ಸ್ಯಾಮ್‌ಸಂಗ್ 'ಗ್ಯಾಲಕ್ಸಿ ಎಸ್8' ಶೀರ್ಘದಲ್ಲಿ ಲಾಂಚ್: ಟಾಪ್‌ 8 ಗಾಳಿಸುದ್ದಿಗಳು

ಸ್ಯಾಮ್‌ಸಂಗ್ 'ಗ್ಯಾಲಕ್ಸಿ ಎಸ್‌8' ಬಗ್ಗೆ ಇಂಟರ್ನೆಟ್‌ನಲ್ಲಿ ಹಲವು ಮಾಹಿತಿಗಳು ಹರಿದಾಡುತ್ತಿದ್ದು, ಸ್ಯಾಮ್‌ಸಂಗ್ ಶೀರ್ಘದಲ್ಲಿ ಡಿವೈಸ್‌ ಅನ್ನು ಲಾಂಚ್‌ ಮಾಡಲಿದೆ.

Written By:

'ಗ್ಯಾಲಕ್ಸಿ ನೋಟ್ 8' ಸ್ಮಾರ್ಟ್‌ಫೋನ್‌ ಸ್ಫೋಟಗೊಂಡ ನಂತರ, ಸ್ಯಾಮ್‌ಸಂಗ್ ಹೆಚ್ಚಿನ ರೀತಿಯಲ್ಲಿ ನಕಾರಾತ್ಮಕ ವಿಮರ್ಶೆಗಳನ್ನೇ ಕೇಳುತ್ತಿದೆ. ದಕ್ಷಿಣ ಕೊರಿಯಾ ಟೆಕ್‌ ದೈತ್ಯ ಸ್ಯಾಮ್‌ಸಂಗ್‌ ತನ್ನ ಈ ದೂರಿನಿಂದ ತಪ್ಪಿಸಿಕೊಳ್ಳಲು ಬಹುಬೇಗ ಹೊಸ ಡಿವೈಸ್‌ಗಳನ್ನು ಬದಲಿಕೊಡಲು ಮುಂದಾದರೂ ಸಹ ಕಂಪನಿ ಹೆಚ್ಚು ನಷ್ಟಕ್ಕೆ ಗುರಿಯಾಯಿತು.

'ಗ್ಯಾಲಕ್ಸಿ ನೋಟ್ 7' ರೀಕಾಲ್ ಡಿವೈಸ್‌ ಅನ್ನು ಸೆಪ್ಟೆಂಬರ್ 28 ರಿಂದ ಪುನಃ ಡಿವೈಸ್‌ಗಳನ್ನು ನೀಡಲು ಮುಂದಾಯಿತು. ಅಂತೂ ಇಂತು ಈಗ ಸ್ಯಾಮ್‌ಸಂಗ್‌ ತನ್ನ ಮುಂದಿನ ಫ್ಲ್ಯಾಗ್‌ಶಿಪ್‌ ಡಿವೈಸ್‌ 'ಗ್ಯಾಲಕ್ಸಿ ಎಸ್‌8' ಅನ್ನು ಲಾಂಚ್‌ ಮಾಡಲು ಮುಂದಾಗುತ್ತಿದೆ. ಈ ಹಿಂದೆ ಕಂಪನಿ ನೋಟ್‌ 7 ಡಿವೈಸ್‌ ಬಿಡುಗಡೆ ಮಾಡುವ ಮುನ್ನ ಡ್ಯುಯಲ್ ಎಡ್ಜ್ ಡಿಸ್‌ಪ್ಲೇ , 6GB RAM ಎಂಬ ಹಲವು ಗಾಳಿಸುದ್ದಿ ಡಿವೈಸ್‌ ಬಗ್ಗೆ ಹರಿದಾಡಿತ್ತು. ಈಗಲೂ ಅದೇ ರೀತಿ ಗಾಳಿ ಸುದ್ದಿಗಳು ಸ್ಯಾಮ್‌ಸಂಗ್ ಮುಂದಿನ ಡಿವೈಸ್ ಬಗ್ಗೆ ಹರಿದಾಡುತ್ತಿವೆ.

ಹೋನರ್ 8 ಮತ್ತು ಒನ್‌ಪ್ಲಸ್ 3: ಯಾವುದು ಬೆಸ್ಟ್‌? ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ

ಹೌದು, ಸ್ಯಾಮ್‌ಸಂಗ್(Samsung) 'ಗ್ಯಾಲಕ್ಸಿ ಎಸ್‌8' ಬಗ್ಗೆ ಇಂಟರ್ನೆಟ್‌ನಲ್ಲಿ ಹಲವು ಮಾಹಿತಿಗಳು ಹರಿದಾಡುತ್ತಿದ್ದು, ಸ್ಯಾಮ್‌ಸಂಗ್ ಶೀರ್ಘದಲ್ಲಿ ಡಿವೈಸ್‌ ಅನ್ನು ಲಾಂಚ್‌ ಮಾಡಲಿದೆ. ಇಂದಿನ ಲೇಖನದಲ್ಲಿ ಟೆಕ್ ಪ್ರಿಯರು 'ಗ್ಯಾಲಕ್ಸಿ ಎಸ್‌8' ಫೀಚರ್‌ಗಳ ಬಗ್ಗೆ ಬಹಿರಂಗ‌ ಆಗಿರುವ ಗಾಳಿಸುದ್ದಿಗಳು ಏನು ಎಂದು ತಿಳಿಯಿರಿ.

ಹೆಚ್ಚಿನ ಸುದ್ದಿಗಳಿಗಾಗಿ ಕನ್ನಡ ಗಿಜ್‌ಬಾಟ್‌ಗೆ ಭೇಟಿ ನೀಡುತ್ತಿರಿ

ಕೇವಲ ಒಂದು ಎಡ್ಜ್‌ನ ಸ್ಮಾರ್ಟ್‌ಫೋನ್‌

ಸೆಪ್ಟೆಂಬರ್‌ನಲ್ಲಿ ಕೈಗೊಂಡ ಸಮೀಕ್ಷೆ ಪ್ರಕಾರ ಸ್ಯಾಮ್‌ಸಂಗ್ 'ಗ್ಯಾಲಕ್ಸಿ ಎಸ್‌7 ಎಡ್ಜ್', ಸಾಮಾನ್ಯ ಫ್ಲಾಟ್ ಪ್ಯಾನೆಲ್ ಗ್ಯಾಲಕ್ಸಿ ಎಸ್7'ಗಿಂತ ಹೆಚ್ಚು ಮಾರಾಟವಾಗಿದೆ. ಆದ್ದರಿಂದ ಕಂಪನಿ ಈಗ ತನ್ನ ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್‌8' ಡಿವೈಸ್‌ ಅನ್ನು ಫ್ಲಾಟ್ ಪ್ಯಾನೆಲ್'ನ ಎರಡು ಭಿನ್ನ ಮಾದರಿಯಲ್ಲಿ, ಕೇವಲ ಒಂದು ಎಡ್ಜ್ ಫೀಚರ್‌ನಲ್ಲಿ ಲಾಂಚ್‌ ಮಾಡಲಿದೆ.

ಎರಡು ವಕ್ರ- ಡಿಸ್‌ಪ್ಲೇ ಭಿನ್ನತೆಗಳು

ಇತ್ತೀಚೆಗೆ ಹೇಳಿದಂತೆ ಸ್ಯಾಮ್‌ಸಂಗ್ ಫ್ಲಾಟ್ ಪ್ಯಾನೆಲ್‌ ಡಿಸ್‌ಪ್ಲೇ ಭಿನ್ನತೆಯಲ್ಲಿ ಸ್ಮಾರ್ಟ್‌ಫೋನ್‌ ಹೊರತರಲಿದೆ. ಆದ್ದರಿಂದ ದಕ್ಷಿಣ ಕೊರಿಯ ಟೆಕ್‌ ದೈತ್ಯ ಒಂದು ಎಡ್ಜ್‌ನಲ್ಲಿ ಎರಡು ರೀತಿಯ ಡಿಸ್‌ಪ್ಲೇ ಭಿನ್ನತೆಯಲ್ಲಿ ಈ ವರ್ಷ ಫೋನ್‌ಗಳನ್ನು ಲಾಂಚ್‌ ಮಾಡಲಿದೆ ಎಂದು ನಿರೀಕ್ಷೆ ಇದೆ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ವಿನ್ಯಾಸ ಬದಲಾವಣೆ

2017 ಆಪಲ್ ಐಫೋನ್ ವಾರ್ಷಿಕೋತ್ಸವವಿದ್ದು, ತನ್ನ ಫೋನ್‌ಗಳನ್ನು ಪೂರ್ಣವಾಗಿ ವೈಭವೀಕರಿಸಲಿದೆ. ಆದ್ದರಿಂದ ಸ್ಯಾಮ್‌ಸಂಗ್ 'ಗ್ಯಾಲಕ್ಸಿ ಎಸ್‌8' ಅನ್ನು ಬೃಹತ್ ವಿನ್ಯಾಸದಲ್ಲಿ ಬದಲಾವಣೆ ಮಾಡಿ, ಮುಂದಿನ ಪೀಳಿಗೆಯ ಐಫೋನ್‌ನೊಂದಿಗೆ ಸ್ಪರ್ಧೆ ನೀಡುವ ಯೋಜನೆ ಹೊಂದಿದೆ.

3.5mm ಹೆಡ್‌ಫೋನ್ ಜಾಕ್ ಹೊಂದಿಲ್ಲ

ಹೆಡ್‌ಫೋನ್‌ ಜಾಕ್‌ ನಿರೀಕ್ಷೆಗಿಂತ ಹೆಚ್ಚು ದೂರವಿದೆ. ಸ್ಯಾಮ್‌ಸಂಗ್ 'ಗ್ಯಾಲಕ್ಸಿ ಎಸ್‌8'ನಲ್ಲಿ 3.5mm ಹೆಡ್‌ಫೋನ್‌ ಜಾಕ್‌ ಅನ್ನು ನೀಡುವ ಸಾಧ್ಯತೆ ಇದೆ.

ಕೋಡ್‌ ಹೆಸರು: ಡ್ರೀಮ್‌ ಮತ್ತು ಡ್ರೀಮ್‌ 2

ಆನ್‌ಲೈನ್‌ನಲ್ಲಿ ಎರಡು ತಿಂಗಳಿಂದ ಹರಿದಾಡುತ್ತಿರುವ ಮಾಹಿತಿ ಪ್ರಕಾರ, ಸ್ಯಾಮ್‌ಸಂಗ್ ಆಂತರಿಕವಾಗಿ ತಾನು ಬಿಡುಗಡೆ ಮಾಡಲಿರುವ ಸ್ಮಾರ್ಟ್‌ಫೋನ್‌ಗಳನ್ನು 'ಡ್ರೀಮ್‌ ಮತ್ತು ಡ್ರೀಮ್‌ 2' ಎಂದು ಹೆಸರಿಸಿದೆ.

ಕ್ವಾಲ್ಕಂ ಸ್ನಾಪ್‌ಡ್ರಾಗನ್ 830 ಸಾಕ್ ಮತ್ತು ಆಂಡ್ರಾಯ್ಡ್ 630 ಜಿಪಿಯು

ಸ್ಯಾಮ್‌ಸಂಗ್ 'ಗ್ಯಾಲಕ್ಸಿ ಎಸ್‌8' ಡಿವೈಸ್ ಕ್ವಾಲ್ಕಂ ಸ್ನಾಪ್‌ಡ್ರಾಗನ್ 830 ಪ್ರೊಸೆಸರ್ ಪ್ರಾಯೋಜಿತವಾಗಿದ್ದು, ಜೊತೆಗೆ ಅಡ್ರೆನೊ 630 ಜಿಪಿಯು ಯೋಜಿತವಾಗಿದೆ.

4K ಡಿಸ್‌ಪ್ಲೇ ಫೀಚರ್ ಸಾಧ್ಯತೆ

ಸ್ಯಾಮ್‌ಸಂಗ್ ರಹಸ್ಯವಾಗಿ 'ಡ್ರೀಮ್‌' ಎಂಬ ಪರಿಕಲ್ಪನೆ ಮೇಲೆ ಕಾರ್ಯನಿರ್ವಹಿಸುತ್ತಿದೆ. ಕಂಪನಿ ಹೆಚ್ಚಿನ ರೀತಿಯಲ್ಲಿ ಡಿಸ್‌ಪ್ಲೇ ಟೆಕ್ನಾಲಜಿ ಮತ್ತು ವರ್ಚುವಲ್‌ ರಿಯಾಲಿಟಿ ಬಗ್ಗೆ ಕೇಂದ್ರೀಕರಿಸಿದ್ದು, ಒಂದು 'ಗ್ಯಾಲಕ್ಸಿ ಎಸ್‌8' ಡಿವೈಸ್ 4K ಡಿಸ್‌ಪ್ಲೇ ಹೊಂದುವ ಸಾಧ್ಯತೆ ಇದೆ.

6GB RAM

ಸ್ಯಾಮ್‌ಸಂಗ್ 'ಗ್ಯಾಲಕ್ಸಿ ಎಸ್‌8' ಸೀರೀಸ್ ಡಿವೈಸ್‌ಗಳಲ್ಲಿ 6GB RAM ಸಂಯೋಜಿಸುವ ಹೆಚ್ಚಿನ ಸಾಧ್ಯತೆ ಇದೆ. ಸ್ಮಾರ್ಟ್‌ಫೋನ್‌ ಇಂಡಸ್ಟ್ರಿಯಲ್ಲಿ ಹೆಚ್ಚಿನ RAM ಸಾಮರ್ಥ್ಯ ಅಳವಡಿಕೆ ನಿಧಾನವಾಗಿ ಹೆಚ್ಚುತ್ತಿದೆ.

ಹೊಸ ಟ್ಯಾಬ್ಲೆಟ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಹೆಚ್ಚಿನ ಸುದ್ದಿಗಳಿಗಾಗಿ ಕನ್ನಡ ಗಿಜ್‌ಬಾಟ್‌ಗೆ ಭೇಟಿ ನೀಡುತ್ತಿರಿ

 



Read more about:
English summary
Samsung Galaxy S8: Here Are the Top 8 Hot Rumors About the Upcoming Flagship Phone. To know more visit kannada.gizbot.com
Please Wait while comments are loading...
Opinion Poll

Social Counting