ಫಿಂಗರ್‌ ಪ್ರಿಂಟ್‌ ಸ್ಕ್ಯಾನರ್‌ ಹೊಂದಿರುವ ಗೆಲಾಕ್ಸಿ ಎಸ್‌5 ಬಿಡುಗಡೆ

By Ashwath
|

ಗೆಲಾಕ್ಸಿ ಎಸ್‌‌ ಸರಣಿಯ ಐದನೇ ತಲೆಮಾರಿನ ಸ್ಮಾರ್ಟ್‌‌‌‌‌ಫೋನ್‌ನ್ನು ಸ್ಯಾಮ್‌ಸಂಗ್‌ ಸ್ಪೈನ್‌‌ ಬಾರ್ಸಿ‌‌ಲೋನಾದಲ್ಲಿ ನಡೆಯುತ್ತಿರುವ ಮೊಬೈಲ್‌ ವರ್ಲ್ಡ್‌‌ ಕಾಂಗ್ರೆಸ್‌ ಸಮ್ಮೇಳನದಲ್ಲಿ ಬಿಡುಗಡೆ ಮಾಡಿದೆ.

ಕಳೆದ ವರ್ಷ ಬಿಡುಗಡೆ ಮಾಡಿದ್ದ ಗೆಲಾಕ್ಸಿ ಎಸ್‌4 ಹೋಲಿಸಿದರೆ ಕೆಲವೊಂದು ಹಾರ್ಡ್‌‌ವೇರ್‌ ವಿಶೇಷತೆಗಳು ಈ ಸ್ಮಾರ್ಟ್‌‌ಫೋನ್‌ಲ್ಲಿ‌ ಕಡಿಮೆಯಾಗಿದ್ದರೂ, ಹೊಸ ವಿಶೇಷತೆಗಳನ್ನು ಸ್ಯಾಮ್‌ಸಂಗ್‌‌‌ ಈ ಸ್ಮಾರ್ಟ್‌ಫೋನಿಗೆ ನೀಡಿದೆ. ಜೊತೆಗೆ ಈ ಸ್ಮಾರ್ಟ್‌ಫೋನ್‌‌‌‌ ಸಂಬಂಧಿಸಿದಂತೆ ಕಲವೊಂದು ವದಂತಿಗಳು ಸಹ ಹರಡಿತ್ತು. ಆ ವದಂತಿಗಳು ಸಹ ಸುಳ್ಳಾಗಿದೆ. ಅದರಲ್ಲೂ ಮುಖ್ಯವಾಗಿ ಕಣ್ಣಿನ ಸ್ಕ್ಯಾನರ್‌ನಲ್ಲಿ ಗೆಲಾಕ್ಸಿ ಎಸ್‌5ಬಿಡುಗಡೆಯಾಗಲಿದೆ ಎಂದು ಹೇಳಲಾಗುತಿತ್ತು. ಆದರೆ ಈ ಸ್ಮಾರ್ಟ್‌‌ಫೋನ್‌ ಐಫೋನ್‌ 5ಎಸ್‌ ಮತ್ತು ಎಚ್‌ಟಿಸಿ ಒನ್‌ ಮ್ಯಾಕ್ಸ್‌ ಫಿಂಗರ್‌ ಪ್ರಿಂಟ್‌ ಸ್ಕ್ಯಾನರ್‌ನೊಂದಿಗೆ ಬಿಡುಗಡೆಯಾಗಿದೆ. ಜೊತೆಗೆ ಸ್ಮಾರ್ಟ್‌ಫೋನ್‌ ಧೂಳು ಮತ್ತು ಜಲ ನಿರೋಧಕವಾಗಿದೆ.

ಸ್ಯಾಮ್‌ಸಂಗ್‌ ಈ ಸ್ಮಾರ್ಟ್‌‌ಫೋನ್‌ ಬಿಡುಗಡೆ ಮಾತ್ರ ಮಾಡಿದ್ದು ಬೆಲೆಯನ್ನು ಪ್ರಕಟಿಸಿಲ್ಲ.ಏಪ್ರಿಲ್‌1 ರಿಂದ ಈ ಸ್ಮಾರ್ಟ್‌‌ಫೋನ್‌‌ನ್ನು ವಿಶ್ವದ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗುವುದು ಎಂದು ಸ್ಯಾಮ್‌ಸಂಗ್‌ ತಿಳಿಸಿದೆ.

ಸ್ಯಾಮ್‌ಸಂಗ್‌ ಗೆಲಾಕ್ಸಿ ಎಸ್‌5
ವಿಶೇಷತೆ:
ಸಿಂಗಲ್‌ ಸಿಮ್‌
5.1 ಇಂಚಿನ ಸುಪರ್‌ ಅಮೊಲೆಡ್‌‌ ಸ್ಕ್ರೀನ್‌(1920 x 1080 ಪಿಕ್ಸೆಲ್‌)
ಆಂಡ್ರಾಯ್ಡ್‌ 4.4.2 ಕಿಟ್‌ಕ್ಯಾಟ್‌ ಓಎಸ್‌
2.5GHz ಕ್ವಾಡ್‌ ಕೋರ್‌ ಅಪ್ಲಿಕೇಶನ್‌ ಪ್ರೊಸೆಸರ್‌
2ಜಿಬಿ ರ್‍ಯಾಮ್‌
16/32ಜಿಬಿ ಆಂತರಿಕ ಮೆಮೊರಿ
16 ಎಂಪಿ ಹಿಂದುಗಡೆ ಕ್ಯಾಮೆರಾ
2 ಎಂಪಿ ಮುಂದುಗಡೆ ಕ್ಯಾಮೆರಾ
128 ಜಿಬಿವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
4ಜಿ,ವೈಫೈ,ಎಲ್‌ಟಿಇ,ಬ್ಲೂಟೂತ್‌,ಎನ್‌ಎಫ್‌ಸಿ
2800mAh ಬ್ಯಾಟರಿ

ಸ್ಯಾಮ್‌ಸಂಗ್‌ ಗೆಲಾಕ್ಸಿ ಎಸ್‌5 ಸ್ಮಾರ್ಟ್‌‌ಫೋನ್‌ ಬಿಡುಗಡೆ ಮಾಡಿರುವ ಹಿನ್ನೆಲೆಯಲ್ಲಿ ಈ ಸ್ಮಾರ್ಟ್‌‌‌ಫೋನಿಗೆ ಸಂಬಂಧಿಸಿದ ಕೆಲವು ವಿಶೇಷತೆಗಳ ಮಾಹಿತಿಯನ್ನು ಮುಂದಿನ ಪುಟದಲ್ಲಿ ನೀಡಲಾಗಿದೆ.ಒಂದೊಂದೆ ಪುಟವನ್ನು ತಿರುಗಿಸಿ ಓದಿಕೊಂಡು ಹೋಗಿ.

ಸ್ಯಾಮ್‌ಸಂಗ್‌ ಗೆಲಾಕ್ಸಿ ಎಸ್‌ 5 ಬಿಡುಗಡೆ

ಸ್ಯಾಮ್‌ಸಂಗ್‌ ಗೆಲಾಕ್ಸಿ ಎಸ್‌ 5 ಬಿಡುಗಡೆ


142.0x72.5x8.1 ಮಿ.ಮೀ ಗಾತ್ರ,145 ಗ್ರಾಂ ತೂಕದ ಸ್ಮಾರ್ಟ್‌‌ಫೋನ್‌,5.1 ಇಂಚಿನ ಸುಪರ್‌ ಅಮೊಲೆಡ್‌‌ ಸ್ಕ್ರೀನ್‌(1920 x 1080 ಪಿಕ್ಸೆಲ್‌)ಒಳಗೊಂಡಿದೆ.

ಸ್ಯಾಮ್‌ಸಂಗ್‌ ಗೆಲಾಕ್ಸಿ ಎಸ್‌ 5 ಬಿಡುಗಡೆ

ಸ್ಯಾಮ್‌ಸಂಗ್‌ ಗೆಲಾಕ್ಸಿ ಎಸ್‌ 5 ಬಿಡುಗಡೆ


ಈ ಸ್ಮಾರ್ಟ್‌ಫೋನ್‌ 2.5GHz ಕ್ವಾಲಕಂ ಸ್ನಾಪ್‌ಡ್ರಾಗನ್‌ 800 ಕ್ವಾಡ್‌ ಕೋರ್‌ ಅಪ್ಲಿಕೇಶನ್‌ ಪ್ರೊಸೆಸರ್‌ನ್ನು ಹೊಂದಿದೆ. ಈ ಹಿಂದೆ ಬಿಡುಗಡೆಯಾದ ಗೆಲಾಕ್ಸಿ ಎಸ್‌4, ನೋಟ್‌3 ಫ್ಯಾಬ್ಲೆಟ್‌‌ಗಳು ಆಕ್ಟಾ ಕೋರ್‌ ಪ್ರೊಸೆಸರ್‌ನ್ನು ಒಳಗೊಂಡಿತ್ತು.ಜೊತೆಗೆ ಕಳೆದ ವಾರ ಬಿಡುಗಡೆಯಾದ ನೋಟ್‌3 ನಿಯೋ ಹೆಕ್ಸಾ ಕೋರ್‌ ಪ್ರೊಸೆಸರ್‌‌ನೊಂದಿಗೆ ಬಿಡುಗಡೆಯಾಗಿತ್ತು.

ಸ್ಯಾಮ್‌ಸಂಗ್‌ ಗೆಲಾಕ್ಸಿ ಎಸ್‌ 5 ಬಿಡುಗಡೆ

ಸ್ಯಾಮ್‌ಸಂಗ್‌ ಗೆಲಾಕ್ಸಿ ಎಸ್‌ 5 ಬಿಡುಗಡೆ

4ಜಿಬಿ ರ್‍ಯಾಮ್‌ ನೊಂದಿಗೆ ಬಿಡುಗಡೆಯಾಗಲಿದೆ ಎನ್ನುವ ವದಂತಿ ಈ ಹಿಂದೆ ಮಾಧ್ಯಮಗಳಲ್ಲಿ ಪ್ರಕಟಗೊಂಡಿತ್ತು.ಆದರೆ ಈ ಸ್ಮಾರ್ಟ್‌ಫೋನ್‌ 2ಜಿಬಿ ರ್‍ಯಾಮ್‌ನೊಂದಿಗೆ ಬಿಡುಗಡೆಯಾಗಿದೆ.ನೋಟ್‌3, ಗೆಲಾಕ್ಸಿ ರೌಂಡ್‌ ಸ್ಮಾರ್ಟ್‌ಫೋನ್‌ಗಳಿಗೆ ಸ್ಯಾಮ್‌ಸಂಗ್‌ 3 ಜಿಬಿ ರ್‍ಯಾಮ್‌ ನೀಡಿತ್ತು.

ಸ್ಯಾಮ್‌ಸಂಗ್‌ ಗೆಲಾಕ್ಸಿ ಎಸ್‌ 5 ಬಿಡುಗಡೆ

ಸ್ಯಾಮ್‌ಸಂಗ್‌ ಗೆಲಾಕ್ಸಿ ಎಸ್‌ 5 ಬಿಡುಗಡೆ


16 ಎಂಪಿ ಹಿಂದುಗಡೆ ಕ್ಯಾಮೆರಾ,2 ಎಂಪಿ ಮುಂದುಗಡೆ ಕ್ಯಾಮೆರಾವನ್ನು ಸ್ಮಾರ್ಟ್‌ಫೋನ್‌ ಒಳಗೊಂಡಿದೆ.ವಿಶ್ವದ ವೇಗದ ಆಟೋಫೋಕಸ್‌ ಸೆನ್ಸರ್‌‌ ಈ ಸ್ಮಾರ್ಟ್‌‌ಫೋನ್‌ಗೆ ನೀಡಲಾಗಿದೆ ಎಂದು ಸ್ಯಾಮ್‌ಸಂಗ್‌‌ ಹೇಳಿದೆ. ಜೊತೆಗೆ ಅತ್ಯಾಧುನಿಕ ಎಚ್‌ಡಿಆರ್‌(High Dynamic Range ) ತಂತ್ರಜ್ಞಾನ,ಜೊತೆಗೆ ಬೇಕಾದ ಭಾಗವನ್ನು ಮಾತ್ರ ಕಾಣುವಂತೆ ಮಾಡಿ ಉಳಿದ ಭಾಗಗಳನ್ನು ಮಬ್ಬು ಮಾಡುವಂತ ತಂತ್ರಜ್ಞಾನ ಈ ಸ್ಮಾರ್ಟ್‌ಫೋನ್‌ಲ್ಲಿದೆ.

ಸ್ಯಾಮ್‌ಸಂಗ್‌ ಗೆಲಾಕ್ಸಿ ಎಸ್‌ 5 ಬಿಡುಗಡೆ

ಸ್ಯಾಮ್‌ಸಂಗ್‌ ಗೆಲಾಕ್ಸಿ ಎಸ್‌ 5 ಬಿಡುಗಡೆ


ಸ್ಯಾಮ್‌ಸಂಗ್‌ ಬಳಕೆದಾರರಿಗೆ ಈ ಸ್ಮಾರ್ಟ್‌ಫೋನ್‌ ಮೂಲಕ ವೇಗದ ಇಂಟರ್‌ನೆಟ್‌‌ ಬಳಸುವಂತಾಗಲು 4ಜಿ ಎಲ್‌ಟಿಇ ಮತ್ತು ವೈಫೈ ತಂತ್ರಜ್ಞಾನ ಮತ್ತಷ್ಟು ಸುಧಾರಿಸಿ ಈ ಸ್ಮಾರ್ಟ್‌‌ಫೋನಿಗೆ ನೀಡಿದೆ. ಈ ಸ್ಮಾರ್ಟ್‌‌ಫೋನ್‌ಲ್ಲಿ ಐದನೇ ತಲೆಮಾರಿನ ವೈಫೈ ಹೊಂದಿದ್ದು,ಒಂದೇ ಸಮಯದಲ್ಲಿ ವೈಫೈ ಮತ್ತು ಎಲ್‌ಟಿಇ ಮೂಲಕ ಡೌನ್‌ಲೋಡ್‌ ಮಾಡಲು ನವೀನ ವೈಫೈ ತಂತ್ರಜ್ಞಾನವನ್ನು ಸ್ಯಾಮ್‌ಸಂಗ್‌ ಅಭಿವೃದ್ಧಿ ಪಡಿಸಿದೆ.

ಸ್ಯಾಮ್‌ಸಂಗ್‌ ಗೆಲಾಕ್ಸಿ ಎಸ್‌ 5 ಬಿಡುಗಡೆ

ಸ್ಯಾಮ್‌ಸಂಗ್‌ ಗೆಲಾಕ್ಸಿ ಎಸ್‌ 5 ಬಿಡುಗಡೆ


ಫಿಂಗರ್‌ ಪ್ರಿಂಟ್‌ ಸ್ಕ್ಯಾನರ್‌ನ ಜೊತೆಗೆ ಈ ಸ್ಮಾರ್ಟ್‌‌ಫೋನ್‌ ಹೊಸ ಹೃದಯ ಬಡಿತವನ್ನು ಪರೀಕ್ಷಿಬಹುದು. ಇದಕ್ಕಾಗಿ ಹಾರ್ಟ್‌‌ಮೀಟರ್‌ ಮಾನೀಟರ್‌‌‌ ಸೆನ್ಸರ್‌ನ್ನು ಸ್ಯಾಮ್‌ಸಂಗ್‌ ತಯಾರಿಸಿದೆ‌‌‌ .ಈ ಸ್ಮಾರ್ಟ್‌ಫೋನ್‌ ಸ್ಯಾಮ್‌ಸಂಗ್‌ ಗೆಲಾಕ್ಸಿ ಗೇರ್‌ ಸ್ಮಾರ್ಟ್‌‌ವಾಚ್‌ಗೆ ಬೆಂಬಲ ನೀಡುತ್ತದೆ.

ಸ್ಯಾಮ್‌ಸಂಗ್‌ ಗೆಲಾಕ್ಸಿ ಎಸ್‌ 5 ಬಿಡುಗಡೆ

ಸ್ಯಾಮ್‌ಸಂಗ್‌ ಗೆಲಾಕ್ಸಿ ಎಸ್‌ 5 ಬಿಡುಗಡೆ


ಎಕ್ಸಲರೋಮೀಟರ್‌,ಗೈರೋ,ಪ್ರಾಕ್ಸಿಮಿಟಿ,ಕಂಪಾಸ್‌,ಬ್ಯಾರೋಮೀಟರ್‌, ಹಾಲ್‌ ಆರ್‌ಜಿಬಿ ಲೈಟ್‌‌, ಗೆಶ್ಚರ್‌‌‌,ಫಿಂಗರ್‌ ಸ್ಕ್ಯಾನರ್‌‌,ಹಾರ್ಟ್‌ ರೇಟ್‌ ಸೆನ್ಸರ್‌ಗಳನ್ನು ಈ ಸ್ಮಾರ್ಟ್‌‌ಫೋನ್‌ ಒಳಗೊಂಡಿದೆ.

ಸ್ಯಾಮ್‌ಸಂಗ್‌ ಗೆಲಾಕ್ಸಿ ಎಸ್‌ 5 ಬಿಡುಗಡೆ

ಸ್ಯಾಮ್‌ಸಂಗ್‌ ಗೆಲಾಕ್ಸಿ ಎಸ್‌ 5 ಬಿಡುಗಡೆ


2800mAh ಬ್ಯಾಟರಿಯನ್ನು ಸ್ಮಾರ್ಟ್‌ಫೋನ್‌ ಹೊದಿದೆ.
ಸ್ಟ್ಯಾಂಡ್‌ ಬೈ ಟೈಂ:390 ಗಂಟೆ
ಟಾಕ್‌ ಟೈಂ: 21 ಗಂಟೆ

ಈ ಹಿಂದೆ ಬಿಡುಗಡೆಯಾದ ಗೆಲಾಕ್ಸಿ ಎಸ್‌4 2600 mAh ಬ್ಯಾಟರಿಯನ್ನು ಹೊಂದಿತ್ತು.

ಸ್ಯಾಮ್‌ಸಂಗ್‌ ಗೆಲಾಕ್ಸಿ ಎಸ್‌ 5 ಬಿಡುಗಡೆ

ಸ್ಯಾಮ್‌ಸಂಗ್‌ ಗೆಲಾಕ್ಸಿ ಎಸ್‌ 5 ಬಿಡುಗಡೆ


ಈ ಸ್ಮಾರ್ಟ್‌ಫೋನ್‌ ಬೆಲೆಯನ್ನು ಸ್ಯಾಮ್‌ಸಂಗ್‌ ಪ್ರಕಟಿಸಿಲ್ಲ. ಆದರೆ ಕೆಲವೊಂದು ಮಾಧ್ಯಮಗಳಲ್ಲಿ ಪ್ರಕಟಗೊಂಡಂತೆ 16 ಜಿಬಿ ಆಂತರಿಕ ಮೆಮೊರಿಯ ಸ್ಮಾರ್ಟ್‌‌ಫೋನಿಗೆ 600 ಡಾಲರ್‌‌( ಅಂದಾಜು 37 ಸಾವಿರ) ರೂಪಾಯಿ ನಿಗದಿ ಪಡಿಸುವ ಸಾಧ್ಯತೆಯಿದೆ.

ಸ್ಯಾಮ್‌ಸಂಗ್‌ ಗೆಲಾಕ್ಸಿ ಎಸ್‌ 5 ಬಿಡುಗಡೆ


ವಿಡಿಯೋ ವೀಕ್ಷಿಸಿ

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X