2017ರಲ್ಲಿ ಮಾರುಕಟ್ಟೆಗೆ ಲಗ್ಗೆಯಿಡಲಿರುವ ಸ್ಮಾರ್ಟ್ ಫೋನ್ ಗಳು

ಸ್ಮಾರ್ಟ್ ಫೋನ್ ತಯಾರಿಕಾ ಸಂಸ್ಥೆಯಲ್ಲಿ ಅಗ್ರಗಣ್ಯರಾಗಿದ್ದ ಸ್ಯಾಮ್ ಸಂಗ್ ಕಂಪನಿಗೆ 2016ನೇ ವರ್ಷವು ಅತ್ಯಂತ ಕಠಿಣತೆಯಿಂದ ಕೂಡಿತ್ತೆಂದು ಹೇಳಬಹುದು.

Written by: MAHESH PALLAKKI

ಸ್ಮಾರ್ಟ್ ಫೋನ್ ತಯಾರಿಕಾ ಸಂಸ್ಥೆಯಲ್ಲಿ ಅಗ್ರಗಣ್ಯರಾಗಿದ್ದ ಸ್ಯಾಮ್ ಸಂಗ್ ಕಂಪನಿಗೆ 2016ನೇ ವರ್ಷವು ಅತ್ಯಂತ ಕಠಿಣತೆಯಿಂದ ಕೂಡಿತ್ತೆಂದು ಹೇಳಬಹುದು. ಈ ಸೌತ್ ಕೊರಿಯನ್ ಕಂಪನಿಯು

2017ರಲ್ಲಿ ಮಾರುಕಟ್ಟೆಗೆ ಲಗ್ಗೆಯಿಡಲಿರುವ ಸ್ಮಾರ್ಟ್ ಫೋನ್ ಗಳು

2016ರ ಪೂರ್ತಿ ಸುದ್ದಿಯಲ್ಲಿತ್ತು, ಆದರೆ ಅದು ಋಣಾತ್ಮಕವಾಗಿ, ಅಂದರೆ ಸ್ಯಾಮ್ ಸಂಗ್ ತಯಾರಿಸಿದ ಸ್ಮಾರ್ಟ್ ಫೋನ್ ಬ್ಯಾಟರಿಗಳು ಜಗತ್ತಿನ ಹಲವೆಡೆ ಸ್ಪೋಟಗೊಂಡದ್ದೇ ಸ್ಯಾಮ್ ಸಂಗ್ ನ ಹೆಸರು

ಕೆಡಲು ಕಾರಣ. ಈ ಗ್ಯಾಲಾಕ್ಸಿ ನೋಟ್7ರ ಅಧ್ವಾನಗಳ,ಠೀಕೆಗಳ ನಡುವೆಯೂ ಸ್ಯಾಮ್ ಸಂಗ್ ಕಂಪನಿಯು ಕೆಲವು ಹೊಸ ಶ್ರೇಣಿಯ ಸ್ಮಾರ್ಟ್ ಫೋನ್ ಗಳನ್ನು ಮಾರುಕಟ್ಟೆಗೆ ಪರಿಚಯಿಸುವಲ್ಲಿ ಯಶಸ್ವಿಯಾಯಿತು.

ಇತ್ತೀಚೆಗೆ ಅಂತರ್ಜಾಲಗಳಲ್ಲಿ ಸ್ಯಾಮ್ ಸಂಗ್ ನ ಮೇಲೆ ಕೆಲವು ವಂದತಿಗಳು ಹಾಗೂ ಅದು ಹೊಸಹೊಸ ತಂತ್ರಜ್ಞಾನವನ್ನು ಹೇಗೆ ಬಳಸಿಕೊಳ್ಳುತ್ತಿದೆಯೆಂಬುದರ ಬಗ್ಗೆ ಸೋರಿಕೆಯ ಮಾಹಿತಿಗಳು ಹರಿದಾಡುತ್ತಿದ್ದವು.

ಓದಿರಿ: ಕೇವಲ 3,799 ರೂಗಳಿಗೆ 4G ಸಪೋರ್ಟ್ ಮಾಡುವ ಸ್ಮಾರ್ಟ್‌ಪೋನು

ಮುಂದೆ ಬಿಡುಗಡೆ ಮಾಡಲಾಗುವ ಸ್ಮಾರ್ಟ್ ಫೋನ್ ಗಳ ಹೊಸ ವಿನ್ಯಾಸಗಳು ಮತ್ತು ಅದಕ್ಕೆ ಅಳವಡಿಸಲಾಗುತ್ತಿರುವ ಆಧುನಿಕ ಕಾರ್ಯನಿರ್ವಹಣಾ ತಂತ್ರಜ್ಞಾನದ ಬಗ್ಗೆ ಜನರಲ್ಲಿ ಒಂದು ರೀತಿಯ ಕೋಲಾಹಲವನ್ನೇ ಉಂಟು ಮಾಡಿತ್ತು.

ಸೌತ್ ಕೊರಿಯಾದ ಈ ದೈತ್ಯ ಕಂಪನಿಯು ಇತ್ತೀಚೆಗಷ್ಟೇ ಗ್ಯಾಲಾಕ್ಸಿ ಎಸ್8 ಶ್ರೇಣಿಯನ್ನು ಮಾರುಕಟ್ಟೆಗೆ ಬಿಡುಗಡೆಮಾಡಿ ಸುದ್ದಿಯಲ್ಲಿತ್ತು.ಅದು ಐಫೋನ್8 ಅನ್ನೂ ಮೀರಿಸುವಂತಹ ಅಂಶಗಳನ್ನೊಳಗೊಂಡಿತ್ತು ಎಂಬ ಸುದ್ದಿಯೂ ಸಹ ಎಲ್ಲರ ಹುಬ್ಬೇರಿಸುವಂತೆ ಮಾಡಿತ್ತು.

ಓದಿರಿ: 21MP ಕ್ಯಾಮೆರಾ ಹೊಂದಿರುವ ಸೋನಿ ಪಿಕ್ಯಾಚೂ ಸ್ಮಾರ್ಟ್‌ಪೋನ್...!

ಗ್ಯಾಲಾಕ್ಸಿ ಎಸ್8 ಮಾತ್ರವಲ್ಲ, 2017ಕ್ಕೆ ಸ್ಯಾಮ್ ಸಂಗ್ ಇನ್ನೂ ಕೆಲವು ಉನ್ನತ ಶ್ರೇಣಿಯ ಸ್ಮಾರ್ಟ್ ಫೋನ್ ಗಳನ್ನು ಮಾರುಕಟ್ಟೆಗೆ ಪರಿಚಯಿಸುತ್ತದೆಂಬ ವದಂತಿಗಳೂ ಹಬ್ಬಿದ್ದವು.

ಬನ್ನಿ 2017ರಲ್ಲಿ ಬಿಡುಗಡೆಯಾಗಬಹುದೆಂದು ಹೇಳಲಾಗುತ್ತಿರುವ ಕೆಲವು ಸ್ಯಾಮ್ ಸಂಗ್ ಸ್ಮಾರ್ಟ್ ಫೋನ್ ಗಳ ಬಗ್ಗೆ ತಿಳಿದುಕೊಂಡು ಬರೋಣ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

ಸ್ಯಾಮ್ ಸಂಗ್ ಗ್ಯಾಲಾಕ್ಸಿ ಎ5(2017):

2017ರಲ್ಲಿ ಬಿಡುಗಡೆಯಾಗುತ್ತದೆಂಬ ಭಾರಿ ನಿರೀಕ್ಷೆ ಹುಟ್ಟುಹಾಕಿದ್ದ ದೈತ್ಯ ಸ್ಯಾಮ್ ಸಂಗ್ ನ ಈ ಗ್ಯಾಲಾಕ್ಸಿ ಎ5 ವಾಟರ್ ರೆಸಿಸ್ಟಂಟ್ ತಂತ್ರಜ್ಞಾನದೊಂದಿಗೆ, ಕಪ್ಪು, ಗುಲಾಬಿ, ನೀಲಿ, ಹಾಗೂ ಗೋಲ್ಡ್ ಬಣ್ಣಗಳಲ್ಲಿ ದೊರೆಯಲಿದೆ.

ಸ್ಯಾಮ್ ಸಂಗ್ ಗ್ಯಾಲಾಕ್ಸಿ ಎಸ್8:

ಸ್ಯಾಮ್ ಸಂಗ್ ಬಿಡುಗಡೆ ಮಾಡಲಿರುವ ಮುಂದಿನ ಅತಿ ನಿರೀಕ್ಷಿತ ಸ್ಮಾರ್ಟ್ ಪೋನ್ ಎಂದೇ ಖ್ಯಾತಿಹೊತ್ತಿರುವ ಗ್ಯಾಲಾಕ್ಸಿ ಎಸ್8, ಐಫೋನ್8 ಗಿರುವ ಅತ್ಯಂತ ಪ್ರಬಲವಾದ ಪ್ರತಿಸ್ಪರ್ಧಿ.

ಗ್ಯಾಲಾಕ್ಸಿ ಎಸ್8ನಲ್ಲಿ ಬೀಸ್ಟ್ ಮೋಡ್, ಆನ್ ಸ್ಕ್ರೀನ್ ನ್ಯಾವಿಗೇಷನ್ ರೀತಿಯ ಹಲವಾರು ಅತ್ಯಾಧುನಿಕ ಗುಣಲಕ್ಷಣಗಳನ್ನು ಒಳಗೊಂಡಿದೆ ಎಂದು ಹೇಳಲಾಗುತ್ತಿದೆ.

 

ಸ್ಯಾಮ್ ಸಂಗ್ ಗ್ಯಾಲಾಕ್ಸಿ ಜೆ1 ಮಿನಿ ಪ್ರೈಮ್:

ಸ್ಯಾಮ್ ಸಂಗ್ ಗ್ಯಾಲಾಕ್ಸಿ ಜೆ1 ಮಿನಿ ಪ್ರೈಮ್ 4.0 ಇಂಚಿನ, ಟಿ.ಎಫ್.ಟಿ ಶಕ್ತಿಯುಳ ಟಚ್ ಸ್ಕ್ರೀನ್ ಮೊಬೈಲ್. ಇದರ ಇತರ ವಿಶೇಷಗಳು: ಆಂಡ್ರಾಯ್ಡ್ ವಿ6.0 ಆಪರೇಟಿಂಗ್ ಸಿಸ್ಟಮ್,

ಕ್ವಾಡ್ ಕೋರ್ 1.2 ಗಿಗಾಹರ್ಟ್ಸ್, ಕೋರ್ ಟೆಕ್ಸ್-ಏ7, 5ಮೆಗಾಪಿಕ್ಸೆಲ್ ಕ್ಯಾಮೆರಾ, ಹಾಗೂ ತೆಗೆದು ಹಾಕಬಹುದಾದಂತಹ ಲಿ-ಐಆನ್ 1500 ಮೆಗಾಹರ್ಟ್ಸ್ ಬ್ಯಾಟರಿ ಕೂಡ ಲಭ್ಯವಿದೆ.

 

ಸ್ಯಾಮ್ ಸಂಗ್ ಗ್ಯಾಲಾಕ್ಸಿ ಎ7(2017):

ಸ್ಯಾಮ್ ಸಂಗ್ ತನ್ನ ಅತ್ಯಂತ ಪ್ರಮುಖ ಸ್ಮಾರ್ಟ್ ಫೋನ್ ಆದ 'ಗ್ಯಾಲಾಕ್ಸಿ ಎಸ್8' ಅನ್ನು ಬಿಡುಗಡೆಗೊಳಿಸುವ ಮುನ್ನ, ನವೀಕರಿಸಿದ ತಂತ್ರಜ್ಞಾನದೊಂದಿಗೆ ಬಿಡುಗಡೆ ಮಾಡಬೇಕಿದ್ದ ಗ್ಯಾಲಾಕ್ಸಿ ಎಸ್7

ಆವೃತ್ತಿಯ ಮೊಬೈಲ್ ಗಳನ್ನು "ಸ್ಯಾಮ್ ಸಂಗ್ ಗ್ಯಾಲಾಕ್ಸಿ ಎ7(2017)" ಎಂಬ ಹೆಸರಿನಲ್ಲಿ ಬಿಡುಗಡೆಗೊಳಿಸಬೇಕಿತ್ತು. ವರದಿಗಳ ಪ್ರಕಾರ ಸ್ಯಾಮ್ ಸಂಗ್ ಸ್ಮಾರ್ಟ್ ಫೋನ್, ಯು.ಎಸ್ ಫೆಡರಲ್ ಕಮ್ಯೂನಿಕೆಷನ್ಸ್ ಕಮಿಷನ್(ಎಫ್.ಸಿ.ಸಿ) ನಿಂದ ಅಂಗೀಕೃತಗೊಂಡಿದ್ದು,

ಬ್ಲೂ ಟೂತ್ ಸರ್ಟಿಫಿಕೇಟ್ ಹೊಂದಿದೆ. ಈ ಎ7 ಎಕ್ಸಿನಾಸ್7870 ಚಿಪ್ ಸೆಟ್ ಗಳನ್ನು ಹೊಂದಿದ್ದು, 32ಜಿ.ಬಿ ಹಾಗು 64ಜಿ.ಬಿ ಸ್ಟೋರೇಜ್, ಹಾಗು 256ಜಿ.ಬಿ ವರೆಗೂ ವಿಸ್ತರಣಾ ಶಕ್ತಿ ಹೊಂದಿದೆ.

 

ಸ್ಯಾಮ್ ಸಂಗ್ ಗ್ಯಾಲಾಕ್ಸಿ ಎ3(2017)

ಸ್ಯಾಮ್ ಸಂಗ್ ಗ್ಯಾಲಾಕ್ಸಿ ಎ3(2017) 4.7 ಇಂಚಿನ ಸೂಪರ್ ಅಮೋಲ್ಡ್(720 1280)ಡಿಸ್ಪ್ಲೇ ಹೊಂದಿದೆ. 1.5ಗಿಗಾಹರ್ಟ್ಸ್ ಆಕ್ಟಾ-ಕೋರ್ ಮತ್ತು ಎಕ್ಸಿನಾಸ್ 7870 ಪ್ರೊಸೆಸರ್ ಹೊಂದಿದೆ.2ಜಿ.ಬಿ ರ್ಯಾಮ್,

16ಜಿ.ಬಿ.ಗಳ ವಿಸ್ತರಣಾ ಶಕ್ತಿ ಹೊಂದಿದೆ.

 

ಸ್ಯಾಮ್ ಸಂಗ್ ಗ್ಯಾಲಾಕ್ಸಿ ಜೆ3(2017)

ಸ್ಯಾಮ್ ಸಂಗ್ ಗ್ಯಾಲಾಕ್ಸಿ ಜೆ3(2017) ಕೆಲವು ದಿನಗಳವರೆಗೆ ಅಂತರ್ಜಾಲದಲ್ಲಿ ಅತಿ ಹೆಚ್ಚು ಚರ್ಚೆಗೊಳಪಟ್ಟ ಸ್ಮಾರ್ಟ್ ಫೋನ್.

ಕೆಲವು ತಿಂಗಳುಗಳ ಹಿಂದಿನ ವರದಿಯ ಪ್ರಕಾರ ಈ ಸ್ಮಾರ್ಟ್ ಪೋನ್ ಯು.ಎಸ್ ಫೆಡರಲ್ ಕಮ್ಯೂನಿಕೆಷನ್ಸ್ ಕಮಿಷನ್(ಎಫ್.ಸಿ.ಸಿ) ನಲ್ಲೂ ಪ್ರಮಾಣಿತಗೊಂಡು ಟಿ.ಇ.ಎನ್.ಎ.ಎ

ದಿಂದಲೂ ಪ್ರಮಾಣಿತಗೊಂಡಿದೆಯೆಂದು ಹೇಳಲಾಗುತ್ತಿದೆ.ಇದು ಆದಷ್ಟು ಬೇಗನೇ ಗ್ರಾಹಕರ ಕೈಸೇರಲಿಯೆಂದೂ ಹೇಳಲಾಗುತ್ತಿದೆ.

 

ಸ್ಯಾಮ್ ಸಂಗ್ ಗ್ಯಾಲಾಕ್ಸಿ ಸಿ7 ಪ್ರೋ

ಸ್ಯಾಮ್ ಸಂಗ್ ಗ್ಯಾಲಾಕ್ಸಿ ಸಿ7 ಪ್ರೋ 2016ರ ಡಿಸೆಂಬರ್ ನಲ್ಲಿಯೇ ಮಾರುಕಟ್ಟೆಗೆ ಬರಲಿದೆಯೆಂದು ಹೇಳಲಾಗಿತ್ತು, ಆದರೆ ಅದು ಈಗ ತಡವಾಗಲಿದ್ದು 2017ರಲ್ಲಿ ಬಿಡುಗಡೆಯಾಗಲಿದೆ.

ಇದು ಮೆಟಲ್ ಯೂನಿಬಾಡಿ ವಿನ್ಯಾಸ ಹೊಂದಿರುವುದರ ಜೊತೆಗೆ ಹಳೆಯ ಆಯತಾಕಾರದ ಹೋಮ್ ಬಟನ್ ಗಳನ್ನು ಹೊಂದಿರುತ್ತದೆ.

 

ಸ್ಯಾಮ್ ಸಂಗ್ ಗ್ಯಾಲಾಕ್ಸಿ ಜೆ3 ಎಮರ್ಜ್

ಸ್ಯಾಮ್ ಸಂಗ್ ಗ್ಯಾಲಾಕ್ಸಿ ಜೆ3 ಎಮರ್ಜ್ 2017ರ ಏಪ್ರಿಲ್ ತಿಂಗಳಲ್ಲಿ ಬಿಡುಗಡೆಯಾಗಲಿದೆ ಎಂದು ಹೇಳಲಾಗುತ್ತಿದೆ.

ಇದರ ಮುಖ್ಯಗುಣಲಕ್ಷಣಗಳು, 5ಇಂಚಿನ ಡಿಸ್ಪ್ಲೇ, ಪ್ಲಾಸ್ಟಿಕ್ ಬಾಡಿ , 2ಎಂ.ಪಿ ಸೆಲ್ಫೀ ಕ್ಯಾಮೆರಾ ಹಾಗೂ 5ಎಂ.ಪಿ. ಹಿಂಬದಿಯ ಕ್ಯಾಮೆರಾ ವನ್ನು ಹೊಂದಿರಲಿದೆ. ಇನ್ನೂ ಇದರ ಗುಣಲಕ್ಷಣಗಳ ಬಗ್ಗೆಯಾಗಲಿ ಇದರ ವಿನ್ಯಾಸದ ಬಗ್ಗೆಯಾಗಲಿ ಹೆಚ್ಚಿನ ವಿವರಣೆಗಳು ದೊರಕಿಲ್ಲ.

 

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿEnglish summary
Smartphones Samsung is rumored to launch in 2017
Please Wait while comments are loading...
Opinion Poll

Social Counting