರ್ಷ‌ ಸ್ಯಾಮ್‌ಸಂಗ್‌ ಗೆಲಾಕ್ಸಿ ಎಸ್‌ 4 ವಿಶ್ವದ ಮಾರುಕಟ್ಟೆಯಲ್ಲಿ ಮಾರಾಟದಲ್ಲಿ ಹೊಸ ಮೈಲಿಗಲ್ಲನ್ನು ಸೃಷ್ಟಿಸಿತ್ತು. ಹೊಸದಾಗಿ ಬಿಡುಗಡೆಯಾಗಲಿರುವ ಗೆಲಾಕ್ಸಿ ಎಸ್‌5ಯಲ್ಲಿರುವ ವಿಶೇಷತೆಗಳನ್ನು ಗಮನಿಸುವಾಗ ಇದು ಸಹ ಹೊಸ ಮೈಲಿಗಲ್ಲನ್ನು ಸೃಷ್ಟಿಸಬಹುದು ಎಂದು ವಿಶ್ಲೇಷಿಸಲಾಗುತ್ತದೆ. ಹೀಗಾಗಿ ಸದ್ಯ ವಿಶ್ವದಲ್ಲಿ ವೇಗದ ಸ್ಮಾರ್ಟ್‌ಫೋನ್‌ ಎಂದು ಹೆಸರುವಾಸಿಯಾಗಿರುವ ಐಫೋನ್‌ 5 ಎಸ್‌ ಮತ್ತುಗೆಲಾಕ್ಸಿ ಎಸ್‌ 5ಯ ವಿಶೇಷತೆಯನ್ನು ಇಲ್ಲಿ ನೀಡಲಾಗಿದೆ.ಜೊತೆಗೆ ಐಫೋನ್‌ 5 ಎಸ್‌ನಲ್ಲಿರದ ಗೆಲಾಕ್ಸಿ ಎಸ್‌ 5ನಲ್ಲಿರುವ ಕೆಲವು ವಿಶೇಷತೆಗಳನ್ನು ಇಲ್ಲಿ ವಿವರಿಸಲಾಗಿದೆ.ಒಂದೊಂದೆ ಪುಟವನ್ನು ತಿರುಗಿಸಿ ನೋಡಿಕೊಂಡು ಹೋಗಿ.

ಸ್ಯಾಮ್‌ಸಂಗ್‌ ಗೆಲಾಕ್ಸಿ ಎಸ್‌5
ವಿಶೇಷತೆ:
ಸಿಂಗಲ್‌ ಸಿಮ್‌
5.1 ಇಂಚಿನ ಸುಪರ್‌ ಅಮೊಲೆಡ್‌‌ ಸ್ಕ್ರೀನ್‌(1920 x 1080 ಪಿಕ್ಸೆಲ್‌)
ಆಂಡ್ರಾಯ್ಡ್‌ 4.4.2 ಕಿಟ್‌ಕ್ಯಾಟ್‌ ಓಎಸ್‌
2.5GHz ಕ್ವಾಡ್‌ ಕೋರ್‌ ಅಪ್ಲಿಕೇಶನ್‌ ಪ್ರೊಸೆಸರ್‌
2ಜಿಬಿ ರ್‍ಯಾಮ್‌
16/32ಜಿಬಿ ಆಂತರಿಕ ಮೆಮೊರಿ
16 ಎಂಪಿ ಹಿಂದುಗಡೆ ಕ್ಯಾಮೆರಾ
2 ಎಂಪಿ ಮುಂದುಗಡೆ ಕ್ಯಾಮೆರಾ
128 ಜಿಬಿವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
4ಜಿ,ವೈಫೈ,ಎಲ್‌ಟಿಇ,ಬ್ಲೂಟೂತ್‌,ಎನ್‌ಎಫ್‌ಸಿ
2800mAh ಬ್ಯಾಟರಿ

ಐಫೋನ್‌ 5 ಎಸ್‌
ವಿಶೇಷತೆ:
ಸಿಂಗಲ್‌ ಸಿಮ್‌
4 ಇಂಚಿನ ರೆಟಿನಾ ಮಲ್ಟಿಟಚ್‌ ಸ್ಕ್ರೀನ್‌‌(1136*640 ಪಿಕ್ಸೆಲ್,326ಪಿಪಿ)
ಐಓಎಸ್‌ 7
112 ಗ್ರಾಂ ತೂಕ
A7 ಚಿಪ್‌‌ 64 ಬಿಟ್‌ ಅರ್ಕಿಟೆಕ್ಚರ್‌
M7 ಮೋಷನ್‌ ಪ್ರೊಸೆಸರ್
16GB ಆಂತರಿಕ ಮೆಮೋರಿ
ಜಿಪಿಎಸ್‌,ಗ್ಲೋನಾಸ್‌‌,ಡಿಜಿಟಲ್‌ ಕಂಪಾಸ್‌,
ವೈಫೈ,ಬ್ಲೂಟೂತ್‌,ಸಿರಿ
8 ಎಂಪಿ ಐಸೈಟ್‌ ಹಿಂದುಗಡೆ ಕ್ಯಾಮೆರಾ
1.2 ಎಂಪಿ ಮುಂದುಗಡೆ ಕ್ಯಾಮೆರಾ
1560 mAh ಬ್ಯಾಟರಿ

ಇದನ್ನೂ ಓದಿ: ಇನ್‌ಫೋಗ್ರಾಫಿಕ್‌ -ಸ್ಯಾಮ್‌ಸಂಗ್‌ ಗೆಲಾಕ್ಸಿ ಸ್ಮಾರ್ಟ್‌ಫೋನ್ ಬೆಳವಣಿಗೆ

 ಧೂಳು ಮತ್ತು ಜಲ ನಿರೋಧಕ:

ಧೂಳು ಮತ್ತು ಜಲ ನಿರೋಧಕ:


ಗೆಲಾಕ್ಸಿ ಎಸ್‌‌5ಯನ್ನು ನೀರಿನೊಳಗೆ ಇರಿಸಿದರೂ ಏನು ಆಗುವುದಿಲ್ಲ. ಧೂಳು ಮತ್ತು ಜಲ ನಿರೋಧಕವನ್ನು ಈ ಸ್ಮಾರ್ಟ್‌‌ಫೋನ್‌ ಹೊಂದಿದೆ. ಐಪಿ 67 ಪ್ರಮಾಣ ಪತ್ರ(IP67 certification) ಈ ಸ್ಮಾರ್ಟ್‌‌‌‌‌ಫೋನ್‌ಗೆ ಸಿಕ್ಕಿದೆ.ಆಪಲ್‌ ಐಫೋನ್‌ 5ಎಸ್‌ಗೆ ಈ ವಿಶೇಷತೆಯನ್ನು ನೀಡಿಲ್ಲ.

 ಹಾರ್ಟ್‌ ರೇಟ್‌ ಮಾನಿಟರ್‌:

ಹಾರ್ಟ್‌ ರೇಟ್‌ ಮಾನಿಟರ್‌:

ಹಿಂಬದಿಯ ಕ್ಯಾಮೆರಾದ ಫ್ಲ್ಯಾಶ್‌‌ ಹತ್ತಿರ ಇರುವ ಕಿರು ಜಾಗದಲ್ಲಿ ಹಾರ್ಟ್‌ರೇಟ್‌ ಸೆನ್ಸರ್‌ನ್ನು ಸ್ಯಾಮ್‌ಸಂಗ್‌ ಈ ಫೋನಿಗೆ ನೀಡಿದೆ. ಈ ಜಾಗದಲ್ಲಿ ಕೈ ಬೆರಳು ಇರಿಸಿ ಹೃದಯ ಬಡಿತವನ್ನು ಪರೀಕ್ಷಿಸಬಹುದು. ಆಪಲ್‌ ಐಫೋನ್‌ 5ಎಸ್‌ನಲ್ಲಿ ಹೃದಯ ಬಡಿತವನ್ನು ಪರೀಕ್ಷಿಸಲು ಸಾಧ್ಯವಿಲ್ಲ.

 ಕ್ಯಾಮೆರಾ:

ಕ್ಯಾಮೆರಾ:

ಗೆಲಾಕ್ಸಿ ಎಸ್5 ಹಿಂದುಗಡೆ 16 ಎಂಪಿ ಕ್ಯಾಮೆರಾ ಮುಂದುಗಡೆ, 2 ಎಂಪಿ ಕ್ಯಾಮೆರಾವನ್ನು ಹೊಂದಿದೆ. ವಿಶ್ವದ ವೇಗದ ಆಟೋ ಫೋಕಸ್‌ ಸೆನ್ಸರ್‌‌, ಎಚ್‌ಡಿಆರ್‌ ಮೂಡ್‌‌,ಸೆಲೆಕ್ಟಿವ್‌ ಫೋಕಸ್‌ ವಿಶೇಷತೆಗಳನ್ನು ಸ್ಯಾಮ್‌ಸಂಗ್‌ ಈ ಸ್ಮಾರ್ಟ್‌ಫೋನ್‌ಗೆ ನೀಡಿದೆ. ಐಫೋನ್‌ 5 ಎಸ್‌ ಹಿಂದುಗಡೆ 8 ಎಂಪಿ ಕ್ಯಾಮೆರಾ, ಮುಂದುಗಡೆ 1.2 ಎಂಪಿ ಕ್ಯಾಮೆರಾವನ್ನು ಹೊಂದಿದೆ.

ಗೆಲಾಕ್ಸಿ ಎಸ್‌5 ಯಲ್ಲಿ 5312 x 2988 ಪಿಕ್ಸೆಲ್‌ ರೆಸಲ್ಯೂಶನ್‌ ಚಿತ್ರಗಳನ್ನು ತೆಗೆಯಬಹುದಾದರೆ, ಐಫೋನ್‌ 5 ಎಸ್‌ 3264 x 2448 ಪಿಕ್ಸೆಲ್‌ ರೆಸಲ್ಯೂಶನ್‌ವರೆಗಿನ ಚಿತ್ರಗಳನ್ನು ತೆಗೆಯಬಹುದಾಗಿದೆ.

 ಆಲ್ಟ್ರಾ ಪವರ್‌ ಸೇವಿಂಗ್‌ ಮೊಡ್‌:

ಆಲ್ಟ್ರಾ ಪವರ್‌ ಸೇವಿಂಗ್‌ ಮೊಡ್‌:


ಸಾಧಾರಣವಾಗಿ ಸ್ಮಾರ್ಟ್‌ಫೋನ್‌ ಸ್ಕ್ರೀನ್‌ ಪ್ರಕಾಶಮಾನ ಹೆಚ್ಚಿದಷ್ಟು ಬ್ಯಾಟರಿ ಬೇಗ ಖಾಲಿಯಾಗುತ್ತದೆ. ಈ ಸ್ಮಾರ್ಟ್‌ಫೋನ್‌ ಬ್ಯಾಟರಿ ಬೇಗನೇ ಖಾಲಿಯಾಗದಿರಲು ಸ್ಯಾಮ್‌ಸಂಗ್‌ ಗೆಲಾಕ್ಸಿ ಎಸ್‌5ಗೆ ಆಲ್ಟ್ರಾ ಪವರ್‌ ಸೇವಿಂಗ್ ಮೊಡ್‌ ನೀಡಿದೆ.ಇದರಿಂದಾಗಿ ಬ್ಯಾಟರಿ ಕಡಿಮೆಯಾಗುತ್ತಿದ್ದಂತೆ ಸ್ಕ್ರೀನ್‌ ಕಪ್ಪು ಬಿಳುಪು ಸ್ಕ್ರೀನ್‌ ಆಗಿ ಪರಿವರ್ತ‌ನೆಯಾಗುತ್ತದೆ.

 ಡೌನ್‌ಲೋಡ್‌ ಬೂಸ್ಟರ್‌:

ಡೌನ್‌ಲೋಡ್‌ ಬೂಸ್ಟರ್‌:


ಸ್ಯಾಮ್‌ಸಂಗ್‌ ಬಳಕೆದಾರರಿಗೆ ಈ ಸ್ಮಾರ್ಟ್‌ಫೋನ್‌ ಮೂಲಕ ವೇಗದ ಇಂಟರ್‌ನೆಟ್‌‌ ಬಳಸುವಂತಾಗಲು ಹೊಸ ತಂತ್ರಜ್ಞಾನವನ್ನು ಈ ಫೋನಿಗೆ ನೀಡಿದೆ. ಈ ಸ್ಮಾರ್ಟ್‌‌ಫೋನ್‌ಲ್ಲಿ ಐದನೇ ತಲೆಮಾರಿನ ವೈಫೈ ಹೊಂದಿದ್ದು,ಒಂದೇ ಸಮಯದಲ್ಲಿ ವೈಫೈ ಮತ್ತು ಎಲ್‌ಟಿಇ ಮೂಲಕ ವೇಗವಾಗಿ ಡೌನ್‌ಲೋಡ್‌ ಮಾಡಬಹುದಾಗಿದೆ.

 ರಿಮೋಟ್‌ ಕಂಟ್ರೋಲ್‌:

ರಿಮೋಟ್‌ ಕಂಟ್ರೋಲ್‌:


ಗೆಲಾಕ್ಸಿ ಎಸ್‌5ಯನ್ನು ರಿಮೋಟ್‌ ಕಂಟ್ರೋಲ್ ಆಗಿಯೂ ಬಳಸಬಹುದು.ಸ್ಮಾರ್ಟ್‌‌ಫೋನ್‌ ಮೇಲ್ಭಾಗದಲ್ಲಿ ಇನ್‌ಫ್ರಾರೆಡ್‌ ಬ್ಲ್ಯಾಸ್ಟರ್‌ನ್ನು ಸ್ಯಾಮ್‌ಸಂಗ್ ಈ ಫೋನಿಗೆ ನೀಡಿದೆ.

 ಗೆಲಾಕ್ಸಿ ಗೇರ್‌:

ಗೆಲಾಕ್ಸಿ ಗೇರ್‌:


ಸ್ಯಾಮ್‌ಸಂಗ್‌ನ ಹೊಸ ಸ್ಮಾರ್ಟ್‌‌ಫೋನ್‌, ಹೊಸದಾಗಿ ಬಿಡುಗಡೆ ಮಾಡಿರುವ ಗೆಲಾಕ್ಸಿ ಗೇರ್‌ ಸ್ಮಾರ್ಟ್‌‌ವಾಚ್‌ಗೆ ಬೆಂಬಲ ನೀಡುತ್ತದೆ.

 ಆಂತರಿಕ ಮೆಮೊರಿ

ಆಂತರಿಕ ಮೆಮೊರಿ


ಗೆಲಾಕ್ಸಿ ಎಸ್‌ 5 16/32 ಜಿಬಿ ಆಂತರಿಕ ಮೆಮೊರಿಯಲ್ಲಿ ಬಿಡುಗಡೆಯಾಗಿದ್ದರೆ, ಐಫೋನ್‌ 5 ಎಸ್‌ 16/32/64 ಜಿಬಿ ಆಂತರಿಕ ಮೆಮೊರಿಯಲ್ಲಿ ಬಿಡುಗಡೆಯಾಗಿದೆ. ಗೆಲಾಕ್ಸಿ ಎಸ್‌ 5ಯಲ್ಲಿ ಎಸ್‌ಡಿ ಕಾರ್ಡ್‌ ಸ್ಲಾಟ್‌‌ ನೀಡಿದ್ದು ಹೆಚ್ಚುವರಿಯಾಗಿ ‌ 128 ಜಿಬಿವರೆಗೆ ಡೇಟಾವನ್ನು ಸಂಗ್ರಹಿಸಬಹುದು. ಆದರೆ ಐಫೋನ್‌ 5 ಎಸ್‌ನಲ್ಲಿ ಹೆಚ್ಚುವರಿ ಮೆಮೊರಿ ವಿಸ್ತರಿಸಲು ಸಾಧ್ಯವಿಲ್ಲ.

 ಸೆನ್ಸರ್‌:

ಸೆನ್ಸರ್‌:


ಗೆಲಾಕ್ಸಿ ಎಸ್ 5
ಎಕ್ಸಲರೋಮೀಟರ್‌,ಗೈರೋ,ಪ್ರಾಕ್ಸಿಮಿಟಿ,ಕಂಪಾಸ್‌,ಬ್ಯಾರೋಮೀಟರ್‌, ಹಾಲ್‌ ಆರ್‌ಜಿಬಿ ಲೈಟ್‌‌, ಗೆಶ್ಚರ್‌‌‌,ಫಿಂಗರ್‌ ಸ್ಕ್ಯಾನರ್‌‌,ಹಾರ್ಟ್‌ ರೇಟ್‌ ಸೆನ್ಸರ್‌ಗಳನ್ನು ಸ್ಯಾಮ್‌ಸಂಗ್‌ ಸ್ಮಾರ್ಟ್‌‌ಫೋನ್‌ ಒಳಗೊಂಡಿದೆ.

ಐಫೋನ್‌ 5 ಎಸ್‌
ಎಕ್ಸಲರೋ ಮೀಟರ್‌,ಗೈರೋ,ಪ್ರಾಕ್ಸಿಮಿಟಿ,ಕಂಪಾಸ್‌

 ಪ್ರೊಸೆಸರ್‌ ಮತ್ತು ರ್‍ಯಾಮ್‌

ಪ್ರೊಸೆಸರ್‌ ಮತ್ತು ರ್‍ಯಾಮ್‌


ಗೆಲಾಕ್ಸಿ ಎಸ್‌5
2.5GHz ಕ್ವಾಡ್‌ ಕೋರ್‌ ಸ್ನಾಪ್‌ಡ್ರಾಗನ್‌ 801 ಪ್ರೊಸೆಸರ್‌ , Adreno 330 ಗ್ರಾಫಿಕ್‌ ಪ್ರೊಸೆಸರ್‌‌, 2 ಜಿಬಿ ರ್‍ಯಾಮ್‌

ಆಪಲ್‌ ಐಫೋನ್‌ 5ಎಸ್‌:
1.3GHz ಡ್ಯುಯಲ್‌ ಕೋರ್‌ ಎ7 ಚಿಪ್‌ಸೆಟ್‌ 64 ಬಿಟ್‌ ಆರ್ಕಿಟೆಕ್ಚರ್, ಎಂ7 ಮೋಶನ್‌ ಕೋಪ್ರೊಸೆಸರ್‌‌, PowerVR G6430 ಗ್ರಾಫಿಕ್‌ ಪ್ರೊಸೆಸರ್‌,1ಜಿಬಿ ರ್‍ಯಾಮ್‌

 ಬ್ಯಾಟರಿ

ಬ್ಯಾಟರಿ


ಗೆಲಾಕ್ಸಿ ಎಸ್‌5 -2800 mAh ಬ್ಯಾಟರಿ
ಸ್ಟ್ಯಾಂಡ್‌ ಬೈ ಟೈಂ:390 ಗಂಟೆ (3ಜಿ)
ಟಾಕ್‌ ಟೈಂ: 21 ಗಂಟೆ (3ಜಿ)

ಐಫೋನ್‌ 5ಎಸ್‌ - 1560 mAh ಬ್ಯಾಟರಿ
ಸ್ಟ್ಯಾಂಡ್‌ ಬೈ ಟೈಂ:250 ಗಂಟೆ(3ಜಿ)
ಟಾಕ್‌ ಟೈಂ: 10 ಗಂಟೆ (3ಜಿ)

 ಕನೆಕ್ಟಿವಿಟಿ:

ಕನೆಕ್ಟಿವಿಟಿ:


ಸ್ಯಾಮ್‌ಸಂಗ್‌ ಗೆಲಾಕ್ಸಿ ಎಸ್‌5:
2ಜಿ,3ಜಿ,4ಜಿ,ವೈಫೈ,ಬ್ಲೂಟೂತ್‌‌,ಎನ್‌ಎಫ್‌ಸಿ,ಮೈಕ್ರೋಯುಎಸ್‌‌ಬಿ,ಇನ್‌‌ಫ್ರಾರೆಡ್‌

ಆಪಲ್‌ ಐಫೋನ್‌ 5ಎಸ್‌
2ಜಿ,3ಜಿ,4ಜಿ,ವೈಫೈ,ಬ್ಲೂಟೂತ್‌,ಲೈಟ್ನಿಂಗ್‌ ಆಡಾಪ್ಟರ್‌,ಏರ್‌ ಡ್ರಾಪ್‌

 ಐಫೋನ್‌ 5ಎಸ್‌

ಐಫೋನ್‌ 5ಎಸ್‌

ಗಾತ್ರ

 ಐಫೋನ್‌ 5ಎಸ್‌

ಐಫೋನ್‌ 5ಎಸ್‌

ಬಟನ್‌ ಮತ್ತು ನಿಯಂತ್ರಕಗಳು

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X