ಸ್ಯಾಮ್‌ಸಂಗ್‌ ಲಾಂಚ್‌ ಮಾಡಲಿದೆ ಫೋಲ್ಡೆಬಲ್‌ ಸ್ಮಾರ್ಟ್‌ಫೋನ್

By Suneel
|

ಸ್ಯಾಮ್‌ಸಂಗ್‌ನ S7 ಸಿರೀಸ್‌ ಸ್ಮಾರ್ಟ್‌ಫೋನ್‌ಗಳು ಇತ್ತೀಚೆಗೆ ತಾನೆ ಹೆಚ್ಚು ಲಾಭ ತಂದುಕೊಟ್ಟದ್ದು ಎಲ್ಲರಿಗೂ ಗೊತ್ತಿದೆ. ಅಲ್ಲದೇ ಸ್ಯಾಮ್‌ಸಂಗ್‌ ಸ್ಮಾರ್ಟ್‌ಫೋನ್‌ ಅಭಿವೃದ್ದಿಯಲ್ಲಿ ಹೆಚ್ಚಿನ RAM, ಶೇಖರಣ ಸಾಮರ್ಥ್ಯ, ಬ್ಯಾಟರಿ ಮತ್ತು ಇತರೆ ಕುತೂಹಲ ಕಾರಿ ಫೀಚರ್‌ಗಳನ್ನು ಹೊಂದಿತ್ತು. ಆದರೆ ಈಗ ಸ್ಮಾರ್ಟ್‌ಫೋನ್‌ ಪ್ರಿಯರಿಗೆ ಇನ್ನೊಂದು ಅಚ್ಚರಿ ಸುದ್ದಿಯನ್ನು ಸ್ಯಾಮ್‌ಸಂಗ್‌ ನೀಡುತ್ತಿದೆ. ಅಂದಹಾಗೆ ಅಚ್ಚರಿಯ ವಿಷಯ ಏನು ಎಂದು ತಿಳಿಯಲು ಲೇಖನದ ಸ್ಲೈಡ್‌ ಓದಿರಿ.

ಫೋಲ್ಡೆಬಲ್ ಸ್ಮಾರ್ಟ್‌ಫೋನ್‌

ಫೋಲ್ಡೆಬಲ್ ಸ್ಮಾರ್ಟ್‌ಫೋನ್‌

ಸ್ಮಾರ್ಟ್‌ಫೋನ್‌ ಪ್ರಿಯರಿಗೆ ಸಿಹಿ ಸುದ್ದಿ. ಅಂದಹಾಗೆ ಸ್ಯಾಮ್‌ಸಂಗ್‌ ಕಂಪನಿ 2017 ಕ್ಕೆ ಫೋಲ್ಡೆಬಲ್ ಸ್ಮಾರ್ಟ್‌ಫೋನ್‌ ಅನ್ನು ಲಾಂಚ್‌ ಮಾಡಲಿದೆಯಂತೆ.

ETNews ವರದಿ

ETNews ವರದಿ

ದಕ್ಷಿಣ ಕೊರಿಯಾ ದೈತ್ಯ ಸ್ಯಾಮ್‌ಸಂಗ್‌ ಕಂಪನಿ ಕಳೆದ 3 ವರ್ಷದಿಂದ ಡಿಸ್‌ಪ್ಲೇ ಫೋಲ್ಡ್ ಮಾಡುವ ತಂತ್ರಜ್ಞಾನದ ಆಧಾರಿತವಾಗಿ ಸ್ಮಾರ್ಟ್‌ಫೋನ್‌ ಅಭಿವೃದ್ದಿಯ ಕಾರ್ಯ ನಿರ್ವಹಿಸುತ್ತಿದೆ ಎಂದು ETNews ವರದಿ ಮಾಡಿದೆ.

ಫೋಲ್ಡೆಬಲ್‌ ಸ್ಮಾರ್ಟ್‌ಫೋನ್‌

ಫೋಲ್ಡೆಬಲ್‌ ಸ್ಮಾರ್ಟ್‌ಫೋನ್‌

ಸ್ಯಾಮ್‌ಸಂಗ್‌ನ ಫೋಲ್ಡೆಬಲ್‌ ಸ್ಮಾರ್ಟ್‌ಫೋನ್‌ ಅನ್ನು ಫೋಲ್ಡ್‌ ಮಾಡಿದಾಗ 5 ಇಂಚು ಇರಲಿದೆ ಎನ್ನಲಾಗಿದೆ. ಅಥವಾ ಓಪನ್‌ ಮಾಡಿದಾಗ 7 ಇಂಚಿನ ಟ್ಯಾಬ್ಲೆಟ್‌ ಆಗಲಿದೆ ಎಂದು ಹೇಳಲಾಗಿದೆ. ಕಂಪನಿ ತಂತ್ರಜ್ಞಾನ ಆಧಾರಿತ ಫೋಲ್ಡೆಬಲ್‌ ಸ್ಮಾರ್ಟ್‌ಫೋನ್‌ ತಯಾರಿಕೆಯ ತಾಂತ್ರಿಕ ಸಹಾಯಕ್ಕೆ ದಕ್ಷಿಣ ಕೊರಿಯಾ ಕೆಲವು ಸಂಸ್ಥೆಗಳು ಮತ್ತು ವಿದೇಶಿ ಕಂಪನಿಗಳ ಜೊತೆ ಕೈಜೊಡಿಸಿದೆಯಂತೆ.

ಫೋಲ್ಡೆಬಲ್‌ ಸ್ಮಾರ್ಟ್‌ಫೋನ್‌ ಫೀಚರ್‌

ಫೋಲ್ಡೆಬಲ್‌ ಸ್ಮಾರ್ಟ್‌ಫೋನ್‌ ಫೀಚರ್‌

ಫೋಲ್ಡೆಬಲ್‌ ಸ್ಮಾರ್ಟ್‌ಫೋನ್‌ OLED ಡಿಸ್‌ಪ್ಲೇ ಹೊಂದಲಿದ್ದು, ಇದು ಎರಡು ಭಾಗಗಳಾಗಿ ಫೋಲ್ಡ್‌ ಹೊಂದಲಿದೆ. ಟ್ಯಾಬ್ಲೆಟ್‌ ಗಾತ್ರ ಇದ್ದರೂ ಸಹ ಕೇವಲ ಪಾಕೆಟ್‌ ಗಳಲ್ಲಿ ಇರಿಸಿಕೊಂಡು ಹೋಗಬಹುದಾಗಿದೆ. ಫೋಲ್ಡೆಬಲ್‌ ಸ್ಮಾರ್ಟ್‌ಫೋನ್‌ ಅಭಿವೃದ್ದಿ ಮಾಡುವ ಜವಾಬ್ದಾರಿಯನ್ನು ಸ್ಯಾಮ್‌ಸಂಗ್‌ನ ಪೋಷಕ ಕಂಪನಿ 'ಸ್ಯಾಮ್‌ಸಂಗ್‌ ಡಿಸ್‌ಪ್ಲೇ' ಹೊತ್ತಿದೆ.

ಲೀ ಚಾಂಗ್-ಹೂನ್‌

ಲೀ ಚಾಂಗ್-ಹೂನ್‌

ಸ್ಯಾಮ್‌ಸಂಗ್‌ ಡಿಸ್‌ಪ್ಲೇ ನಿರ್ದೇಶಕರಾದ "ಲೀ ಚಾಂಗ್-ಹೂನ್‌", "ಫೋಲ್ಡೆಬಲ್‌ ಸ್ಮಾರ್ಟ್‌ಫೋನ್‌ ಬಿಡುಗಡೆಯ ಬಗ್ಗೆ ತನ್ನ ಪಾಲುದಾರರೊಂದಿಗೆ ಚರ್ಚಿಸಿ ನಂತರ ಲಾಂಚ್‌ ಮಾಡಲಿದೆ" ಎಂದು ಹೇಳಿದ್ದಾರೆ.

 2017 ಕ್ಕೆ ಮಾರುಕಟ್ಟೆಗೆ

2017 ಕ್ಕೆ ಮಾರುಕಟ್ಟೆಗೆ

ಸ್ಮಾರ್ಟ್‌ಫೋನ್‌ ಪ್ರಿಯರು ಫೋಲ್ಡೆಬಲ್‌ ಸ್ಮಾರ್ಟ್‌ಫೋನ್‌ ಖರೀದಿಸಲು 2017ರವರೆಗೆ ಕಾಯಬೇಕಿದೆ. ಪ್ರಸ್ತುತ ಮಾರುಕಟ್ಟೆಗಿಂತ ಹೆಚ್ಚಾಗಿ ಫೋಲ್ಡೆಬಲ್‌ ಸ್ಮಾರ್ಟ್‌ಫೋನ್‌, ಸ್ಮಾರ್ಟ್‌ಫೋನ್‌ ಮಾರುಕಟ್ಟೆಯಲ್ಲಿ ಹೆಚ್ಚು ಕಳೆತರುವುದರಲ್ಲಿ ಸಂಶಯವಿಲ್ಲ.

ಐಫೋನ್‌

ಐಫೋನ್‌

ಕೆಲವು ಎಕ್ಸ್‌ಪರ್ಟ್‌ಗಳು, " ಹೊಸ ತಂತ್ರಜ್ಞಾನವನ್ನು ಅನಾವರಣ ಮಾಡದಿದ್ದಲ್ಲಿ ಐಫೋನ್‌ ಮಾರಾಟ ಇನ್ನಷ್ಟು ಕುಸಿಯುತ್ತದೆ: ಎಂದಿದ್ದಾರೆ. ಅಲ್ಲದೇ ಪ್ರಮುಖ ಟೆಕ್‌ ದೈತ್ಯ ಕಂಪನಿಗಳು ಹೊಸ ಹೊಸ ತಂತ್ರಜ್ಞಾನವನ್ನು ಸ್ಮಾರ್ಟ್‌ಫೋನ್‌ನಲ್ಲಿ ಪರಿಚಯಿಸುವ ಗುರಿಹೊಂದಿದೆ.

ಗಿಜ್‌ಬಾಟ್‌

ಗಿಜ್‌ಬಾಟ್‌

ಡೇಂಜರಸ್‌ ಐಪಿಯಿಂದ ಕಂಪ್ಯೂಟರ್‌ ಸುರಕ್ಷೆ ಹೇಗೆ?<br /></a><a href=ಸ್ಮಾರ್ಟ್‌ಫೋನ್‌ ಬಳಕೆದಾರರೇ ನಿಮ್ಮ ಕಣ್ಣುಗಳು ಜೋಪಾನ!!
1 ರೂಪಾಯಿಗೆ ಸ್ಯಾಮ್‌ಸಂಗ್‌ ಸ್ಮಾರ್ಟ್‌ಫೋನ್‌ ಖರೀದಿಸಿ" title="ಡೇಂಜರಸ್‌ ಐಪಿಯಿಂದ ಕಂಪ್ಯೂಟರ್‌ ಸುರಕ್ಷೆ ಹೇಗೆ?
ಸ್ಮಾರ್ಟ್‌ಫೋನ್‌ ಬಳಕೆದಾರರೇ ನಿಮ್ಮ ಕಣ್ಣುಗಳು ಜೋಪಾನ!!
1 ರೂಪಾಯಿಗೆ ಸ್ಯಾಮ್‌ಸಂಗ್‌ ಸ್ಮಾರ್ಟ್‌ಫೋನ್‌ ಖರೀದಿಸಿ" loading="lazy" width="100" height="56" />ಡೇಂಜರಸ್‌ ಐಪಿಯಿಂದ ಕಂಪ್ಯೂಟರ್‌ ಸುರಕ್ಷೆ ಹೇಗೆ?
ಸ್ಮಾರ್ಟ್‌ಫೋನ್‌ ಬಳಕೆದಾರರೇ ನಿಮ್ಮ ಕಣ್ಣುಗಳು ಜೋಪಾನ!!
1 ರೂಪಾಯಿಗೆ ಸ್ಯಾಮ್‌ಸಂಗ್‌ ಸ್ಮಾರ್ಟ್‌ಫೋನ್‌ ಖರೀದಿಸಿ

ಗಿಜ್‌ಬಾಟ್‌

ಗಿಜ್‌ಬಾಟ್‌

ಗಿಜ್‌ಬಾಟ್‌ ಫೇಸ್‌ಬುಕ್‌ ಪೇಜ್‌
ಕನ್ನಡ.ಗಿಜ್‌ಬಾಟ್‌.ಕಾಂ

Best Mobiles in India

English summary
Samsung May Launch a Foldable Smartphone in 2017. Read more about this in kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X