ಸ್ಯಾಮ್‌ಸಂಗ್‌ನಿಂದ ಇನ್ನೊಂದು ಸ್ಮಾರ್ಟ್‌ಫೋನ್ ಸುಗ್ಗಿ

By Shwetha
|

ದಕ್ಷಿಣ ಕೊರಿಯಾದ ಮಹಾನ್ ಪ್ರತಿಭೆ ಸ್ಯಾಮ್‌ಸಂಗ್ ಎಲ್‌ಟಿಇ ವೇರಿಯೇಂಟ್ ಇರುವ ಗ್ಯಾಲಕ್ಸಿ ಎಸ್5 ಭಾರತದಲ್ಲಿ ಕೂಡಲೇ ಲಾಂಚ್ ಮಾಡುತ್ತಿದೆ. ಎಲ್‌ಜಿ ತನ್ನ G3 ಫ್ಲ್ಯಾಗ್‌ಶಿಪ್ ಹ್ಯಾಂಡ್‌ಸೆಟ್ ಅನ್ನು ಸ್ನ್ಯಾಪ್‌ಡ್ರಾಗನ್ 801 ಚಿಪ್‌ಸೆಟ್ ಮತ್ತು 4ಜಿ LTE ಬೆಂಬಲದೊಂದಿಗೆ ಜುಲೈ 21 ರಂದು ಮುಂಬೈನಲ್ಲಿ ನಡೆಯುತ್ತಿರುವ ಈವೆಂಟ್‌ನಲ್ಲಿ ಲಾಂಚ್ ಮಾಡಲಿದೆ.

ಜನಪ್ರಿಯ ರೀಟೈಲ್ ಸೇವೆಯಾದ ಮಹೇಶ್ ಟೆಲಿಕಾಮ್ ಈ ಸುದ್ದಿಯನ್ನು ಈಗಷ್ಟೇ ಬಿತ್ತರಿಸಿದ್ದು ಹೆಚ್ಚು ಶಕ್ತಿಯುತವಾಗಿರುವ ಸ್ಯಾಮ್‌ಸಂಗ್ ಎಸ್5 ಅನ್ನು ಭಾರತದಲ್ಲಿ ಲಾಂಚ್ ಮಾಡುವ ಎಲ್ಲಾ ಸಿದ್ಧತೆಗಳನ್ನು ಕಂಪೆನಿ ಮಾಡಿಕೊಂಡಿದೆ ಎಂದಾಗಿದೆ. ವರದಿಯ ಪ್ರಕಾರ, ತನ್ನ ಪ್ರತಿಸ್ಪರ್ಧಿ ಎಲ್‌ಜಿ G3 ಗಿಂತಲೂ ಉತ್ತಮ ಮಾರುಕಟ್ಟೆ ಮೌಲ್ಯವನ್ನು ಎಸ್5 ಪಡೆದುಕೊಳ್ಳಲಿದೆ ಎಂದಾಗಿದೆ.

ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್5 ಗೆ ಬಿಡುಗಡೆಯ ಭಾಗ್ಯ

3 ಜಿ ವೇರಿಯೇಂಟ್ ಗ್ಯಾಲಕ್ಸಿ ಎಸ್5 ಕಳೆದ ಏಪ್ರಿಲ್‌ನಲ್ಲೇ ಲಾಂಚ್ ಆಗಿತ್ತು. ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್5 ರೂ 35,000 ಗೆ ಲಭ್ಯವಿದೆ. ಇದು ಓಕ್ಟಾ ಕೋರ್ ಎಕ್ಸೋನಸ್ 5422 SoC ಮತ್ತು 2 ಜಿಬಿ RAM ಜತೆ ಬಂದಿದೆ. ಸ್ಯಾಮ್‌ಸಂಗ್‌ನ LTE (SM-G900I) ವೇರಿಯೇಂಟ್ ಗ್ಯಾಲಕ್ಸಿ ಎಸ್5 2.5 GHz ಕ್ವಾಡ್ - ಕೋರ್ ಸ್ನ್ಯಾಪ್‌ಡ್ರಾಗನ್ 801 ಪ್ರೊಸೆಸರ್ ಅನ್ನು ಹೊಂದಿದೆ.

ಪ್ರಪ್ರಥಮ ಬಾರಿಗೆ ಸ್ಯಾಮ್‌ಸಂಗ್ ಹೈ - ಎಂಡ್ ಸ್ಮಾರ್ಟ್‌ಫೋನ್ ಅನ್ನು ಸ್ನ್ಯಾಪ್‌ಡ್ರಾಗನ್ ಚಿಪ್‌ಸೆಟ್‌ನಲ್ಲಿ ಲಾಂಚ್ ಮಾಡುತ್ತಿದೆ. ಗ್ಯಾಲಕ್ಸಿ ಎಸ್5 ನ ಪ್ರಸ್ತುತ ಮಾದರಿಯು ಭಾರತೀಯ ಬಳಕೆದಾರರಿಂದ ಉತ್ತಮ ಪ್ರತಿಕ್ರಯಿಯನ್ನು ಪಡೆದುಕೊಳ್ಳುತ್ತಿರುವಂತೆ ತೋರುತ್ತಿದೆ.

ಹೊಸ ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್5 ಮುಖ್ಯ LTE ಬ್ಯಾಂಡ್‌ಗಳಾದ B1 (2,100), B2 (1,900), B3 (1,800), B5 (850), B7 (2,600), B8 (900), B40 (2,300) ಮತ್ತು B28 (700) ಗೆ ಬೆಂಬಲ ನೀಡುತ್ತಿದ್ದು, ಇದು ಏರ್‌ಟೆಲ್‌ನ TD-LTE ನೆಟ್‌ವರ್ಕ್‌ಗಳೊಂದಿಗೆ ಕೂಡ ಸರಿಯಾಗಿ ಕಾರ್ಯನಿರ್ವಹಿಸುತ್ತಿದೆ.

ಮಹೇಶ್ ಟೆಲಿಕಾಮ್ ಪ್ರಕಾರ ಹ್ಯಾಂಡ್‌ಸೆಟ್ ಮೌಲ್ಯವು, 56000 ರೂಪಾಯಿಗಳಾಗಿದ್ದು ಇದರ ರೀಟೈಲ್ ಮೌಲ್ಯವಾಗಿ ರೂ 52500 ಅನ್ನು ನೀವು ನಿರೀಕ್ಷಿಸಬಹುದಾಗಿದೆ. 3 ಜಿ ಮಾಡೆಲ್‌ಗಿಂತ ರೂ 1500 ಅಧಿಕವಾಗಿದೆ.

ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್5 LTE - ಮಹತ್ವದ ವೈಶಿಷ್ಟ್ಯತೆಗಳು
ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್ 5 LTE ಬೆಂಬಲವನ್ನು ಹೊಂದಿದ್ದು 5.1 ಇಂಚಿನೊಂದಿಗೆ FHD ಡಿಸ್‌ಪ್ಲೇ ಜೊತೆಗೆ, 2.5GHz ಕ್ವಾಡ್ ಕೋರ್ ಸ್ನ್ಯಾಪ್‌ಡ್ರಾಗನ್ 801 ಪ್ರೊಸೆಸರ್ ಜೊತೆಗೆ 2 ಜಿಬಿ RAM ಅನ್ನು ಡಿವೈಸ್ ಹೊಂದಿದೆ. ಇದರಲ್ಲಿ 16 ಜಿಬಿ ಆಂತರಿಕ ಸಂಗ್ರಹಣೆ ಇದೆ, ಡಿವೈಸ್ 16 ಮೆಗಾಪಿಕ್ಸೆಲ್ ಮುಂಭಾಗ ಕ್ಯಾಮೆರಾವನ್ನು ಹೊಂದಿದ್ದು, 2 ಮೆಗಾಪಿಕ್ಸೆಲ್ ಫ್ರಂಟ್ ಫೇಸಿಂಗ್ ಶೂಟರ್ ಡಿವೈಸ್‌ನಲ್ಲಿದೆ. ಫೋನ್ ಆಂಡ್ರಾಯ್ಡ್ 4.4.2 ಕಿಟ್‌ಕ್ಯಾಟ್ ಅನ್ನು ಹೊಂದಿದ್ದು, 2800mAh ಬ್ಯಾಟರಿಯನ್ನು ಒಳಗೊಂಡಿದೆ.

ಹೆಚ್ಚಿನ ಸುದ್ದಿಗಳಿಗೆ ಗಿಜ್‌ಬಾಟ್‌ಗೆ ಭೇಟಿ ನೀಡುತ್ತಿರಿ!

Best Mobiles in India

Read more about:
English summary
Samsung galaxy s5 Snapdragon 801, 4G LTE Could Launch Soon in India.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X