ಸ್ಯಾಮ್‌ಸಂಗ್ ನೂತನ ಡಿವೈಸ್ ಕಿಟ್‌ಕ್ಯಾಟ್ ಆವೃತ್ತಿಯೊಂದಿಗೆ

By Shwetha
|

ಸ್ವಲ್ಪ ದಿನಗಳ ಹಿಂದೆಯಷ್ಟೇ ಸ್ಯಾಮ್‌ಸಂಗ್ ವಿಭಾಗದಿಂದ ಎರಡು ಅಜ್ಞಾತ ಸ್ಮಾರ್ಟ್‌ಫೋನ್‌ಗಳು ಮಾಡೆಲ್ ಸಂಖ್ಯೆ SM-G5308W and SM-G8508S ಜೊತೆಗೆ GFXBenchmark ಸೈಟ್‌ಗೆ ಭೇಟಿ ನೀಡಿವೆ. ಇದರಲ್ಲಿ ಒಂದು 4.7 ಇಂಚಿನ 720P ಡಿಸ್‌ಪ್ಲೇಯನ್ನು ಮತ್ತು ಕ್ವಾಡ್ ಕೋರ್ ಸ್ನ್ಯಾಪ್‌ಡ್ರಾಗನ್ 800 ಪ್ರೊಸೆಸರ್ ಅನ್ನು ಒಳಗೊಂಡಿವೆ.

ಇದೀಗ, ಒಂದು ಹೊಸ ಸ್ಮಾರ್ಟ್‌ಫೋನ್ ಇದೇ ಕಾನ್ಫಿಗರೇಶನ್ ಮತ್ತು ಇದೇ ಮಾಡೆಲ್ ಸಂಖ್ಯೆಗೆ ತೀರಾ ಹತ್ತಿರವಾಗಿಕೊಂಡು ಇದೇ ಸೈಟ್‌ಗೆ ಆಗಮಿಸಿದೆ. ಇದರ ಮಾಡೆಲ್ ಹೆಸರು SM-G850 ಎಂದಾಗಿದ್ದು ಬೇರೆ ಸಾಕ್ ಅನ್ನು ಒಳಗೊಂಡಿದೆ.

ಸ್ಯಾಮ್‌ಸಂಗ್‌ನ SM-G850 ಫೀಚರ್ ಸೋರಿಕೆ

ಈ ಇತ್ತೀಚಿನ ಫೋನ್ 32 ಜಿಬಿ ಆಂತರಿಕ ಸಂಗ್ರಹಣೆಯನ್ನು ಹೊಂದಿದ್ದು ಇದರಲ್ಲಿ ಓಕ್ಟಾ ಕೋರ್ ಎಕ್ಸೋನಸ್ ಚಿಪ್ ಇದೆ. ಇವುಗಳು ಸೂಕ್ತವಾದ ಫ್ಲ್ಯಾಗ್‌ಶಿಪ್ ಅನ್ನು ಹೊಂದಿಲ್ಲದಿದ್ದರೂ ಮಾರುಕಟ್ಟೆಯಲ್ಲಿ ಲಭ್ಯವಿರುವ ಸರಾಸರಿ ಸ್ಮಾರ್ಟ್‌ಫೋನ್ ಶ್ರೇಣಿಗೆ ಕಂಟಕ ಪ್ರಾಯವಾಗಿರುವುದಂತೂ ನಿಜ.

SM-G850 ಅದೇ ಮಾದರಿಯ Exynos 5 ಸಿಪಿಯು ಪವರ್ ಉಳ್ಳಂತಹ ಅಂದರೆ ಗ್ಯಾಲಕ್ಸಿ ನೋಟ್ 3 ಯಂತಹ ಚಾಲನೆಯನ್ನು ಹೊಂದಿದೆ. ಇನ್ನೂ ವಿವರವಾಗಿ ಹೇಳಬೇಕೆಂದರೆ 4 x Cortex A15ಮ ಕೋರ್ಸ್ ಮತ್ತು 4 x Cortex A7 ಕ್ಲಾಕ್ ಆಗಿರುವ 1.8GHz ಅನ್ನು SM-G850 ಬಳಸಿದೆ. ಇದು 1.8 ಜಿಬಿ RAM ಮತ್ತು ಹೆಕ್ಸಾ ಕೋರ್ ಮಾಲಿ T628 GPU ಅನ್ನು ಒಳಗೊಂಡಿದೆ.

ಈ ಡಿವೈಸ್‌ನಲ್ಲಿ 4.7 ಇಂಚಿನ ಡಿಸ್‌ಪ್ಲೇ ಇದ್ದು 1280 x 720 ಪಿಕ್ಸೆಲ್ ರೆಸಲ್ಯೂಶನ್ ಅನ್ನು ಹೊಂದಿದೆ. ಫೋನ್‌ನ ರಿಯರ್ ಕ್ಯಾಮೆರಾ ಸಾಮರ್ಥ್ಯ 11 ಮೆಗಾಪಿಕ್ಸೆಲ್ ಆಗಿದ್ದು ಮುಂಭಾಗ ಕ್ಯಾಮೆರಾ ಸಾಮರ್ಥ್ಯ 2 ಮೆಗಾಪಿಕ್ಸೆಲ್ ಆಗಿದೆ. ಇವೆರಡೂ ಕ್ಯಾಮೆರಾಗಳು 1080p ವೀಡಿಯೋ ರೆಕಾರ್ಡಿಂಗ್ ಅನ್ನು ದಾಖಲಿಸುವ ಗುಣವನ್ನು ಹೊಂದಿವೆ. SM-G850 ನಲ್ಲಿ ಆಂಡ್ರಾಯ್ಡ್ ಆವೃತ್ತಿ 4.4.4 ಕಿಟ್‌ಕ್ಯಾಟ್ ಓಎಸ್ ಚಾಲನೆಯಾಗುತ್ತಿದ್ದು, ಕೆಲವೊಂದು ಅತ್ಯಾಕರ್ಷಕ ಫೀಚರ್‌ಗಳನ್ನು ಈ ಫೋನ್ ಒಳಗೊಂಡಿರುವುದು ಕುತೂಹಲಕ್ಕೆ ಕಾರಣವಾಗಿದೆ.

ಡಿವೈಸ್‌ನ ಹೆಸರು ನಮಗೆ ತಿಳಿದು ಬಂದಿಲ್ಲ ಆದರೆ ಇದು ಗ್ಯಾಲಕ್ಸಿ S5 ನ ನಿಯೋ ಆವೃತ್ತಿಯಾಗಿರಬಹುದೇ ಎಂಬ ಸಂಶಯ ಕೂಡ ಸುಳಿದಾಡುತ್ತಿದೆ. ಸ್ಯಾಮ್‌ಸಂಗ್ ಈಗಾಗಲೇ ಗ್ಯಾಲಕ್ಸಿ ನೋಟ್ 3 ಯ ನಿಯೋ ಆವೃತ್ತಿಯನ್ನು ತಯಾರು ಮಾಡಿದೆ.

ಹೆಚ್ಚಿನ ನವೀಕರಣಗಳಿಗಾಗಿ ಗಿಜ್‌ಬಾಟ್‌ಗೆ ಭೇಟಿ ನೀಡುತ್ತಿರಿ!

ಮೂಲ

Best Mobiles in India

English summary
This article tells that Samsung SM - G850 with Octa core CPU, android 4.4.4 spotted Online.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X